Prabhas 20: ರಿಲೀಸ್​ ಆಯ್ತು ಪ್ರಭಾಸ್​ ನಟನೆಯ ಚಿತ್ರದ ಟೈಟಲ್​- ಫಸ್ಟ್​ಲುಕ್​ ಪೋಸ್ಟರ್​..!

Radhe Shyam: ನಿರ್ದೇಶಕ ರಾಧಾಕೃಷ್ಣ ಕುಮಾರ್​ ಸಿನಿಮಾದ ಮುಹೂರ್ತದ ಸಮಯದಲ್ಲಿ ತೆಗೆದಿದ್ದ ಫೋಟೋಗಳನ್ನು ಪ್ರಭಾಸ್ ಅಭಿಮಾನಿಗಳಿಗಾಗಿ ಲಾಕ್​ಡೌನ್​ ಆರಂಭವಾಗಿ ಒಂದು ತಿಂಗಳು ಕಳೆದ ನಂತರ ಹಂಚಿಕೊಂಡಿದ್ದರು. ಇದಾದ ನಂತರ ಈಗಲೇ ಮೊದಲ ಬಾರಿಗೆ ಅಧಿಕೃತವಾಗಿ ಚಿತ್ರತಂಡ ಈ ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ ರಿಲೀಸ್​ ಮಾಡಿದೆ.

ರಾಧೆ ಶ್ಯಾಮ್​ ಸಿನಿಮಾದಲ್ಲಿ ಪೂಜಾ ಹೆಗ್ಡೆ-ಪ್ರಭಾಸ್​

ರಾಧೆ ಶ್ಯಾಮ್​ ಸಿನಿಮಾದಲ್ಲಿ ಪೂಜಾ ಹೆಗ್ಡೆ-ಪ್ರಭಾಸ್​

  • Share this:
ಪ್ರಭಾಸ್​ ಹಾಗೂ ಪೂಜಾ ಹೆಗ್ಡೆ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಪ್ರಭಾಸ್​ 20. ಸಾಹೋ ನಂತರ ಪ್ರಭಾಸ್​ ನಟಿಸುತ್ತಿರುವ ಹಾಗೂ ಇನ್ನೂ ಹೆಸರಿಡದ ಈ ಚಿತ್ರದ ಬಗ್ಗೆ ತೆಲುಗು ಸಿನಿ ಪ್ರೇಕ್ಷಕರು ಹಾಗೂ ಪ್ರಭಾಸ್ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಇದೆ. 

ನಿರ್ದೇಶಕ ರಾಧಾಕೃಷ್ಣ ಕುಮಾರ್​ ಆ್ಯಕ್ಷನ್​ ಕಟ್​ ಹೇಳಿರುವ ಚಿತ್ರಕ್ಕೆ ತಾತ್ಕಾಲಿಕವಾಗಿ ಪ್ರಭಾಸ್​ 20 ಎಂದು ಹೆಸರಿಡಲಾಗಿದೆ. ಈ ಸಿನಿಮಾದ ಚಿತ್ರೀಕರಣ ಆರಂಭವಾದಾಗ ಪ್ರಭಾಸ್ ಸೆಟ್​ನಲ್ಲಿ ತೆಗೆದಿದ್ದ ಒಂದು ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದರು.

Why Prabhas Friend worried about his New Movie
ಪ್ರಭಾಸ್ ಅಭಿನಯದ ಹೊಸ ಸಿನಿಮಾದ ಚಿತ್ರ


ಇದಾದ ನಂತರ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಚಿತ್ರತಂಡದೊಂದಿಗೆ ಯುರೋಪ್​ಗೆ ಹಾಡಿದ್ದರು. ಅಲ್ಲಿ ಮೊಲದ ಶೆಡ್ಯೂಲ್​ನ ಚಿತ್ರೀಕರಣ ಮುಗಿಸಿ ಹಿಂತಿರುಗುವ ಹೊತ್ತಿಗೆ ಕೊರೋನಾ ಭೀತಿಯಿಂದಾಗಿ ಲಾಕ್​ಡೌನ್​ ಆರಂಭವಾಗಿತ್ತು.ನಿರ್ದೇಶಕ ರಾಧಾಕೃಷ್ಣ ಸಿನಿಮಾದ ಮುಹೂರ್ತದ ಸಮಯದಲ್ಲಿ ತೆಗೆದಿದ್ದ ಫೋಟೋಗಳನ್ನು ಪ್ರಭಾಸ್ ಅಭಿಮಾನಿಗಳಿಗಾಗಿ ಲಾಕ್​ಡೌನ್​ ಆರಂಭವಾಗಿ ಒಂದು ತಿಂಗಳು ಕಳೆದ ನಂತರ ಹಂಚಿಕೊಂಡಿದ್ದರು. ಇದಾದ ನಂತರ ಈಗಲೇ ಮೊದಲ ಬಾರಿಗೆ ಅಧಿಕೃತವಾಗಿ ಚಿತ್ರತಂಡ ಈ ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ ರಿಲೀಸ್​ ಮಾಡಿದೆ.ಈ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಟೈಟಲ್​ ಹಾಗೂ ಫಸ್ಟ್​ಲುಕ್​ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಇಲ್ಲಿಯವರೆಗೆ ಪ್ರಭಾಸ್ 20 ಎಂದು ಕರೆಯಲಾಗುತ್ತಿದ್ದ ಚಿತ್ರಕ್ಕೆ 'ರಾಧೆ ಶ್ಯಾಮ್'​ ಎಂದು ಟೈಟಲ್​ ಫಿಕ್ಸ್​ ಮಾಡಲಾಗಿದೆ.

 ಮುರಳಿ ಶರ್ಮಾ, ಪ್ರಿಯದರ್ಶಿನಿ ಹಾಗೂ ಕಾಲಿವುಡ್​ ಹಾಸ್ಯ ನಟ ಸತ್ಯಂ ತಾರಾಗಣದಲ್ಲಿದ್ದಾರೆ. ಜುಲೈ 10 ಪ್ರಭಾಸ್​ಗೆ ಅದೃಷ್ಟದ ದಿನ. 5 ವರ್ಷಗಳ ಹಿಂದೆ ಇದೇ ದಿನದಂದು ಬಾಹುಬಲಿ ಸಿನಿಮಾ ತೆರೆ ಕಂಡು ಬ್ಲಾಕ್​ಬಸ್ಟರ್ ಹಿಟ್​ ಆಗಿತ್ತು. ಇದೇ ಕಾರಣದಿಂದ 'ರಾಧೆ ಶ್ಯಾಮ್'​ ಚಿತ್ರದ ಪೋಸ್ಟರ್​ ಅನ್ನೂ ಇವತ್ತೇ ಬಿಡುಗಡೆ ಮಾಡಲಾಗಿದೆ ಎನ್ನಲಾಗುತ್ತಿದೆ.

 

Ramya Krishnan: ಬಾಲ್ಯದ ನೆನಪುಗಳೊಂದಿಗೆ ಮೇಕಪ್​ ಇಲ್ಲದ ಫೋಟೋ ಹಂಚಿಕೊಂಡ ರಮ್ಯಾ ಕೃಷ್ಣನ್​ಇದನ್ನೂ ಓದಿ: ಬಾಹುಬಲಿ ಸಿನಿಮಾಗೆ 5ರ ಸಂಭ್ರಮ: ಖುಷಿ ಹಂಚಿಕೊಂಡ ಪ್ರಭಾಸ್​-ರಾಣಾ..!
Published by:Anitha E
First published: