James Teaser: ಪವರ್​​ಫುಲ್​ `ಜೇಮ್ಸ್​’ ಟೀಸರ್​ ರಿಲೀಸ್​, ವ್ಹಾವ್​.. ಅಪ್ಪುನ ನೋಡೋಕೆ ಎರಡು ಕಣ್ಣು ಸಾಲದು!

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ಕೊನೆಯ ಸಿನಿಮಾ ಅಂದರೆ, ಅದು ಜೇಮ್ಸ್​. ಇದೀಗ ಜೇಮ್ಸ್​ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಸೋಲ್ಜರ್​ ಪಾತ್ರದಲ್ಲಿ ಅಪ್ಪು ಮಿಂಚಿದ್ದಾರೆ. ಈ ಟೀಸರ್​ ಕಂಡು ಫ್ಯಾನ್ಸ್​ ಸಖತ್​ ಥ್ರಿಲ್​ ಆಗಿದ್ದಾರೆ. ಜೊತೆಗೆ ಅಪ್ಪು ಅವರನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದಾರೆ.

ಜೇಮ್ಸ್​​ ಪೋಸ್ಟರ್​

ಜೇಮ್ಸ್​​ ಪೋಸ್ಟರ್​

  • Share this:
ಪವರ್ ಸ್ಟಾರ್ (Power Star) ಪುನೀತ್ ರಾಜ್ ಕುಮಾರ್ (Puneeth Rajkumar) ಅಭಿಮಾನಿಗಳಿಗೆ (Fans) ಇಂದು ಹಬ್ಬದ ದಿನ. ಯಾಕಂದ್ರೆ ಅಪ್ಪು (Appu) ಫ್ಯಾನ್ಸ್ ಕಾತರದಿಂದ ಕಾಯ್ತಿರುವ "ಜೇಮ್ಸ್" (James) ಚಿತ್ರದ ಟೀಸರ್ (Teaser)  ರಿಲೀಸ್​ ಆಗಿದೆ. ಹಿಂದೆಂದೂ ಕಂಡಿರದ ಪಾತ್ರದಲ್ಲಿ ಪುನೀತ್​ ರಾಜ್​ಕುಮಾರ್​ ಕಾಣಿಸಿಕೊಂಡಿದ್ದಾರೆ. ಟೀಸರ್​ ಕಂಡು ಅಭಿಮಾನಿಗಳು ಫುಲ್​ ಥ್ರಿಲ್ (Thrill) ಆಗಿದ್ದಾರೆ. ಜೊತೆಗೆ ಅಪ್ಪು ನಮ್ಮೊಂದಿಗೆ ಇಲ್ವಲ್ಲಾ ಅನ್ನೋ ನೋವಿನಲ್ಲಿ ಕಣ್ಣಿರು ಹಾಕಿದ್ದಾರೆ. ಇಂದು 11 ಗಂಟೆ 15ನಿಮಿಷಕ್ಕೆ  ಜೇಮ್ಸ್ ಟೀಸರ್ (James Teaser) ದೊಡ್ಮನೆ ಅಭಿಮಾನಿಗಳ ಅಭಿಮಾನದ ಮಡಿಲಿಗೆ ಸೇರಿದೆ. ಮೊಟ್ಟ ಮೊದಲ ಬಾರಿಗೆ ಸೋಲ್ಜರ್​ ಪಾತ್ರದಲ್ಲಿ ಪವರ್​ ಸ್ಟಾರ್ (Power Star) ಪುನೀತ್​ ರಾಜ್​ಕುಮಾರ್​ ಮಿಂಚಿದ್ದಾರೆ. ಅಷ್ಟೇ ಅಲ್ಲದೇ ಈ ಸಿನಿಮಾದಲ್ಲಿ ಶಿವಣ್ಣ (Shivanna), ರಾಘಣ್ಣ (Raghanna) ಕೂಡ ನಟಿಸಿದ್ದಾರೆ. ಈ ಸಿನಿಮಾ ಅಪ್ಪು ಹುಟ್ಟುಹಬ್ಬದ ದಿನ ಬಿಡುಗಡೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದೀಗ ಬಿಡುಗಡೆಯಾಗಿರುವ ಟೀಸರ್​ ಕಂಡು ಸಿನಿಮಾ ಮೇಲಿರುವ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಟೀಸರ್​ ನೋಡಿದೆವರೆಲ್ಲ ’ಬೋಲೋ ಬೋಲೋ ಜೇಮ್ಸ್​.. ಪವರ್​ ಸ್ಟಾರ್​​.. ಪವರ್​ ಸ್ಟಾರ್​’ ಅಂತಿದ್ದಾರೆ. 

ಜೇಮ್ಸ್​ ಟೀಸರ್​ನಲ್ಲಿ ಶಿವಣ್ಣ ವಾಯ್ಸ್​!

ಜೇಮ್ಸ್​ ಟೀಸರ್​ ಸಖತ್​ ಆ್ಯಕ್ಷನ್​ನಿಂದ ಕೂಡಿದೆ. ಗನ್​ ಹಿಡಿದು ಅಪ್ಪು ಮಿಂಚಿದ್ದಾರೆ. ಟೀಸರ್​ ಆರಭಂದಿದಲೂ ಕೊನೆವರೆಗೂ ಆ್ಯಕ್ಷನ್​ ದೃಶ್ಯಗಳು ತುಂಬಿಕೊಂಡಿದೆ. ಇನ್ನೂ ಕಡೆಯಲ್ಲಿ ಬರುವ ಶಿವಣ್ಣ ವಾಯ್ಸ್​ಗೆ ಚಿತ್ರಂದಿರದ ಟಾಪ್​ ಕಿತ್ತುಹೋಗುವ ಹಾಗೆ ಕೂಗಿದ್ದಾರೆ ಅವರ ಅಭಿಮಾನಿಗಳು. ನನಗೆ ಮೊದಲಿನಿಂದಲೂ ರೆಕಾರ್ಡ್​ ಬ್ರೇಕ್​ ಮಾಡಿ ಅಭ್ಯಾಸ ಎನ್ನುವ ಡೈಲಾಗ್​ ಪಂಚ್​ ಟೀಸರ್​ನಲ್ಲಿದೆ.

ಇಂದಿನಿಂದ ಚಿತ್ರಮಂದಿರಗಳಲ್ಲೂ ಜೇಮ್ಸ್​ ಟೀಸರ್​​!

‘ಜೇಮ್ಸ್’ ಚಿತ್ರದ ಪವರ್ ಫುಲ್ ಟೀಸರ್ ಪಿಆರ್‌ಕೆ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತ್ರವಲ್ಲ ಕರ್ನಾಟದಲ್ಲಿರುವ ಎಲ್ಲಾ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರದರ್ಶನವಾಗುತ್ತಿದೆ. ಕರ್ನಾಟಕದಲ್ಲಿರುವ 580 ಚಿತ್ರಮಂದಿರಗಳು ಹಾಗೂ 1200 ಮಲ್ಟಿಪ್ಲೆಕ್ಸ್ ಗಳಲ್ಲಿ ಜೇಮ್ಸ್ ಟೀಸರ್ ಪ್ರದರ್ಶನ ಆಗುತ್ತಿದೆ. ಮಾರ್ನಿಂಗ್ ಶೋ ಇಂಟರ್‌ವಲ್ ಟೈಮ್‌ನಲ್ಲಿ ಜೇಮ್ಸ್  ಟೀಸರ್ ರಾರಾಜಿಸುತ್ತಿದೆ. ಮಾರ್ಚ್ 17ರವರೆಗೆ ಜೇಮ್ಸ್ ಚಿತ್ರ ರಿಲೀಸ್ ಆಗೋತನಕ ಚಿತ್ರದ ಟೀಸರ್ ಪ್ರಸಾರ ಅಗಲಿದೆ ಎಂದು ಚಿತ್ರದ ನಿರ್ದೇಶಕ ಚೇತನ್ ಕುಮಾರ್ ನ್ಯೂಸ್ 18ಗೆ ತಿಳಿಸಿದ್ದಾರೆ‌.

ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಫ್ಯಾನ್ಸ್ ಸೆಲೆಬ್ರೇಷನ್​!

ಇನ್ನೂ ಇತ್ತೀಚೆಗೆ ರಿಲೀಸ್ ಆಗಿದ್ದ ಜೇಮ್ಸ್​ ಸ್ಪೆಷಲ್​ ಪೋಸ್ಟರ್​ ಬಿಡುಗಡೆಯಾಗಿತ್ತು. ಇದಕ್ಕೆ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸಿದ್ದರು. ಇಂದು  ಕೂಡ ಜೇಮ್ಸ್​ ಟೀಸರ್​ ಅನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಕಮಲಾನಗರ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಫ್ಯಾನ್ಸ್​ ಸೆಲೆಬ್ರೇಷನ್​ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಘವೇಂದ್ರ ರಾಜ್​ಕುಮಾರ್​, ಜೇಮ್ಸ್​ ಚಿತ್ರದ ನಿರ್ದೇಶಕ ಭಾಗಿಯಾಗಿದ್ದರು. ಟೀಸರ್​ ರಿಲೀಸ್ ಆಗುತ್ತಿದ್ದಂತೆ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದ್ದು. ಅಪ್ಪು.. ಅಪ್ಪು.. ಅಂತ ಜೈಕಾರ ಹಾಕಿದ್ದಾರೆ.
Published by:Vasudeva M
First published: