ಈ ವರ್ಷದ ಬಹುನಿರೀಕ್ಷಿತ ಸ್ಯಾಂಡಲ್ವುಡ್ ಚಿತ್ರಗಳಲ್ಲಿ ಯುವರತ್ನ ಕೂಡ ಒಂದು. ಸೂಪರ್ಹಿಟ್ ‘ರಾಜಕುಮಾರ’ ಸಿನಿಮಾ ಬಳಿಕ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್, ನಿರ್ದೇಶಕ ಸಂತೋಷ್ ಆನಂದ್ರಾಮ್ ಹಾಗೂ ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರು ಮತ್ತೆ ಒಂದಾಗಿರೋದು ಕುತೂಹಲ ಹೆಚ್ಚಿಸಿದೆ. ಆದರೆ, ಈಗ ಯುವರತ್ನ ಸಿನಿಮಾ ಕುತೂಹಲ, ನಿರೀಕ್ಷೆಗಳು ದುಪ್ಪಟ್ಟಾಗಲು ಮತ್ತೊಂದು ಕಾರಣ ಸಿಕ್ಕಿದೆ. ಅದೇನು ಎನ್ನುವುದಕ್ಕೆ ಈ ಸ್ಟೋರಿ ಓದಿ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ 44ನೇ ವಯಸ್ಸಿನಲ್ಲಿ ಮತ್ತೆ ಸ್ಟೂಡೆಂಟ್ ಆಗಿ ಕಾಲೇಜು ಮೆಟ್ಟಿಲು ಹತ್ತಿದ್ದಾರೆ. ಅವನ್ನು ಮತ್ತೆ ಕಾಲೇಜು ಮೆಟ್ಟಿಲು ಹತ್ತಿಸಿರೋದು ನಿರ್ದೇಶಕ ಸಂತೋಷ್ ಆನಂದರಾಮ್. ಈಗಾಗಲೇ ಭಿನ್ನ ವಿಭಿನ್ನ ಫಸ್ಟ್ ಲುಕ್ ಪೋಸ್ಟರ್ಗಳು ಹಾಗೂ ರಗ್ಬಿ ಟೀಸರ್ನಿಂದ ಯುವರತ್ನ ಹೈ ಎಕ್ಸ್ಪೆಕ್ಟೇಷನ್ ಮೂಡಿಸಿದೆ. ಈಗಾಗಲೇ ಯುವರತ್ನ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ. ಅದರ ನಡುವೆಯೇ ಚಿತ್ರದ ಶೂಟಿಂಗ್ ಸ್ಟಿಲ್ ಒಂದು ಕುತೂಹಲಕ್ಕೆ ಕಾರಣವಾಗಿದೆ.
ಈ ಫೋಟೋ ಸದ್ಯ ಎಲ್ಲರ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದೆ. ಅದಕ್ಕೆ ಕಾರಣ, ಪವರ್ಸ್ಟಾರ್. ಪುನೀತ್ ರಾಜ್ಕುಮಾರ್ ಹಿಂದಿರುವ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅವ್ರ 1995ರ ಎವರ್ಗ್ರೀನ್ ಬ್ಲಾಕ್ಬಸ್ಟರ್ `ಓಂ' ಚಿತ್ರದ ಪೋಸ್ಟರ್ ಹಾಗೂ ಬ್ಯಾನರ್. ಹೌದು, ರಿಲೀಸ್ ಆಗಿ 25 ವರ್ಷಗಳಾದ್ರೂ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಸ್ಯಾಂಡಲ್ವುಡ್ನ ಈ ಅಂಡರ್ವಲ್ರ್ಡ್ ಸಿನಿಮಾ ಬಗ್ಗೆ ಈಗಲೂ ಎಲ್ಲಿಲ್ಲದ ಕ್ರೇಜ್ ಇದೆ. ಅದೂ ಅಲ್ಲದೇ 2015ರವರೆಗೂ ಬರೋಬ್ಬರಿ 550 ಬಾರಿ ರಾಜ್ಯಾದ್ಯಂತ ಥಿಯೇಟರ್ಗಳಲ್ಲಿ ರಿಲೀಸ್ ಆಗಿತ್ತು ಓಂ.
ಇದನ್ನೂ ಓದಿ: ರೂಲ್ ಮಾಡೋನೇ ನಾನು: ಹೊಸ ದಾಖಲೆ ಸೃಷ್ಟಿಸಿದ ಪವರ್ ಸ್ಟಾರ್ ಯುವರತ್ನ ಟೀಸರ್..!
ಹಾಗಾದ್ರೆ `ಓಂ' ಚಿತ್ರದ ಬ್ಯಾನರ್ ಮುಂದೆ ಸೂಪರ್ ಬೈಕ್ ಮೇಲೆ ಸ್ಟೈಲಿಶ್ಆಗಿ ಸನ್ಗ್ಲಾಸ್ ಧರಿಸಿ ಕುಳಿತಿರುವ `ಯುವರತ್ನ' ಅಪ್ಪು ಮೆಡಿಕಲ್ ಸ್ಟೂಡೆಂಟ್ಸ್ ಜತೆ ಏನ್ ಮಾತಾಡ್ತಿದ್ದಾರೆ ? ಈ ಪ್ರಶ್ನೆಗೆ ಸಿನಿಮಾ ರಿಲೀಸ್ ಆದ ನಂತರವಷ್ಟೇ ಉತ್ತರ ದೊರೆಯಲಿದೆ.
'ಯುವರತ್ನ' ಮೂಲಕ ತಮಿಳು ಸುಂದರಿ ಸಯೇಶಾ ಸೇಗಲ್ ನಾಯಕಿಯಾಗಿ ಸ್ಯಾಂಡಲ್ವುಡ್ ಡೆಬ್ಯೂ ಮಾಡುತ್ತಿದ್ದಾರೆ. ಹಾಗೂ ಖ್ಯಾತ ಬಾಲಿವುಡ್ ನಟ ಬೊಮನ್ ಇರಾನಿ ಅವ್ರಿಗೂ ಯುವರತ್ನ ಚೊಚ್ಚಲ ಕನ್ನಡ ಸಿನಿಮಾ. ಹಾಗೇ ಸೋನು ಗೌಡ, ಡಾಲಿ ಧನಂಜಯ, ಪ್ರಕಾಶ್ ರಾಜ್, ರಾಧಿಕಾ ಶರತ್ ಕುಮಾರ್, ದೂದ್ಪೇಡಾ ದಿಗಂತ್, ಅರು ಗೌಡ, ತ್ರಿವೇಣಿ ರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತಾದ್ರೆ `ಯುವರತ್ನ' ಇದೇ ಬೇಸಿಗೆ ರಜೆಯಲ್ಲಿ ತೆರೆಗೆ ಬರೋದು ಬಹುತೇಕ ಫಿಕ್ಸ್ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ