• Home
  • »
  • News
  • »
  • entertainment
  • »
  • Gandhada Gudi Puneeth Rajkumar: ಹಾವು ಅಂದ್ರೆ ಮಾರು ದೂರ ಓಡ್ತಿದ್ದ ಅಪ್ಪು ಕಾಳಿಂಗ ಸರ್ಪ ಕಂಡಾಗ ಮಾಡಿದ್ದೇನು? ಇದು `ಗಂಧದ ಗುಡಿ’ಯ ವಿಚಾರ

Gandhada Gudi Puneeth Rajkumar: ಹಾವು ಅಂದ್ರೆ ಮಾರು ದೂರ ಓಡ್ತಿದ್ದ ಅಪ್ಪು ಕಾಳಿಂಗ ಸರ್ಪ ಕಂಡಾಗ ಮಾಡಿದ್ದೇನು? ಇದು `ಗಂಧದ ಗುಡಿ’ಯ ವಿಚಾರ

ಅಪ್ಪು ಕಾಳಿಂಗ ಸರ್ಪ ಕಂಡಾಗ ಮಾಡಿದ್ದೇನು?

ಅಪ್ಪು ಕಾಳಿಂಗ ಸರ್ಪ ಕಂಡಾಗ ಮಾಡಿದ್ದೇನು?

ನೀವು ಗಂಧದ ಗುಡಿ ಟ್ರೇಲರ್ ನೋಡಿದೀರಲಾ? ಅದ್ರಲ್ಲಿ ಕಾಳಿಂಗ ಸರ್ಪವೊಂದರ ಶಾಟ್ ಬರುತ್ತೆ ಗಮನಿಸಿದ್ದೀರಾ? 12 ಅಡಿ ಉದ್ದದ ಆ ಕಾಳಿಂಗ ಸರ್ಪ ನೋಡೋಕೆ ಅಪ್ಪು ಬರೋಬ್ಬರಿ 3 ದಿನ ಕಾಡಿನ ಮಧ್ಯೆ ಕಾದಿದ್ದರಂತೆ.

  • News18 Kannada
  • Last Updated :
  • Karnataka, India
  • Share this:

ಕನ್ನಡದ ಕಣ್ಮಣಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ಕೊನೆಯ ಚಿತ್ರ `ಗಂಧದ ಗುಡಿ’ (Gandhada Gudi) ಬಿಡುಗಡೆಯಾಗಿ ಹೌಸ್ ಫುಲ್ ಆಗಿ ಪ್ರದರ್ಶನ ಕಾಣ್ತಿದೆ. ಚಿತ್ರ ನೋಡಿದವರೆಲ್ಲಾ ಹುಟ್ಟಿದಾಗಿನಿಂತ ನಾವೆಲ್ಲರೂ ವಾಸಿಸುತ್ತಿರೋ ಕರುನಾಡು (Beautiful Karnataka) ಇಷ್ಟೊಂದು ಅದ್ಭುತವಾಗಿ, ಸುಂದರವಾಗಿ ಇದ್ಯಾ ಎನ್ನುವುದನ್ನ ಅಚ್ಚರಿಯಿಂದ ನೋಡ್ತಿದ್ದಾರೆ. ಜೊತೆಗೇ, ನಮ್ಮ ತಾಯ್ನೆಲದ ಸೌಂದರ್ಯವನ್ನು ನಮಗೇ ಪರಿಚಯಿಸಿ ಹೋದ ಅಪ್ಪುವಿನ (Appu) ನೆನಪಿನಲ್ಲಿ ಭಾವುಕರಾಗಿದ್ದಾರೆ. ಆದ್ರೆ ಗಂಧದ ಗುಡಿಯ (Gandhada Gudi) ಪಯಣದ ದಾರಿಯಲ್ಲಿ ತನಗೆ ಹುಟ್ಟಿದಾಗಿನಿಂದ ಇದ್ದ ಭಯವೊಂದನ್ನು ಪುನೀತ್ ರಾಜ್ಕುಮಾರ್ ಎದುರಿಸಿದ್ರು, ಗೊತ್ತಾ? ಈ ಇಂಟರೆಸ್ಟಿಂಗ್ ವಿಚಾರದ ಫುಲ್ ಡೀಟೆಲ್ಸ್ ಇಲ್ಲಿದೆ.


ನೀವು ಗಂಧದ ಗುಡಿ ಟ್ರೇಲರ್ ನೋಡಿದೀರಲಾ? ಅದ್ರಲ್ಲಿ ಕಾಳಿಂಗ ಸರ್ಪವೊಂದರ ಶಾಟ್ ಬರುತ್ತೆ ಗಮನಿಸಿದ್ದೀರಾ? 12 ಅಡಿ ಉದ್ದದ ಆ ಕಾಳಿಂಗ ಸರ್ಪ ನೋಡೋಕೆ ಅಪ್ಪು ಬರೋಬ್ಬರಿ 3 ದಿನ ಕಾಡಿನ ಮಧ್ಯೆ ಕಾದಿದ್ದರಂತೆ. ಕರ್ನಾಟಕದೊಳಗೆ ಕಾಳಿಂಗ ಸರ್ಪಗಳ ನೆಚ್ಚಿನ ತಾಣ ಆಗುಂಬೆಯಲ್ಲಿ ಅವುಗಳ ಬಗ್ಗೆ ವಿವರವಾದ ಅಧ್ಯಯನ ನಡೆಸುವ ಗೌರಿಶಂಕರ್ ರವರು ಅಪ್ಪು ಮತ್ತು ಕಾಳಿಂಗ ಸರ್ಪದ ನಡುವಿನ ಬಂಧವನ್ನು ನ್ಯೂಸ್ 18 ಕನ್ನಡ ಡಿಜಿಟಲ್ ಜೊತೆ ಬಿಚ್ಚಿಟ್ಟಿದ್ದಾರೆ.
ಹಾವು ಅಂದ್ರೆ ಮಾರು ದೂರ ಓಡ್ತಿದ್ರಂತೆ ಅಪ್ಪು!


“ಪುನೀತ್ ಗೆ ಚಿಕ್ಕಂದಿನಿಂದಲೂ ಹಾವು ಅಂದ್ರೆ ಸಿಕ್ಕಾಪಟ್ಟೆ ಭಯವಂತೆ. ಆದ್ರೆ ಅವರ ತಂದೆ ಡಾ ರಾಜ್ಕುಮಾರ್ ಮಾತ್ರ ಕಾಡು ಪ್ರಾಣಿಗಳ ಜೊತೆ ಬಹಳ ಸುಂದರವಾಗಿ ಹೊಂದಿಕೊಳ್ತಾ ಇದ್ದದ್ದನ್ನ ಖುದ್ದು ಪುನೀತ್ ಹೇಳಿದ್ರು. ಗಂಧದ ಗುಡಿಯ ನಿರ್ದೇಶಕ ಅಮೋಘ ವರ್ಷ ನನಗೆ ಅನೇಕ ವರ್ಷಗಳಿಂದ ಪರಿಚಿತ.


ಆತ ಹೀಗೊಂದು ಪ್ರಾಜೆಕ್ಟ್ ಮಾಡ್ತಿದ್ದೀವಿ, ಪುನೀತ್ ರಾಜ್ಕುಮಾರ್ ಜೊತೆಗೆ. ಕಾಳಿಂಗ ಸರ್ಪಗಳನ್ನೂ ಇದರಲ್ಲಿ ಪರಿಚಯಿಸಬೇಕಿದೆ ಎಂದು ಲಾಕ್​ಡೌನ್ ಸಂದರ್ಭದಲ್ಲಿ, ಅಂದ್ರೆ 2020ರಲ್ಲಿ ನನಗೆ ಹೇಳಿದ. ನಾನು ಒಪ್ಪಿದ್ದೆ” ಎಂದು ವಿವರಣೆ ಆರಂಭಿಸಿದ್ರು ಗೌರೀಶಂಕರ್.


power star puneeth rajkumar last movie gandhada gudi his fear of snakes and how met king cobra in agumbe full inside story details exclusive
ಅಪ್ಪು ಕಂಡ ಕಾಳಿಂಗ


ಪುನೀತ್ ಒಬ್ಬ ದೊಡ್ಡ ಮೂವಿ ಸ್ಟಾರ್. ಡಾ ರಾಜ್ಕುಮಾರ್​ರಂಥಾ ಮೇರುನಟನ ಮಗ. ಇಷ್ಟೆಲ್ಲಾ ಇದ್ದೂ ಅವರು ಅದೆಷ್ಟು ಸರಳವಾಗಿ ನಮ್ಮವರಲ್ಲೇ ಒಬ್ಬರಂತೆ ನಮ್ಮ ಜೊತೆ ಇದ್ರೂ ಅಂದ್ರೆ ನಮಗೆಲ್ಲಾ ಆಶ್ಚರ್ಯ ಆಗಿತ್ತು, ಅಂತಾರವರು.


ಅಪ್ಪು ಇದ್ದ ಕಡೆ Attitudeಗೆ ಜಾಗವೇ ಇಲ್ಲ


ಆಗುಂಬೆಯ ಕಾಳಿಂಗ ಸೆಂಟರ್ ಫಾರ್ ರೇನ್​ಫಾರೆಸ್ಟ್ ಎಕಾಲಜಿಯಲ್ಲಿ ಒಂದಷ್ಟು ವಿದ್ಯಾರ್ಥಿಗಳ ಜೊತೆ ಹರ್ಪಟಾಲಜಿಸ್ಟ್ (ಹಾವುಗಳ ಕುರಿತಾಗಿ ಅಧ್ಯಯನ ನಡೆಸಿ ಪರಿಣಿತಿ ಪಡೆದವರು) ಗೌರಿಶಂಕರ್ ಇರ್ತಾರೆ. ಅಲ್ಲಿ ಬರುವ ಆಸಕ್ತರೆಲ್ಲಾ ಊಟದ ನಂತರ ತಮ್ಮ ತಟ್ಟೆಯನ್ನು ತಾವೇ ತೊಳೆದಿಡಬೇಕಾದದ್ದು ನಿಯಮ.


ಇದನ್ನೂ ಓದಿ: Gandhadagudi Review: ಹುಟ್ಟಿದ ಮೇಲೆ ಸಾಯಲೇಬೇಕು, ಸಾಯೋದ್ರೊಳಗೆ ಗಂಧದಗುಡಿ ನೋಡ್ಲೇಬೇಕು! ಪರಮಾತ್ಮನ ಸಾಹಸಕ್ಕೆ ಫ್ಯಾನ್ಸ್ ಫಿದಾ


ಶೂಟಿಂಗ್ ಗಾಗಿ ಗಂಧದಗುಡಿ ತಂಡ ಬಂದಿದ್ದಾಗ 5-6 ಸಹಾಯಕರೂ ಇದ್ದರು. ಆದರೂ ಪುನೀತ್ ನಮ್ಮೆಲ್ಲರಂತೆ ತಾವೇ ತಮ್ಮ ಊಟದ ತಟ್ಟೆ ತೊಳೆದಿಡುತ್ತಿದ್ರು, ಆತ ಅದೆಷ್ಟು ಡೌನ್ ಟು ಅರ್ಥ್ ಎಂದು ನಮಗನ್ನಿಸಿತ್ತು. ಒಂದು ಚೂರೂ ಹಮ್ಮು-ಬಿಮ್ಮು ಇಲ್ಲದ ನಿಶ್ಕಲ್ಮಶ ಮನಸ್ಸಿನ ಆ ಪ್ರತಿಭೆ ನಿಜಕ್ಕೂ ಅಚ್ಚರಿ ಹುಟ್ಟಿಸಿತ್ತು ಎಂದು ನೆನಪಿಸಿಕೊಳ್ತಾರೆ ಗೌರಿಶಂಕರ್.


ಮೊದಲು ಕಾಡಿನಲ್ಲಿ ಹಾವಿನ ಪರಿಚಯ


ಚಿಕ್ಕಂದಿನಿಂದ ಹಾವು ಅಂದ್ರೆ ಮಾರು ದೂರ ಓಡ್ತಿದ್ದ ಪುನೀತ್ ಮೊದಲ ಎರಡು ದಿನ ತಂಡದ ಜೊತೆ ಆಗುಂಬೆಯ ಕಾಡುಗಳಲ್ಲಿ ಸುತ್ತಾಡಿ ಬಗೆಬಗೆಯ ಹಾವುಗಳನ್ನು ನೋಡಿ ಅವುಗಳ ಬಗ್ಗೆ ಮಾಹಿತಿ ತಿಳಿದು ಅಚ್ಚರಿಪಟ್ಟಿದ್ರಂತೆ. ಇಂಥಾ ಒಳ್ಳೆ ಸ್ಥಳ ನಮ್ಮ ರಾಜ್ಯದಲ್ಲಿ ಇರೋದು ನನಗೆ ಗೊತ್ತೇ ಇರ್ಲಿಲ್ಲ ನೋಡಿ. ಮುಂದಿನ ರಜೆಯಲ್ಲಿ ಮಕ್ಕಳನ್ನೂ ಇಲ್ಲಿಗೆ ಕರ್ಕೊಂಡು ಬರ್ತೀನಿ ಅಂತ ಹೇಳಿದ್ರಂತೆ.


power star puneeth rajkumar last movie gandhada gudi his fear of snakes and how met king cobra in agumbe full inside story details exclusive
ಹಾವು ಕಂಡು ಮಾರು ದೂರ ಓಡಿದ ಅಪ್ಪು


12 ಅಡಿಯ ಹಾವಿಗಾಗಿ 3 ದಿನ ಕಾದಿದ್ರು!


ಇನ್ನು ಅವರು ಕಾಯುತ್ತಿದ್ದ ಕಾಳಿಂಗ ಸರ್ಪದ ದರ್ಶನವಾಗಿದ್ದು ಮೂರನೇ ದಿನ. ಸುಮಾರು 12 ಅಡಿ ಉದ್ದದ ಆ ಹಾವು ಪಕ್ಕದ ಹಳ್ಳಿಯವರೊಬ್ಬರ ಮನೆಯಲ್ಲಿ ಸೇರಿಕೊಂಡಿತ್ತು. ಅದನ್ನು ಹಿಡಿದು ನಂತರ ಕಾಡಿಗೆ ಬಿಡುವ ಕೆಲಸಕ್ಕೆ ಗೌರಿಶಂಕರ್ ಮತ್ತು ತಂಡ ಹೊರಟಿತ್ತು, ಜೊತೆಗೆ ಅಮೋಘವರ್ಷ ಮತ್ತು ಅಪ್ಪು.


ಇದನ್ನೂ ಓದಿ: Gandhada Gudi: ದೊಡ್ಮನೆ ದೊರೆಗೆ ಕ್ರಿಕೆಟಿಗರ ಅಭಿಮಾನದ ಪ್ರೀತಿ, ಗಂಧದಗುಡಿಗೆ ಟೀಂ ಇಂಡಿಯಾ ಆಟಗಾರರ ಶುಭಹಾರೈಕೆ!


ಅಷ್ಟು ದೊಡ್ಡ ಕಾಳಿಂಗ ಸರ್ಪವನ್ನು ತಾನು ಜೀವಮಾನದಲ್ಲೇ ನೋಡಿರ್ಲಿಲ್ಲ ಅಂದ್ರಂತೆ ಅಪ್ಪು. ಅಷ್ಟೇ ಅಲ್ಲ, ಹಾವಿನಿಂದ 15 ಅಡಿ ದೂರವೇ ನಿಂತು ನೋಡಿ ಭಯ ಮಿಶ್ರಿತ ಬೆರಗು ಅನುಭವಿಸಿದ್ದನ್ನು ಗೌರಿಶಂಕರ್ ನೆನಪಿಸಿಕೊಳ್ತಾರೆ.


power star puneeth rajkumar last movie gandhada gudi his fear of snakes and how met king cobra in agumbe full inside story details exclusive
12 ಅಡಿ ಉದ್ದದ ಕಾಳಿಂಗ


ಪುನೀತ್ ಇದ್ದಿದ್ರೆ ಗಂಧದ ಗುಡಿಯ ಖದರ್ ಬೇರೆಯೇ ಇರ್ತಿತ್ತು. ಬಹುಶಃ ಇಂಥಾ ಮತ್ತಷ್ಟು ಅಪರೂಪದ ಚಿತ್ರಗಳು ಬರುತ್ತಿದ್ವು. ಆದ್ರೆ ಅವ್ರು ಅಷ್ಟು ಆಸಕ್ತಿಯಿಂದ, ಪ್ರೀತಿಯಿಂದ ಮಾಡಿದ ಈ ಚಿತ್ರವನ್ನು ಕನ್ನಡಿಗರು ಖುಷಿಯಿಂದ, ಅಪ್ಪು ಇಲ್ಲದ ನೋವಿನಲ್ಲೂ, ನಾಡಿನ ಬಗ್ಗೆ ಹೆಮ್ಮೆ ಪಡುತ್ತಲೇ ನೋಡುತ್ತಾ ಆಸ್ವಾದಿಸ್ತಿದ್ದಾರೆ.

Published by:Soumya KN
First published: