• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Prabhas 22: ಬಾಹುಬಲಿ ನಂತರ ಪೌರಾಣಿಕ ಪಾತ್ರದಲ್ಲಿ ಪ್ರಭಾಸ್​: ರಿಲೀಸ್ ಆಯ್ತು ಟೈಟಲ್​ ಪೋಸ್ಟರ್​..!

Prabhas 22: ಬಾಹುಬಲಿ ನಂತರ ಪೌರಾಣಿಕ ಪಾತ್ರದಲ್ಲಿ ಪ್ರಭಾಸ್​: ರಿಲೀಸ್ ಆಯ್ತು ಟೈಟಲ್​ ಪೋಸ್ಟರ್​..!

ಪ್ರಭಾಸ್ ಅಭಿನಯದ ಆದಿಪುರುಷ್​ ಚಿತ್ರದ ಟೈಟಲ್​ ಪೋಸ್ಟರ್​

ಪ್ರಭಾಸ್ ಅಭಿನಯದ ಆದಿಪುರುಷ್​ ಚಿತ್ರದ ಟೈಟಲ್​ ಪೋಸ್ಟರ್​

Adipurush-Prabhas: ಬಾಲಿವುಡ್​ ನಿರ್ದೇಶಕ ಓಂ ರಾವತ್​ ಅವರ ನಿರ್ದೇಶನದಲ್ಲಿ ಪ್ರಭಾಸ್​ ನಟಿಸುತ್ತಿದ್ದು, ಆ ಸಿನಿಮಾದ ಟೈಟಲ್​ ಪೋಸ್ಟರ್​ ಅನ್ನು ಇಂದು ಬೆಳಿಗ್ಗೆ 7:11ಕ್ಕೆ ಸರಿಯಾಗಿ ರಿಲೀಸ್​ ಮಾಡಿದ್ದಾರೆ. ಈ ಹಿಂದೆ ಬಾಹುಬಲಿಯಾಗಿ ಕಾಣಿಸಿಕೊಂಡಿದ್ದ ಪ್ರಭಾಸ್​ ಈ ಸಲ ಪೌರಾಣಿಕ ಪಾತ್ರದಲ್ಲಿ ನಟಿಸಲಿದ್ದಾರೆ.

ಮುಂದೆ ಓದಿ ...
  • Share this:

ಟಾಲಿವುಡ್​ ರೆಬೆಲ್​ ಸ್ಟಾರ್ ಪ್ರಭಾಸ್​ ಹೇಳಿದಂತೆಯೇ ಬೆಳಿಗ್ಗೆ ಅಭಿಮಾನಿಗಳಿಗೆ ಸರ್ಪ್ರೈಸ್​ ಕೊಟ್ಟಿದ್ದಾರೆ. ಅವರ ಹೊಸ ಪ್ರಾಜೆಕ್ಟ್​ ಅಂದರೆ 22ನೇ ಸಿನಿಮಾ ಕುರಿತಾದ ಮಾಹಿತಿ ನೀಡುವ ಮೂಲಕ ಅಭಿಮಾನಿಗಳನ್ನು ಖುಷಿಪಡಿಸಿದ್ದಾರೆ.


ಬಾಲಿವುಡ್​ ನಿರ್ದೇಶಕ ಓಂ ರಾವತ್​ ಅವರ ನಿರ್ದೇಶನದಲ್ಲಿ ಪ್ರಭಾಸ್​ ನಟಿಸುತ್ತಿದ್ದು, ಆ ಸಿನಿಮಾದ ಟೈಟಲ್​ ಪೋಸ್ಟರ್​ ಅನ್ನು ಇಂದು ಬೆಳಿಗ್ಗೆ 7:11ಕ್ಕೆ ಸರಿಯಾಗಿ ರಿಲೀಸ್​ ಮಾಡಿದ್ದಾರೆ. ಈ ಹಿಂದೆ ಬಾಹುಬಲಿಯಾಗಿ ಕಾಣಿಸಿಕೊಂಡಿದ್ದ ಪ್ರಭಾಸ್​ ಈ ಸಲ ಪೌರಾಣಿಕ ಪಾತ್ರದಲ್ಲಿ ನಟಿಸಲಿದ್ದಾರೆ.



ಆದಿಪುರುಷ್​ ಎಂಬ ಟೈಟಲ್​ ಇರುವ ಈ ಸಿನಿಮಾದ ಪೋಸ್ಟ್​ ನೋಡಿದರೆ, ಇದರಲ್ಲಿ ಪ್ರಭಾಸ್​ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಪೋಸ್ಟರ್​ನಲ್ಲಿ ಬಿಲ್ಲು ಹಿಡಿದ ರಾಮ, ಹನುಮಂತ ಹಾಗೂ ಹತ್ತು ತಲೆಗಳ ರಾವಣನ ಚಿತ್ರಗಳಿವೆ. ಈ ಸಿನಿಮಾದ ಕುರಿತಾಗಿ ಕೆಲವು ದಿನಗಳ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದವು. ನಿನ್ನೆ ರಾತ್ರಿ ಪ್ರಭಾಸ್​ ಹಾಗೂ ಓಂ ರಾವತ್​ ಸಿಹಿ ಸುದ್ದಿ ನೀಡುವುದಾಗಿ ಈ ವಿಡಿಯೋ ಹಂಚಿಕೊಂಡಿದ್ದರು.


ಅಜಯ್​ ದೇವಗನ್​ ಜೊತೆ ತಾನಾಜಿಯಂತಹ ಐತಿಹಾಸಿಕ ಹಿಟ್​ ಸಿನಿಮಾ ಕೊಟ್ಟ ನಿರ್ದೇಶಕ ಈಗ ಪೌರಾಣಿಕ ಸಿನಿಮಾಗೆ ಕೈ ಹಾಕಿದ್ದಾರೆ. ಅವರ ತಾನಾಜಿ ಚಿತ್ರ ಬಾಕ್ಸಾಫಿಸ್​ನಲ್ಲಿ ಧೂಳೆಬ್ಬಿಸಿತ್ತು. ಈಗ ಪ್ರಭಾಸ್​ ಜತೆ ಮಾಡುತ್ತಿರುವ ಆದಿಪುರುಷ್​ ಸಿನಿಮಾ ತೆಲುಗು ಹಾಗೂ ಹಿಂದಿಯಲ್ಲಿ ನಿರ್ಮಾಣವಾಗುತ್ತಿದ್ದು, ನಂತರ ಅದನ್ನು ಕನ್ನಡ, ತಮಿಳು, ಮಲಯಾಳಂ ಸೇರಿದಂತೆ ಇತರೆ ಅಂತರರಾಷ್ಟ್ರೀಯ ಭಾಷೆಗಳಿಗೂ ಡಬ್​ ಆಗಲಿದೆಯಂತೆ.



2021 ಅಂದರೆ ಮುಂದಿನ ವರ್ಷ ಆದಿಪುರುಷ್​ ಸಿನಿಮಾ ಸೆಟ್ಟೇರಲಿದ್ದು, 2022ಕ್ಕೆ ತೆರೆ ಕಾಣಲಿದೆಯಂತೆ. ಇದು ಪ್ರಭಾಸ್​ ಅಭಿನಯದ 22ನೇ ಚಿತ್ರ. ಯೂವಿ ಕ್ರಿಯೇಷನ್ಸ್​ ಹಾಗೂ ಟಿ-ಸಿರೀಸ್​ ಸಹಭಾಗಿತ್ವದಲ್ಲಿ ಆದಿಪುರುಷ್​ ಸಿನಿಮಾ ನಿರ್ಮಾಣವಾಗಲಿದೆ.


Prabhas and Om Raut joined hands for Adipurush movie and director released the title poster
ಪ್ರಭಾಸ್ ಅಭಿನಯದ ಆದಿಪುರುಷ್​ ಚಿತ್ರದ ಟೈಟಲ್​ ಪೋಸ್ಟರ್​


ಸದ್ಯ ನಾಗಚೈತನ್ಯ ಜೊತೆ ಸಹ ಒಂದು ಚಿತ್ರ ಮಾಡುತ್ತಿದ್ದು, ಇದರಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿದ್ದಾರೆ. ಜೊತೆಗೆ ರಾಧಾಕೃಷ್ಣ ಜೊತೆ ರಾಧೆ ಶ್ಯಾಮ್​ ಸಿನಿಮಾದಲ್ಲಿ ಪ್ರಭಾಸ್​ ಬ್ಯುಸಿಯಾಗಿದ್ದು, ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ.

Published by:Anitha E
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು