ಬಾಹುಬಲಿ (Bahubali) ಚಿತ್ರದ ಜನಪ್ರಿಯತೆಯ ನಂತರ ಟಾಲಿವುಡ್ ನಟ (Tollywood Actor) ಪ್ರಭಾಸ್ (Prabhas) ತುಂಬಾನೇ ಜನಪ್ರಿಯ (Famous) ನಟರಲ್ಲಿ ಅವರನ್ನು ಗುರುತಿಸಲಾಗುತ್ತಿದೆ, ಅಲ್ಲದೆ ಯಾವುದೇ ನಿರ್ಮಾಪಕರು (Producers) ಇವರ ಮೇಲೆ ಸಾವಿರಾರು ಕೋಟಿ ರೂಪಾಯಿ ಹಣ ಹೂಡಲು ತುದಿಗಾಲಲ್ಲಿ ನಿಂತಿರುತ್ತಾರೆ ಎಂದರೆ ಅತಿಶಯೋಕ್ತಿಯಲ್ಲ. ಇದೀಗ ಪ್ರಭಾಸ್ ನಟನೆಯ ಹೊಸ ಸಿನಿಮಾವೊಂದು ಹೊಸ ದಾಖಲೆಯನ್ನು ಬರೆಯುವತ್ತ ದಾಪುಗಾಲು ಹಾಕಿದೆ. ಯಾವುದಪ್ಪಾ ಆ ಚಿತ್ರ ಅಂತೀರಾ? ಅದೇ ಮೊದಲ ಬಾರಿಗೆ ಪ್ರಭಾಸ್ ಬಾಲಿವುಡ್ (Bollywood) ನಟರಾದ ಸೈಫ್ ಅಲಿ ಖಾನ್ (Saif Ali Khan) ಅವರ ಜೊತೆಗೆ ನಟಿಸುತ್ತಿರುವ 'ಆದಿಪುರುಷ್' (Adipurush) ಚಿತ್ರ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಸಿನಿಮಾ ಭಾರತದಲ್ಲಿ ಈವರೆಗೆ ಖರ್ಚು ಮಾಡಿದ ಅತಿ ಹೆಚ್ಚು ಬಜೆಟ್ನ ಸಿನಿಮಾ ಎನಿಸಿಕೊಳ್ಳಲಿದೆ ಎಮದು ಹೇಳಲಾಗುತ್ತಿದೆ.
ಜನವರಿ 12 2023 ಕ್ಕೆ ರಿಲೀಸ್ ಆಗ್ತಿದೆ ಆದಿಪುರುಷ್!
ಸಿನಿಮಾದ ಚಿತ್ರೀಕರಣ ಪೂರ್ತಿಯಾಗಿ ಮುಗಿದಿದ್ದು, ವಿಶ್ವಾದ್ಯಂತ ಚಿತ್ರ ಮಂದಿರಗಳಲ್ಲಿ ಜನವರಿ 12, 2023 ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.'ಆದಿಪುರುಷ್' ಸಿನಿಮಾವು ರಾಮಾಯಣದ ಕತೆಯನ್ನು ಹೊಂದಿದ್ದು, ಈ ಬಿಗ್ ಬಜೆಟ್ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ನಟ ಪ್ರಭಾಸ್ ನಟಿಸಿದ್ದು, ಸೀತೆ ಪಾತ್ರದಲ್ಲಿ ನಟಿ ಕೃತಿ ಸೆನನ್ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ರಾವಣನ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ಅವರು ನಟಿಸಿದ್ದಾರೆ. ರಾಮನ ತಮ್ಮನಾದ ಲಕ್ಷ್ಮಣನ ಪಾತ್ರವನ್ನು ನಟ ಸನ್ನಿ ಸಿಂಗ್, ವೀರ ಹನುಮಾನನ ಪಾತ್ರದಲ್ಲಿ ನಟ ದೇವದತ್ತ ನಾಗ್ ನಟಿಸಿದ್ದಾರೆ. ಸಿನಿಮಾವನ್ನು ಓಂ ರಾವತ್ ನಿರ್ದೇಶನ ಮಾಡಿದ್ದಾರೆ.
ವಿಶ್ವದಾದ್ಯಂತ 3ಡಿಯಲ್ಲೇ ಸಿನಿಮಾ ರಿಲೀಸ್!
ಈ ಪೌರಾಣಿಕ ಕಥೆಯನ್ನು ಹೊಂದಿರುವ 'ಆದಿಪುರುಷ್' ಸಿನಿಮಾವು 12ನೇ ಜನವರಿ 2023 ರಂದು 3ಡಿಯಲ್ಲಿ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕರು ಮತ್ತು ಇನ್ಸ್ಟಾಗ್ರಾಮ್ನಲ್ಲಿ ಸುಮಾರು 7.9 ಮಿಲಿಯನ್ ಜನ ಫಾಲೋವರ್ಸ್ ಹೊಂದಿರುವ ನಟ ಪ್ರಭಾಸ್ ಅವರೇ ಈ ಸುದ್ದಿಯನ್ನು ಸಾಮಾಜಿಕ ಮಾಧ್ಯಮವಾದ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಘೋಷಿಸಿದ್ದಾರೆ. ಇವರು ಹಂಚಿಕೊಂಡ ಫೋಟೋದಲ್ಲಿ 'ಆದಿಪುರುಷ್' ಸಿನಿಮಾದ ಬಿಡುಗಡೆಯ ದಿನಾಂಕವನ್ನು ಅಧಿಕೃತಗೊಳಿಸಿದೆ. ಇದಕ್ಕೆ ಈಗಾಗಲೇ 4 ಲಕ್ಷಕ್ಕಿಂತಲೂ ಹೆಚ್ಚು ಜನರು ನೋಡಿ ಇಷ್ಟಪಟ್ಟಿದ್ದಾರೆ.
ಇದನ್ನೂ ಓದಿ: ಪ್ರಭಾಸ್ ಸಿನಿಮಾದಲ್ಲಿ ಸೆಂಚೂರಿ ಸ್ಟಾರ್.. `ರಾಧೆ ಶ್ಯಾಮ್’ ಕಥೆ ಹೇಳಲಿದ್ದಾರೆ ಶಿವಣ್ಣ!
ಚಿತ್ರದ ಶೇ.90ರಷ್ಟು ಭಾಗಕ್ಕೆ ವಿಎಫ್ಎಕ್ಸ್ ಎಫೆಕ್ಟ್!
ನಿನ್ನೆ, ಓಂ ರಾವತ್ ನಿರ್ದೇಶನದ ಇಡೀ ಚಿತ್ರ ತಂಡವು ಇಂದು ಚಿತ್ರದ ಬಗ್ಗೆ ದೊಡ್ಡ ಘೋಷಣೆಯನ್ನು ಮಾಡುವುದಾಗಿ ಮಾಹಿತಿ ನೀಡಿದ್ದರು. 'ಆದಿಪುರುಷ್' ಸಿನಿಮಾ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದು, ಈ ಯೋಜನೆ ಪ್ರಾರಂಭವಾದಾಗಿನಿಂದ ಅಭಿಮಾನಿಗಳು ಚಿತ್ರದ ಬಿಡುಗಡೆಯನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.ಈ ಪೌರಾಣಿಕ ಚಿತ್ರದ ಚಿತ್ರೀಕರಣವನ್ನು ಈಗಾಗಲೇ ಸಂಪೂರ್ಣವಾಗಿ ಮುಗಿಸಲಾಗಿದೆ ಮತ್ತು ಯೋಜನೆ ಇದೀಗ ನಿರ್ಮಾಣ ನಂತರದ ಹಂತದಲ್ಲಿದೆ. ಸಿನೆಮಾ ನೋಡುಗರಿಗೆ ಉತ್ಕ್ರಷ್ಟವಾದ ಅನುಭವವನ್ನು ಒದಗಿಸಲು ಚಿತ್ರದ ಶೇಕಡಾ 90 ರಷ್ಟು ಭಾಗವನ್ನು ವಿಎಫ್ಎಕ್ಸ್ ತಂತ್ರಜ್ಞಾನವನ್ನು ಬಳಸಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಪ್ರಭಾಸ್ರ ಮತ್ತೊಂದು ಸಿನಿಮಾದಲ್ಲಿ ಅಮಿತಾಭ್ ಬಚ್ಚನ್, `ರಾಧೆ ಶ್ಯಾಮ್’ ಕಥೆ ಹೇಳಲಿದ್ದಾರೆ ಬಿಗ್ಬಿ!
ನಟ ಪ್ರಭಾಸ್ ಅವರು ನಟಿ ಪೂಜಾ ಹೆಗ್ಡೆ ಅವರೊಂದಿಗೆ 'ರಾಧೆ ಶ್ಯಾಮ್' ಎಂಬ ಚಿತ್ರದಲ್ಲಿ ನಟಿಸಿದ್ದು, ರಾಧಾ ಕೃಷ್ಣ ಕುಮಾರ್ ಅವರ ನಿರ್ದೇಶನದ ಚಿತ್ರವು ಇದೇ ಮಾರ್ಚ್ 11 ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ನಟಿ ಶ್ರುತಿ ಹಾಸನ್ ಅವರೊಂದಿಗೆ 'ಸಲಾರ್' ಮತ್ತು 2022 ರಲ್ಲಿ ನಟಿ ದೀಪಿಕಾ ಪಡುಕೊಣೆ ಅವರೊಂದಿಗೆ 'ಪ್ರಾಜೆಕ್ಟ್ ಕೆ' ಚಿತ್ರವನ್ನು ಸಹ ಇವರು ಹೊಂದಿದ್ದಾರೆ. 'ಸಲಾರ್' ಚಿತ್ರವು ಏಪ್ರಿಲ್ 14 ರಂದು ಬಿಡುಗಡೆಯಾಗುತ್ತಿದ್ದರೆ, 'ಪ್ರಾಜೆಕ್ಟ್ ಕೆ' ಚಿತ್ರದ ಬಿಡುಗಡೆಯ ದಿನಾಂಕವನ್ನು ಇನ್ನೂ ಘೋಷಿಸಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ