Prabhas: ರಿಲೀಸ್​ಗೂ ಮುನ್ನವೇ ದಾಖಲೆ ಬರೆದ ಪ್ರಭಾಸ್​ ಸಿನಿಮಾ​.. ಮೆಟಾವರ್ಸ್​ನಲ್ಲಿ ರಾಧೆ-ಶ್ಯಾಮ್​ ಟ್ರೈಲರ್​ ಲಾಂಚ್​!

ರಾಧೆ ಶ್ಯಾಮ್​ ಸಿನಿಮಾ  ಮಾರ್ಚ್​ 11 ಕ್ಕೆ ವಿಶ್ವದಾದ್ಯಂತ  ರಿಲೀಸ್ ಆಗುತ್ತಿದೆ. ಇನ್ನು ಕೇವಲ 8 ದಿನಗಳು ಬಾಕಿ ಇದೆ.ಈಗಾಗಲೇ ಸಿನಿಮಾ ಮೇಲಿರುವ ಕ್ರೇಜ್ (Craze)​ ಹೆಚ್ಚಾಗಿದೆ.ಇತ್ತೀಚೆಗೆ ರಿಲೀಸ್​ ಆಗಿದ್ದ ಹೊಸ ಟ್ರೈಲರ್​ ಸಖತ್​ ಸೌಂಡ್ ಮಾಡಿತ್ತು. ಇದೀಗ ರಿಲೀಸ್​ಗೂ ಮುನ್ನವೇ ಮತ್ತೊಂದು ದಾಖಲೆ ಬರೆದಿದೆ ರಾಧೆ-ಶ್ಯಾಮ್​ ಸಿನಿಮಾ.

ರಾಧೆ-ಶ್ಯಾಮ್​ ಚಿತ್ರದ ಪೋಸ್ಟರ್​​

ರಾಧೆ-ಶ್ಯಾಮ್​ ಚಿತ್ರದ ಪೋಸ್ಟರ್​​

  • Share this:
ಪ್ಯಾನ್ ಇಂಡಿಯಾ (Pan India) ತಾರೆ ಪ್ರಭಾಸ್ (Prabhas) ಚಿತ್ರಗಳೆಂದರೆ ಸಾಕು ಅಭಿಮಾನಿಗಳಿಗೆ ಒಂದು ದೊಡ್ಡ ಹಬ್ಬದ ಸಡಗರವಿದ್ದಂತೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅವರ ಮುಂದಿನ ಚಿತ್ರವಾದ ‘ರಾಧೆ ಶ್ಯಾಮ್’ (Radhe shyam) ಬಿಡುಗಡೆಗಾಗಿ ತುಂಬಾನೇ ಕಾತುರತೆಯಿಂದ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಒಂದು ಕಡೆ ಹೊಂಬಾಳೆ ಫಿಲಂಸ್​ ನಿರ್ಮಾಣದ ಪ್ಯಾನ್​ ಇಂಡಿಯಾ ಸಿನಿಮಾ ಸಲಾರ್ (Salaar)​, ಮತ್ತೊಂದು ಕಡೆ ಓಂ ರಾವತ್​ ನಿರ್ದೇಶನದಲ್ಲಿ ಆದಿಪುರುಷ್​  (Adhipurush) ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಧೆ ಶ್ಯಾಮ್​ ಸಿನಿಮಾ  ಮಾರ್ಚ್​ 11 ಕ್ಕೆ ವಿಶ್ವದಾದ್ಯಂತ  ರಿಲೀಸ್ ಆಗುತ್ತಿದೆ. ಇನ್ನು ಕೇವಲ 8 ದಿನಗಳು ಬಾಕಿ ಇದೆ.ಈಗಾಗಲೇ ಸಿನಿಮಾ ಮೇಲಿರುವ ಕ್ರೇಜ್ (Craze)​ ಹೆಚ್ಚಾಗಿದೆ.ಇತ್ತೀಚೆಗೆ ರಿಲೀಸ್​ ಆಗಿದ್ದ ಹೊಸ ಟ್ರೈಲರ್​ ಸಖತ್​ ಸೌಂಡ್ ಮಾಡಿತ್ತು. ಇದೀಗ ರಿಲೀಸ್​ಗೂ ಮುನ್ನವೇ ಮತ್ತೊಂದು ದಾಖಲೆ ಬರೆದಿದೆ ರಾಧೆ-ಶ್ಯಾಮ್​ ಸಿನಿಮಾ.

ಮೆಟಾವರ್ಸ್​ನಲ್ಲಿ ರಾಧೆ-ಶ್ಯಾಮ್​ ಟ್ರೈಲರ್ ​ಲಾಂಚ್​!

ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮೆಟಾವರ್ಸ್‌ನಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ರಾಧೆ ಶ್ಯಾಮ್‌ ಚಿತ್ರ ಇತಿಹಾಸ ನಿರ್ಮಿಸಿದೆ.ಸಾಮಾಜಿಕ ಜಾಲತಾಣ ಮತ್ತು ಗೇಮಿಂಗ್ ನಂತರ ಸಿನಿಮಾಗಳೂ ಈಗ ಮೆಟಾವರ್ಸ್ ತಲುಪಿವೆ. ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್, ಮೆಟಾವರ್ಸ್‌ನಲ್ಲಿ ತನ್ನ ಟ್ರೇಲರ್ ಬಿಡುಗಡೆ ಮಾಡಿದೆ. ಇದು ಮೆಟಾವರ್ಸ್‌ನ ಟ್ರೇಲರ್ ರಿಲೀಸ್ ಮಾಡಿದ ಭಾರತದ ಮೊದಲ ಚಲನಚಿತ್ರ ಎಂದು ಹೇಳಿಕೊಂಡಿದೆ.


ಮೆಟಾವರ್ಸ್​ ಎಂದರೇನು?

ಇದು ವರ್ಚುವಲ್ ರಿಯಾಲಿಟಿ (VR) ನ ಆವೃತ್ತಿಯಂತೆ ಕಾಣಿಸಬಹುದು. ಆದರೆ ಕೆಲವರು ಮೆಟಾವರ್ಸ್ ಇಂಟರ್ನೆಟ್‌ನ ಭವಿಷ್ಯವಾಗಿರಬಹುದು ಎಂದು ಭಾವಿಸುತ್ತಾರೆ. ವಾಸ್ತವವಾಗಿ, 1980ರ ದಶಕದ ಮೊದಲ ಮೊಬೈಲ್ ಫೋನ್‌ಗಳಿಂದ ಆಧುನಿಕ ಸ್ಮಾರ್ಟ್‌ಫೋನ್‌ಗಳಿಗೆ ಹೇಗೆ ಬದಲಾಯ್ತೋ ಅದೇ ರೀತಿ VRಗೆ ಆಗಬಹುದು ಎಂಬುದು ನಂಬಿಕೆ. ಕಂಪ್ಯೂಟರ್‌ನಲ್ಲಿರುವ ಬದಲು, ಮೆಟಾವರ್ಸ್‌ನಲ್ಲಿ ನೀವು ಎಲ್ಲಾ ರೀತಿಯ ಡಿಜಿಟಲ್ ಪರಿಸರ ಸಂಪರ್ಕಿಸುವ ವರ್ಚುವಲ್ ಜಗತ್ತನ್ನು ಪ್ರವೇಶಿಸಲು ಕೇವಲ ಹೆಡ್‌ಸೆಟ್ ಬಳಸಬಹುದು.

ಇದನ್ನೂ ಓದಿ : Radhe Shyam ಹೊಸ ಟ್ರೈಲರ್​ ರಿಲೀಸ್​.. ಇದು ಪ್ರೀತಿ-ವಿಧಿ ನಡುವೆ ನಡೆಯೋ ಯುದ್ಧ ಅಂದ್ರು ಶಿವಣ್ಣ!

ಗೇಮಿಂಗ್‌ಗಾಗಿ ಹೆಚ್ಚಾಗಿ ಬಳಸಲಾಗುವ ಪ್ರಸ್ತುತ VRಗಿಂತ ಭಿನ್ನವಾಗಿ, ಈ ವರ್ಚುವಲ್ ಪ್ರಪಂಚವನ್ನು ಪ್ರಾಯೋಗಿಕವಾಗಿ ಕೆಲಸ, ಆಟ, ಸಂಗೀತ ಕಚೇರಿಗಳು, ಸಿನಿಮಾ ಪ್ರವಾಸಗಳು, ಅಥವಾ ಹ್ಯಾಂಗ್‌ಔಟ್ - ಹೀಗೆ ಯಾವುದಕ್ಕಾದರೂ ಬಳಸಬಹುದು. ಹೆಚ್ಚಿನ ಜನರು ನೀವು 3D ಅವತಾರವನ್ನು ಹೊಂದಿರುತ್ತೀರಿ ಎಂದು ಊಹಿಸುತ್ತಾರೆ.

ಸಖತ್​ ಸೌಂಡ್ ಮಾಡ್ತಿದೆ ರಾಧೆ-ಶ್ಯಾಮ್​ ಹೊಸ ಟ್ರೈಲರ್!

ರಾಧೆ ಶ್ಯಾಮ್ ಸಿನಿಮಾ ಅನೌನ್ಸ್​ ಆದಾಗಿನಿಂದಲೂ ಸಖತ್​ ಸೌಂಡ್​ ಮಾಡಿಕೊಂಡೇ ಬಂದಿತ್ತು. ಇದೊಂದು ಪಕ್ಕಾ ಲವ್ ಸ್ಟೋರಿ ಸಿನಿಮಾ ಅಂತ ಈ ಹಿಂದೆ ರಿಲೀಸ್​ ಮಾಡಿದ್ದ ಟ್ರೈಲರ್​ ನೋಡಿದರೆ ಗೊತ್ತಾಗಿತ್ತು. ಪ್ರಭಾಸ್​ ಹಾಗೂ ಪೂಜಾ ಹೆಗ್ಡೆ ಮೊದಲ ಬಾರಿಗೆ ಒಟ್ಟಾಗಿ ನಟಿಸಿದ್ದರು. ಈ ಹಿಂದೆ ಈ ಜೋಡಿ ಬಾಹುಬಲಿ ಸಿನಿಮಾದ ಒಂದು ಹಾಡಿನಲ್ಲಿ ಕಾಣಿಸಿಕೊಂಡಿತ್ತು. ಈಗ ರಿಲೀಸ್​ ಆಗಿರುವ ಟ್ರೈಲರ್​ ನೋಡಿದರೆ, ಇದರಲ್ಲಿ ಭರ್ಜರಿ ಆ್ಯಕ್ಷನ್​ ಇರುವುದು ತಿಳಿದುಬಂದಿದೆ. ಟ್ರೈಲರ್​ ತುಂಬಾ ಡೈಲಾಗ್ಸ್​ ತುಂಬಿದೆ. ಯಾರು ಎಲ್ಲಿ ಹೇಗೆ ಸಾಯ್ತಾರೆ ಅಂತ ನಾನು ಹೇಳ್ತಿನಿ ಅಂತ ಖಡಕ್ ಆಗಿ ಪ್ರಭಾಸ್ ಡೈಲಾಗ್​ ಹೊಡೆದಿದ್ದಾರೆ.

ಇದನ್ನೂ ಓದಿ: ಪ್ರಭಾಸ್​ ಸಿನಿಮಾದಲ್ಲಿ ಸೆಂಚೂರಿ ಸ್ಟಾರ್​​.. `ರಾಧೆ ಶ್ಯಾಮ್​’ ಕಥೆ ಹೇಳಲಿದ್ದಾರೆ ಶಿವಣ್ಣ!

ರಾಧೆ-ಶ್ಯಾಮ್​ ಕನ್ನಡ ವರ್ಷನ್​ನಲ್ಲಿ ಶಿವಣ್ಣ ವಾಯ್ಸ್​!

ಈ ಚಿತ್ರದ ಕನ್ನಡ ವರ್ಷನ್​ ಕಥೆಯನ್ನು ಶಿವಣ್ಣ ವಿವರಣೆ ನೀಡಲಿದ್ದಾರೆ. ಸಿನಿಮಾ ಆರಂಭದಿಂದ ಕೊನೆವರೆಗೂ ಶಿವಣ್ಣ ಅವರ ಧ್ವನಿ ಇರಲಿದೆಯಂತೆ. ಈಗ ಈ ಹೊಸ ಟ್ರೈಲರ್​ನಲ್ಲಿ ಶಿವಣ್ಣ ಅವರ ವಾಯ್ಸ್​ ಝಲಕ್​ ಇದೆ. ಕೊನೆಯಲ್ಲ ‘ಪ್ರೀತಿ ಮತ್ತು ವಿಧಿ ನಡುವೆ ನಡೆಯೋ ಯುದ್ಧಾನೆ ರಾಧೆ ಶ್ಯಾಮ್’​ ಎಂದು ಹೇಳುವ ಶಿವಣ್ಣ ಅವರ ಡೈಲಾಗ್​ ಇದೆ.
Published by:Vasudeva M
First published: