• Home
  • »
  • News
  • »
  • entertainment
  • »
  • Puneeth Rajkumar: ವರ್ಕೌಟ್​ ಮಾಡದೆ ಹೋದರೆ ಇಡೀ ದಿನವೇ ವ್ಯರ್ಥ ಎನ್ನುತ್ತಲೇ ಹೊಸ ವಿಡಿಯೋ ಪೋಸ್ಟ್​ ಮಾಡಿದ ಪುನೀತ್​..!

Puneeth Rajkumar: ವರ್ಕೌಟ್​ ಮಾಡದೆ ಹೋದರೆ ಇಡೀ ದಿನವೇ ವ್ಯರ್ಥ ಎನ್ನುತ್ತಲೇ ಹೊಸ ವಿಡಿಯೋ ಪೋಸ್ಟ್​ ಮಾಡಿದ ಪುನೀತ್​..!

ಪುನೀತ್​ ರಾಜ್​ಕುಮಾರ್​

ಪುನೀತ್​ ರಾಜ್​ಕುಮಾರ್​

Puneeth Rajkumar New Workout Video: ಪುನೀತ್​ ಲಾಕ್​ಡೌನ್​ ಆರಂಭವಾದಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವರ್ಕೌಟ್​ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಸಹ ಈ ಹಿಂದೆ ಅಪ್ಪು ಅವರ ಫಿಟ್ನೆಸ್​ ವಿಡಿಯೋ ಪೋಸ್ಟ್​ ಮಾಡಿದ್ದರು. ಈಗ ಪುನೀತ್​ ತಮ್ಮ ಮತ್ತೊಂದು ಹೊಸ ವರ್ಕೌಟ್​ ವಿಡಿಯೋ ಹಂಚಿಕೊಂಡಿದ್ದಾರೆ.

ಮುಂದೆ ಓದಿ ...
  • Share this:

ಪವರ್​ ಸ್ಟಾರ್​ ಕೇವಲ ಸಿನಿಮಾಗಳಲ್ಲಿ ಮಾತ್ರ ಪವರ್ ತೋರಿಸೋದಿಲ್ಲ. ನಿಜ ಜೀವನದಲ್ಲೂ ಅವರು ಪವರ್​ ಸ್ಟಾರ್​. ಸಿನಿಮಾ ಚಿತ್ರೀಕರಣ ಇರಲಿ ಬಿಡಲಿ, ನಿತ್ಯ ಶಿಸ್ತಿನ ಜೀವನ ಮಾಡೋದನ್ನು ರೂಢಿಸಿಕೊಂಡಿದ್ದಾರೆ.


ಪುನೀತ್​ ಲಾಕ್​ಡೌನ್​ ಆರಂಭವಾದಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವರ್ಕೌಟ್​ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಸಹ ಈ ಹಿಂದೆ ಅಪ್ಪು ಅವರ ಫಿಟ್ನೆಸ್​ ವಿಡಿಯೋ ಪೋಸ್ಟ್​ ಮಾಡಿದ್ದರು. ಈಗ ಪುನೀತ್​ ತಮ್ಮ ಮತ್ತೊಂದು ಹೊಸ ವರ್ಕೌಟ್​ ವಿಡಿಯೋ ಹಂಚಿಕೊಂಡಿದ್ದಾರೆ.ಮನೆಯ ಗಾರ್ಡನ್​ನಲ್ಲೇ ಬ್ಯಾಕ್​​ ಫ್ಲಿಪ್​ ಮಾಡುವ ಸಖತ್​ ವಿಡಿಯೋ ಪೋಸ್ಟ್​ ಮಾಡಿದ್ದಾರೆ. ವಯಸ್ಸು 45 ಆದರೂ ಪುನೀತ್ ಮಾತ್ರ ಯುವಕನಂತೆ ಕಷ್ಟದ ವರ್ಕೌಟ್​ಗಳನ್ನು ನೀರು ಕುಡಿದಷ್ಟು ಸುಲಭವಾಗಿ ಮಾಡುತ್ತಾರೆ. ಅವರಿಗೆ ನಿತ್ಯ ವ್ಯಾಯಾಮ ಮಾಡದೇ ಹೋದರೆ, ಇಡೀ ದಿನವೇ ವ್ಯರ್ಥವಾದಂತೆ ಅನಿಸುತ್ತದೆಯಂತೆ.ಫಿಟ್ನೆಸ್​ ಫ್ರೀಕ್​ ಆಗಿರುವ ಪುನೀತ್,​ ಆಗಾಗ ನಂದಿಬೆಟ್ಟಕ್ಕೆ ಸೈಕಲ್​ನಲ್ಲಿ ಹೋಗುತ್ತಾರೆ. ಇದರ ಜೊತೆಗೆ ಟೆನ್ನಿಸ್​ ಆಡುವ ಅಭ್ಯಾಸವನ್ನೂ ಬೆಳೆಸಿಕೊಂಡಿದ್ದಾರೆ. ಲಾಕ್​ಡೌನ್​ ಆದಾಗಿನಿಂದ ಪುನೀತ್​ಗೆ ವರ್ಕೌಟ್​ ಮಾಡಲು ಮತ್ತಷ್ಟು ಸಮಯ ಸಿಕ್ಕಾಂತಾಗಿದೆ.


ಸಂತೋಷ್​ ಆನಂದ್​ ರಾಮ್ ಅವರ ನಿರ್ದೇಶನದಲ್ಲಿ ಪುನೀತ್​ ಯುವರತ್ನ ಸಿನಿಮಾ ಮಾಡುತ್ತಿರುವುದು ತಿಳಿದಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಯುವರತ್ನ ಚಿತ್ರದ ಹೊಸ ಪೋಸ್ಟರ್ ರಿಲೀಸ್​ ಮಾಡಲಾಗಿತ್ತು. ಸದ್ಯಕ್ಕೆ ಈ ಸಿನಿಮಾ ಡಬ್ಬಿಂಗ್​ ಕೆಲಸ ಸಹ ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಆರಂಭವಾಗಿತ್ತು.

Published by:Anitha E
First published: