Prabhas: ಇಟಲಿಯಲ್ಲಿ ರೊಮ್ಯಾನ್ಸ್ ಮಾಡಲಿದ್ದಾರೆ ಪ್ರಭಾಸ್​-ಪೂಜಾ ಹೆಗ್ಡೆ..!​

Radhe Shyam: ಇದಾದ ನಂತರ ನಿರ್ದೇಶಕ ರಾಧಾಕೃಷ್ಣ ಸಿನಿಮಾದ ಮುಹೂರ್ತದ ಸಮಯದಲ್ಲಿ ತೆಗೆದಿದ್ದ ಫೋಟೋಗಳನ್ನು ಪ್ರಭಾಸ್ ಅಭಿಮಾನಿಗಳಿಗಾಗಿ ಲಾಕ್​ಡೌನ್​ ಆರಂಭವಾಗಿ ಒಂದು ತಿಂಗಳು ಕಳೆದ ನಂತರ ಹಂಚಿಕೊಂಡಿದ್ದರು. ಇದಾದ ನಂತರ ಈಗಲೇ ಮೊದಲ ಬಾರಿಗೆ ಅಧಿಕೃತವಾಗಿ ಚಿತ್ರತಂಡ ಈ ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ ಜೊತೆಗೆ ಟೈಟಲ್​ ಸಹ ರಿವೀಲ್ ಮಾಡಿತ್ತು.

ಪೂಜಾ ಹೆಗ್ಡೆ ಹಾಗೂ ಪ್ರಭಾಸ್​

ಪೂಜಾ ಹೆಗ್ಡೆ ಹಾಗೂ ಪ್ರಭಾಸ್​

  • Share this:
ಪ್ರಭಾಸ್​ ಹಾಗೂ ಪೂಜಾ ಹೆಗ್ಡೆ ಅಭಿನಯದ ಬಹು ನಿರೀಕ್ಷಿತ ಸಿನಿಮಾ ರಾಧೆ ಶ್ಯಾಮ್. ಇದು ಪ್ರಭಾಸ್​ 20ನೇ ಸಿನಿಮಾ. ಸಾಹೋ ನಂತರ ಪ್ರಭಾಸ್​ ನಟಿಸುತ್ತಿರುವ ಚಿತ್ರವಾಗಿದ್ದು, ಇದರ ಬಗ್ಗೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಇದೆ. ನಿರ್ದೇಶಕ ರಾಧಾಕೃಷ್ಣ ಕುಮಾರ್​ ಆ್ಯಕ್ಷನ್​ ಕಟ್​ ಹೇಳಿರುವ ಚಿತ್ರಕ್ಕೆ ಟೈಟಲ್ ಇಡುವ ಮೊದಲು ತಾತ್ಕಾಲಿಕವಾಗಿ ಪ್ರಭಾಸ್​ 20 ಎಂದು ಹೆಸರಿಡಲಾಗಿತ್ತು. ಈ ಸಿನಿಮಾದ ಚಿತ್ರೀಕರಣ ಆರಂಭವಾದಾಗ ಪ್ರಭಾಸ್ ಸೆಟ್​ನಲ್ಲಿ ತೆಗೆದಿದ್ದ ಒಂದು ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದರು. ಇದಾದ ನಂತರ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಚಿತ್ರತಂಡದೊಂದಿಗೆ ಯುರೋಪ್​ಗೆ ಹಾರಿದ್ದರು. ಅಲ್ಲಿ ಮೊಲದ ಶೆಡ್ಯೂಲ್​ನ ಚಿತ್ರೀಕರಣ ಮುಗಿಸಿ ಹಿಂತಿರುಗುವ ಹೊತ್ತಿಗೆ ಕೊರೋನಾ ಭೀತಿಯಿಂದಾಗಿ ಲಾಕ್​ಡೌನ್​ ಆರಂಭವಾಗಿತ್ತು. ಲಾಕ್​ಡೌನ್​ನಲ್ಲಿ ಈ ಸಿನಿಮಾ ಅಪ್ಡೇಟ್​ ನೀಡುವಂತೆ ಅಭಿಮಾನಿಗಳು ನಿರ್ದೇಶಕರ ಮೇಲೆ ಒತ್ತಡ ಹೇರಲಾರಂಭಿಸಿದ್ದರು.

ಇದಾದ ನಂತರ ನಿರ್ದೇಶಕ ರಾಧಾಕೃಷ್ಣ ಸಿನಿಮಾದ ಮುಹೂರ್ತದ ಸಮಯದಲ್ಲಿ ತೆಗೆದಿದ್ದ ಫೋಟೋಗಳನ್ನು ಪ್ರಭಾಸ್ ಅಭಿಮಾನಿಗಳಿಗಾಗಿ ಲಾಕ್​ಡೌನ್​ ಆರಂಭವಾಗಿ ಒಂದು ತಿಂಗಳು ಕಳೆದ ನಂತರ ಹಂಚಿಕೊಂಡಿದ್ದರು. ಇದಾದ ನಂತರ ಈಗಲೇ ಮೊದಲ ಬಾರಿಗೆ ಅಧಿಕೃತವಾಗಿ ಚಿತ್ರತಂಡ ಈ ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ ಜೊತೆಗೆ ಟೈಟಲ್​ ಸಹ ರಿವೀಲ್ ಮಾಡಿತ್ತು.


View this post on Instagram

Elated to share that I’m resuming shooting for my upcoming film. Looking forward to a fun schedule.


A post shared by Prabhas (@actorprabhas) on


ಲಾಕ್​ಡೌನ್​ ಸಡಿಲಗೊಂಡು ಈಗಾಗಲೇ ಸಿನಿಮಾಗಳ ಚಿತ್ರೀಕರಣ ಆರಂಭವಾಗಿದೆ. ಈಗ ಪ್ರಭಾಸ್​ ಅಭಿನಯದ ಈ ರಾಧೆ ಶ್ಯಾಮ್​ ಚಿತ್ರಕ್ಕೂ ಮತ್ತೆ ಕಿಕ್​ ಸ್ಟಾರ್ಟ್​ ಸಿಗಲಿದೆ. ಇದರ ಎರಡನೇ ಶೆಡ್ಯೂಲ್​ನ ಚಿತ್ರೀಕರಣ ಇಟಲಿಯಲ್ಲಿ ನಡೆಯಲಿದೆಯಂತೆ. 15 ದಿನಗಳ ಕಾಲ ಈ ಶೂಟಿಂಗ್​ ನಡೆಯಲಿದ್ದು, ಸದ್ಯದಲ್ಲೇ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಇಟಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎನ್ನಲಾಗುತ್ತಿದೆ.
ಈ ಸಿನಿಮಾ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್​ ಆಗಲಿದೆ. ಮುರಳಿ ಶರ್ಮಾ, ಪ್ರಿಯದರ್ಶಿನಿ ಹಾಗೂ ಕಾಲಿವುಡ್​ ಹಾಸ್ಯ ನಟ ಸತ್ಯಂ ತಾರಾಗಣದಲ್ಲಿದ್ದಾರೆ.


ಪ್ರಭಾಸ್ ಇತ್ತೀಚೆಗಷ್ಟೆ ಅರಣ್ಯವನ್ನು ದತ್ತು ಪಡೆದು ಸುದ್ದಿಯಲ್ಲಿದ್ದರು. ಇನ್ನು ಪ್ರಭಾಸ್​ ಅವರ ಬೇರೆ ಸಿನಿಮಾಗಳ ವಿಷಯಕ್ಕೆ ಬಂದರೆ, ಬಾಲಿವುಡ್​ ನಿರ್ದೇಶಕ ಓಂ ರಾವತ್​ ಜೊತೆ ಆದಿಪುರುಷ್​ ಚಿತ್ರದಲ್ಲಿ ರಾಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿರುವ ಮತ್ತೊಂದು ಸಿನಿಮಾಗೆ ಸಹಿ ಹಾಕಿದ್ದಾರೆ ಪ್ರಭಾಸ್​.
Published by:Anitha E
First published: