Radhe Shyam ಹೊಸ ಟ್ರೈಲರ್​ ರಿಲೀಸ್​.. ಇದು ಪ್ರೀತಿ-ವಿಧಿ ನಡುವೆ ನಡೆಯೋ ಯುದ್ಧ ಅಂದ್ರು ಶಿವಣ್ಣ!

ರಾಧೆ ಶ್ಯಾಮ್ ಸಿನಿಮಾ ಅನೌನ್ಸ್​ ಆದಾಗಿನಿಂದಲೂ ಸಖತ್​ ಸೌಂಡ್​ ಮಾಡಿಕೊಂಡೇ ಬಂದಿತ್ತು. ಇದೊಂದು ಪಕ್ಕಾ ಲವ್ ಸ್ಟೋರಿ ಸಿನಿಮಾ ಅಂತ ಈ ಹಿಂದೆ ರಿಲೀಸ್​ ಮಾಡಿದ್ದ ಟ್ರೈಲರ್​ ನೋಡಿದರೆ ಗೊತ್ತಾಗಿತ್ತು.

ರಾಧೆ ಶ್ಯಾಮ್ ಪೋಸ್ಟರ್​

ರಾಧೆ ಶ್ಯಾಮ್ ಪೋಸ್ಟರ್​

  • Share this:
ಪ್ಯಾನ್ ಇಂಡಿಯಾ (Pan India) ತಾರೆ ಪ್ರಭಾಸ್ (Prabhas) ಚಿತ್ರಗಳೆಂದರೆ ಸಾಕು ಅಭಿಮಾನಿಗಳಿಗೆ ಒಂದು ದೊಡ್ಡ ಹಬ್ಬದ ಸಡಗರವಿದ್ದಂತೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅವರ ಮುಂದಿನ ಚಿತ್ರವಾದ ‘ರಾಧೆ ಶ್ಯಾಮ್’ (Radhe shyam) ಬಿಡುಗಡೆಗಾಗಿ ತುಂಬಾನೇ ಕಾತುರತೆಯಿಂದ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಒಂದು ಕಡೆ ಹೊಂಬಾಳೆ ಫಿಲಂಸ್​ ನಿರ್ಮಾಣದ ಪ್ಯಾನ್​ ಇಂಡಿಯಾ ಸಿನಿಮಾ ಸಲಾರ್ (Salaar)​, ಮತ್ತೊಂದು ಕಡೆ ಓಂ ರಾವತ್​ ನಿರ್ದೇಶನದಲ್ಲಿ ಆದಿಪುರುಷ್​  (Adhipurush) ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಧೆ ಶ್ಯಾಮ್​ ಸಿನಿಮಾ  ಮಾರ್ಚ್​ 11 ಕ್ಕೆ ವಿಶ್ವದಾದ್ಯಂತ  ರಿಲೀಸ್ ಆಗುತ್ತಿದೆ. ಇನ್ನು ಕೇವಲ 8 ದಿನಗಳು ಬಾಕಿ ಇದೆ.ಈಗಾಗಲೇ ಸಿನಿಮಾ ಮೇಲಿರುವ ಕ್ರೇಜ್ (Craze)​ ಹೆಚ್ಚಾಗಿದೆ. ಜೊತೆಗೆ ಚಿತ್ರತಂಡ ಇದೀಗ ಹೊಸ ಟ್ರೈಲರ್​ (New Trailer) ಅಂದರೆ, ರಿಲೀಸ್​ ಟ್ರೈಲರ್ (Release Trailer)​ ಬಿಡುಗಡೆ ಮಾಡಿದೆ. ಕನ್ನಡ ವರ್ಷನ್​ನಲ್ಲಿ ಸ್ಯಾಂಡಲ್​ವುಡ್​ ಸೆಂಚೂರಿ ಸ್ಟಾರ್​ ಶಿವಣ್ಣ (Shivanna) ಅವರ ಧ್ವನಿ ಇದೆ.

ಯಾರು ಎಲ್ಲಿ ಹೇಗೆ ಸಾಯ್ತಾರೆ ಅಂತ ಹೇಳ್ತಾರಂತೆ ಪ್ರಭಾಸ್!

ರಾಧೆ ಶ್ಯಾಮ್ ಸಿನಿಮಾ ಅನೌನ್ಸ್​ ಆದಾಗಿನಿಂದಲೂ ಸಖತ್​ ಸೌಂಡ್​ ಮಾಡಿಕೊಂಡೇ ಬಂದಿತ್ತು. ಇದೊಂದು ಪಕ್ಕಾ ಲವ್ ಸ್ಟೋರಿ ಸಿನಿಮಾ ಅಂತ ಈ ಹಿಂದೆ ರಿಲೀಸ್​ ಮಾಡಿದ್ದ ಟ್ರೈಲರ್​ ನೋಡಿದರೆ ಗೊತ್ತಾಗಿತ್ತು. ಪ್ರಭಾಸ್​ ಹಾಗೂ ಪೂಜಾ ಹೆಗ್ಡೆ ಮೊದಲ ಬಾರಿಗೆ ಒಟ್ಟಾಗಿ ನಟಿಸಿದ್ದರು. ಈ ಹಿಂದೆ ಈ ಜೋಡಿ ಬಾಹುಬಲಿ ಸಿನಿಮಾದ ಒಂದು ಹಾಡಿನಲ್ಲಿ ಕಾಣಿಸಿಕೊಂಡಿತ್ತು. ಈಗ ರಿಲೀಸ್​ ಆಗಿರುವ ಟ್ರೈಲರ್​ ನೋಡಿದರೆ, ಇದರಲ್ಲಿ ಭರ್ಜರಿ ಆ್ಯಕ್ಷನ್​ ಇರುವುದು ತಿಳಿದುಬಂದಿದೆ. ಟ್ರೈಲರ್​ ತುಂಬಾ ಡೈಲಾಗ್ಸ್​ ತುಂಬಿದೆ. ಯಾರು ಎಲ್ಲಿ ಹೇಗೆ ಸಾಯ್ತಾರೆ ಅಂತ ನಾನು ಹೇಳ್ತಿನಿ ಅಂತ ಖಡಕ್ ಆಗಿ ಪ್ರಭಾಸ್ ಡೈಲಾಗ್​ ಹೊಡೆದಿದ್ದಾರೆ.

ಇದನ್ನೂ ಓದಿ: ಇಂದಿನಿಂದ ಅಸಲಿ ಆಟ ಶುರು ಅಂದಿದ್ಯಾಕೆ ಕಿಚ್ಚ? ಹಿಂಗ್​​ ಹೇಳಿದ್ದು ಅವ್ರಲ್ಲ.. `ವಿಕ್ರಾಂತ್​ ರೋಣ’!

ಪ್ರೀತಿ ಮತ್ತು ವಿಧಿ ನಡುವೆ ನಡೆಯೋ ಯುದ್ಧ ಅಂದ್ರು ಶಿವಣ್ಣ!

ರಾಧೆ ಶ್ಯಾಮ್ ಕನ್ನಡ ವರ್ಷನ್​ಗೆ ಶಿವಣ್ಣ ಡಬ್ ಮಾಡಿರುವ ವಿಚಾರ ಎಲ್ಲಿರಿಗೂ ತಿಳಿದಿದೆ, ರಾಧೆ-ಶ್ಯಾಮ್​ ಕಥೆಯನ್ನು ಶಿವಣ್ಣ​ ಅವರೇ ವಿವರಿಸಲಿದ್ದಾರೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಘೋಷಣೆ ಸಹ ಮಾಡಿತ್ತು. ಈ ವಿಚಾರ ತಿಳಿದ ಪ್ರಭಾಸ್​ ಅಭಿಮಾನಿಗಳು ಮತ್ತಷ್ಟು ಥ್ರಿಲ್​ ಆಗಿದ್ದಾರೆ. ಈ ಚಿತ್ರದ ಕನ್ನಡ ವರ್ಷನ್​ ಕಥೆಯನ್ನು ಶಿವಣ್ಣ ವಿವರಣೆ ನೀಡಲಿದ್ದಾರೆ. ಸಿನಿಮಾ ಆರಂಭದಿಂದ ಕೊನೆವರೆಗೂ ಶಿವಣ್ಣ ಅವರ ಧ್ವನಿ ಇರಲಿದೆಯಂತೆ. ಈಗ ಈ ಹೊಸ ಟ್ರೈಲರ್​ನಲ್ಲಿ ಶಿವಣ್ಣ ಅವರ ವಾಯ್ಸ್​ ಝಲಕ್​ ಇದೆ. ಕೊನೆಯಲ್ಲ ‘ಪ್ರೀತಿ ಮತ್ತು ವಿಧಿ ನಡುವೆ ನಡೆಯೋ ಯುದ್ಧಾನೆ ರಾಧೆ ಶ್ಯಾಮ್’​ ಎಂದು ಹೇಳುವ ಶಿವಣ್ಣ ಅವರ ಡೈಲಾಗ್​ ಇದೆ.

ಇದನ್ನೂ ಓದಿ: ರಿಲ್ಯಾಕ್ಸ್ ಮೂಡ್​ನಲ್ಲಿ ಜೂನಿಯರ್​ NTR ಹಾಗೂ ರಾಮ್ ಚರಣ್ : ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್

ಭವಿಷ್ಯ ಹೇಳುವ ಪಾತ್ರದಲ್ಲಿ ಪ್ರಭಾಸ್​!

ಚಿತ್ರದಲ್ಲಿ ನಿಗೂಢವಾದ ಭವಿಷ್ಯ ಹೇಳುವ ಒಬ್ಬ ನಾಯಕ ಮತ್ತು ಪ್ರೇಮಿ ವಿಕ್ರಮ್ ಆದಿತ್ಯನಾಗಿ ನಟ ಪ್ರಭಾಸ್ ಅವರ ಕೆಲವು ದೃಶ್ಯಗಳನ್ನು ಈ ಟ್ರೈಲರ್‌ನಲ್ಲಿ ನೋಡಬಹುದು. ಟ್ರೈಲರ್‌ನಲ್ಲಿ ಕಥೆ ಹೇಗೆ ಶುರುವಾಗುತ್ತದೆ ಎಂಬುದನ್ನು ನೋಡಬಹುದಾಗಿದೆ. ಈ ಟ್ರೈಲರ್ ನೋಡಿದ ಅಭಿಮಾನಿಗಳಿಗೆ ಈ ಚಿತ್ರದ ಬಗ್ಗೆ ಇರುವ ಕುತೂಹಲ ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಬಹುದು. ಈ ಟ್ರೈಲರ್ ಅದ್ಭುತ ಭಾವನೆಗಳ ಮಿಶ್ರಣವಾಗಿದ್ದು, ಇದರಲ್ಲಿ ಪ್ರೀತಿ ಪ್ರೇಮವಿದೆ, ಒಂದು ದುರಂತವಿದೆ, ಉತ್ತಮ ಸಂಗೀತವಿದೆ.
Published by:Vasudeva M
First published: