ಟಾಲಿವುಡ್‌ನ ಡಾರ್ಲಿಂಗ್ ಪ್ರಭಾಸ್ ಅಭಿನಯದ (Prabhas Movie Updates) ಆದಿಪುರುಷ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈ ಮೊದಲಿನ ಟೀಸರ್ ಸಾಕಷ್ಟು ಬೇಸರ ಮೂಡಿಸಿತ್ತು. ಟ್ರೋಲ್ ವೀರರ ಚಾಟಿ ಏಟಿಗೂ ಗುರಿ ಆಗಿತ್ತು. ರಾವಣನ (Adipurush Trailer Release) ಪಾತ್ರಧಾರಿ ಸೈಫ್ ಅಲಿ ಖಾನ್ ಪಾತ್ರಕ್ಕಂತೂ ಇಲ್ಲಿ ಬೇಜಾನ್ ಟಾಂಟ್‌ಗಳೇ ಬಂದಿದ್ದವು. ಆದರೆ ಇದೀಗ ಹೊರ ಬಂದ ಟ್ರೈಲರ್ ಆ ಎಲ್ಲ ಕಮೆಂಟ್‌ಗಳಿಗೆ ಉತ್ತರ (Latest Trailer Release) ಕೊಟ್ಟಂತಿದೆ. ರಾಮಾಯಣದ ಕಥೆಯನ್ನ ಅದ್ಭುತವಾಗಿ ಆಧುನಿಕ ಟೆಕ್ನಾಲಜಿಯೊಂದಿಗೆ ಇಲ್ಲಿ ತೋರಿಸಲಾಗಿದೆ. ಇದಕ್ಕೆ ಇಲ್ಲಿ ಕೊಟ್ಟ ಟ್ರೀಟ್‌ಮೆಂಟ್‌ಗೆ ಜೈ ಶ್ರೀರಾಮ್ ಅನ್ನೋರೇ (Adipurush Movie Updates) ಹೆಚ್ಚು ನೋಡಿ. ಇದರ ಒಂದು ರಿವ್ಯೂ ಇಲ್ಲಿ ಓದಿ.
ಆದಿಪುರುಷ ಸಿನಿಮಾದ ಟ್ರೈಲರ್ ರಿವ್ಯೂ ಹೀಗಿದೆ
ಬಹು ಕೋಟಿ ವೆಚ್ಚದ ಆದಿಪುರುಷ ಸಿನಿಮಾ ರೆಡಿ ಆಗಿದೆ. ಎಲ್ಲವನ್ನ ಮುಗಿಸಿಕೊಂಡು ಸಿನಿಮಾ ತಂಡ ಈಗ ಚಿತ್ರದ ರಿಲೀಸ್ ಡೇಟ್ ಅನ್ನ ಕೂಡ ಅನೌನ್ಸ್ ಮಾಡಿದೆ. ಈ ಚಿತ್ರವನ್ನ ಜೂನ್-16 ರಂದು ಎಲ್ಲೆಡೆ ರಿಲೀಸ್ ಮಾಡೋಕೆ ಪ್ಲಾನ್ ಮಾಡಲಾಗಿದೆ.
ಚಿತ್ರದ ರಿಲೀಸ್ ಡೇಟ್ ಅನ್ನ ಚಿತ್ರ ತಂಡ ಅದ್ಭುತ ಟ್ರೈಲರ್ ರಿಲೀಸ್ ಮಾಡೋ ಮೂಲಕ ಹೇಳಿದೆ. ಇಲ್ಲಿವರೆಗೂ ಆದಿಪುರುಷ ಚಿತ್ರದ ಟೀಸರ್ ನೋಡಿಯೇ ಅನೇಕರು ಬೇಸರಗೊಂಡಿದ್ದರು. ಸ್ವತಃ ಪ್ರಭಾಸ್ ಕೂಡ ಟೀಸರ್ ನೋಡಿ ಕಂಗಾಲಾಗಿದ್ದರು.
ಪ್ರಭು ರಾಮನ ಅವತಾರಕ್ಕೆ ಹೊಸ ಗತ್ತು ಬಂದೇ ಬಿಡ್ತು
ಆದರೆ ಟ್ರೈಲರ್ ಸಿನಿಮಾದ ಹೊಸ ಗತ್ತನ್ನ ಕಟ್ಟಿಕೊಟ್ಟಿದೆ. ಪ್ರಭು ಶ್ರೀರಾಮನ ರೂಪವನ್ನ ತದೇಕಚಿತ್ತದಿಂದ ನೋಡುವಂತೆನೆ ಮಾಡಲಾಗಿದೆ. ಈ ಹಿಂದಿನ ಯಾವುದೇ ತಪ್ಪುಗಳು ಇಲ್ಲಿ ರಿಪೀಟ್ ಆಗಿಲ್ಲ ಅನಿಸುತ್ತದೆ. ಅಷ್ಟು ಪಕ್ಕ ಆಗಿಯೇ ಇಡೀ ರಾಮಯಣದ ಕಥೆಯನ್ನ ಇಲ್ಲಿ ಹೇಳಲಾಗಿದೆ.
ಆದಿಪುರುಷ ಟ್ರೈಲರ್ ತುಂಬಾ ಚೆನ್ನಾಗಿದೆ. ರಾಮ ಭಕ್ತ ಹನುಮನೇ ಇಲ್ಲಿ ತನ್ನ ಪ್ರಭು ರಾಮನ ಕಥೆಯನ್ನ ಹೇಳುತ್ತಾ ಹೋಗುತ್ತಾನೆ. ಆದಿಪುರುಷ ರಾಮ ಇಲ್ಲಿ ಹೇಗೆ ಹೋರಾಡಿದ ಅನ್ನೋದನ್ನ ತುಂಬಾ ಅದ್ಭುತವಾಗಿಯೇ ತೋರಲಾಗಿದೆ.
ಆದಿಪುರುಷ ಚಿತ್ರದಲ್ಲಿ ವಿಎಫ್‌ಎಕ್ಸ್ ಎಫೆಕ್ಟ್ ಸೂಪರ್
ವಿಎಫ್‌ಎಕ್ಸ್ ಟೆಕ್ನಾಲಜಿ ಬಳಿಸಿಯೇ ಮಾಡಿರೋ ಈ ಸಿನಿಮಾ 700 ಕೋಟಿ ಬಜೆಟ್‌ನ ಸಿನಿಮಾ ಆಗಿದೆ. ರಾವಣನ ಪಾತ್ರಧಾರಿ ಸೈಫ್ ಅಲಿ ಖಾನ್ ಇಲ್ಲಿ ಹೊಳೆಯುತ್ತಿದ್ದಾರೆ. ಸೀತೆ ಪಾತ್ರಧಾರಿ ಕೃತಿ ಸೆನೋನ್ ಅಂತೂ ಈ ಹಿಂದಿನ ಸೀತೆಯ ಪಾತ್ರಧಾರಿಯನ್ನೆ ಮರೆಸೋವಂತೆ ಕಾಣಿಸುತ್ತಿದ್ದಾರೆ.
ಆದಿಪುರುಷ ಚಿತ್ರದಲ್ಲಿ ಆಂಜನೇಯನ ಪಾತ್ರವನ್ನ ದೇವದತ್ತ್ ನಾಗೆ ನಿರ್ವಹಿಸಿದ್ದಾರೆ. ಇವರ ಪಾತ್ರಕ್ಕೂ ಇಲ್ಲಿ ಸಾಕಷ್ಟು ಮಹತ್ವ ಕೊಡಲಾಗಿದೆ. ರಾಮನ ಸಹೋದರ ಲಕ್ಷ್ಮಣನ ಪಾತ್ರವನ್ನ ಸನ್ನಿ ಸಿಂಗ್ ಇಲ್ಲಿ ನಿರ್ವಹಿಸಿದ್ದಾರೆ.
ಹೊಸ ಭರವಸೆ ಮೂಡಿಸಿದ ಆದಿಪುರುಷ ಸಿನಿಮಾ ಟ್ರೈಲರ್
ಇವರೆಲ್ಲ ಈ ಚಿತ್ರದಲ್ಲಿ ಅದ್ಭುತ ವಿಷ್ಯೂಲ್ ಎಫೆಕ್ಟ್ ಇದೆ. ಈ ಹಿಂದೆ ಸಾಕಷ್ಟು ದುಡ್ಡು ಖರ್ಚು ಮಾಡಿದ್ದರು. ಆದರೆ ಚಿತ್ರದ ಟೀಸರ್‌ಗೆ ಸಿಕ್ಕ ನೆಗೆಟೀವ್ ರೆಸ್ಪಾನ್ಸ್‌ನಿಂದಲೇ ಮತ್ತೆ ವಿಎಫೆಕ್ಸ್ ಕೆಲಸ ಮಾಡಲಾಗಿತ್ತು. ಹಾಗಾಗಿಯೆ ಬಜೆಟ್ ಲೆಕ್ಕ ಜಾಸ್ತಿ ಆಗಿತ್ತು. ಅದು 700 ಕೋಟಿಗೆ ಬಂದು ತಲುಪಿತ್ತು.
ಅಷ್ಟು ವೆಚ್ಚದ ಆದಿಪುರುಷ ಸಿನಿಮಾದ ಟ್ರೈಲರ್ ಭಾರೀ ಭರವಸೆ ಮೂಡಿಸಿದೆ. ಹೊಸ ಕುತೂಹಲವನ್ನೂ ಹುಟ್ಟುಹಾಕಿದೆ. ಆದಿಪರುಷ ರಾಮನಾಗಿ ಡಾರ್ಲಿಂಗ್ ಪ್ರಭಾಸ್ ಇಲ್ಲಿ ಅತಿ ಹೆಚ್ಚು ಗಮನ ಸೆಳೆದಿದ್ದಾರೆ. ರಾಮನ ಆ ಆಕ್ರೋಶ ಮತ್ತು ರಾಮನ ಯುದ್ಧ ಕಲೆಗೆ ಇಲ್ಲಿ ವಿಷ್ಯೂಲ್ ಎಫೆಕ್ಟ್ ಸಾಕಷ್ಟು ಸಪೋರ್ಟ್ ಮಾಡಿದಂತೆ ಕಾಣುತ್ತದೆ.
ಇದೇ-16 ರಂದು ಆದಿಪುರುಷ ಸಿನಿಮಾ ರಿಲೀಸ್
ಆದಿಪುರುಷ ಸಿನಿಮಾ ಇದೇ ಜೂನ್-16 ರಂದು ಎಲ್ಲೆಡೆ ರಿಲೀಸ್ ಆಗುತ್ತಿದೆ. ನಿರ್ದೇಶಕ ಓಂ ರಾವತ್ ಈಗ ಟ್ರೈಲರ್ ಮೂಲಕವೇ ಒಂದು ಹೊಸ ಭರವಸೆ ಮೂಡಿಸಿದ್ದಾರೆ. ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿಯೇ ರೆಡಿ ಆಗಿರೋ ಈ ಚಿತ್ರ ಇದೀಗ ಎಲ್ಲ ಭಾಷೆಯಲ್ಲೂ ರೆಡಿ ಅಗಿದೆ.
ಇದನ್ನೂ ಓದಿ: Shah Rukh Khan: ಜವಾನ್ ಸಿನಿಮಾದ ಕಥೆ ಹೇಳಿದ್ರು ಕಿಂಗ್ ಖಾನ್! ಏನಂತೆ ಸ್ಟೋರಿ?
ಹಿಂದಿ, ತೆಲುಗು, ಕನ್ನಡ ಭಾಷೆಯ ಆದಿಪುರುಷ ಟ್ರೈಲರ್ ಇದೀಗ ರಿಲೀಸ್ ಆಗಿದೆ. ಸಿನಿಮಾದ ಬಗ್ಗೆ ಒಂದು ಹೊಸ ಭರವಸೆಯನ್ನ ಮೂಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ