ಸದ್ಯ ಎಲ್ಲೆಲ್ಲೂ ಪವರ್ ಸ್ಟಾರ್ (Power Star) ಪುನೀತ್ ರಾಜ್ ಕುಮಾರ್ (Puneeth Rajkumar) ಅಭಿನಯದ ಜೇಮ್ಸ್ (James) ಚಿತ್ರದ್ದೇ ಮಾತು. ಅಪ್ಪು (Appu) ಅಭಿನಯದ ಕೊನೆಯ ಸಿನಿಮಾ (Last Movie) ಆಗಿರೋದ್ರಿಂದ ಈ ಸಿನಿಮಾ (Cinema) ಮೇಲೆ ಪುನೀತ್ ಅಭಿಮಾನಿಗಳಿಗಷ್ಟೇ (Fans) ಅಲ್ಲ, ಎಲ್ಲಾ ಕನ್ನಡಿಗರಿಗೂ ಪ್ರೀತಿ, ಅಭಿಮಾನ ಮತ್ತು ಸಾಕಷ್ಟು ನಿರೀಕ್ಷೆಗಳು ಇವೆ. ಇದೇ ಮಾರ್ಚ್ 17ರಿಂದ ಜೇಮ್ಸ್ ಸಿನಿಮಾ ಜಾತ್ರೆ ಶುರುವಾಗಲಿದೆ. ಸಿನಿಮಾದಲ್ಲಿ ಪುನೀತ್ ಪಾತ್ರದ ಹೆಸರು ಸಂತೋಷ್ ಕುಮಾರ್(Santosh Kumar). ಇದೇ ಹೆಸರಿನ ಟ್ಯಾಗ್ ಹಾಕಿಕೊಂಡು, ಪುನೀತ್ ರಾಜ್ಕುಮಾರ್ ಸೈನಿಕ(Soldier)ನ ಡ್ರೆಸ್ನಲ್ಲಿ ಮಿಂಚಿದ್ದಾರೆ. ‘ಜೇಮ್ಸ್’ ಚಿತ್ರ ರಿಲೀಸ್ ದಿನಗಣನೆ ಶುರುವಾಗಿದೆ. ಅಪ್ಪು ಅಭಿಮಾನಿಗಳೇ ಸಿನಿಮಾವನ್ನು ಹೊತ್ತುಕೊಂಡು ಮೆರೆಸುತ್ತಿದ್ದಾರೆ. ಮಾರ್ಚ್ 17 ಚಿತ್ರ ರಿಲೀಸ್ ಆಗಲಿದೆ. ಆದರೆ ಚಿತ್ರದ ಟಿಕೆಟ್ ಬುಕ್ಕಿಂಗ್(Ticket Booking)ನಲ್ಲಿ ‘ಜೇಮ್ಸ್’ ದಾಖಲೆ ಬರೆದಯುತ್ತಿದೆ.
ಬೆಂಗಳೂರಿನಲ್ಲಿ 1.5 ಕೋಟಿ ಟಿಕೆಟ್ಗಳು ಬುಕ್
ಬೆಂಗಳೂರಿನಲ್ಲಿ ದಾಖಲೆ ಮಟ್ಟದ ಟಿಕೆಟ್ಗಳು ಬುಕ್ ಆಗುತ್ತಿದೆ. ಕೇವಲ ಬೆಂಗಳೂರಿನಲ್ಲೇ 1.5 ಕೋಟಿ ಟಿಕೆಟ್ಗಳು ಬುಕ್ ಆಗಿದೆ. ಕನ್ನಡದ ಒಂದು ಚಿತ್ರದ ಮುಂಗಡ ಟಿಕೆಟ್ ಇಷ್ಟು ದೊಡ್ಡ ಪ್ರಮಾಣದಲ್ಲಿ ಖರೀದಿ ಆಗಿರುವುದು ಇದೇ ಮೊದಲು. ಮಾರ್ಚ್ 17 ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲೂ ಮುಂಜಾನೆ 4 ಗಂಟೆಯ ಶೋಗಳು ಇರುತ್ತವೆ. ಸೂರ್ಯ ಹುಟ್ಟೋಕು ಮುನ್ನವೇ ಚಿತ್ರಮಂದಿರದಲ್ಲಿ 'ಜೇಮ್ಸ್' ಅಬ್ಬರ ಶುರುವಾಗಿರುತ್ತದೆ. ಇದರ ಜೊತೆಗೆ ಸಿನಿಮಾ ರಿಲೀಸ್ಗೆ ಇನ್ನೂ 3 ದಿನ ಬಾಕಿ ಇದೆ. ಟಿಕೆಟ್ ಬುಕ್ಕಿಂಗ್ ಮತ್ತಷ್ಟು ಹೆಚ್ಚಾಗಲಿದೆ.
ಕಾವೇರಿ ಸಿನಿಮಾಸ್ ಚಿತ್ರಮಂದಿರದಲ್ಲಿ 5 ಸಾವಿರು ಟಿಕೆಟ್ ಬುಕ್!
ಇನ್ನು ಒಂದೇ ಚಿತ್ರ ಮಂದಿರದಲ್ಲಿ ‘ಜೇಮ್ಸ್’ ಚಿತ್ರದ 5 ಸಾವಿರಕ್ಕೂ ಅಧಿಕ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ. ಬೆಂಗಳೂರಿನಲ್ಲಿ ಪುನೀತ್ ರಾಜ್ಕುಮಾರ್ ನಿವಾಸದ ಬಳಿ ಇರುವ 'ಕಾವೇರಿ ಸಿನಿಮಾಸ್' ಚಿತ್ರಮಂದಿರದಲ್ಲಿ ಬೆಳಗಿನ 4 ಗಂಟೆಯ ಪ್ರದರ್ಶನ ಸೇರಿದಂತೆ ಐದು ಸಾವಿರಕ್ಕೂ ಹೆಚ್ಚಿನ ಟಿಕೆಟ್ ಈಗಾಗಲೇ ಮಾರಾಟ ಆಗಿದೆ.ಈಗಾಗಲೇ ಸುಮಾರು 135ಕ್ಕೂ ಅಧಿಕ ಚಿತ್ರಮಂದಿರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇನ್ನೂ ಮತ್ತಷ್ಟು ಚಿತ್ರಮಂದಿರಗಳು ಪ್ರಕಟ ಆಗಲಿವೆ.
ಇದನ್ನೂ ಓದಿ: ಅಪ್ಪು ನೆನೆದು ಅಶ್ವಿನಿ ಭಾವುಕ, ವೇದಿಕೆ ಮೇಲೆ ತಬ್ಬಿಕೊಂಡು ಕಣ್ಣೀರಿಟ್ರು ಶಿವಣ್ಣ, ರಾಘಣ್ಣ
ಪುನೀತ್ ನೆನೆದು ಅಶ್ವಿನಿ ಕಣ್ಣೀರು
ಚಿತ್ರತಂಡ ನಿನ್ನೆ ಬೆಂಗಳೂರಿನ (Bengaluru) ಅರಮನೆ ಮೈದಾನದಲ್ಲಿ ಪ್ರಿ-ರಿಲೀಸ್ (James Pre Release Event) ಇವೆಂಟ್ ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ದೊಡ್ಮನೆ ಕುಟುಂಬಸ್ಥರು, ಸ್ಯಾಂಡಲ್ವುಡ್ ತಾರೆಯರು ಹಾಗೂ ವಿವಿಧ ಭಾಷೆಯ ನಟರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಮಗಳ ಜೊತೆ ಕಾರ್ಯಕ್ರಮಕ್ಕೆ ಆಗಮಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್, ಕಾರ್ಯಕ್ರಮದ ಆರಂಭದಲ್ಲೇ ಭಾವುಕರಾದ್ರು. ವೇದಿಕೆ ಮೇಲೆ ಅಪ್ಪು ನಟನೆಯ ಚಿತ್ರದ ಹಾಡಿಗೆ ಕಲಾವಿದರು ನೃತ್ಯ ಮಾಡ್ತಿದ್ದಂತೆ ಅವ್ರ ಕಣ್ಣಲ್ಲಿ ನೀರು ತುಂಬಿತು.ಭಾವುಕರಾಗಿ ಕೆಲ ಕಾಲ ಹೊರ ನಡೆದ್ರು. ಬಳಿಕ ಕಾರ್ಯಕ್ರಮದಲ್ಲಿ ಭಾಗಿಯಾದ್ರು. ಕಣ್ತುಂಬಿ ಕೊಂಡು ಕೂತ್ತಿದ್ದ ಅಶ್ವಿನಿ ಅವರನ್ನು ಜೇಮ್ಸ್ ಚಿತ್ರದ ನಟಿ ಪ್ರಿಯಾ ಆನಂದ್ ಸಂತೈಸಿದ್ರು.
ಇದನ್ನೂ ಓದಿ: ಅಣ್ಣಾವ್ರ ಹಾದಿಯಲ್ಲಿ ಅಪ್ಪು.. ಮೈಸೂರು ವಿವಿಯಿಂದ ಪುನೀತ್ಗೆ ಮರಣೋತ್ತರ ಗೌರವ ಡಾಕ್ಟರೇಟ್ ಘೋಷಣೆ!
‘ನಾನು ಅಪ್ಪು ಹುಡುಕಿಕೊಂಡು ಹೋಗ್ತೇನೆ‘
ಎಲ್ಲರಿಗೂ ಧೈರ್ಯ ಹೇಳ್ತಿದ್ದ ರಾಘಣ್ಣ ಈ ಬಾರಿ ಯಾಕೋ ತೀರ ಕುಗ್ಗಿ ಹೋಗಿದ್ರು. ಅಪ್ಪು ಬಗ್ಗೆ ಮಾತಾಡಲು ವೇದಿಕೆ ಮೇಲೆ ಬಂದ ರಾಘವೇಂದ್ರ ರಾಜ್ ಕುಮಾರ್ , ನನಗೆ ಅನ್ನಿಸಿದ್ಧನ್ನ ಹೇಳುತ್ತೇನೆ, ದೇವರು ಚೆನ್ನಾಗಿ ಓಡುತ್ತಿದ್ದ ಗಾಡಿ ನಿಲ್ಲಿಸಿಬಿಟ್ಟ , ಆದ್ರೆ ನಾನು ಇನ್ನೂ ಕುಂಟಿಕೊಂಡು ಇದ್ದೇನೆ. ಆದ್ರೆ ನನಗೆ ಇದನ್ನೆಲ್ಲಾ ನೋಡಿಕೊಂಡು ಇರೋದಕ್ಕೆ ಆಗಲ್ಲ. ನಾನು ಹೋಗಿ ಬಿಡ್ತೇನೆ. ನಾನು ಅಪ್ಪುನನ್ನ ಹುಡುಕಿಕೊಂಡು ಹೋಗುತ್ತೇನೆ. ನನ್ನ ಕೈಲಿ ಇರೋದಕ್ಕೆ ಆಗಲ್ಲ ಎಂದು ರಾಘವೇಂದ್ರ ರಾಜ್ ಕುಮಾರ್ ಭಾವುಕರಾದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ