Project K- Prabhas: ಪ್ರಭಾಸ್​-ದೀಪಿಕಾ ಅಭಿನಯದ ಸಿನಿಮಾದ ಚಿತ್ರೀಕರಣ ಆರಂಭ..!

Prabhas-Deepika Padukone: ವೈಜಯಂತಿ ಮೂವೀಸ್​ (vyjayanthi movies)  ಸಿನಿರ್ಮಾಣದ ಈ ಸಿನಿಮಾಗೆ ಸದ್ಯಕ್ಕೆ ಪ್ರಾಜೆಕ್ಟ್​ ಕೆ (#ProjectK)ಎಂದು ಹೆಸರಿಡಲಾಗಿದೆ. ನಿನ್ನೆ ಹೈದರಾಬಾದಿನಲ್ಲಿ ಪ್ರಾಜೆಕ್ಟ್ ಕೆ ಸಿನಿಮಾ ಸೆಟ್ಟೇರಿದೆ. ಅಮಿತಾಭ್ ಬಚ್ಚನ್​ ಅವರ ಭಾಗ ಶೂಟಿಂಗ್ ಆರಂಭವಾಗಿದ್ದು, ಮೊದಲಿಗೆ ಬಿಗ್​ -ಬಿ ಅವರಿಗೆ ಪ್ರಭಾಸ್ ಕ್ಲ್ಯಾಪ್​ ಮಾಡಿದ್ದಾರೆ.

ಪ್ರಭಾಸ್​ ಹಾಗೂ ದೀಪಿಕಾ ಪಡುಕೋಣೆ

ಪ್ರಭಾಸ್​ ಹಾಗೂ ದೀಪಿಕಾ ಪಡುಕೋಣೆ

  • Share this:
ಬಾಹುಬಲಿ ಖ್ಯಾತಿಯ ನಟ ಡಾರ್ಲಿಂಗ್ ಪ್ರಭಾಸ್​ (Prabhas)  ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಒಂದರ ನಂತ ಒಂದರಂತೆ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿರುವ ಪ್ರಭಾಸ್​ ಅವರ ಮತ್ತೊಂದು ಸಿನಿಮಾದ ಶೂಟಿಂಗ್​ ಆರಂಭವಾಗಿದೆ. ಹೌದು, ಅಮಿತಾಭ ಬಚ್ಚನ್ (Amitabh Bachchan) ಹಾಗೂ ದೀಪಿಕಾ ಪಡುಕೋಣೆ  (Deepika Padukone) ಅವರ ಕಾಂಬಿನೇಷನ್​ನಲ್ಲಿ ನಾಗ್ ಅಶ್ವಿನ್​ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ ಕುರಿತಾಗಿ ಗೊತ್ತೇ ಇದೆ. ಈ ಹಿಂದೆಯೇ ನಾಗ್​ ಅಶ್ವಿನ್ ಈ ಚಿತ್ರದ ಬಗ್ಗೆ ಪ್ರಕಟಿಸಿದ್ದರು. ಇನ್ನು ಅಮಿತಾಭ್ ಬಚ್ಚನ್​ ಹಾಗೂ ದೀಪಿಕಾ ಪಡುಕೋಣೆ ಅವರನ್ನು ಚಿತ್ರತಂಡಕ್ಕೆ ಸ್ವಾಗತಿಸಿದ್ದರು ನಿರ್ದೇಶಕ ನಾಗ್​ ಅಶ್ವಿನ್​. ಇನ್ನೂ ಹೆಸರಿಡದ ಈ ಸಿನಿಮಾದ ಚಿತ್ರೀಕರಣ ಈಗ ಹೈದರಾಬಾದಿನಲ್ಲಿ ಆರಂಭವಾಗಿದೆ. ಹೌದು, ಈ ಕುರಿತಾಗಿ ಪ್ರಭಾಸ್, ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕ ನಾಗ್​ ಅಶ್ವಿನ್ (Nag Ashwin) ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವೈಜಯಂತಿ ಮೂವೀಸ್​ (vyjayanthi movies)  ಸಿನಿರ್ಮಾಣದ ಈ ಸಿನಿಮಾಗೆ ಸದ್ಯಕ್ಕೆ ಪ್ರಾಜೆಕ್ಟ್​ ಕೆ (#ProjectK)ಎಂದು ಹೆಸರಿಡಲಾಗಿದೆ. ನಿನ್ನೆ ಹೈದರಾಬಾದಿನಲ್ಲಿ ಪ್ರಾಜೆಕ್ಟ್ ಕೆ ಸಿನಿಮಾ ಸೆಟ್ಟೇರಿದೆ. ಅಮಿತಾಭ್ ಬಚ್ಚನ್​ ಅವರ ಭಾಗ ಶೂಟಿಂಗ್ ಆರಂಭವಾಗಿದ್ದು, ಮೊದಲಿಗೆ ಬಿಗ್​ -ಬಿ ಅವರಿಗೆ ಪ್ರಭಾಸ್ ಕ್ಲ್ಯಾಪ್​ ಮಾಡಿದ್ದಾರೆ. ಈ ಫೋಟೋವನ್ನು ಪ್ರಭಾಸ್​, ದೀಪಿಕಾ ಹಾಗೂ ನಾಗ್​ ಅಶ್ವಿನ್ ಅವರು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ.
ಪ್ರಭಾಸ್ ಅವರು ಈ ಸಿನಿಮಾದಲ್ಲಿ ಅಮಿತಾಭ್​ ಬಚ್ಚನ್​ ಅವರು ನಟಿಸುತ್ತಿರುವ ವಿಷಯ ತಿಳಿದಾಗಲೇ ಖುಷಿಯಿಂದ ಆ ವಿಷಯವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಈಗ ಅವರಿಗೆ ಕ್ಲ್ಯಾಪ್​ ಮಾಡಿದ್ದು, ಭಾರತೀಯ ಸಿನಿಮಾದ ಗುರು ಅಮಿತಾಭ್ ಅವರಿಗೆ ಕ್ಲ್ಯಾಪ್ ಮಾಡಿರುವುದು ನಿಜಕ್ಕೂ ಗೌರವದ ವಿಷಯ ಎಂದು ಬರೆದುಕೊಂಡಿದ್ದಾರೆ ಡಾರ್ಲಿಂಗ್​.
View this post on Instagram


A post shared by Prabhas (@actorprabhas)


ಇದು ಪ್ರಭಾಸ್ ಅಭಿನಯದ 21ನೇ ಸಿನಿಮಾ ಇದಾಗಿದೆ. ಪ್ರಾಜೆಕ್ಟ್ ಕೆ ಚಿತ್ರ ಸೈಂಟಿಫಿಕ್​ ಕಥಾಹಂದರ ಹೊಂದಿದ್ದು, ಭವಿಷ್ಯದಲ್ಲಿ ನಡೆಯಲಿರುವ ಯುದ್ಧದ ಕಲ್ಪನೆಯಡಿ ಕತೆಯನ್ನು ಹೆಣೆಯಲಾಗಿದೆಯಂತೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್ ಸಂಬರಗಿ ತುಂಟಾಟ: ಫಜಿತಿಗೆ ಸಿಲುಕಿದ್ದ ದಿವ್ಯಾ ಉರುಡುಗ..!

ರಾಧಾಕೃಷ್ಣ ಕುಮಾರ್​ ನಿರ್ದೇಶನದಲ್ಲಿ ಪ್ರಭಾಸ್​ ಹಾಗೂ ಪೂಜಾ ಹೆಗ್ಡೆ ನಟಿಸಿರುವ ರಾಧೆ ಶ್ಯಾಮ್​ ಚಿತ್ರೀಕರಣ ಮುಗಿದಿದೆ. ಇನ್ನು ಕೊರೋನಾ ಮೊದಲ ಅಲೆಗೂ ಮೊದಲು ಹಾಗೂ ಮುಗಿದ ನಂತರ ಇಟಲಿಯಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗಿತ್ತು. ಇದಾದ ನಂತರ ಪ್ರಭಾಸ್ ಅವರು ಬಾಲಿವುಡ್​ನ ಬಿಗ್ ಬಜೆಟ್ ಚಿತ್ರವಾಗಿರುವ ಆದಿಪುರುಷ್​ ಸಿನಿಮಾದಲ್ಲೂ ನಾಯಕನಾಗಿ ನಟಿಸುತ್ತಿದ್ದಾರೆ. ಈ ಹಿಂದೆಯೇ ಈ ಸಿನಿಮಾದ ಚಿತ್ರೀಕರಣದಲ್ಲೂ ಭಾಗಿಯಾಗಿದ್ದರು.

ತಾನಾಜಿ ಸಿನಿಮಾದ ನಿರ್ದೇಶಕ ಓಂ ರಾವತ್​ ನಿರ್ದೇಶನದ ಆದಿಪುರುಷ್​ ಸಿನಿಮಾದಲ್ಲಿ ಪ್ರಭಾಸ್​ ರಾಮನಾಗಿ ಕಾಣಿಸಿಕೊಂಡರೆ, ಕೃತಿ ಸನೋನ್​ ಸೀತೆಯಾಗಿದ್ದಾರೆ. ಇನ್ನು ರಾವಣನಾಗಿ ಸೈಲಿ ಖಾನ್​ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ: Bigg Boss Kannada 8: ಪ್ರಶಾಂತ್​ ಸಂಬರಗಿ ಮೇಲೆ ಕೈ ಎತ್ತಿದ್ದ ವಿಷಯವಾಗಿ ಕಿಚ್ಚನ ಕೈಯಲ್ಲಿ ಬುದ್ಧಿ ಹೇಳಿಸಿಕೊಂಡ ವೈಷ್ಣವಿ ಗೌಡ..!

ಆದಿಪುರುಷ್​ ಸಿನಿಮಾದ ಚಿತ್ರೀಕರಣ ಸಹ ಆರಂಭವಾಗಿದ್ದು, ಸೈಫ್​ ಅಲಿ ಖಾನ್ ಹಾಗೂ ಪ್ರಭಾಸ್​ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು. ಇನ್ನು ಪ್ರಶಾಂತ್​ ನೀಲ್​ ನಿರ್ದೇಶನದ ಸಲಾರ್​ ಸಿನಿಮಾ ಸಹ ಪ್ರಭಾಸ್​ ಕೈಯಲ್ಲಿದೆ. ಈ ಚಿತ್ರದ ಶೂಟಿಂಗ್ ಆರಂಭವಾಗಿದ್ದು, ಅಗ್ನಿ ಅವಘಡದಿಂದಾಗಿ ಕೆಲ ಸಮಯ ಚಿತ್ರೀಕರಣಕ್ಕೆ ಬ್ರೇಕ್​ ಬಿದ್ದಿತ್ತು. ಹೊಂಬಾಳೆ ಫಿಲಂಸ್​ ನಿರ್ಮಾಣದ ಸಲಾರ್​ ಸಿನಿಮಾದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ.
Published by:Anitha E
First published: