ಸೆಲೆಬ್ರಿಟಿ ಹಾಗೂ ಪ್ರತಿಭಾವಂತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ಸಿನಿಮಾ 'ಬಾಹುಬಲಿ: ದ ಬಿಗಿನಿಂಗ್' ತೆರೆಕಂಡು ಇಂದಿಗೆ ಸರಿಯಾಗಿ 5 ವರ್ಷ. ಈ ಖುಷಿಯಲ್ಲಿರುವ ಚಿತ್ರತಂಡ ಅದನ್ನು ವಿಶೇಷವಾಗಿ ಸಂಭ್ರಮಿಸುತ್ತಿದೆ.
ಈ ಸಿನಿಮಾದ ಪ್ರಮುಖ ಪಾತ್ರಧಾರಿಗಳಾದ ರಾಣಾ ದಗ್ಗುಬಾಟಿ ಹಾಗೂ ಪ್ರಭಾಸ್ ವಿಶೇಷವಾದ ವಿಡಿಯೋ ಹಾಗೂ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಇಡೀ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ರಾಣಾ ಹಾಗೂ ಪ್ರಭಾಸ್ ತಾವು ನಟಿಸಿರುವ ಬಾಹುಬಲಿ ಚಿತ್ರಕ್ಕೆ ಐದು ವರ್ಷ ತುಂಬಿದ ಖುಷಿಯಲ್ಲಿ ಒಂದು ವಿಡಿಯೋವನ್ನುಎಡಿಟ್ ಮಾಡಿಸಿದ್ದು, ಅದನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆ ಸಿನಿಮಾದ ಕೆಲವು ವಿಡಿಯೋ ತುಣುಕುಗಳಿವೆ.
ಇನ್ನು 'ಬಾಹುಬಲಿ: ದ ಬಿಗಿನಿಂಗ್' ರಿಲೀಸ್ ಆದ ಐದು ವರ್ಷಗಳ ನಂತರ ಮತ್ತೆ ಅದರ ಟ್ರೇಲರ್ ರಿಲೀಸ್ ಮಾಡಿದಂತೆನಿಸುತ್ತದೆ. ಅಷ್ಟು ಚೆನ್ನಾಗಿ ವಿಡಿಯೋ ಎಡಿಟ್ ಮಾಡಲಾಗಿದೆ. ಈ ವಿಡಿಯೋವನ್ನು ರಾಣಾ ಹಾಗೂ ಪ್ರಭಾಸ್ ಮಧ್ಯರಾತ್ರಿ 12ರ ನಂತರ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ರಾಜಮೌಳಿ ಅವರ ಕನಸಿನ ಕೂಸಾಗಿದ್ದ 'ಬಾಹುಬಲಿ' ತೆರೆಕಂಡ ನಂತರ ಭಾರತದ ಸಿನಿಮಾ ಇತಿಹಾಸದಲ್ಲೇ ಹೊಸ ಹೊಸ ದಾಖಲೆಗಳನ್ನು ತನ್ನದಾಗಿಸಿಕೊಂಡಿತು. ಈ ಸಿನಿಮಾ ಬಾಕ್ಸಾಫಿಸ್ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಜೊತೆ ಇದರಲ್ಲಿ ನಟಿಸಿದ ಪ್ರತಿ ಕಲಾವಿದನಿಗೂ ರಾಷ್ಟ್ರಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿತ್ತು. ಈ ಸಿನಿಮಾದಿಂದಾಗಿ ಬೇರೆ ಚಿತ್ರರಂಗದವರು ದಕ್ಷಿಣ ಭಾರತದ ಸಿನಿಮಾಗಳತ್ತ ತಿರುಗಿ ನೋಡುವಂತೆ ಆಗುತ್ತು.
Ramya Krishnan: ಬಾಲ್ಯದ ನೆನಪುಗಳೊಂದಿಗೆ ಮೇಕಪ್ ಇಲ್ಲದ ಫೋಟೋ ಹಂಚಿಕೊಂಡ ರಮ್ಯಾ ಕೃಷ್ಣನ್
ಇದನ್ನೂ ಓದಿ: Dil Bechara Title Track: ನಾಳೆ ರಿಲೀಸ್ ಆಗಲಿದೆ ಸುಶಾಂತ್ ನಟನೆಯ ದಿಲ್ ಬೆಚಾರ ಚಿತ್ರದ ಟೈಟಲ್ ಟ್ರ್ಯಾಕ್: ಇಲ್ಲಿದೆ ಟೀಸರ್..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ