• Home
  • »
  • News
  • »
  • entertainment
  • »
  • Gandhada Gudi Trailer: ಧುಮ್ಮಿಕ್ಕುವ ಜಲಪಾತ, ಆನೆಗಳ ಹಿಂಡು! ಗಂಧದ ಗುಡಿ ಟ್ರೈಲರ್​​ನಲ್ಲಿ ಪ್ರಕೃತಿಯ ದೃಶ್ಯ ವೈಭವ

Gandhada Gudi Trailer: ಧುಮ್ಮಿಕ್ಕುವ ಜಲಪಾತ, ಆನೆಗಳ ಹಿಂಡು! ಗಂಧದ ಗುಡಿ ಟ್ರೈಲರ್​​ನಲ್ಲಿ ಪ್ರಕೃತಿಯ ದೃಶ್ಯ ವೈಭವ

ಗಂಧದ ಗುಡಿ

ಗಂಧದ ಗುಡಿ

ಪವರ್​ ಸ್ಟಾರ್ ಪುನೀತ್ ರಾಜ್​ಕುಮಾರ್ ಅಭಿನಯದ ಗಂಧದ ಗುಡಿ ಟ್ರೈಲರ್ ರಿಲೀಸ್ ಆಗಿದ್ದು ವ್ಯಾಪಕ ಮೆಚ್ಚುಗೆ ಗಳಿಸುತ್ತಿದೆ.

  • Share this:

ಬಹುನಿರೀಕ್ಷಿತ ಗಂಧದ ಗುಡಿ (Gandhada gudi) ಟ್ರೈಲರ್ ಇಂದು ರಿಲೀಸ್ ಆಗಿದೆ. ಎರಡು ದಿನಗಳ ಹಿಂದೆ ಪಿಆರ್​ಕೆ ಪ್ರೊಡಕ್ಷನ್ (PRK Productions) ಅಕ್ಟೋಬರ್ 9ರಂದು ಗಂಧದ ಗುಡಿ ಡಾಕ್ಯುಮೆಂಟರಿ ಟ್ರೈಲರ್ ರಿಲೀಸ್ ಮಾಡುವ ಅಪ್ಡೇಟ್ ಕೊಟ್ಟಿತ್ತು. ಅದರಂತೆ ಈಗ ಟ್ರೈಲರ್ ರಿಲೀಸ್ ಆಗಿದ್ದು ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರ ಡ್ರೀಮ್​ ಪ್ರಾಜೆಕ್ಟ್ ಟೈಟಲ್​ ಹಾಗೂ ಟೀಸರ್  ಬಿಡುಗಡೆಯಾಗಿತ್ತು. ಬಹುದೊಡ್ಡ ಕನಸಿನೊಂದಿಗೆ ಅಪ್ಪು (Appu) ರೂಪಿಸಿರೋ ವೈಲ್ಡ್ ಲೈಫ್ ಜಗತ್ತಿನ ಕಥೆಯ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಗಳಿಸಿತ್ತು. ಇದೀಗ ಇದರ ಹೊಸ ಪೋಸ್ಟರ್​ ರಿಲೀಸ್ ಆಗಿದೆ. ಪಿಆರ್‌ಕೆ ಸ್ಟುಡಿಯೋ 'ಗಂಧದ ಗುಡಿ'ಯ ಟ್ರೈಲರ್ ಬಿಡುಗಡೆ ಮಾಡಿದೆ.


ಎಪಿಕ್ ಜರ್ನಿ


ಪುನೀತ್ ಅವರ ಸುಂದರವಾದ ಗಂಧದ ಗುಡಿ ಡಾಕ್ಯುಮೆಂಟರಿ ಟ್ರೈಲರ್ ರಿಲೀಸ್ ಆಗಿದ್ದು ಇದರಲ್ಲಿ ಅರಣ್ಯದ ದೃಶ್ಯ ವೈಭವ ಶುರುವಾಗಿದೆ. ಧುಮ್ಮಿಕ್ಕುವ ಜಲಪಾತಗಳು, ಬೆಟ್ಟಗಳು, ನದಿಗಳು, ಬಾನೆತ್ತರ ಬೆಳೆದ ಹಸಿರುವ ವನದ ಅದ್ಭುತ ದೃಶ್ಯ ವೈಭವ ಟ್ರೈಲರ್​ನಲ್ಲಿ ಸಿಕ್ಕಿದೆ.
ಕರುನಾಡಿನ ಕಾಡುಗಳನ್ನು ಸುತ್ತಿದ್ದ ಪವರ್ ಸ್ಟಾರ್


ಜಾಗತಿಕವಾಗಿ ವೈಲ್ಡ್​ ಲೈಫ್ ಬಗ್ಗೆ ಪ್ರತ್ಯೇಕ ಪ್ರೇಕ್ಷಕರೇ ಇದ್ದಾರೆ. ಅರಣ್ಯ, ನದಿ, ಕಾಡು, ಬೆಟ್ಟ, ಗುಡ್ಡ, ಪ್ರಾಣಿಗಳನ್ನು ನೋಡಲು ಜನ ಯಾವಾಗಲೂ ಕುತೂಹಲಭರಿತರಾಗಿದ್ದಾರೆ.​ ಇಂಥ ಡಾಕ್ಯುಮೆಂಟ್​ ಚಿತ್ರೀಕರಣ ಮಾಡುವುದೆಂದರೆ ಅದಷ್ಟು ಸುಲಭವಾದ ಮಾತಲ್ಲ.​


ಲಾಕ್​​ಡೌನ್ ಸಮಯದಲ್ಲಿ ಶುರುವಾಯ್ತು ಹೊಸ ಪ್ರಯತ್ನ


ಮುಖ್ಯವಾಗಿ ಜೀವನ ಶೈಲಿ ಸಂಪೂರ್ಣ ಬದಲಾಗುತ್ತದೆ. ಕಾಡಿನಲ್ಲಿ ಲಭ್ಯ ವ್ಯವಸ್ಥೆಗಳನ್ನು ಬಳಸಿಕೊಂಡು ಬದುಕಬೇಕಾಗುತ್ತದೆ. ಕೊರೋನಾ ಬಂದು ಲಾಕ್​​ಡೌನ್ ಘೋಷಣೆಯಾದಾಗ ಅಪ್ಪು ಇಂಥದ್ದೊಂದು ಸಾಹಸಕ್ಕೆ ಕೈ ಹಾಕಿದ್ದರು. ರಾಜ್ಯದ ಪ್ರಸಿದ್ಧ  ಅರಣ್ಯಗಳನ್ನು ಅಪ್ಪು ಸುತ್ತಿದ್ದರು. ಕರ್ನಾಟಕ ಸಂಪದ್ಭರಿತ ಅರಣ್ಯವನ್ನು ಈ ಡಾಕ್ಯುಮೆಂಟರಿಯಲ್ಲಿ ತೋರಿಸಲಾಗಿದ್ದು ಈಗ ರಿಲೀಸ್ ಆಗಿರುವ ಟ್ರೈಲರ್ ಇವೆಲ್ಲದರ ಸಣ್ಣ ಕಿರುನೋಟವನ್ನು ಪ್ರೇಕ್ಷಕರಿಗೆ ಕೊಟ್ಟಿದೆ.


ವರನಟ ಡಾ.ರಾಜ್​ಕುಮಾರ್​ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್​​ಕುಮಾರ್​ ಗಂಧದಗುಡಿ ಹೆಸರಿನಲ್ಲಿ ಸಿನಿಮಾ ಮಾಡಿದ್ದರು. ಈಗ ಅದೇ ಹೆಸರಿನಲ್ಲಿ ರಾಜ್ ಕುಟುಂಬದ ಅಪ್ಪು ಅವರ ಡಾಕ್ಯುಮೆಂಟರಿ ಸಿದ್ಧವಾಗಿದೆ.
ಇದನ್ನೂ ಓದಿ: Puneeth Rajkumar: ಶೀಘ್ರದಲ್ಲೇ ಬರ್ತಿದೆ ಗಂಧದ ಗುಡಿ.. ಹೇಗಿರಲಿದೆ ಗೊತ್ತಾ ಅಪ್ಪು ಕೊನೆಯ ದೃಶ್ಯಕಾವ್ಯ?
ಈ ಡಾಕ್ಯುಮೆಂಟರಿ ಬಗ್ಗೆ ಬರೆದ ಪುನೀತ್ ಅವರು ‘ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ’ ಅಂತ ಪುನೀತ್ ಟ್ವೀಟ್ ಮಾಡಿದ್ದರು.

Published by:Divya D
First published: