HOME » NEWS » Entertainment » POWER STAR PUNEETH RAJKUMAR IS SHARING SCREEN WITH KICHCHA SUDEEP AND JAGGESH AE

Puneeth Rajkumar: ದಿ ವಿಲನ್ ನಂತರ ಮತ್ತೆರಡು ಮಲ್ಟಿಸ್ಟಾರರ್​ ಸಿನಿಮಾ: ಪುನೀತ್​ಗೆ ಸಿಕ್ಕಿವೆ ಎರಡು ದೊಡ್ಡ ಆಫರ್..!​

Power Star: ಪವರ್​ ಸ್ಟಾರ್ ಪುನೀತ್​ ಹೆಸರಿಗೆ ತಕ್ಕಂತೆ ದೊಡ್ಡ ಮನೆಯ ಹುಡುಗನೆ. ಸ್ಯಾಂಡಲ್​ವುಡ್​ನಲ್ಲಿ ಎಲ್ಲ ನಟರೊಂದಿಗೆ ಸ್ನೇಹ ಹಾಗೂ ಪ್ರೀತಿಯಿಂದ ಇರುತ್ತಾರೆ. ಅವರು ಈ ಹಿಂದೆ ಮಲ್ಟಿ ಸ್ಟಾರರ್​ ಸಿನಿಮಾದಲ್ಲಿ ನಟಿಸಿದ್ದೂ ಇದೆ. ಈಗ ಅವರಿಗೆ ಇಬ್ಬರು ಸ್ಟಾರ್​ ನಟರೊಂದಿಗೆ ಅಭಿನಯಿಸುವ ಅವಕಾಶ ಸಿಕ್ಕಿದೆ.  

Anitha E | news18-kannada
Updated:September 10, 2019, 11:01 AM IST
Puneeth Rajkumar: ದಿ ವಿಲನ್ ನಂತರ ಮತ್ತೆರಡು ಮಲ್ಟಿಸ್ಟಾರರ್​ ಸಿನಿಮಾ: ಪುನೀತ್​ಗೆ ಸಿಕ್ಕಿವೆ ಎರಡು ದೊಡ್ಡ ಆಫರ್..!​
ಜಗ್ಗೇಶ್​, ಪುನೀತ್ ಹಾಗೂ ಸುದೀಪ್​
  • Share this:
ಕಳೆದ ವರ್ಷ `ದಿ ವಿಲನ್' ಮೂಲಕ ಶಿವರಾಜ್‍ಕುಮಾರ್-ಸುದೀಪ್ ಒಂದಾಗಿ, ಸ್ಯಾಂಡಲ್‍ವುಡ್‍ನಲ್ಲಿ ಧೂಳೆಬ್ಬಿಸಿದ್ದರು. ಈಗ ಮತ್ತೆರಡು ದೊಡ್ಡ ಸಿನಿಮಾಗೆ ಮಹೂರ್ತ ಫಿಕ್ಸಾಗುವಂತಿದೆ. ಆದರೆ ಈ ಎರಡೂ ದೊಡ್ಡ ಸಿನಿಮಾಗಳಲ್ಲಿ ಒಂದೇ ಒಂದು ಕಾಮನ್​ ಅಂದರೆ ಅದು ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​​.

ಹೌದು, ಪವರ್​ ಸ್ಟಾರ್ ಪುನೀತ್​ ಹೆಸರಿಗೆ ತಕ್ಕಂತೆ ದೊಡ್ಡ ಮನೆಯ ಹುಡುಗನೆ. ಸ್ಯಾಂಡಲ್​ವುಡ್​ನಲ್ಲಿ ಎಲ್ಲ ನಟರೊಂದಿಗೆ ಸ್ನೇಹ ಹಾಗೂ ಪ್ರೀತಿಯಿಂದ ಇರುತ್ತಾರೆ. ಅವರು ಈ ಹಿಂದೆ ಮಲ್ಟಿ ಸ್ಟಾರರ್​ ಸಿನಿಮಾದಲ್ಲಿ ನಟಿಸಿದ್ದೂ ಇದೆ. ಈಗ ಅವರಿಗೆ ಇಬ್ಬರು ಸ್ಟಾರ್​ ನಟರೊಂದಿಗೆ ಅಭಿನಯಿಸುವ ಅವಕಾಶ ಸಿಕ್ಕಿದೆ.

sudeep-with-puneeth-rajkumar
ಸುದೀಪ್​-ಪುನೀತ್​ ರಾಜ್​ಕುಮಾರ್​


ಪುನೀತ್​ ಕಿಚ್ಚ ಸುದೀಪ್​ ಅವರೊಂದಿಗೆ ಹಾಗೂ ಜಗ್ಗೇಶ್​ ಜತೆ ಸಿನಿಮಾ ಮಾಡಲಿದ್ದಾರೆ. ಅದಕ್ಕೆ ನಟರ ಒಪ್ಪಿಗೆಯೂ ಸಿಕ್ಕಿದೆ. ಪುನೀತ್ ಹಾಗೂ ಕಿಚ್ಚ ಸುದೀಪ್​ ಬೆಳ್ಳಿ ತೆರೆ ಮೇಲೆ ತುಂಬಾ ಬೇಗ ಒಂದಾಗಲಿದ್ದಾರೆ. ಈ ನಿರ್ಧಾರಕ್ಕೆ ವೇದಿಕೆಯಾಗಿದ್ದು 'ಪೈಲ್ವಾನ್​' ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ.

ಇದನ್ನೂ ಓದಿ: ನಿಜ ಜೀವನದಲ್ಲಿ ಕರ್ಣನಾದ ಚಾಲೆಂಜಿಂಗ್ ಸ್ಟಾರ್ ದರ್ಶನ್​ !

ಹೌದು, ಕಿಚ್ಚ ಹಾಗೂ ಪುನೀತ್​ ಯಾವಾಗ ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎನ್ನುವ ಮಾತು ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಎದುರಾಗಿತ್ತು. ಆಗ ಈ ಇಬ್ಬರೂ ನಟರೂ ಒಳ್ಳೆಯ ಕತೆ ಸಿಕ್ಕಾಗ ಎಂದು ಉತ್ತರಿಸುವ ಮೂಲಕ ಸಿನಿಮಾ ಮಾಡಲು ಒಪ್ಪಿಗೆ ಸೂಚಿಸಿದ್ದರು.

ಇನ್ನು ಜಗ್ಗೇಶ್​ ಹಾಗೂ ಪುನೀತ್​ ಅವರ ಸಿನಿಮಾ ವಿಷಯಕ್ಕೆ ಬಂದರೆ ಅದಕ್ಕೂ ಒಂದು ಟಿವಿ ಕಾರ್ಯಕ್ರಮ ವೇದಿಕೆಯಾಗಿದೆ. ಇತ್ತೀಚೆಗೆ ಜಗ್ಗೇಶ್ ಅವರು ಪುನೀತ್ ರಾಜ್‍ಕುಮಾರ್ ನಡೆಸಿಕೊಡುವ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ತಮಾಷೆ ಮಾಡುತ್ತಾ ಮಾತನಾಡುವಾಗ ಇಬ್ಬರೂ ನಟರು ಒಂದಿಷ್ಟು ನೆನಪುಗಳನ್ನ ಮೆಲುಕು ಹಾಕಿದ್ದಾರೆ.


ಆಗಲೇ ಜಗ್ಗೇಶ್​ ಅವರು ಅಪ್ಪು ಜತೆ ಸಿನಿಮಾ ಮಾಡುವ ಬಗ್ಗೆಯೂ ಮಾತನಾಡಿದ್ದಾರೆ. ಈ ವಿಷಯ ಕೇಳಿದ್ದೇ ತಡ ಇಬ್ಬರ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಈ ಜೋಡಿಯ ಯಾವಾಗ ಸಿನಿಮಾ ಪ್ರಕಟವಾಗಲಿದೆ, ನಿರ್ದೇಶಕರು  ಯಾರು ಎಂದೆಲ್ಲ  ತಲೆ ಕೆಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Viral News: ಹೆಂಡತಿಗಾಗಿ ವಿಮಾನದಲ್ಲಿ 6 ಗಂಟೆ ನಿಂತುಕೊಂಡೇ ಪ್ರಯಾಣಿಸಿದ ಗಂಡ..!

ನವರಸ ನಾಯಕ ಜಗ್ಗೇಶ್ ಡಾ.ರಾಜ್‍ಕುಮಾರ್ ಅವರ ದೊಡ್ಡ ಅಭಿಮಾನಿ. ಹಾಗೆ ಅವರ ಮಗ ಪುನೀತ್ ಅಂದರೂ ಒಂದು ರೀತಿಯ ಅಭಿಮಾನ. ಅದರಂತೆ ಪುನೀತ್​ ಅವರಿಗೂ ಜಗ್ಗೇಶ್​ ಅವರ ಬಗ್ಗೆ ತುಂಬಾ ಪ್ರೀತಿ ಹಾಗೂ ಅಭಿಮಾನ ಇದೆ. ಅಭಿನಯದ ಆಗರವೇ ಆಗಿರುವ ಈ ಜೋಡಿ ಬೆಳ್ಳಿತೆರೆಯ ಮೇಲೆ ಮನರಂಜನೆಯ ರಸದೌತಣ ಉಣಬಡಿಸುವುದರಲ್ಲಿ ಅನುಮಾನವೇ ಇಲ್ಲ. ಆದಷ್ಟು ಬೇಗೆ ಈ ಕೆಲಸಕ್ಕೆ ಕಾಲ ಕೂಡಿಬರಲಿ ಎಂದು ಆಶಿಸೋಣ.

 Pooja Hegde: ಕ್ಯೂಟ್​ ಲುಕ್​ನಲ್ಲಿ ​ಗ್ಲಾಮರ್​ ಗೊಂಬೆ ಪೂಜಾ ಹೆಗ್ಡೆ..!
First published: September 9, 2019, 4:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories