James: ಒಟಿಟಿಗೆ ಎಂಟ್ರಿ ಕೊಡ್ತಿದ್ದಾರೆ ಪವರ್​ಫುಲ್​ `ಜೇಮ್ಸ್​​’.. ಎಲ್ಲಿ? ಯಾವಾಗ? ಮಿಸ್​ ಮಾಡದೇ ನೋಡಿ!

ಚಿತ್ರಮಂದಿರಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಜೇಮ್ಸ್ಇದೀಗ ಒಟಿಟಿಗೆ ಎಂಟ್ರಿಯಾಗುತ್ತಿದ್ದಾರೆ. ಹೌದು ಏಪ್ರಿಲ್​ 14ರಂದು ಒಟಿಟಿಯಲ್ಲಿ ಜೇಮ್ಸ್​ ರಿಲೀಸ್ ಆಗಲಿದೆ . ಈ ವಿಚಾರ ಕೇಳಿ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ.

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​

  • Share this:
ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneeth Rajkumar) ಅಭಿನಯದ ಜೇಮ್ಸ್ (James) ಮಾರ್ಚ್​ 17ರಂದು ಬಿಡುಗಡೆಯಾಗಿತ್ತು. ಅಭಿಮಾನಿಗಳ ಸಂತಸಕ್ಕೆ ಮಿತಿಯೇ ಇರಲಿಲ್ಲ. ಕೊನೆಯ ಬಾರಿ ತೆರೆಯ ಮೇಲೆ ನೆಚ್ಚಿನ ನಟನನ್ನ ಅಭಿಮಾನಿಗಳು(Fans)  ಕಣ್ತುಂಬಿಕೊಂಡಿದ್ದು, ವಿ ಮಿಸ್​ ಯೂ ಅಪ್ಪು ಎಂದಿದ್ದರು. ಅಭಿಮಾನಿಗಳು ಜೇಮ್ಸ್ ಚಿತ್ರಕ್ಕೆ ಚಿತ್ರಮಂದಿರಗಳಲ್ಲಿ ಭಾರಿ ಸ್ವಾಗತವನ್ನು ನೀಡಿದ್ದರು. ಪುನೀತ್ ಅಭಿನಯದ ಜೇಮ್ಸ್ ಸಿನಿಮಾ ಬರೀ ಬೆಂಗಳೂರು(Bengaluru) ಅಥವಾ ರಾಜ್ಯದಲ್ಲಷ್ಟೇ ಅಲ್ಲ, ಇಡೀ ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಬೆಟ್ಟದ ಹೂವು, ಅರಸು, ಜಾಕಿ, ಅಣ್ಣಾಬಾಂಡ್, ರಣ ವಿಕ್ರಮ, ಯುವರತ್ನ, ರಾಜಕುಮಾರ, ನಟಸಾರ್ವಭೌಮ ಮತ್ತು ಇನ್ನೂ ಹಲವು ಜನಮೆಚ್ಚಿದ ಚಿತ್ರಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್(Power Star Puneeth Rajkumar) ನಮ್ಮನ್ನು ರಂಜಿಸಿದ್ದಾರೆ. ಇದೀಗ ಜೇಮ್ಸ್(James) ಮೂಲಕ ಭೌತಿಕವಾಗಿ ನಮ್ಮನ್ನು ಅಗಲಿದ್ದರೂ ಕನ್ನಡದ ಕಣ್ಮಣಿ ಅಪ್ಪು ಅಭಿಮಾನಿಗಳಿಗೆ ರಸದೌತಣ ಉಣಬಡಿಸಿದ್ದಾರೆ. 

ಒಟಿಟಿಗೆ ಎಂಟ್ರಿ ಕೊಡ್ತಿದ್ದಾರೆ ಜೇಮ್ಸ್​!

ಹೌದು, ಚಿತ್ರಮಂದಿರಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಜೇಮ್ಸ್ಇದೀಗ ಒಟಿಟಿಗೆ ಎಂಟ್ರಿಯಾಗುತ್ತಿದ್ದಾರೆ. ಹೌದು ಏಪ್ರಿಲ್​ 14ರಂದು ಒಟಿಟಿಯಲ್ಲಿ ಜೇಮ್ಸ್​ ರಿಲೀಸ್ ಆಗಲಿದೆ . ಈ ವಿಚಾರ ಕೇಳಿ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ. ಬೆಳ್ಳಿ ತೆರೆ ಮೇಲೆ ಅಪ್ಪು ಅವರನ್ನು ನೋಡಿ ಖುಷಿ ಪಟ್ಟಿದ್ದಅಭಿಮಾನಿಗಳು ಇದೀಗ ಒಟಿಟಿಯಲ್ಲಿ ಅಪ್ಪು ಅವರನ್ನು ಬರಮಾಡಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.‘ಪವರ್ ಸ್ಟಾರ್’ ಅವರಿಗೆ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶ-ವಿದೇಶದಲ್ಲೂ ಅಭಿಮಾನಿಗಳು ಇದ್ದಾರೆ. ಅವರು ಕೂಡ ಒಟಿಟಿಯಲ್ಲಿ ಜೇಮ್ಸ್​ ಸಿನಿಮಾ ನೋಡಲು ಕಾಯುತ್ತಿದ್ದಾರೆ.

ಸೋನಿ ಲೈವ್​ನಲ್ಲಿ ಜೇಮ್ಸ್​ ಸಿನಿಮಾ!

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿಮಾ 'ಜೇಮ್ಸ್' ಮೂರನೇ ವಾರ ಅಭಿಮಾನಿಗಳನ್ನು ರಂಜಿಸುತ್ತಿದೆ. ರಾಜಮೌಳಿಯ RRR ಹಾಗೂ 'ದಿ ಕಾಶ್ಮೀರ್ ಫೈಲ್ಸ್' ಅಬ್ಬರದ ನಡುವೆಯೂ ಜೇಮ್ಸ್ ಸದ್ದು ಮಾಡುತ್ತಿದೆ. ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡಿದೆ.ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸಿದ್ದರು. ಕರ್ನಾಟಕದಾದ್ಯಂತ 'ಜೇಮ್ಸ್' ಜಾತ್ರೆಯನ್ನೇ ಮಾಡಿದ್ದರು. ಅಪ್ಪು ಮೇಲಿನ ಅಭಿಮಾನಕ್ಕೆ ಹುಟ್ಟುಹಬ್ಬದ ಜೊತೆ ಜೊತೆಗೆ 'ಜೇಮ್ಸ್' ಸಿನಿಮಾ ನೋಡಿ ಸಂಭ್ರಮಿಸಿದ್ದರು. ಸೋನಿ ಲೈವ್​ನಲ್ಲಿ ಜೇಮ್ಸ್ ಸಿನಿಮಾ ಏಪ್ರಿಲ್​ 14ರಂದು ಪ್ರೀಮಿಯರ್​ ಆಗಲಿದೆ.


ಇದನ್ನೂ ಓದಿ: KGF Chapter 2 ಸಿನಿಮಾಗೆ ದುಡ್ಡೇ ತಗೊಂಡಿಲ್ವಂತೆ ರಾಕಿಂಗ್​ ಸ್ಟಾರ್ ​ಯಶ್​​! ಇದು ನಿಜಾನೇ.. ಶಾಕ್​ ಆಗ್ಬೇಡಿ

ಕೆಜಿಎಫ್​ 2 ರಿಲೀಸ್ ದಿನವೇ ಜೇಮ್ಸ್​!

‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಗುತ್ತಿರುವ ದಿನವೇ ಗ್ರ್ಯಾಂಡ್ ಪ್ರೀಮಿಯರ್ ಕಾಣಲು ಸಜ್ಜಾಗಿದೆ. ಏಪ್ರಿಲ್ 14 ಕನ್ನಡ ಸಿನಿಪ್ರಿಯರಿಗೆ ಹಬ್ಬವೋ ಹಬ್ಬ. ಇದೇ ದಿನ ‘ಕೆಜಿಎಫ್ 2’ ಬಿಡುಗಡೆಯಾಗುತ್ತಿದೆ. ಇನ್ನೊಂದು ಕಡೆ ಅಪ್ಪು ಅಭಿನಯದ ಕೊನೆಯ ಕಮರ್ಷಿಯಲ್ ಸಿನಿಮಾ ‘ಜೇಮ್ಸ್’ ಒಟಿಟಿಗೆ ಲಗ್ಗೆ ಇಡುತ್ತಿದೆ. ಕನ್ನಡಿಗರು ಸೇರಿದಂತೆ ವಿಶ್ವದಾದ್ಯಂತ ಇರುವ ಸಿನಿಪ್ರಿಯರು ಈ ಎರಡೂ ಸಿನಿಮಾಗಳನ್ನು ಕಣ್ತುಂಬಿಕೊಳ್ಳಬಹುದು.

ಇದನ್ನೂಓದಿ: ಶೀಘ್ರದಲ್ಲೇ ಬರ್ತಿದೆ ಗಂಧದ ಗುಡಿ.. ಹೇಗಿರಲಿದೆ ಗೊತ್ತಾ ಅಪ್ಪು ಕೊನೆಯ ದೃಶ್ಯಕಾವ್ಯ?

ಶೀಘ್ರವೇ ಗಂಧದ ಗುಡಿಯಲ್ಲಿ ಅಪ್ಪು ದರ್ಶನ!

‘ಕರ್ನಾಟಕದ ಕಾಡು ಉಳಿಸಿ’ ಎಂಬ ಡಾ. ರಾಜ್ ಸಂದೇಶದ ಮರುಜನ್ಮವೇ ಹೊಸ ಗಂಧದ ಗುಡಿಯ ಕಥೆಯ ಸೀಕ್ರೇಟ್. ನಾನು ಪವರ್ ಸ್ಟಾರ್ ಅಲ್ಲ, ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಳ್ತೀನಿ ಎಂದು ‘ಪವರ್ ಸ್ಟಾರ್’ ಬದಿಗೆ ಸರಿಸಿ ದಿವಂಗತ ನಟ ಪುನೀತ್ ನಟಿಸಿರುವ 'ಗಂಧದ ಗುಡಿ' ಕಥೆ ಹುಟ್ಟಿ ಬೆಳೆದಿದ್ದು, ನಿರ್ಮಾಣ, ಪುನೀತ್ ನಟನೆ ಕುರಿತು ವೈಲ್ಡ್ ಕರ್ನಾಟಕ ಖ್ಯಾತಿ ನಿರ್ದೇಶಕ ಅಮೋಘವರ್ಷ ಈ ಹಿಂದೆ ಹೇಳಿದ್ದರು. ಇದೀಗ ಈ ಡಾಕ್ಯುಮೆಂಟರಿ ರಿಲೀಸ್​ ಬಗ್ಗೆ ಅಪ್​ಡೇಟ್​ ಸಿಕ್ಕಿದೆ.

ಇದನ್ನೂ ಓದಿ: ಬಾಕ್ಸ್​ ಆಫೀಸ್​ ಲೂಟಿ ಮಾಡಿದ `ಆರ್​ಆರ್​ಆರ್​’.. ಸಾವಿರ ಕೋಟಿ ಕಲೆಕ್ಷನ್​​ಗೆ ಇನ್ನೆಷ್ಟು ಬಾಕಿ?
ಹೌದು, ಈ ಡಾಕ್ಯುಮೆಂಟರಿ ಸದ್ಯ ಪೋಸ್ಟ್​ ಪ್ರೋಡಕ್ಷನ್​ ಹಂತದಲ್ಲಿ ಇದೆ. ಇದಾದ ಬಳಿಕ ಸಿನಿಮಾ ಡೇಟ್​ ಅನ್ನು ಅನೌನ್ಸ್ ಮಾಡಲಿದೆಯಂತೆ. ಮುಂಬರುವ ಮೇ ತಿಂಗಳಲ್ಲಿ ಈ ಸಿನಿಮಾದ ರಿಲೀಸ್ ಡೇಟ್​ ಅನೌನ್ಸ್​ ಮಾಡುವ ಸಾಧ್ಯತೆ ಹೆಚ್ಚಿದೆ. ಜೇಮ್ಸ್​ ಬಳಿಕ ಅಪ್ಪು ಅವರನ್ನು ಬೆಳ್ಳಿತೆರೆ ಮೇಲೆ ಕಣ್ತುಂಬಿಕೊಳ್ಳುವ ಭಾಗ್ಯ ಸಿಕ್ಕಿದೆ ಎಂದು ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ.
Published by:Vasudeva M
First published: