ಬಾಲಿವುಡ್ ನಿರ್ದೇಶಕ ಓಂ ರಾವತ್ ನಿರ್ದೇಶನದ ಪ್ಯಾನ್ ಇಂಡಿಯಾದ ಸಿನಿಮಾ ಆದಿಪುರುಷ್ ಚಿತ್ರತಂಡದ ಕಡೆಯಿಂದ ನಿನ್ನೆಯಷ್ಟೆ ಒಂದು ಅಪ್ಡೇಟ್ ಸಿಕ್ಕಿತ್ತು. ಈಗಾಗಲೇ ಚಿತ್ರತಂಡ ಮೋಷನ್ ಕ್ಯಾಪ್ಚರ್ ಕೆಲಸ ಆರಂಭಿಸಿದ್ದು, ಇನ್ನೇನು ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ ಅನ್ನೋ ಸುದ್ದಿ ಹರಿದಾಡುತ್ತಿತ್ತು. ಟಾಲಿವುಡ್ ಬಾಹುಬಲಿ ಪ್ರಭಾಸ್ ರಾಮನಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಅಮ್ಮನ ಪಾತ್ರದಲ್ಲಿ ಖ್ಯಾತ ಬಾಲಿವುಡ್ ನಟಿ ಹೇಮಾ ಮಾಲಿನಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದರ ಜೊತೆಗೆ ಸೀತೆಯ ಪಾತ್ರದಲ್ಲಿ ಕೃತಿ ಸನೋನ್ ಕಾಣಿಸಿಕೊಳ್ಳಲಿದ್ದು, ರಾವಣನ ಪಾತ್ರಕ್ಕೆ ಸೈಫ್ ಅಲಿ ಖಾನ್ ನಟಿಸಲಿದ್ದಾರೆ. ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿರುವ ಪಾತ್ರಧಾರಿಗಳ ಆಯ್ಕೆ ಈಗಾಗಲೇ ಮುಗಿದೆ. ಉಳಿದಂತೆ ಇತರೆ ಪಾತ್ರಗಳ ಆಯ್ಕೆ ಸಹ ಮುಗಿದಿದ್ದು, ಚಿತ್ರತಂಡ ಅವರ ಹೆಸರುಗಳನ್ನು ಹಿರಂಗಪಡಿಸಬೇಕಿದೆ. ಭಾರೀ ಬಜೆಟ್ನ ಈ ಸಿನಿಮಾವನ್ನು ಭಾರತ ಪ್ರಮುಖ ಭಾಷೆಗಳಲ್ಲಿ ರಿಲೀಸ್ ಮಾಡುವ ಯೋಚನೆ ಚಿತ್ರತಂಡದ್ದು.
ಕೆಲವೇ ಗಂಟೆಗಳ ಹಿಂದೆಯಷ್ಟೆ ಡಾರ್ಲಿಂಗ್ ಪ್ರಭಾಸ್ ಆದಿಪುರುಷ್ ಸಿನಿಮಾ ಬಗ್ಗೆ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ಇಂದಿನಿಂದ ಸಿನಿಮಾದ ಚಿತ್ರೀಕರಣಕ್ಕೆ ಕಿಕ್ ಸ್ಟಾರ್ಟ್ ಸಿಕ್ಕಿದೆ. ಈ ವಿಷಯವನ್ನು ಪ್ರಭಾಸ್ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
View this post on Instagram
View this post on Instagram
ಇನ್ನು ರಾಮನ ತಮ್ಮ ಲಕ್ಷ್ಮಣನ ಪಾತ್ರದಲ್ಲಿ ಯುವ ನಟ ಸನ್ನಿ ಸಿಂಗ್ ನಟಿಸಲಿದ್ದಾರೆ ಎಂದು ಇಲ್ಲಿಯವರೆಗೆ ಹೇಳಲಾಗುತ್ತಿತ್ತು. ಸೋನು ಕೆ ಟೀಟೂ ಕಿ ಸ್ವೀಟಿ ಸಿನಿಮಾದ ನಾಯಕ ಸನ್ನಿ ಸಿಂಗ್ ಲಕ್ಷ್ಮಣನ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಈಗ ಲಕ್ಷ್ಮಣ ಪಾತ್ರಕ್ಕೆ ಟೈಗರ್ ಶ್ರಾಫ್ ಹೆಸರು ಕೇಳಿ ಬರುತ್ತಿದೆ.
View this post on Instagram
ಇದನ್ನೂ ಓದಿ: ಸಲಾರ್ ಸಿನಿಮಾಗಾಗಿ ದೊಡ್ಡ ಮೊತ್ತದ ಸಂಭಾವನೆ ಪಡೆದ ನಟಿ ಶ್ರುತಿ ಹಾಸನ್
ಪ್ರಭಾಸ್ ಅವರನ್ನು ರಾಮನಂತೆ ಊಹಿಸಿಕೊಂಡು ಅಭಿಮಾನಿಗಳೇ ಪೋಸ್ಟರ್ಗಳನ್ನು ಮಾಡಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು. ಇನ್ನು ರಾವಣ ಪಾತ್ರಕ್ಕೆ ಸೈಫ್ ಅಲಿ ಖಾನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಸಾಕಷ್ಟು ಮಂದಿ ಸಿಟ್ಟಿಗೆದ್ದು, ಅವರನ್ನು ಸಿನಿಮಾದಿಂದ ಕೈ ಬಿಡುವಂತೆ ಒತ್ತಾಯಿಸಿದ್ದರು.
ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ಜೊತೆ ಅವರ ಜೊತೆ ಪ್ರಭಾಸ್ ಮಾಡಲಿರುವ ಸಿನಿಮಾ ಸೈನ್ಸ್ ಫಿಕ್ಷನ್ ಕಥೆಯುಳ್ಳದ್ದಾಗಿದೆ. ಆದರೆ ಈ ಸಿನಿಮಾದ ಚಿತ್ರೀಕರಣ ದೀಪಿಕಾ ಅವರಿಂದಾಗಿ ಇನ್ನೂ ತಡವಾಗಲಿದೆ. ದೀಪಿಕಾ ಈ ವರ್ಷಾಂತ್ಯಕ್ಕೆ ಬೇರೆ ಸಿನಿಮಾಗಳ ಶೂಟಿಂಗ್ ಮುಗಿಸಿ, ಫ್ರೀ ಆಗಲಿದ್ದಾರೆ. ಆಗ ಇನ್ನೂ ಹೆಸರಿಡದ ಪ್ರಭಾಸ್ ಅವರ ಸಿನಿಮಾ ಆರಂಭವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ