Power Star Puneeth Rajkumar; ಯುವರತ್ನನ ಕನಸು ಕನಸಾಗಿಯೇ ಉಳಿತು?

ಶಿವಣ್ಣ-ಪುನೀತ್ (Shivanna-Puneeth)ಜೋಡಿಯ ಸಿನಿಮಾ ಬರುತ್ತೆ ಎಂಬ ಸುದ್ದಿ ಕೇಳಿದ್ದ ಅಭಿಮಾನಿ ಬಳಗ ಹೋಳಿಗೆ ತುಪ್ಪ ತಿಂದಷ್ಟು ಹಿರಿ ಹಿರಿ ಹಿಗ್ಗಿದ್ದರು. ಆದ್ರೆ ಪುನೀತ್ ಮಹದಾಸೆ ಕನಸಾಗಿಯೇ ಉಳಿದುಕೊಂಡಿದೆ.

ಶಿವಣ್ಣ ಮತ್ತು ಅಪ್ಪು

ಶಿವಣ್ಣ ಮತ್ತು ಅಪ್ಪು

  • Share this:
ಚಂದನವನದ ಯುವರತ್ನನ (Power Star Puneeth Rajkumar) ಸಾವು ಕರುನಾಡಿಗೆ ಬರಸಿಡಿಲಿನಂತೆ ಅಪ್ಪಳಿಸಿದೆ. ಈ ಕೆಟ್ಟ ಸುದ್ದಿ ಸುಳ್ಳಾಗಲಿ ಎಂದು ಅಭಿಮಾನಿಗಳು (Appu Fans)ಕಣ್ಣೀರಿಡುತ್ತಾ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ. ತಮ್ಮದೇ ವಿಭಿನ್ನ ಸಿನಿಮಾಗಳ ಮೂಲಕ ಕನ್ನಡಿಗರನ್ನು ರಂಜಿಸಿದ್ದ ಪುನೀತ್ ರಾಜ್ ಕುಮಾರ್ ಇಂದು ನಮ್ಮ ಜೊತೆಗಿಲ್ಲ ಎಂದ್ರೆ ನಂಬಲು ಆಗುತ್ತಿಲ್ಲ. ಜೇಮ್ಸ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ರೆ, ದ್ವಿತ್ವ ಚಿತ್ರೀಕರಣ ಹಂತದಲ್ಲಿದೆ. ಅಣ್ಣ ಶಿವರಾಜ್‍ಕುಮಾರ್ (Shivaraj Kumar)ಗೆ ನಿರ್ದೇಶನ ಮಾಡಬೇಕೆಂಬ ಮಹದಾಸೆಯನ್ನು ಪುನೀತ್ ಹೊಂದಿದ್ದರು. ಶಿವಣ್ಣ-ಪುನೀತ್ (Shivanna-Puneeth)ಜೋಡಿಯ ಸಿನಿಮಾ ಬರುತ್ತೆ ಎಂಬ ಸುದ್ದಿ ಕೇಳಿದ್ದ ಅಭಿಮಾನಿ ಬಳಗ ಹೋಳಿಗೆ ತುಪ್ಪ ತಿಂದಷ್ಟು ಹಿರಿ ಹಿರಿ ಹಿಗ್ಗಿದ್ದರು. ಆದ್ರೆ ಪುನೀತ್ ಮಹದಾಸೆ ಕನಸಾಗಿಯೇ ಉಳಿದುಕೊಂಡಿದೆ.

ಅಪ್ಪು ನಿರ್ದೇಶನದಲ್ಲಿ ನಟಿಸುವೆ ಅಂದಿದ್ರು ಶಿವಣ್ಣ

ಅಪ್ಪುಗೆ ನನ್ನನ್ನು ಹೀರೋ ಆಗಿ ಸಿನಿಮಾ ಮಾಡುವ ಕನಸು ಇದೆ.  ತಮ್ಮ ಸಿನಿಮಾ ಮಾಡಿದ್ರೆ ನಾನು ಡೇಟ್ ಕೊಡಲ್ವಾ? ಆತ ಸಿನಿಮಾ ಮಾಡುತ್ತಾನೆ ಅಂದ್ರೆ ಮೊದಲು ಕಥೆಗೆ ಪ್ರಾಮುಖ್ಯತೆ ನೀಡುತ್ತಾನೆ. ಇನ್ನು ಅವನೇ ನಿರ್ದೇಶನ ಮಾಡಲು ಮುಂದಾದ್ರೆ ತೂಕದ ಕಥೆಯನ್ನೇ ತರುತ್ತಾನೆ. ನಾನು ಅವನ ನಿರ್ದೇಶನದಲ್ಲಿ ನಟಿಸಲು ಕಾತುರನಾಗಿದ್ದೇನೆ ಎಂದು ಶಿವಣ್ಣ ಹೇಳಿದ್ದರು.

ಇದನ್ನೂ ಓದಿ:  RIP Puneeth Rajkumar: ವಿಧಿ ನಿಜಕ್ಕೂ ಕ್ರೂರಿ... ಅಪ್ಪು​ ಸಾವಿಗೆ ಪ್ರಧಾನಿ ಮೋದಿ ಸಂತಾಪ

ಭಜರಂಗಿ-2 ಸಿನಿಮಾ ಪ್ರಚಾರದಲ್ಲಿ ಅಪ್ಪು

ಇಂದು ಶಿವಣ್ಣ ನಟಿಸಿರುವ ಬಹುನಿರೀಕ್ಷಿತ ಚಿತ್ರ ಭಜರಂಗಿ-2 (Bhajarangi-2) ರಿಲೀಸ್ ಆಗಿದೆ. ಕಳೆದ ವಾರ ಚಿತ್ರ ಬಿಡುಗಡೆಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪುನೀತ್ ಭಾಗವಹಿಸಿ ಭಜರಂಗಿ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದರು. ನಿನ್ನೆ ಸಂಗೀತ ನಿರ್ದೇಶಕ ಗುರು ಕಿರಣ್ ಬರ್ತ್ ಡೇ (Guru Kiran Birthday Party) ಪಾರ್ಟಿಯಲ್ಲಿಯೂ ಪುನೀತ್ ಭಾಗವಹಿಸಿದ್ದರು.

ಗಳಗಳನೇ ಕಣ್ಣೀರಿಟ್ಟ ಸೋಮಶೇಖರ್ ರೆಡ್ಡಿ

ನಟ ಪುನೀತ್ ರಾಜಕುಮಾರ ಸಾವಿನ ಸುದ್ದಿ ಕೇಳಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ (Somashekhar Reddy) ಗಳಗಳನೇ ಕಣ್ಣೀರಿಟ್ಟಿದ್ದಾರೆ. ಹಲವು ವರ್ಷಗಳಿಂದ ರಾಜಕುಮಾರ ಕುಟುಂಬದೊಂದಿಗೆ ರೆಡ್ಡಿ ಕುಟುಂಬ ಒಡನಾಟ ಹೊಂದಿತ್ತು.  ನಂದಿನ ಹಾಲಿನ ಜಾಹೀರಾತಿಗೆ ಒಂದೇ ಒಂದು ರೂಪಾಯಿ ತೆಗೆದುಕೊಳ್ಳುತ್ತಿರಲಿಲ್ಲ. ನನಗೆ ನೀಡುವ ಜಾಹಿರಾತಿನ (KMF Advertisemnet) ಹಣ ರೈತರಿಗೆ ಉಪಯೋಗ ಮಾಡಿ ಅಂತ ಹೇಳಿದ್ದರು ಎಂದು ಗಾಲಿ ಸೋಮಶೇಖರ್ ರೆಡ್ಡಿ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ:  Puneeth Rajkumar Death| ಅಭಿಮಾನಿಗಳ ಪಾಲಿನ ಯುವರತ್ನ ಪುನೀತ್ ಅಪಾರ ಅಭಿಮಾನಿಗಳ ಕಣ್ಮಣಿ ಆಗಿದ್ದು ಹೇಗೆ?

ಪ್ರಧಾನಿ ನರೇಂದ್ರ ಮೋದಿ ಸಂತಾಪ

ನಟ ಪವರ್​ ಸ್ಟಾರ್​ ಪುನೀತ್​ ರಾಜ್​ ಕುಮಾರ್ (Power Star Puneeth Rajkumar)​ ಅಗಲಿಕೆ ಕೇವಲ ಕರುನಾಡಿಗೆ ಮಾತ್ರವಲ್ಲದೇ, ಇಡೀ ದೇಶಕ್ಕೆ ದಿಗ್ಭ್ರಮೆ ಮೂಡಿಸಿದೆ. ಪ್ರಪಂಚದ ಮೂಲೆ ಮೂಲೆಯಲ್ಲಿರುವ ಅವರ ಅಭಿಮಾನಿಗಳು ಅವರ ಸಾವಿಗೆ ಕಂಬನಿ ಮಿಡಿಯುತ್ತಿದ್ದಾರೆ. 46 ವರ್ಷಕ್ಕೆ ಜಗವ ತೊರೆದ ಪುನೀತ್​ ಸಾವು (puneet Rajkumar Death) ನಂಬಲಾರದ ಸತ್ಯವಾಗಿದೆ. ವಿಧಿಯ ಈ ಕ್ರೂರ ನಡೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.

ಶಿವಣ್ಣನ ಪ್ರೀತಿಯ ಅಪ್ಪು

ದಿವಂಗತ ಡಾ. ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರ ಕೊನೆಯ ಪುತ್ರ ಪುನೀತ್ ರಾಜ್ ಕುಮಾರ್​ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಚಿಕ್ಕಂದಿನಿಂದಲೇ ತಂದೆಯೊಂದಿಗೆ ಪರದೆಯ ಮೇಲೆ ಮಿಂಚುವ ಮೂಲಕ ಕನ್ನಡಿಗರಿಗೆ ಅಚ್ಚುಮೆಚ್ಚು ಎನಿಸಿಕೊಂಡರು. ರಾಘವೇಂದ್ರ ರಾಜ್​ ಕುಮಾರ್, ಶಿವರಾಜ್ ಕುಮಾರ್ ಅವರ ಪ್ರೀತಿಯ ತಮ್ಮನಾಗಿ ಪುನೀತ್ ರಾಜ್ ಕುಮಾರ್ ಗುರುತಿಸಿಕೊಂಡಿದ್ದರು.

ಇದನ್ನೂ ಓದಿ:  Puneeth Rajkumar: ಎರಡು ವಾರದ ಹಿಂದಷ್ಟೇ ಸಣ್ಣದೊಂದು ಚಿಕಿತ್ಸೆ ಪಡೆದಿದ್ದ ಅಪ್ಪು, ಅದೊಂದು ತಪ್ಪು ಮಾಡಬಾರದಿತ್ತು ಎನ್ನುತ್ತಾರೆ ವೈದ್ಯರು

27 ಕ್ಕೂ ಹೆಚ್ಚಿನ ಸಿನಿಮಾದಲ್ಲಿ ನಾಯಕ ನಟನಾಗಿ ಮಿಂಚಿದ್ದ ಪುನೀತ್ ರಾಜ್ ಕುಮಾರ್ ಫಿಟ್​ನೆಸ್​ ಅಷ್ಟೇ ಒತ್ತು ನೀಡುತ್ತಾ ಬಂದಿದ್ದರು. 46 ವರ್ಷ ವಯಸ್ಸಿನ ಅವರು ಇದ್ದಕ್ಕಿದ್ದಂತೆ ಚಿರನಿದ್ರೆಗೆ ಜಾರಿರುವ ವಿಚಾರ ಸ್ಯಾಂಡಲ್​ವುಡ್​ಗೆ  ದೊಡ್ಡ ನೋವುಂಟು ಮಾಡಿದೆ. ಅನೇಕ ಅಭಿಮಾನಿಗಳು ಅಪ್ಪು ಇನ್ನಿಲ್ಲ ಎಂಬ ಬೇಸರ ತಾಳಲಾರದೆ ಕಣ್ಣೀರು ಸುರಿಸುತ್ತಿದ್ದಾರೆ. ನಟ-ನಟಿಯರು ಕೂಡ ಪುನೀತ್ ರಾಜ್ ಅವರ ಹೃದಯಾಘಾತದ ವಿಚಾರದಿಂದ ಶಾಕ್​ಗೆ ಒಳಗಾಗಿದ್ದಾರೆ.
Published by:Mahmadrafik K
First published: