• Home
 • »
 • News
 • »
 • entertainment
 • »
 • Puneeth Rajkumar: ನಗು ಮುಖದಲ್ಲೇ ಇಡೀ ರಾಜ್ಯ ಗೆದ್ದ ರಾಜ ಅಪ್ಪು, ಗೆಳೆಯನ ನೆನೆದು Jr NTR ಭಾವುಕ!

Puneeth Rajkumar: ನಗು ಮುಖದಲ್ಲೇ ಇಡೀ ರಾಜ್ಯ ಗೆದ್ದ ರಾಜ ಅಪ್ಪು, ಗೆಳೆಯನ ನೆನೆದು Jr NTR ಭಾವುಕ!

ತಾರಕ್​, ಅಪ್ಪು

ತಾರಕ್​, ಅಪ್ಪು

Karnataka Ratna: ಕಾರ್ಯಕ್ರಮಕ್ಕೆ ಆಗಮಿಸಿದ್ದ ಜೂನಿಯರ್​ ಎನ್​ಟಿಆರ್ (Junior NTR)​ ಅಪ್ಪು ಅವರನ್ನು ನೆನೆದು ಭಾವುಕರಾದರು. ನಗು ಮುಖದಲ್ಲೇ ಇಡೀ ರಾಜ್ಯವನ್ನೇ ಗೆದ್ದ ರಾಜ ನಮ್ಮ ಅಪ್ಪು.  ಅಪ್ಪು ವಿ ಮಿಸ್​ ಯೂ ಅಂತ ತಾರಕ್​ ಭಾವುಕರಾದರು.

 • News18 Kannada
 • Last Updated :
 • Bangalore [Bangalore], India
 • Share this:

  ಇಂದು ಕನ್ನಡ ರಾಜ್ಯೋತ್ಸವ ( Kannada Rajyothsava) ಸಂಭ್ರಮ ಇಡೀ ಕರುನಾಡಿದ ತುಂಬಾ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಇಂದು ರಾಜ್ಯ ಸರ್ಕಾರ ನಮ್ಮ ಪ್ರೀತಿಯ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ (Power Star Puneeth Rajkumar) ಅವರಿಗೆ ಕರ್ನಾಟಕ ರತ್ನ (Karnataka Rathna) ನೀಡಿ ಗೌರವಿಸಿದೆ. ಈ ಕಾರ್ಯಕ್ರಮಕ್ಕೆ ಸೂಪರ್​ ಸ್ಟಾರ್​ ರಜನಿಕಾಂತ್​ ಹಾಗೂ ಜೂನಿಯರ್​ ಎನ್​ಟಿಆರ್​ ಆಗಮಿಸಿದ್ದರು. ವಿಧಾನಸೌಧದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಲ್ಲರೂ ಅಪ್ಪು ನೆನೆದು ಭಾವುಕಾರದರು. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜೂನಿಯರ್​ ಎನ್​ಟಿಆರ್ (Junior NTR)​ ಅಪ್ಪು ಅವರನ್ನು ನೆನೆದು ಭಾವುಕರಾದರು. ನಗು ಮುಖದಲ್ಲೇ ಇಡೀ ರಾಜ್ಯವನ್ನೇ ಗೆದ್ದ ರಾಜ ನಮ್ಮ ಅಪ್ಪು.  ಅಪ್ಪು ವಿ ಮಿಸ್​ ಯೂ ಅಂತ ತಾರಕ್​ ಭಾವುಕರಾದರು.


  ನಗುಮುಖದ ರಾಜ ಅಪ್ಪು ಎಂದ ಜೂನಿಯರ್​​ ಎನ್​​ಟಿಆರ್​!


  ಸೂಪರ್​ ಸ್ಟಾರ್​ ರಜನಿಕಾಂತ್​ ಮಾತನಾಡಿದ ಬಳಿಕ ಜೂನಿಯರ್​ ಎನ್​ಟಿಆರ್​ ಮಾತನಾಡಿದರು. ಮಳೆ ಬರುತ್ತಿದ್ದ ಕಾರಣ ಹೆಚ್ಚು ಮಾತನಾಡದಿದ್ದರೂ, ಗೆಳೆಯ ಅಪ್ಪು ನೆನದು ಭಾವುಕರಾದರು. "ಎಲ್ಲರಿಗೂ ನಮಸ್ಕಾರ, ಇಡೀ ಕರ್ನಾಟಕ ರಾಜ್ಯಕ್ಕೆ ಹಾಗೂ ಇಡೀ ಪ್ರಪಂಚದಲ್ಲಿ ಇರುವ ಕನ್ನಡಿಗರಿಗೆ ಕರ್ನಾಟಕ ರಾಜೋತ್ಸವದ ಶುಭಾಶಯಗಳು. ಒಬ್ಬ ಮನುಷ್ಯನಿಗೆ ಪರಂಪರೆ ಹಾಗೆ ಉಪನಾಮ ಅನ್ನೋದು ಹಿರಿಯರಿಂದ ಬರುತ್ತೆ. ಅದೇ ವ್ಯಕ್ತಿತ್ವ ಅನ್ನೋದು ಸ್ವಂತ ಸಂಪಾದನೆ, ಬರೀ ವ್ಯಕ್ತಿತ್ವದಿಂದ, ಬರೀ ನಗು ಮುಗುದಲ್ಲೇ, ಅಹಂ ಇಲ್ಲದೇ, ಅಹಂಕಾರ ಇಲ್ಲದೇ, ಯುದ್ಧ ಇಲ್ಲದೇ. ಇಡೀ ರಾಜ್ಯವನ್ನೇ ಗೆದ್ದ ರಾಜ ಯಾರಾದರೂ ಇದ್ದಾರೆ ಅಂದರೆ ಅದು ಶ್ರೀ ಪುನೀತ್​ ರಾಜ್​ಕುಮಾರ್​ ಅವರು ಒಬ್ಬರೇ"


  ನಗುವಿನ ಒಡೆಯ ಅಪ್ಪು ಎಂದು ತಾರಕ್!


  ಅಪ್ಪು ಸೂಪರ್​ ಸ್ಟಾರ್​ ಆಫ್​ ಕರ್ನಾಟಕ.ಒಳ್ಳೆ ತಂದೆಯಾಗಿ, ಒಳ್ಳೆ ಮಗುವಾಗಿ, ಒಳ್ಳೆ ಮಗನಾಗಿ, ಒಳ್ಳೆಯ ಸ್ನೇಹಿತನಾಗಿ, ಒಳ್ಳೆ ಕಲಾವಿದ, ನಟ, ಅದಕ್ಕೂ ಮೇಲೆ ಒಳ್ಳೆ ಮನುಷ್ಯ ಆಗಿದ್ದರು. ಅವರ ನಗುವಿನಲ್ಲಿದ್ದ ಶ್ರೀಮಂತಿಕೆಯನ್ನು ನಾನು ಎಲ್ಲೂ ನೋಡಲ್ಲ. ಅದಕ್ಕೇ ಅವರನ್ನು ನಗುವಿನ ಒಡೆಯ ಅನ್ನೋದು. ಇವತ್ತು ಅವರಿಗೆ ಸಿಗ್ತಿರೋದು ಕರ್ನಾಟಕ ರತ್ನ, ದಯವಿಟ್ಟು ತಪ್ಪು ತಿಳಿದುಕೊಳ್ಳಬೇಡಿ, ಕರ್ನಾಟಕ ರತ್ನ ಅರ್ಥನೇ ಶ್ರೀ ಪುನೀತ್​ ರಾಜ್​ಕುಮಾರ್​. ನಾನು ಈ ವೇದಿಕೆಗೆ ಬಂದಿರೋದು ಕೇವಲ ಒಬ್ಬ ಹೆಮ್ಮೆಯ ಗೆಳೆಯನಾಗಿ ಇಲ್ಲಿ ನಿಂತಿದ್ದೇನೆ ಅಷ್ಟೇ ಎಂದು ಅಪ್ಪು ನೆನೆದು ತಾರಕ್​ ಭಾವುಕರಾದರು.


  ಇದನ್ನೂ ಓದಿ: ರಾಜರತ್ನನ ಮುಕುಟಕ್ಕೆ ಕರ್ನಾಟಕ ರತ್ನ, ರಜನಿಕಾಂತ್​ ಸಮ್ಮುಖದಲ್ಲಿ ಗೌರವ


  ಮತ್ತೆ ಹುಟ್ಟಿ ಬಾ ಅಪ್ಪು


  ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತಾಡಿದ ಮುಖ್ಯಮಂತ್ರಿ ಸಿಎಂ ಬಸವರಾಜ ಬೊಮ್ಮಾಯಿ ಅವ್ರು, ಅಪ್ಪು ನಮ್ಮ ಜೊತೆ ಇದ್ದಾರೆ. ಆಕಾಶದಿಂದ ಮಳೆಯ ರೂಪದಲ್ಲಿ ಬಂದು ಅಪ್ಪು ನಮಗೆ ಶುಭಕೋರಿದ್ದಾರೆ. ಕರ್ನಾಟಕ ರತ್ನಕ್ಕೇ ಕರ್ನಾಟಕ ರತ್ನ ಕೊಡುವ ಭಾಗ್ಯ ಸಿಕ್ಕಿದೆ. ಇದೆ ನಮ್ಮ ಪುಣ್ಯ ಎಂದ ಸಿಎಂ ಬಸವರಾಜ ಬೊಮ್ಮಾಯಿ ಅವರು ಮತ್ತೆ ಹುಟ್ಟಿ ಬಾ ಅಪ್ಪು, ಮತ್ತೆ ಹುಟ್ಟಿ ಬಾ ಎಂದು ಸಿಎಂ ಬೊಮ್ಮಾಯಿ ಕೂಗಿದ್ರು.


  ಇದನ್ನೂ ಓದಿ: ಇಂದು 'ರಾಜರತ್ನ'ನಿಗೆ ಕರ್ನಾಟಕ ರತ್ನ ಗೌರವ, ಬೆಂಗಳೂರಿಗೆ ಬಂದಿಳಿದ ತಲೈವಾ ರಜನಿಕಾಂತ್​!


  ಅಭಿಮಾನಿಗಳ ಸಾಗರವೇ ಹರಿದು ಬಂದಿದೆ


  ಕರ್ನಾಟಕ ರತ್ನ ಕಾರ್ಯಕ್ರಮಕ್ಕೆ ಅಭಿಮಾನಿಗಳ ಸಾಗರವೇ ಹರಿದು ಬಂದಿದೆ. ಮಳೆಯನ್ನೂ ಲೆಕ್ಕಿಸದೆ ಜನ ಕುಳಿತಿರೋದೆ ಅಪ್ಪು ಮೇಲೆ ಜನರಿಗಿರುವ ಪ್ರೀತಿಗೆ ಸಾಕ್ಷಿಯಾಗಿದೆ ಎಂದ್ರು.

  Published by:ವಾಸುದೇವ್ ಎಂ
  First published: