Puneeth Rajkumar, Chiranjeevi Sarja ಸೇರಿದಂತೆ ಹೃದಯಾಘಾತದಿಂದ ಮೃತಪಟ್ಟ ಸೆಲೆಬ್ರಿಟಿಗಳು

Power Star Puneeth Rajkumar No More: ಇಂದು (ಅಕ್ಟೋಬರ್ 29) ರಂದು ಕಣ್ಮರೆಯಾದ ಸ್ಯಾಂಡಲ್‌ವುಡ್‌ನ ಪ್ರೀತಿಯ ಅಪ್ಪು (Power Star Puneeth Rajkumar) ಬಾರದ ಲೋಕಕ್ಕೆ ಪ್ರಯಾಣಗೈದಿದ್ದಾರೆ (RIP Puneeth Rajkumar). ಇಂದಿನ ಲೇಖನದಲ್ಲಿ ಹೃದಯಸ್ತಂಭನದಿಂದ ಮರಣ ಹೊಂದಿದ ಸಿನಿ ನಟ ನಟಿಯರ ಕುರಿತು ಮತ್ತಷ್ಟು ವಿವರಗಳನ್ನು ತಿಳಿದುಕೊಳ್ಳೋಣ.

ಕಡಿಮೆ ವಯಸ್ಸಿಗೆ ಹೃದಯಾಘಾತದಿಂದ ಮೃತಪಟ್ಟ ಚಿರಂಜೀವಿ ಸರ್ಜಾ, ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​

ಕಡಿಮೆ ವಯಸ್ಸಿಗೆ ಹೃದಯಾಘಾತದಿಂದ ಮೃತಪಟ್ಟ ಚಿರಂಜೀವಿ ಸರ್ಜಾ, ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​

 • Share this:
  ಇತ್ತೀಚಿನ ದಿನಗಳಲ್ಲಿ ಹೃದಯಸ್ತಂಭನ (Cardiac Arrest) ಹೆಚ್ಚಾಗಿ ಯುವಜನರನ್ನೇ ಬಲಿತೆಗೆದುಕೊಳ್ಳುತ್ತಿದ್ದು ಈ ಅದೃಶ್ಯ ಕಾಯಿಲೆ ಯಮನಂತೆ ಬಂದು ಉಸಿರು ನಿಲ್ಲಿಸುತ್ತಿದೆ. ಅದರಲ್ಲೂ ಇಂದಿನ ದಿನಗಳಲ್ಲಿ ಸಿನಿಮಾ ನಟರೇ ಈ ಕಾಯಿಲೆಗೆ ಪ್ರಾಣ ಬಿಡುತ್ತಿದ್ದಾರೆ ಎಂಬುದು ಆಘಾತಕಾರಿ ವಿಷಯವಾಗಿದೆ. ನಿಯಮಿತ ವ್ಯಾಯಾಮ, ಕಟ್ಟುನಿಟ್ಟಿನ ಆಹಾರ ಕ್ರಮ, ಜೀವನ ಶೈಲಿ ಹೀಗೆ ಸಿನಿ ನಟರು ನಟಿಯರು ಶಿಸ್ತಿನಿಂದ ಆಹಾರ ಕ್ರಮವನ್ನು ಪಾಲಿಸುತ್ತಾರೆ ಅಂತೆಯೇ ಆರೋಗ್ಯವನ್ನು ಕಾಪಾಡಿಕೊಂಡು ಬರುತ್ತಾರೆ. ಆದರೂ ಹೃದಯಸ್ತಂಭನ ಹದಿಹರೆಯದ ಸಿನಿ ನಟ ನಟಿಯರನ್ನೇ ಬಲಿ ಪಡೆಯುತ್ತಿದೆ ಎಂಬುದು ದುಃಖಕರ ವಿಚಾರವಾಗಿದೆ. 40 ರ ಹರೆಯದ ಸುಂದರ ಫಿಟ್ ನಟ ಸಿದ್ಧಾರ್ಥ್ ಶುಕ್ಲಾರಿಂದ ಹಿಡಿದು ಇಂದು (ಅಕ್ಟೋಬರ್ 29) ರಂದು ಕಣ್ಮರೆಯಾದ ಸ್ಯಾಂಡಲ್‌ವುಡ್‌ನ ಪ್ರೀತಿಯ ಅಪ್ಪು (Power Star Puneeth Rajkumar) ಬಾರದ ಲೋಕಕ್ಕೆ ಪ್ರಯಾಣಗೈದಿದ್ದಾರೆ (RIP Puneeth Rajkumar). ಇಂದಿನ ಲೇಖನದಲ್ಲಿ ಹೃದಯಸ್ತಂಭನದಿಂದ ಮರಣ ಹೊಂದಿದ ಸಿನಿ ನಟ ನಟಿಯರ ಕುರಿತು ಮತ್ತಷ್ಟು ವಿವರಗಳನ್ನು ತಿಳಿದುಕೊಳ್ಳೋಣ.

  ಸಿದ್ಧಾರ್ಥ್ ಶುಕ್ಲ (Siddharath Shukla):

  ಟಿವಿ ಹಾಗೂ ಬಾಲಿವುಡ್ ನಟ ಸಿದ್ಧಾರ್ಥ್ ಶುಕ್ಲ (Bollywood Actor Siddharth Shukla) 40 ಹರೆಯದಲ್ಲೇ ಇಹಲೋಕದ ನಂಟನ್ನು ಬಿಡಿಸಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಬಿಗ್‌ಬಾಸ್ ವಿಜಯಿ ನಟ ಹೃದಯಸ್ತಂಭನದಿಂದ ಉಸಿರು ನಿಲ್ಲಿಸಿದ್ದು ಬಾರದ ಲೋಕಕ್ಕೆ ಪ್ರಯಾಣಗೈದಿದ್ದಾರೆ. ಇಂದಿಗೂ ಈ ಸುದ್ದಿಯನ್ನು ಅವರ ಅಭಿಮಾನಿಗಳು ಅರಗಿಸಿಕೊಂಡಿಲ್ಲ ಎಂಬುದು ಖೇದಕರ ವಿಚಾರವಾಗಿದೆ. ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಸಿದ್ಧಾರ್ಥ್ ಅವರು ಬಾಲಿಕಾ ವಧು, ಝಲಕ್ ದಿಖ್ಲಾ ಜಾ, ಬಿಗ್ ಬಾಸ್ 13 ರಂತಹ ಕಾರ್ಯಕ್ರಮಗಳಲ್ಲಿ ತಮ್ಮ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಸಪ್ಟೆಂಬರ್ 2, 2021 ರಂದು ಸಿದ್ಧಾರ್ಥ್ ಮರಣ ಹೊಂದಿದ್ದಾರೆ.

  ಅಬೀರ್ ಗೋಸ್ವಾಮಿ (Abeer Goswamy):

  ಕುಸುಮ್, ಯಹಾನ್ ಮೇ ಘರ್ ಘರ್ ಕೇಲಿ, ಪ್ಯಾರ್ ಕಾ ದರ್ದ್ ಹೇ ಮೀಟಾ ಪ್ಯಾರ್ ಪ್ಯಾರ್ ಮೊದಲಾದ ಧಾರವಾಹಿಗಳಲ್ಲಿ ನಟಿಸಿದ್ದ ಅಬೀರ್ ಗೋಸ್ವಾಮಿ ಟ್ರೆಡ್‌ಮಿಟ್‌ನಲ್ಲಿ ಓಡುತ್ತಿರುವಾಗ ಹೃದಯಸ್ತಂಭನದಿಂದ 37 ರ ಹರೆಯದಲ್ಲೇ 2013 ರ ಮೇ ತಿಂಗಳ ಕೊನೆಯಲ್ಲಿ ಮೃತರಾದರು.

  ಆರತಿ ಅಗರ್‌ವಾಲ್ (Arati Agarwal):

  ಪಾಗಲ್‌ಪನ್ ಚಿತ್ರದ ಮೂಲಕ ತಮ್ಮ 16 ರ ಹರೆಯದಲ್ಲೇ ಸಿನಿ ಜಗತ್ತಿಗೆ ಕಾಲಿಟ್ಟ ಆರತಿ ಅಗರ್‌ವಾಲ್ 31 ರ ಹರೆಯದಲ್ಲೇ ಜೂನ್ 6, 2015 ರಂದು ಹೃದಯಸ್ತಂಭನಕ್ಕೊಳಗಾಗಿ ಸಾವಿನ್ನಪ್ಪಿದ್ದರು. ಅವರು ಒಂದೂವರೆ ತಿಂಗಳ ಹಿಂದೆ ಲಿಪೊಸಕ್ಷನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಅಲ್ಲದೆ ಹಲವಾರು ಸಮಸ್ಯೆಗಳು ಮತ್ತು ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿದ್ದರು.

  ರಾಜ್ ಕೌಶಲ್ (Raj Kaushal):

  ಖ್ಯಾತ ನಿರ್ದೇಶಕರು, ನಿರ್ಮಾಪಕರು ಹಾಗೂ ಬಾಲಿವುಡ್ ನಟಿ ಮಂದಿರಾ ಬೇಡಿಯ ಪತಿ ರಾಜ್ ಕೌಶಲ್ ಕೂಡ 50 ರ ಹರೆಯದಲ್ಲೇ ಹೃದಯಘಾತದಿಂದ ಮರಣ ಹೊಂದಿದರು. ರಾಜ್ ಕೌಶಲ್ 30 ಜೂನ್ 2021 ರಂದು ವಿಧಿವಶರಾದರು.

  ಅಮಿತ್ ಮಿಸ್ತ್ರಿ (Amit Mistri):

  ಅಮಿತ್ ಮಿಸ್ತ್ರಿ ಅವರು ಪ್ರಸಿದ್ಧ ರಂಗಭೂಮಿ, ಟಿವಿ ಮತ್ತು ಚಲನಚಿತ್ರ ನಟರಾಗಿದ್ದರು, ಗುಜರಾತಿ ರಂಗಭೂಮಿ ಮತ್ತು ಬಾಲಿವುಡ್ ಚಲನಚಿತ್ರಗಳಾದ ಶೋರ್ ಇನ್ ದಿ ಸಿಟಿ, ಸಾತ್ ಫೆರೋ ಕಿ ಹೇರಾ ಫೆರಿ, ದಫಾ 420 ಮತ್ತು ಇತ್ತೀಚಿಗೆ OTT ಶೋ ಬಂದಿಶ್‌ನಲ್ಲಿ ಅಭಿನಯಿಸಿ ಖ್ಯಾತಿ ಪಡೆದುಕೊಂಡಿದ್ದರು. ಹೃದಯ ಸಂಬಂಧಿ ಸಮಸ್ಯೆಗಳಿಂದಾಗಿ ಅವರು 47 ನೇ ವಯಸ್ಸಿನಲ್ಲಿ ನಿಧನರಾದರು. ಅಮಿತ್ ಈ ವರ್ಷದ ಆರಂಭದಲ್ಲಿ ನಿಧನರಾದರು.

  ಇದನ್ನೂ ಓದಿ: ಎರಡು ವಾರದ ಹಿಂದಷ್ಟೇ ಸಣ್ಣದೊಂದು ಚಿಕಿತ್ಸೆ ಪಡೆದಿದ್ದ ಅಪ್ಪು, ಅದೊಂದು ತಪ್ಪು ಮಾಡಬಾರದಿತ್ತು ಎನ್ನುತ್ತಾರೆ ವೈದ್ಯರು

  ಪುನೀತ್ ರಾಜ್‌ಕುಮಾರ್ (ಅಪ್ಪು) (Power Star Puneeth Rajkumar Passed Away):

  ನಟ ಸಾರ್ವಭೌಮ ಸ್ಯಾಂಡಲ್‌ವುಡ್‌ನ ಪ್ರೀತಿಯ ಅಪ್ಪು ಪುನೀತ್ ರಾಜ್‌ಕುಮಾರ್ (46) (Power star Puneeth Rajkumar dies at 46) (ಅಕ್ಟೋಬರ್ 29) ರಂದು ಹೃದಯಾಘಾತದಿಂದ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಬಾಲ ನಟನಾಗಿ ಚಿತ್ರರಂಗ ಪ್ರವೇಶಿಸಿದ್ದ ಅಪ್ಪು 26 ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ ಕನ್ನಡ ಚಿತ್ರರಂಗದ ನಟ ಸಾರ್ವಭೌಮರೆಂದೆನಿಸಿದ್ದಾರೆ. ಲಕ್ಷಾಂತರ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ. ನಟ-ನಟಿಯವರು ಸಂತಾಪ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗದ ಯುವರತ್ನ ಎಲ್ಲರನ್ನೂ ಬಿಟ್ಟು ಅಗಲಿದ್ದಾರೆ.

  ಇದನ್ನೂ ಓದಿ: ಉಸಿರು ಚೆಲ್ಲಿದ ದೊಡ್ಮನೆ ರಾಜಕುಮಾರ; ಪುನೀತ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

  ಪುನೀತ್​ ರಾಜ್​ಕುಮಾರ್​ ಸಾವನ್ನು ಅರಗಿಸಿಕೊಳ್ಳಲು ಕೇವಲ ಕನ್ನಡ ಚಿತ್ರರಂಗಕ್ಕಷ್ಟೇ ಅಲ್ಲ, ಇಡೀ ಭಾರತ ಚಿತ್ರರಂಗಕ್ಕೆ ಅಸಾಧ್ಯ. ದೊಡ್ಡ ದೊಡ್ಡ ನಟ ನಟಿಯರು ಪುನೀತ್​ ರಾಜ್​ಕುಮಾರ್​ ಸಾವಿನಿಂದ ದೊಡ್ಡ ಆಘಾತಕ್ಕೆ ಒಳಗಾಗಿದ್ದಾರೆ.

  ಚಿರಂಜೀವಿ ಸರ್ಜಾ (Chiranjeevi Sarja):

  ಕಳೆದ ವರ್ಷ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಮೃತಪಟ್ಟಿದ್ದರು. ಅತಿ ಕಡಿಮೆ ವಯಸ್ಸಿನಲ್ಲೇ ಚಿರಂಜೀವಿ ಸರ್ಜಾ ಸಾವಿಗೀಡಾಗಿದ್ದು ಇಡೀ ಚಿತ್ರರಂಗವನ್ನು ತಲ್ಲಣಗೊಳಿಸಿತ್ತು. ಹೃದಯ ಸಂಬಂಧಿ ಕಾಯಿಲೆ ಯಾವ ವಯಸ್ಸಿನವರಿಗೆ ಬೇಕಾದರೂ ಬರಬಹುದು ಎಂಬುದನ್ನು ಚಿರಂಜೀವಿ ಸರ್ಜಾ ಸಾವು ದೃಢಪಡಿಸಿತ್ತು. ಅದಾದ ನಂತರ ಕೇವಲ ನಟ ನಟಿಯರಲ್ಲದೇ ಜನಸಾಮಾನ್ಯರು ಕೂಡ ದೈಹಿಕ ಆರೋಗ್ಯದ ಮೇಲೆ ಸಾಕಷ್ಟು ಗಮನಹರಿಸುತ್ತಿದ್ದಾರೆ. ಕೊರೋನಾ ಸಾಂಕ್ರಾಮಿಕ ರೋಗ ಬಂದ ಮೇಲೆ ಎಲ್ಲರೂ ಆರೋಗ್ಯದ ಮೇಲೆ ಕಾಳಜಿ ವಹಿಸುತ್ತಿದ್ದಾರೆ. ಆದರೆ ಈ ರೀತಿಯ ಅನಿರೀಕ್ಷಿತ ಸಾವು ಎಲ್ಲರಲ್ಲೂ ಭಯ ಹುಟ್ಟಿಸಿವುದಂತೂ ಸುಳ್ಳಲ್ಲ.
  Published by:Sharath Sharma Kalagaru
  First published: