Puneeth Rajkumar: ಕೆಎಂಎಫ್​ನಿಂದ ಕರುನಾಡ ರತ್ನನಿಗೆ `ಕ್ಷೀರ’ ನಮನ: ನಂದಿನ ಹಾಲಿನ ಪ್ಯಾಕೇಟ್​ ಮೇಲೆ ಅಪ್ಪು ಫೋಟೋ!

ಕೆಎಂಎಫ್​(KMF) ಕೂಡ ಅಪ್ಪು ಅವರಿಗೆ ವಿಶೇಚವಾಗಿ ಗೌರವ ಸಲ್ಲಿಸಿದೆ. ಇದನ್ನು ಕಂಡ ಅಭಿಮಾನಿಗಳು(Fans) ಭಾವುಕರಾಗಿದ್ದಾರೆ. ಯಾವುದೇ ಹಣ ಪಡೆಯದೇ ಅಪ್ಪು ನಂದಿನಿ ಜಾಹೀರಾತಿನಲ್ಲಿ ನಟಿಸಿದ್ದರು. ಬ್ರ್ಯಾಂಡ್​ ಅಂಬಾಸಿಡರ್​(Brand Ambassador) ಆಗಿದ್ದರು. ಅದರಂತೆ ಇದೀಗ ಕೆಎಂಎಫ್ ವತಿಯಿಂದ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ. 

ನಂದಿನಿ ಹಾಲಿನ ಪ್ಯಾಕೇಟ್​ ಮೇಲೆ ಅಪ್ಪು ಫೋಟೋ

ನಂದಿನಿ ಹಾಲಿನ ಪ್ಯಾಕೇಟ್​ ಮೇಲೆ ಅಪ್ಪು ಫೋಟೋ

  • Share this:


ಕನ್ನಡ ಚಿತ್ರರಂಗದ ರಾಜರತ್ನ, ಪವರ್​ ಸ್ಟಾರ್​, ಕರುನಾಡ ರತ್ನ, ಸರಳತೆಯ ಸಾಮ್ರಾಟ್​,  ಅಭಿಮಾನಿಗಳ ನಗು ಮುಖದ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ (Power Star Puneeth Rajkumar) ನಿಧನರಾಗಿ ಎರಡು ತಿಂಗಳು ಕಳೆದಿವೆ. ಆದರೆ, ಅವರಿಗೆ ಇದ್ದ ಪರಿಸರ ಕಾಳಜಿ, ಸಮಾಜದ ಮೇಲೆ ಇದ್ದ ಪ್ರೀತಿ ಹಾಗೂ ದೊಡ್ಡವರ ಮೇಲೆ ಇದ್ದ ಗೌರವ ಎಲ್ಲರನ್ನೂ ಮೂಕ ವಿಸ್ಮಿತರನ್ನಾಗಿಸುತ್ತೆ. ಅವರು ಮಾಡಿ ಹೋದ ಕೆಲಸವನ್ನು ಎಲ್ಲರು ಮುಂದುವರೆಸಿಕೊಂಡು ಹೋಗುವಂತೆ ಮಾಡಿದ್ದರೆ. ಅವರು ನಮ್ಮ ಜೊತೆ ಇಲ್ಲ ಎಂಬುವ ಕಹಿ ಸತ್ಯವನ್ನು ಒಪ್ಪಿಕೊಂಡು ನಾವು ಹೋಗಲೇ ಬೇಕು. ಪ್ರತಿದಿನ ಅಪ್ಪು(Appu) ಅವರನ್ನು ನೆನೆಯುವ ಕಾರ್ಯಕ್ರಮಗಳು ನಡೆಯುತ್ತಲೇ ಇದೆ. ಜೊತೆಗೆ ಒಂದಲ್ಲ ಒಂದು ರೀತಿ ಅಪ್ಪು ಅವರಿಗೆ ಗೌರವ ಸಲ್ಲಿಸುವ ಕೆಲಸಗಳು ನಡೆಯುತ್ತಲೇ ಇದೆ. ಇದೀಗ ಕೆಎಂಎಫ್​ (KMF) ಕೂಡ ಅಪ್ಪು ಅವರಿಗೆ ವಿಶೇಚವಾಗಿ ಗೌರವ ಸಲ್ಲಿಸಿದೆ. ಇದನ್ನು ಕಂಡ ಅಭಿಮಾನಿಗಳು (Fans) ಭಾವುಕರಾಗಿದ್ದಾರೆ. ಯಾವುದೇ ಹಣ ಪಡೆಯದೇ ಅಪ್ಪು ನಂದಿನಿ ಜಾಹೀರಾತಿನಲ್ಲಿ ನಟಿಸಿದ್ದರು. ಬ್ರ್ಯಾಂಡ್​ ಅಂಬಾಸಿಡರ್ ​(Brand Ambassador) ಆಗಿದ್ದರು. ಅದರಂತೆ ಇದೀಗ ಕೆಎಂಎಫ್ ವತಿಯಿಂದ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ. 

ಹಾಲಿನ ಪ್ಯಾಕೇಟ್​ ಮೇಲೆ ಅಪ್ಪು ಫೋಟೋ!

ನಂದಿನ ಹಾಲಿನ ಪ್ಯಾಕೆಟ್ ಮೇಲೆ ಪುನೀತ್ ರಾಜ್​ಕುಮಾರ್ ಭಾವಚಿತ್ರವನ್ನ ಮುದ್ರಿಸುವ ಮೂಲಕ ವಿಶೇಷ ಗೌರವವನ್ನ ತೋರಿಸಲಾಗಿದೆ. ಇನ್ನು ಡಾ. ರಾಜ್ ಕುಮಾರ್ ಕೂಡ ಸಾಮಾಜಿಕ ಕಳಕಳಿಯನ್ನ ಹೊಂದಿದ್ದ ಮೇರು ನಟನಾಗಿದ್ದರು. ಬಲಗೈಯಲ್ಲಿ ಮಾಡಿದ ಸಹಾಯ ಎಡಗೈಗೆ ಗೊತ್ತಾಗಬಾರದು ಎಂಬ ಮಾತಿಗೆ ತಕ್ಕಂತೆ ನಡೆದುಕೊಂಡವರು ಅಣ್ಣಾವ್ರು. ಅಂದು ನಂದಿನಿ ಹಾಲಿನ ಜಾಹೀರಾತು ರಾಯಭಾರಿಯಾಗಿದ್ದ ಡಾ. ರಾಜ್​ಕುಮಾರ್, ಯಾವುದೇ ಸಂಭಾವನೆ ತೆಗೆದುಕೊಳ್ಳದೆ ರೈತರ ಪರ ನಿಂತಿದ್ದರು. ಪುನೀತ್​ ರಾಜ್​ಕುಮಾರ್​ ಕೂಡ ಅಣ್ಣಾವ್ರ ಹಾದಿಯನ್ನು ಹಿಡಿದ್ದಿದ್ದರು. ಹೀಗಾಗಿ ಕೆಎಂಎಫ್​ವಿಶೇಷವಾಗಿ ಅಪ್ಪುಗೆ ಗೌರವ ಸಲ್ಲಿಸಿದೆ.

ನಂದಿನಿ ಹಾಲಿನ ಪ್ಯಾಕೇಟ್​ ಮೇಲೆ ಅಪ್ಪು ಫೋಟೋ


ಇದನ್ನು ಓದಿ : ಈ ವರ್ಷ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಕೆಜಿಎಫ್​-2: ಕಂಪ್ಲೀಟ್​ ಡೀಟೆಲ್ಸ್​ ಇಲ್ಲಿದೆ..

ತಂದೆಯ ಹಾದಿಯಲ್ಲಿ ನಡೆದುಕೊಂಡು ಬಂದಿದ್ದ ಅಪ್ಪು!

ಸಾಮಾಜಿಕ ಕಾರ್ಯಗಳಲ್ಲಿ ಅಪ್ಪು ಹೆಚ್ಚಾಗಿ ತೊಡಗಿಕೊಂಡಿದ್ದರು. ತಂದೆಯ ಹಾದಿಯಂತೆಯೇ ನಡೆದುಕೊಂಡು ಬರುತ್ತಿದ್ದರು. ಗೌರವಧನ ಪಡೆಯದೇ 10 ವರ್ಷ ಕೆಎಂಎಫ್​ನ ಉತ್ಪನ್ನವಾದ ನಂದಿನಿ ಹಾಲಿನ ರಾಯಭಾರಿಯಾಗಿ ಕೆಲಸ ಮಾಡಿದ್ದರು. ಹೀಗಾಗಿ ಹಾಲಿನ ಪ್ಯಾಕೇಟ್​ ಮೇಲೆ ಕರ್ನಾಟಕ ರತ್ನ ಪುನೀತ್​ ರಾಜ್​ಕುಮಾರ್​ ಅವರ ಫೋಟೋವನ್ನು ಮುದ್ರಿಸಲಾಗಿದೆ. ತಮ್ಮ ತಂದೆಯ ಪರಂಪರೆಯನ್ನು ಮುಂದುವರೆಸುವ ನಿಟ್ಟಿನಲ್ಲಿಯೇ ಪುನೀತ್​ ಕೂಡ ನಂದಿನಿ ಪರವಾಗಿ ಉಚಿತವಾಗಿ ಪ್ರಚಾರ ಮಾಡುವುದಾಗಿ ಹೇಳಿಕೊಂಡಿದ್ದರು. ಅದ್ರಂತೆ 2009ರಲ್ಲಿ ಅಪ್ಪು ಕೆಎಂಎಫ್​ ಜೊತೆ ಕುರಿತು ಒಪ್ಪಂದಕ್ಕೆ ಸಹಿ ಹಾಕಿದ್ದರು.

ಇದನ್ನು ಓದಿ : ನಾಳೆ ಸಿಲಿಕಾನ್​ ಸಿಟಿಯಲ್ಲಿ `ಆರ್​ಆರ್​ಆರ್‘​​ ಪ್ರೀ ರಿಲೀಸ್​ ಇವೆಂಟ್​: ಅಬ್ಬಬ್ಬಾ.. ಇವ್ರೆಲ್ಲಾ ಹೋಗ್ತಿದ್ದಾರೆ!

ಮನೆಯಂಗಳದಲ್ಲೇ ಪುನೀತ್​ ಕಂಚಿನ ಪುತ್ಥಳಿ!
ಒಮ್ಮೆಯಾದರೂ ನಟ ಪುನೀತ್ ರಾಜಕುಮಾರ್ ಅವರನ್ನು ನೋಡುವ ಆಸೆಯಿತ್ತು. ಆದರೆ, ಪುನೀತ್ ಅವರ ಅಕಾಲಿಕ ನಿಧನದಿಂದ ಸಾಧ್ಯವಾಗಿಲ್ಲ. ಹೀಗಾಗಿಯೇ, ಮನೆಯಂಗಳದಲ್ಲಿ  ಪುನೀತ್ ರಾಜಕುಮಾರ್ ಅವರ ಕಂಚಿನ ಪುತ್ಥಳಿ ಸ್ಥಾಪಿಸುವ ಮೂಲಕ ಅಭಿಮಾನ ಮೆರೆದ ದಂಪತಿಯ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಕೂಡ್ಲಿಗಿ ತಾಲೂಕಿನ ಸಿದ್ದಾಪುರ ವಡ್ಡರಹಟ್ಟಿಯಲ್ಲಿ ಆರ್.ಟಿ.ನಾಗರಾಜ ಮತ್ತು ಅವರ ಪತ್ನಿ ಮಲ್ಲಮ್ಮ ಅವರ ಅಭಿಮಾನದ ಸಾಕ್ಷಿಯಾಗಿ ತಮ್ಮ ಮನೆಯ ಅಂಗಳದಲ್ಲೇ ಪುನೀತ್ ರಾಜ್ ಅವರ ಪುತ್ಥಳಿ ಅನಾವರಣಗೊಂಡಿದೆ.

Published by:Vasudeva M
First published: