ಹ್ಯಾಟ್ರಿಕ್ ಹೀರೋ ಶಿವರಾಜ್ (Shiva Rajkumar) ಕುಮಾರ್ ಅಭಿನಯದ ಘೋಸ್ಟ್ (Kannada Ghost Movie) ಸಿನಿಮಾದ ಎರಡು ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. ಈ ಶೂಟಿಂಗ್ ಕೆಲಸ ಮುಗಿಸಿಕೊಂಡು ಡೈರೆಕ್ಟರ್ (Director Srini) ಶ್ರೀನಿ ಫ್ಯಾಮಿಲಿ ಜೊತೆಗೆ ಮೊನ್ನೆ ಕೊಡಗಿಗೆ ಹೋಗಿದ್ದರು. ಅವರು ಉಳಿದುಕೊಂಡಿದ್ದ ರೂಮ್ ಪಕದಲ್ಲಿಯೇ ಒಂದು ವಿಶೇಷವೂ ಇತ್ತು. ಅದನ್ನ ಕ್ಲಿಕ್ಕಿಸಿಕೊಂಡು ಟ್ವಿಟರ್ಗೂ ಹಾಕಿದ್ದಾರೆ. ಅದಕ್ಕೊಂದು (Puneeth Rajkumar) ಚಂದದ ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ. ಅದನ್ನ ನೀವೂ ನೋಡಿದ್ರೆ, ಖಂಡಿತಾ ಖುಷಿ ಆಗುತ್ತೀರಾ? ಆ ವಿಶೇಷ ನಿಜಕ್ಕೂ ವಿಶೇಷವಾಗಿಯೇ ಇದೆ. ಅದನ್ನ ಸೂಕ್ಷ್ಮವಾಗಿ ಗಮನಸಿದ್ರೆ, ಪವರ್ ಸ್ಟಾರ್ ಪುನೀತ್ ನಿಮ್ಮ ಮನದಲ್ಲಿ ಮತ್ತೆ ಸಂಚರಿಸುತ್ತಾರೆ. ಆ ವಿಶೇಷದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ಓದಿ.
ನಮ್ಮ ಮನಸಿನ ಆಳದಲ್ಲಿ ಬೇರೂರಿದ ಪವರ್ ಸ್ಟಾರ್
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಲ್ಲರ ಮನದಲ್ಲಿದ್ದಾರೆ. ಅವರು ದೈಹಿಕವಾಗಿ ಇಲ್ಲ ಅನ್ನೋದನ್ನ ಬಿಟ್ರೆ, ಪವರ್ ಸ್ಟಾರ್ ಪವರ್ ಇನ್ನೂ ಎಲ್ಲರ ಮನದಲ್ಲಿಯೇ ಹರಿಯುತ್ತಿದೆ.
ಪುನೀತ್ ರಾಜಕುಮಾರ್ ಎಂದೂ ತಾವು ಏನೇ ಮಾಡಿದ್ರೂ ಎಲ್ಲೂ ಏನೂ ಹೇಳಿಕೊಳ್ಳುತ್ತಿರಲಿಲ್ಲ. ಆದರೆ ಅವರು ಹಾಗೆ ಮಾಡಿರೊ ಕಾರ್ಯ ಎಲ್ಲ ಕಾಲಕ್ಕೂ ಸಲ್ಲುತ್ತದೆ.
ಅಜರಾ"ಮರ" ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಎಲ್ಲರ ಮನದಲ್ಲಿ ಹಾಗೇ ಇದ್ದಾರೆ. ಅವರ ನೆನಪು ಎಲ್ಲರನ್ನ ಕಾಡುತ್ತಲೇ ಇರುತ್ತದೆ. ಪುನೀತ್ ವ್ಯಕ್ತಿತ್ವವೇ ಹಾಗಿತ್ತು. ಅಷ್ಟು ಆಳವಾಗಿಯೇ ಎಲ್ಲರ ಮನದಲ್ಲಿರೋ ಅಪ್ಪು, ಈಗಲೂ ಎಲ್ಲರಿಗೂ ನೆನಪಿಗೆ ಬರುತ್ತಾರೆ.
ಅಪ್ಪು ಮಾಡಿರೋ ಕೆಲಸಗಳು ಹಾಗಿವೆ. ಹಾಗೇನೇ ಅಪ್ಪು ಕೊಡಗಿಗೂ ಹೋಗಿ ಬಂದಿದ್ದಾರೆ. ಹಾಗೆ ಅಪ್ಪು ಇಲ್ಲಿಗೆ ಹೋದಾಗ ಒಂದ್ ಅದ್ಭುತ ಕೆಲಸವನ್ನೇ ಮಾಡಿದ್ದಾರೆ. ಇಲ್ಲಿಯ ರೆಸಾರ್ಟ್ ಒಂದರಲ್ಲಿ ಒಂದು ಸ್ಪೂರ್ತಿದಾಯಕ ಕೆಲಸವನ್ನೂ ಮಾಡಿದ್ದಾರೆ.
ಅಪ್ಪನ ಜನ್ಮ ದಿನಕ್ಕೆ ಗಿಡ ನೆಟ್ಟ ಪವರ್ ಸ್ಟಾರ್ ಪುನೀತ್
ಡಾಕ್ಟರ್ ರಾಜ್ಕುಮಾರ್ ಅವರ 92 ನೇ ಜನ್ಮ ದಿನಕ್ಕೆ ಪುನೀತ್ ರಾಜ್ಕುಮಾರ್ ಒಂದು ಒಳ್ಳೆ ಕೆಲಸ ಮಾಡಿದ್ದಾರೆ. ಕೊಡಗಿಗೆ ಹೋದಾಗ ಇಲ್ಲಿಯ ರೆಸಾರ್ಟ್ ಒಂದರಲ್ಲಿ ಮಲಬಾರ್ ಹುಣಸೆ ಗಿಡವನ್ನ ನೆಟ್ಟಿದ್ದಾರೆ. ಹಾಗೆ ನೆಟ್ಟ ಈ ಗಿಡದ ಪಕ್ಕದಲ್ಲಿಯೇ ಈ ಎಲ್ಲ ಡೀಟೆಲ್ಸ್ ಕೂಡ ಇದೆ.
ಘೋಸ್ಟ್ ಡೈರೆಕ್ಟರ್ ಶ್ರೀನಿ ಶೇರ್ ಮಾಡಿದ ಮ್ಯಾಟರ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಚಿತ್ರವನ್ನ ಡೈರೆಕ್ಟರ್ ಶ್ರೀನಿ ನಿರ್ದೇಶನದ ಮಾಡುತ್ತಿದ್ದಾರೆ. ಹಾಗೆ ಎರಡು ಹಂತದ ಚಿತ್ರೀಕರಣವನ್ನ ಈಗ ಮುಗಿಸಿಕೊಂಡು, ಫ್ಯಾಮಿಲಿ ಜೊತೆಗೆ ಮೊನ್ನೆ ಕೊಡಗಿಗೂ ಹೋಗಿದ್ರು.
ಹಾಗೇನೆ ಇಲ್ಲಿಯ ಒಂದು ರೆಸಾರ್ಟ್ ನಲ್ಲೂ ಉಳಿದುಕೊಂಡಿದ್ದರು. ಶ್ರೀನಿ ಉಳಿದುಕೊಂಡ ರೂಮ್ ಪಕ್ಕದಲ್ಲಿಯೇ ಪವರ್ ಸ್ಟಾರ್ ಪುನೀತ್ ನೆಟ್ಟಿರೋ ಗಿಡ ಕೂಡ ಇತ್ತು. ಅದರ ಫೋಟೋ ತೆಗೆದಿರೋ ನಟ-ನಿರ್ದೇಶಕ ಶ್ರೀನಿ ಆ ಫೋಟೋವನ್ನ ಟ್ವಿಟರ್ನಲ್ಲೂ ಶೇರ್ ಮಾಡಿದ್ದಾರೆ. You are rooted in our memories ಅಂತಲೂ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Actress Bhoomi Shetty: ಥೈಲ್ಯಾಂಡ್ ಸುತ್ತಾಡಿದ ಭೂಮಿ! ಸೋಲೋ ಟ್ರಿಪ್ ಹೋಗಿದ್ರಾ ಶೆಟ್ರ ಹುಡ್ಗಿ?
ಡೈರೆಕ್ಟರ್ ಶ್ರೀನಿ ಮಾತು ನಿಜವೇ ಆಗಿದೆ. ಪುನೀತ್ ರಾಜ್ಕುಮಾರ್ ಎಲ್ಲರ ಮನದಲ್ಲಿ ಆಳವಾಗಿಯೇ ಬೇರೂರಿದ್ದಾರೆ. ಅಪ್ಪು ಅಂದ್ರೆ ಅಮರ, ಅಪ್ಪು ಅಂದ್ರೆ ಅದ್ಭುತ ಅನ್ನೋ ಮಾತನ್ನ ಎಲ್ಲರೂ ಒಪ್ಪಿಕೊಳ್ಳುತ್ತಾರೆ.
ಅಪ್ಪು ಈಗಲೂ ಎಲ್ಲರ ಮನಸಿನಲ್ಲಿ ಜೀವಂತವಾಗಿದ್ದಾರೆ. ಹಾಗೇನೆ ಇದೇ ರೆಸಾರ್ಟ್ ನಲ್ಲಿಯೇ ನಟಿ ಐಶ್ವರ್ಯ ರೈ, ಸೂಪರ್ ಸ್ಟಾರ್ ರಜಿನಿಕಾಂತ್ ಸೇರಿದಂತೆ ಇನ್ನೂ ಅನೇಕರು ಅಪ್ಪು ರೀತಿನೇ ಗಿಡಗಳನ್ನ ಇಲ್ಲಿ ನೆಟ್ಟು ಹೋಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ