Gandhada Gudi: `ಜೇಮ್ಸ್​’ ರಿಲೀಸ್​ ದಿನವೇ ಗಂಧದ ಗುಡಿಯ ದರ್ಶನ! ಅಪ್ಪು ಲುಕ್​ ಹೇಗಿದೆ ನೋಡಿ..

ಬಹುದೊಡ್ಡ ಕನಸಿನೊಂದಿಗೆ ಅಪ್ಪು ರೂಪಿಸಿರೋ ವೈಲ್ಡ್ ಲೈಫ್ ಜಗತ್ತಿನ ಕಥೆಯ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಗಳಿಸಿತ್ತು. ಇದೀಗ ಇದರ ಹೊಸ ಪೋಸ್ಟರ್​ ರಿಲೀಸ್ ಆಗಿದೆ. ಪಿಆರ್‌ಕೆ ಸ್ಟುಡಿಯೋ 'ಗಂಧದ ಗುಡಿ'ಯ ಹೊಚ್ಚ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.

ಪುನೀತ್​ ರಾಜ್​ಕುಮಾರ್​

ಪುನೀತ್​ ರಾಜ್​ಕುಮಾರ್​

  • Share this:
ನಟ ಪುನೀತ್​ ರಾಜ್​ಕುಮಾರ್(Puneeth Rajkumar)​ ನಮ್ಮ ಜೊತೆ ಇಲ್ಲ ಎಂಬ ನೋವನ್ನು ಇನ್ನೂ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಅವರ ಬಿಟ್ಟು ಹೋದಾಗಿನಿಂದಲೂ ಇಡೀ ಕರುನಾಡು ಮರುಕಪಡುತ್ತಿದೆ. ಇಂದಿಗೂ ಆ ಶಾಕ್​(Shock)ನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ.ಇಂದು ಅವರ ಹುಟ್ಟುಹಬ್ಬ. ಈ ಹಿನ್ನೆಲೆ ಅವರ ‘ಜೇಮ್ಸ್​’(James) ಸಿನಿಮಾ ರಿಲೀಸ್​ ಆಗಿದೆ. ಅಭಿಮಾನಿಗಳು ಸೂರ್ಯ ಹುಟ್ಟುವ ಮುನ್ನವೇ ಅಪ್ಪು(Appu) ದರ್ಶನ ಪಡೆದುಕೊಂಡಿದ್ದಾರೆ. ಹುಟ್ಟುಹಬ್ಬದ ಸಂಭ್ರಮದ ಜೊತೆನೇ ‘ಜೇಮ್ಸ್’ ಸಿನಿಮಾ ನೋಡಿ ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ. ‘ಜೇಮ್ಸ್’ ಸಿನಿಮಾದಲ್ಲಿ ಅಪ್ಪು ಎಂಟ್ರಿ, ಮಾಸ್ ಲುಕ್(Mass Look), ಆಕ್ಷನ್(Action), ಡ್ಯಾನ್ಸ್(Dance) ಎಲ್ಲವನ್ನೂ ಫ್ಯಾನ್ಸ್ ಕಣ್ತುಂಬಿಕೊಂಡಿದ್ದಾರೆ.‘ಜೇಮ್ಸ್’ ಸಿನಿಮಾ ಬಳಿಕ ‘ಗಂಧದ ಗುಡಿ’(Gandhada Gudi) ಬಿಡುಗಡೆಯಾಗಲಿದೆ. ಆದರೆ, ಈ ಸಿನಿಮಾದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟಿಸಿಲ್ಲ, ಜೀವಿಸಿದ್ದಾರೆ.

ರಿಲೀಸ್ ಆಯ್ತು ಗಂಧದ ಗುಡಿ ಹೊಸ ಪೋಸ್ಟರ್​!

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ಡ್ರೀಮ್​ ಪ್ರಾಜೆಕ್ಟ್(Dream Project) ಟೈಟಲ್(Title)​ ಹಾಗೂ ಟೀಸರ್(Teaser)​​ ಬಿಡುಗಡೆಯಾಗಿತ್ತು. ಬಹುದೊಡ್ಡ ಕನಸಿನೊಂದಿಗೆ ಅಪ್ಪು ರೂಪಿಸಿರೋ ವೈಲ್ಡ್ ಲೈಫ್ ಜಗತ್ತಿನ ಕಥೆಯ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿ ಭಾರಿ ಮೆಚ್ಚುಗೆ ಗಳಿಸಿತ್ತು. ಇದೀಗ ಇದರ ಹೊಸ ಪೋಸ್ಟರ್​ ರಿಲೀಸ್ ಆಗಿದೆ. ಪಿಆರ್‌ಕೆ ಸ್ಟುಡಿಯೋ 'ಗಂಧದ ಗುಡಿ'ಯ ಹೊಚ್ಚ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಇದು ಪುನೀತ್ ಅಭಿಮಾನಿಗಳಿಗೆ ಮತ್ತಷ್ಟು ಥ್ರಿಲ್ ಕೊಡುವುದು ಗ್ಯಾರಂಟಿ ಎನ್ನುತ್ತಿದ್ದಾರೆ ಅಪ್ಪು ಅಭಿಮಾನಿಗಳು.


ಕರ್ನಾಟಕದ ಅರಣ್ಯಗಳನ್ನೆಲ್ಲಾ ಸುತ್ತಿದ್ದ ಅಪ್ಪು‌

ವೈಲ್ಡ್​ ಲೈಫ್​ ಡಾಕ್ಯುಮೆಂಟ್​ ಶೂಟಿಂಗ್​ ಮಾಡುವುದು ಅಷ್ಟು ಸುಲಭದ ಮಾತಲ್ಲ. ಕಾಡು, ಮೇಡು ಅಲೆದು ಅನ್ನ, ನೀರು ಸರಿಯಾಗಿ ಸಿಗದೆ ಶ್ರಮ ಹಾಕಬೇಕು. ಇಂತಹ ಸಾಹಸಕ್ಕೆ ಪವರ್​ ಸ್ಟಾರ್​ ಅಪ್ಪು ಲಾಕ್​ಡೌನ್​ ಸಮಯದಲ್ಲಿ ಕೈ ಹಾಕಿದ್ದರು. ಕರ್ನಾಟಕದ ಪ್ರಸಿದ್ಧ ಅರಣ್ಯಗಳನ್ನೆಲ್ಲಾ ಅಪ್ಪು ಸುತ್ತಿದ್ರು. ಕರ್ನಾಟಕದ ಸೌಂದರ್ಯವನ್ನು ಈ ಡಾಕ್ಯುಮೆಂಟ್​​ನಲ್ಲಿ ತೋರಿಸಲಾಗಿದೆ. ಹೀಗಾಗಿ ಇದಕ್ಕೆ ಗಂಧದ ಗುಡಿ ಎಂದು ಹೆಸರಿಡಲಾಗಿದೆ.

ಇದನ್ನೂ ಓದಿ: ಮೊದಲ ದಿನವೇ ದಾಖಲೆ ಬೆಲೆಗೆ ಮಾರಾಟವಾದ ಅಪ್ಪು ಚಿತ್ರ, ಭರ್ಜರಿ ರೇಟಿಗೆ ಸ್ಯಾಟಲೈಟ್ ರೈಟ್ಸ್ ಸೇಲ್!

ಡಾ.ರಾಜ್​ಕುಮಾರ್​ ಹಾಗೂ ಶಿವರಾಜ್​​ಕುಮಾರ್​ ಅವರು ಕೂಡ ಗಂಧದಗುಡಿ ಹೆಸರಿನಲ್ಲಿ ಸಿನಿಮಾ ಮಾಡಿದ್ದರು. ಅಣ್ಣಾವ್ರ ಗಂಧದಗುಡಿ ಸಿನಿಮಾ ದಾಖಲೆ ಸೃಷ್ಟಿಸಿತ್ತು. ಶಿವಣ್ಣ ಅವರ ಗಂಧದ ಗುಡಿ ಸಾಕಷ್ಟು ಹೆಸರು ಮಾಡಿತ್ತು. ಇದೀಗ ಅದೇ ಹೆಸರಿನಲ್ಲಿ ಅಪ್ಪು ಅವರ ಡಾಕ್ಯುಮೆಂಟರಿ ಚಿತ್ರ ಸಿದ್ಧವಾಗಿದೆ.‘ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ’ ಅಂತ ಪುನೀತ್ ಟ್ವೀಟ್ ಮಾಡಿದ್ದರು. ಈ ಡಾಕ್ಯುಮೆಂಟರಿ ಟೀಸರ್ ನವೆಂಬರ್ 1ರಂದು ರಿಲೀಸ್ ಆಗಬೇಕಿತ್ತು. ಆದ್ರೆ, ಅದಕ್ಕೂ 3 ದಿನ ಮುನ್ನ ಅಪ್ಪು ಬಾರದ ಲೋಕಕ್ಕೆ ಹೊರಟುಬಿಟ್ಟರು.

ಇದನ್ನೂ ಓದಿ: ತಮ್ಮನ ಕೊನೆ ಸಿನಿಮಾದಲ್ಲಿ ಸೋಲ್ಜರ್​ ಪಾತ್ರದಲ್ಲಿ ಶಿವಣ್ಣ! ಅಪ್ಪುಗೆ ಗುರು ಆದ ರಾಘವೇಂದ್ರ ರಾಜ್​ಕುಮಾರ್​

ಚಿತ್ರಮಂದಿರದಲ್ಲೇ ರಿಲೀಸ್​ ಆಗುತ್ತೆ `ಗಂಧದ ಗುಡಿ’

ಸಾಮನ್ಯವಾಗಿ ಡಾಕ್ಯುಮೆಂಟ್​ ಸಿನಿಮಾಗಳನ್ನು ಥಿಯೇಟರ್​​ನಲ್ಲಿ ರಿಲೀಸ್​ ಮಾಡುವುದು ಕಡಿಮೆ. ಆದರೆ ಅಪ್ಪು ಅವರ ಗಂಧದ ಗುಡಿ ಸಿನಿಮಾವನ್ನು ಚಿತ್ರಮಂದಿರದಲ್ಲೇ ರಿಲೀಸ್​ ಆಗಲಿದೆ. 2020ಕ್ಕೆ ಈ ಸಿನಿಮಾ ತೆರೆಕಾಣಲಿದೆ. ಅಪ್ಪು ಅವರನ್ನು ಮತ್ತೆ ತೆರೆ ಮೇಲೆ ನೋಡುವ ಭಾಗ್ಯ ಸಿಕ್ಕಿದೆ.
Published by:Vasudeva M
First published: