Saaho: ಸಿಕ್ಕಾಪಟ್ಟೆ ರೊಮ್ಯಾಂಟಿಕ್​ ಆಗಿದೆ ಸಾಹೋ ಸಿನಿಮಾದ ಹೊಸ ಪೋಸ್ಟರ್​..!

Saaho: ಆಗಸ್ಟ್​ 15ಕ್ಕೆ ಬಿಡುಗಡೆಯಾಗಬೇಕಿದ್ದ ಡಾರ್ಲಿಂಗ್​ ಪ್ರಭಾಸ್​ ಅಭಿನಯದ ಸಿನಿಮಾ ಸಾಹೋ ಈಗ ಆಗಸ್ಟ್​ 30ಕ್ಕೆ ರಿಲೀಸ್​ ಆಗಿದೆ. ಅದಕ್ಕೆ ಅಭಿಮಾನಿಗಳಿಗಾಗಿ ಪ್ರಭಾಸ್​ ಹಾಗೂ ಚಿತ್ರತಂಡ ಇಂದು ಹೊಸ ಪೋಸ್ಟರ್​ ಅನ್ನು ಬಿಡುಗಡೆ ಮಾಡಿದ್ದಾರೆ.

Anitha E | news18
Updated:July 23, 2019, 6:59 PM IST
Saaho: ಸಿಕ್ಕಾಪಟ್ಟೆ ರೊಮ್ಯಾಂಟಿಕ್​ ಆಗಿದೆ ಸಾಹೋ ಸಿನಿಮಾದ ಹೊಸ ಪೋಸ್ಟರ್​..!
ಸಾಹೋ ಸಿನಿಮಾದ ಹೊಸ ಪೋಸ್ಟರ್​ನಲ್ಲಿ ಪ್ರಭಾಸ್​ ಹಾಗೂ ಶ್ರದ್ಧಾ ಕಪೂರ್​
Anitha E | news18
Updated: July 23, 2019, 6:59 PM IST
'ಬಾಹುಬಲಿ' ಸರಣಿ ಸಿನಿಮಾದ ನಂತರ ನಟ ಪ್ರಭಾಸ್​ ಅಭಿನಯಿಸಿರುವ ಸಿನಿಮಾ ಎಂದರೆ ಅದು 'ಸಾಹೋ'. ಶ್ರದ್ಧಾ ಕಪೂರ್​ ನಾಯಕಿಯಾಗಿ ಸಖತ್​ ಆ್ಯಕ್ಷನ್​ ಸೀಕ್ವೆನ್ಸ್​ ಇರುವ ಈ ಸಿನಿಮಾ ಆಗಸ್ಟ್​ 30ಕ್ಕೆ ತೆರೆಕಾಣಲಿದೆ.

ಪ್ರಭಾಸ್​ರ ಬಹು ನಿರೀಕ್ಷಿತ ಸಿನಿಮಾ ತೆಲುಗು ಸೇರಿದಂತೆ ತಮಿಳು ಹಾಗೂ ಹಿಂದಿಯಲ್ಲೂ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾದ ಪೋಸ್ಟರ್​, ಟೀಸರ್​, ವಿಡಿಯೋ ಹಾಡು ಹಾಗೂ ಸಾಹಸ ದೃಶ್ಯದ ಮೇಕಿಂಗ್​ ವಿಡಿಯೋಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.




ಈ ಹಿಂದೆ ಸಿನಿಮಾವನ್ನು ಆಗಸ್ಟ್​ 15ಕ್ಕೆ ತೆರೆಗೆ ತರಲು ಚಿತ್ರತಂಡ ಯೋಚಿಸಿತ್ತು. ಅಂತೆಯೇ ದಿನಾಂಕವನ್ನೂ ಪ್ರಕಟಿಸಿತ್ತು. ಆದರೆ ಚಿತ್ರ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಮುಗಿಯದ ಕಾರಣಕ್ಕೆ ಅದನ್ನು ಆಗಸ್ಟ್​ 30ಕ್ಕೆ ಮುಂದೂಡಲಾಗಿದೆ.

ಇದನ್ನೂ ಓದಿ: ಟ್ರೆಂಡಿಂಗ್​ನಲ್ಲಿದೆ 'ಕುರುಕ್ಷೇತ್ರ'ದ ದುರ್ಯೋಧನನ ಟ್ಯಾಟೂ

ಸಿನಿಮಾದ ರಿಲೀಸ್​ ದಿನಾಂಕ ಮುಂದಕ್ಕೆ ಹೋದ ಕಾರಣದಿಂದ ಬೇಸರದಲ್ಲಿರುವ ಅಭಿಮಾನಿಗಳನ್ನು ಖುಷಿಪಡಿಸಲು ಚಿತ್ರತಂಡ ಹೊಸ ಪೋಸ್ಟರ್​ ಅನ್ನು ಬಿಡುಗಡೆ ಮಾಡಿದೆ.

 




ಪ್ರಭಾಸ್​ ಹೊಸ ಪೋಸ್ಟರ್​ ಅನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿದ್ದು, ಶ್ರದ್ಧಾ ಹಾಗೂ ಪ್ರಭಾಸ್​ ಅವರ ಚಿತ್ರ ಸಿಕ್ಕಾಪಟ್ಟೆ ರೊಮ್ಯಾಂಟಿಕ್​ ಆಗಿದೆ.

ಇದನ್ನೂ ಓದಿ: Pailwaan: ಸಿಹಿ ಸುದ್ದಿ ಕೊಡುವುದಾಗಿ ಹೇಳಿ ನಿರಾಶೆ ಮಾಡಿದ ಪೈಲ್ವಾನ್​ ನಿರ್ದೇಶಕ ಕೃಷ್ಣ..!

ಅಭಿಮಾನಿಗಳ ಡಾರ್ಲಿಂಗ್​ ಪ್ರಭಾಸ್​ ಅವರ ಹೊಸ ಪೋಸ್ಟರ್​ ನೋಡಿದ ಅಭಿಮಾನಿಗಳು ಹಬ್ಬ ಆಚರಸಿಕೊಳ್ಳುತ್ತಿದ್ದಾರೆ. ಇನ್ನೂ ಒಂದು ಆ್ಯಕ್ಷನ್​ ಸೀಕ್ವೆನ್ಸ್​ಗೆ ಕೋಟಿ ಕೋಟಿ ವೆಚ್ಚ ಮಾಡಿರುವ ಈ ಚಿತ್ರದಲ್ಲಿ ಹೊಸ ಬಗೆಯ ಸ್ಟಂಟ್​ ನೋಡಲು ಸಿಗಲಿದೆ.

Rashmika Mandanna: ಹೇಗಿದ್ದಾನೆ ಗೊತ್ತಾ ರಶ್ಮಿಕಾರ ಕನಸಿನ ಹುಡುಗ..!

First published:July 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...