• Home
  • »
  • News
  • »
  • entertainment
  • »
  • Gandhada Gudi: ಗಂಧದ ಗುಡಿಯ ಅಮೋಘ ದರ್ಶನ! ಡೈರೆಕ್ಟರ್ ಅಮೋಘವರ್ಷ Exclusive ಸಂದರ್ಶನ

Gandhada Gudi: ಗಂಧದ ಗುಡಿಯ ಅಮೋಘ ದರ್ಶನ! ಡೈರೆಕ್ಟರ್ ಅಮೋಘವರ್ಷ Exclusive ಸಂದರ್ಶನ

ಪುನೀತ್ ರಾಜ್​ಕುಮಾರ್ ಜೊತೆ ಅಮೋಘವರ್ಷ

ಪುನೀತ್ ರಾಜ್​ಕುಮಾರ್ ಜೊತೆ ಅಮೋಘವರ್ಷ

ಇಷ್ಟಪಡೋದಿಲ್ಲ. ಅವರ ಜೊತೆಗೆ ನಾನು ಇದ್ದೇ ಅನ್ನೋದೇ ಖುಷಿ. ಪವರ್ ಸ್ಟಾರ್ ಪುನಿತ ರನ್ನ ಡೈರೆಕ್ಟ್ ಮಾಡಿದ್ದೇನೆ ಅಂದ್ರೆ ಅದು ನಿಜಕ್ಕೂ ಸರಿ ಅನಿಸೋದೇ ಇಲ್ಲ.

  • Share this:

ಪವರ್ ಸ್ಟಾರ್ ಪುನಿತ್ ರಾಜಕುಮಾರ್ (Puneeth Rajkumar) ಅಭಿನಯದ ಗಂಧದ ಗುಡಿ (Gandhada Gudi) ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈ ಮೂಲಕ ಪವರ್ ಸ್ಟಾರ್ ತಮ್ಮ ಕನಸನ್ನ ಈಗ ನನಸು ಮಾಡಿಯೇ ( (Gandhada Gudi Film Trailer) ಹೋಗಿದ್ದಾರೆ. ಪುನಿತ್ ಚಿತ್ರ ಬದುಕಿನ ಈ ಗಂಧದ ಗುಡಿಯಲ್ಲಿ ಕರ್ನಾಟದ ಅರಣ್ಯ ಸಂಪತ್ತಿನ ಚಿತ್ರಣವೇ ಇದೆ. ಪವರ್ ಸ್ಟಾರ್ ಪುನಿತ್ ರಾಜಕುಮಾರ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ ಅಂದ್ರೆ ತಪ್ಪಾಗುತ್ತಿದೆ. ಯಾಕೆಂದ್ರೆ, ಅಪ್ಪು ಈ ಚಿತ್ರದಲ್ಲಿ ನಟನೆ ಮಾಡಿಯೇ ಇಲ್ಲ. ತಮ್ಮ ಸರಳತೆಯಲ್ಲಿಯೇ ದಟ್ಟ ಕಾಡಲ್ಲಿ ನಡೆದು ಹೋಗಿದ್ದಾರೆ. ಕಾಡೊಳಗೆ ಓಡಾಡಿಕೊಂಡು ನಿಸರ್ಗದ ಸೊಬಗನ್ನ ಸವಿದಿದ್ದಾರೆ. ಕಾಡೊಳಗಿನ ನೀರಿನಾಳದಲ್ಲಿ ಧುಮುಕಿ ಅಪರೂಪದ ಜಲಚರವನ್ನೂ ಕಂಡು ಬಂದಿದ್ದಾರೆ. ಸಿನಿಪ್ರೇಮಿಗಳಿಗೆ ಗಂಧದ ಗುಡಿಯ ವಿಶೇಷ ಕೊಡುಗೆಯನ್ನೆ ಕೊಟ್ಟು ಹೋಗಿದ್ದಾರೆ. ಇಷ್ಟು ವಿಶೇಷವಾದ ಸಿನಿಮಾದ ಹಿಂದೆ ಒಬ್ಬ ಡೈರೆಕ್ಟರ್ (Gandhada Gudi Director Amoghavarsha) ಕೂಡ ಇದ್ದಾರೆ. ಅವರೇ ಅಮೋಘವರ್ಷ. ಸಿನಿಮಾದ ಟ್ರೈಲರ್ ರಿಲೀಸ್ ಆದ ಹಿನ್ನೆಲೆಯಲ್ಲಿ ನ್ಯೂಸ್ 18 ಡಿಜಿಟಲ್​ಗೆ ವಿಶೇಷವಾಗಿಯೇ ಮಾತನಾಡಿದ್ದಾರೆ.


ಗಂಧದ ಗುಡಿ ಅನ್ನೋದು ಪವರ್ ಸ್ಟಾರ್ ಪುನಿತ್ ರಾಜಕುಮಾರ್ ಕಂಡ ಅದ್ಭುತ ಕನಸು. ಈ ಕನಸಿಗಾಗಿ ಹೆಚ್ಚು ಕಡಿಮೆ ಒಂದು ವರ್ಷ ಪವರ್ ಸ್ಟಾರ್ ಪುನಿತ್ ರಾಜಕುಮಾರ್ ದಟ್ಟ ಅರಣ್ಯದಲ್ಲಿ ಓಡಾಡಿದ್ದಾರೆ. ಹೌದು, ಪುನಿತ್ ರಾಜಕುಮಾರ್ ಚಿತ್ರ ಜೀವನದಲ್ಲಿ ಇದು ವಿಶೇಷವಾದ ಸಿನಿಮಾನೆ ಆಗಿದೆ. ಈ ಒಂದು ವಿಶೇಷ ಚಿತ್ರಕ್ಕಾಗಿ ಪುನಿತ್ ಜೊತೆಗೆ ಕೆಲಸ ಮಾಡಿದ ಖುಷಿಯಲ್ಲಿಯೇ ಡೈರೆಕ್ಟರ್ ಅಮೋಘವರ್ಷ ಇದ್ದಾರೆ.


ಇವರು ವೈಲ್ಡ್ ಲೈಫ್ ಫೋಟೋಗ್ರಾಫರ್
ಅಮೋಘವರ್ಷ ಸಾಮಾನ್ಯ ಡೈರೆಕ್ಟರ್ ಅಲ್ಲವೇ ಅಲ್ಲ. ಅರಣ್ಯದ ನಿಸರ್ಗ ಸೌಂದರ್ಯವನ್ನ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಲೇ ಬಂದಿರೋ ವೈಲ್ಡ್ ಲೈಫ್ ಫೋಟೋಗ್ರಾಫರ್. ಇವರಿಗೆ ಕರ್ನಾಟಕದಲ್ಲಿಯೇ ಇರೋ ದಟ್ಟ ಅರಣ್ಯದ ಇಂಚಿಂಚು ಪರಿಚಯ ಇದೆ. ಇಂತಹ ವಿಶೇಷ ವ್ಯಕ್ತಿಯ ಉತ್ತರ ರೂಪದ ಮಾತು ಇಲ್ಲಿದೆ.


ಒಬ್ಬ ಸೂಪರ್ ಸ್ಟಾರ್ ಜೊತೆಗೆ ಸಿನಿಮಾ ಮಾಡಿದ ಅನುಭವ
ಪವರ್ ಸ್ಟಾರ್ ಒಬ್ಬ ಸಾಮಾನ್ಯ ವ್ಯಕ್ತಿ. ಇದು ಚಿತ್ರೀಕರಣದ ಸಮಯದಲ್ಲಿಯೇ ಅರ್ಥ ಆಯಿತು. ಅವರು ಒಬ್ಬ ಸೂಪರ್ ಸ್ಟಾರ್ ಅನ್ನೋ ಫೀಲ್ ಬರಲೇ ಇಲ್ಲ. ಅಷ್ಟು ಸರಳ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್.


ಪುನಿತ್​ ರಾಜಕುಮಾರ್ ಅವರನ್ನ ಡೈರೆಕ್ಟ್ ಮಾಡಿರೋ ಅನುಭವ?
ಪವರ್ ಸ್ಟಾರ್ ಅವರನ್ನ ನಾನು ಡೈರೆಕ್ಟ್ ಮಾಡಿದ್ದೇನೆ ಅಂತ ಹೇಳೋಕೆ ನಾನು ಇಷ್ಟಪಡೋದಿಲ್ಲ. ಅವರ ಜೊತೆಗೆ ನಾನು ಇದ್ದೇ ಅನ್ನೋದೇ ಖುಷಿ. ಪವರ್ ಸ್ಟಾರ್ ಪುನಿತ ರನ್ನ ಡೈರೆಕ್ಟ್ ಮಾಡಿದ್ದೇನೆ ಅಂದ್ರೆ ಅದು ನಿಜಕ್ಕೂ ಸರಿ ಅನಿಸೋದೇ ಇಲ್ಲ.


ಪವರ್ ಸ್ಟಾರ್ ಪುನಿತ್ ಚಿತ್ರೀಕರಣದ ಸಮಯದಲ್ಲಿ ಹೇಗಿರುತ್ತಿದ್ದರು?
ಪವರ್ ಸ್ಟಾರ್ ಪುನಿತ್ ತೀರಾ ಸರಳವಾಗಿದ್ದರು. ಸೂಪರ್ ಸ್ಟಾರ್ ಅನ್ನೋ ಅವರಲ್ಲಿ ಇರಲೇ ಇಲ್ಲ. ಬೆಟ್ಟ ಹತ್ತೋಣ ಅಂದ್ರೆ ಸಾಕು, ಹತ್ತಿಯೇ ಬಿಡುತ್ತಿದ್ದರು. ಕೆಳಗಡೆಗೆ ಕುಳಿತು ರೊಟ್ಟಿ ತಿನ್ನೋಣವೇ ಅಂದ್ರು ಸಾಕು, ಓಕೆ ಅಂತಲೇ ಕೆಳಗೆ ಕುಳಿತೇ ಬಿಡೋರು.


ಗಂಧದ ಗುಡಿಯ ವಿಶೇಷ ಏನೂ?
ಗಂಧದ ಗುಡಿ ಸಿನಿಮಾ ಒಂದು ಸಿನಿಮಾ ಅಲ್ಲ. ಇದು ಒಂದು ಫೀಚರ್ ಫಿಲ್ಮ್ ಕೂಡ ಅಲ್ಲ. ನಿಜಕ್ಕೂ ಇಲ್ಲಿವರೆಗೂ ಇಂತಹ ಸಿನಿಮಾ ಕೂಡ ಬಂದಿಲ್ಲ. ಇದೊಂದು ಅನಭವವೇ ಸರಿ.


ಗಂಧದ ಗುಡಿಯೊಂದು ಜರ್ನಿ ಸಿನಿಮಾನೇ?
ಗಂಧದ ಗುಡಿ ಚಿತ್ರ ಒಂದು ಜರ್ನಿ ಸಿನಿಮಾನೇ ಆಗಿದೆ. ಥಿಯೇಟ್​ ನಲ್ಲಿ ಸಿನಿಮಾ ನೋಡುವವರು ದಟ್ಟ ಕಾಡಿನ ಅನುಭವವನ್ನ ಪಡೆಯುತ್ತಾರೆ. ವಿಶೇಷವಾಗಿ ಅಪ್ಪು ಜೊತೆಗೆ ಅವರೂ ಜರ್ನಿ ಮಾಡ್ತಾರೆ.


ಗಂಧದ ಗುಡಿ ಎಷ್ಟು ಗಂಟೆಯ ಸಿನಿಮಾ?
ಗಂಧದ ಗುಡಿ ಒಂದು ವಿಶೇಷ ಚಿತ್ರ. ಇದರ ಅವಧಿ ಒಂದು ಗಂಟೆಗೂ ಹೆಚ್ಚಿದೆ. ಥಿಯೇಟರ್​ಗೆ ಬರೋ ಜನರಿಗೆ ಇಲ್ಲಿ ಅಪ್ಪು ಅವರನ್ನ ಬೇರೆ ಲೋಕಕ್ಕೆ ಕರೆದುಕೊಂಡು ಹೋಗ್ತಾರೆ.


ಗಂಧದ ಗುಡಿ ರಿಲೀಸ್ ಆಗೋದು ಯಾವಾಗ?
ಗಂಧದ ಗುಡಿ ಚಿತ್ರ ಇದೇ ತಿಂಗಳೇ ರಿಲೀಸ್ ಆಗುತ್ತಿದೆ. ಇದೇ ತಿಂಗಳ 28 ರಂದು ರಾಜ್ಯದೆಲ್ಲೆಡೆ ಥಿಯೇಟರ್​ನಲ್ಲೂ ಗಂಧದ ಗುಡಿ ಬರುತ್ತದೆ.


ಗಂಧದ ಗುಡಿ ಸಿನಿಮಾಗೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಒಂದು ಪ್ರೆಸ್ ಮೀಟ್ ಕೂಡ ಇರುತ್ತದೆ. ಅಲ್ಲಿ ಚಿತ್ರಕ್ಕೆ ಸಂಬಂಧಿಸಿದಂತೆ ಇತರ ವಿಷಯಗಳನ್ನೂ ಹಂಚಿಕೊಳ್ಳಲಿದ್ದೇವೆ.
ಚಿತ್ರದಲ್ಲಿ ಇನ್ನೂ ಸಾಕಷ್ಟು ವಿಶೇಷತೆಗಳೂ ಇವೆ. ಅದನ್ನ ನೀವೂ ಥಿಯೇಟರ್​ನಲ್ಲಿಯೇ ನೋಡಿ ಅನುಭವಿಸಬೇಕು ಅಂತಲೇ ಅಮೋಘವರ್ಷ ಹೇಳಿಕೊಂಡಿದ್ದಾರೆ.

First published: