RIP Puneeth Rajkumar: ಸ್ಯಾಂಡಲ್​ವುಡ್​ ಯುವರತ್ನ ಪುನೀತ್​ ರಾಜ್​ಕುಮಾರ್​ ವಿಧಿವಶ: ಇಲ್ಲಿದೆ ನಟನ ಸಿನಿ ಜರ್ನಿ..!

1985ರಲ್ಲಿ ತೆರೆಕಂಡ ಬೆಟ್ಟದ ಹೂವು ಚಿತ್ರಕ್ಕಾಗಿ ಪುನೀತ್​ ರಾಷ್ಟ್ರಪ್ರಶಸ್ತಿ ಒಲಿದು ಬಂದಿತ್ತು. ಚಲಿಸುವ ಮೋಡಗಳು ಹಾಗೂ ಎರಡು ಕನಸು ಚಿತ್ರದಲ್ಲಿ ಪುನೀತ್​ ನಟನೆಗೆ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಕೂಡ ದೊರೆತಿತ್ತು.

ಪ್ರೀತಿಯ ಅಪ್ಪು ಇನ್ನಿಲ್ಲ

ಪ್ರೀತಿಯ ಅಪ್ಪು ಇನ್ನಿಲ್ಲ

  • Share this:
ಸ್ಯಾಂಡಲ್​ವುಡ್​ನ ನಟ ಸಾರ್ವಭೌಮ, ಪವರ್​ ಸ್ಟಾರ್ ಎಂದು ಕರೆಸಿಕೊಳ್ಳುವ ನಟ ಪುನೀತ್ ರಾಜ್​ಕುಮಾರ್​ ಅಭಿಮಾನಿಗಳಿಗೆ ಮಾತ್ರ ಪ್ರೀತಿಯ ಅಪ್ಪು. 46 ವರ್ಷದ ನಟನಿಗೆ ಇಂದು ಮುಂಜಾನೆ ವ್ಯಾಯಾಮ ಮಾಡುವಾಗ ಎದೆ ನೋವು ಕಾಣಿಸಿಕೊಂಡಿತ್ತು. ಬೆಳಿಗ್ಗೆ 11:30ಕ್ಕೆ ಪುನೀತ್​ ಅವರಿಗೆ ಹೃದಯಾಘಾತವಾಗಿದ್ದು, ಮೊದಲು ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ನಂತರ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಪತ್ನಿ, ಮಕ್ಕಳಾದ ವಂದಿತಾ, ಧ್ರುತಿ , ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನುಅಗಲಿದ್ದಾರೆ. ಶಾಲೆಗೆ ಹೋಗುವ ವಯಸ್ಸಿನಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡ ಅಣ್ಣಾವ್ರ ವಂಶದ ಕುಡಿ ಈ ಪವರ್​ ಸ್ಟಾರ್. 1985ರಲ್ಲಿ ತೆರೆಕಂಡ ಬೆಟ್ಟದ ಹೂವು ಚಿತ್ರಕ್ಕಾಗಿ ಪುನೀತ್​ ರಾಷ್ಟ್ರಪ್ರಶಸ್ತಿ ಒಲಿದು ಬಂದಿತ್ತು. ಚಲಿಸುವ ಮೋಡಗಳು ಹಾಗೂ ಎರಡು ಕನಸು ಚಿತ್ರದಲ್ಲಿ ಪುನೀತ್​ ನಟನೆಗೆ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಕೂಡ ದೊರೆತಿತ್ತು.

ಯಾವುದೇ ಪಾತ್ರಗಳನ್ನಾದರೂ ನೀರು ಕುಡಿದಷ್ಟು ಸುಲಭವಾಗಿ ಅಭಿನಯಿಸುವ ಈ ನಟ ಕನ್ನಡ ಸಿನಿ ರಂಗದಲ್ಲಿ 45 ವರ್ಷಗಳನ್ನು ಕಳೆದಿದ್ದಾರೆ. ಹೌದು, 46 ವರ್ಷದ ನಟ ಪುನೀತ್​ ರಾಜ್​ಕುಮಾರ್​ ಅವರು  ಪುನೀತ್​ ಒಂಭತ್ತು ತಿಂಗಳ ಮಗುವಾಗಿರುವಾಗಲೇ ರಾಜ್​ಕುಮಾರ್​ ಅವರ ಅಭಿನಯದ 'ಪ್ರೇಮದ ಕಾಣಿಕೆ' ಸಿನಿಮಾದಲ್ಲಿ ಅಭಿನಯಿಸಿದ್ದರು. 1975 ಮಾರ್ಚ್​ 17ರಂದು ಈ ಸಿನಿಮಾದ ಚಿತ್ರೀಕರಣ ಆರಂಭವಾಗಿ, 1976 ಫೆಬ್ರವರಿ 28ರಂದು ತೆರೆಕಂಡಿತ್ತು. ವಿ. ಸೋಮಶೇಖರ್​ ನಿರ್ದೇಶನದ ಈ ಸಿನಿಮಾದಲ್ಲಿ ಆರತಿ, ಜಯಮಾಲ ಅಭಿನಯಿಸಿದ್ದರು. ಜಯದೇವಿ ಫಿಲ್ಸ್ಮ್​ ಅಡಿ​ ನಿರ್ಮಾಣವಾಗಿದ್ದ ಈ ಚಿತ್ರ ಆ ಕಾಲಕ್ಕೆ ಸೂಪರ್​ ಹಿಟ್​ ಆಗಿತ್ತು.

Power Star Puneeth Rajkumar Health Updates: Actor Puneeth Rajkumar health very critical due to hearth attack
ನಟ ಪುನೀತ್ ರಾಜ್​ಕುಮಾರ್


ಈ ಸಿನಿಮಾದಲ್ಲಿ ಪುನೀತ್​ಗೆ ಅವಕಾಶ ಸಿಕ್ಕಿದ್ದೂ ಒಂದು ಆಶ್ಚರ್ಯ. ಈ ಸಿನಿಮಾದಲ್ಲಿ ರಾಜಣ್ಣನ ಮಗುವಾಗಿ ಅಭಿನಯಿಸಲು ಮಕ್ಕಳನ್ನು ಕರೆತರಲಾಗಿತ್ತು. ಚಿತ್ರೀಕರಣ ಆರಂಭವಾದರೂ ಮಕ್ಕಳು ಅಳು ನಿಲ್ಲಿಸುತ್ತಿರಲಿಲ್ಲವಂತೆ. ಇದರಿಂದಾಗಿ ಸೆಟ್​ನಲ್ಲೇ ಇದ್ದ ಪಾರ್ವತಮ್ಮ ಅವರ ಬಳಿಯಿದ್ದ ಪುನೀತ್​ರನ್ನು ಅಣ್ಣಾವ್ರು ಕೇಳಿ ಸಿನಿಮಾದಲ್ಲಿ ಇವನ್ನನ್ನೇ ಎತ್ತುಕೊಂಡು ಚಿತ್ರೀಕರಿಸಲು ಪ್ರಯತ್ನಿಸೋಣ ಎಂದಿದ್ದರಂತೆ. ಇಲ್ಲಿಂದ ಅಪ್ಪು ಸಿನಿ ಜರ್ನಿ ಆರಂಭವಾಗಿತ್ತು.ನಂತರ ರಾಜಣ್ಣನ ಜತೆ ಪುನೀತ್​ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದರು.

ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿ ಪಡೆದ ನಟ

1985ರಲ್ಲಿ ಪುನೀತ್​ ಅಭಿನಯದ 'ಬೆಟ್ಟದ ಹೂವು' ಸಿನಿಮಾದಲ್ಲಿನ ಅಭಿನಯಕ್ಕೆ ಅಪ್ಪುಗೆ ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಪುನೀತ್​ ನಿಜವಾದ ಹೆಸರು ಲೋಹಿತ್. ಡಾ. ರಾಜ್​ ಅಭಿನಯದ 'ಪರಶುರಾಮ' ಸಿನಿಮಾದಲ್ಲಿ ಅಭಿನಯಿಸುವಾಗ ಅಪ್ಪು ಹೆಸರನ್ನು ಪುನೀತ್​ ಎಂದು ಬದಲಾಯಿಸಲಾಯಿತು.

ಲೋಹಿತ್​ನಿಂದ ಪುನೀತ್​ ಆದ ಕತೆ

ಇನ್ನು, ಅಪ್ಪು ಎಂದು ಅವರನ್ನು ಮನೆಯಲ್ಲಿ ಮುದ್ದಾಗಿ ಕರೆಯಲಾಗುತ್ತದೆ. ಅದೇ ಹೆಸರನ್ನು ಅವರು ನಾಯಕನಾಗಿ ಅಭನಯಿಸಿದ ಮೊದಲ ಚಿತ್ರ ಇಡಲಾಗಿತ್ತು. 2002ರಲ್ಲಿ ತೆರೆಕಂಡ ಅಪ್ಪು ಸಿನಿಮಾ ಮೂಲಕ ಪುನೀತ್​ ಪೂರ್ಣ ಪ್ರಮಾಣದ ನಟನಾಗಿ ಸ್ಯಾಂಡಲ್​ವುಡ್​ಗೆ ಕಾಲಿಟ್ಟರು. ಅಲ್ಲಿಂದ ಇಲ್ಲಿಯವರೆಗೆ ಸುಮಾರು 25 ಸಿನಿಮಾಗಳಲ್ಲಿ ಪುನೀತ್​ ನಟಿಸಿದ್ದಾರೆ. ಅಭಿ ಸಿನಿಮಾದಲ್ಲಿನ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು. 'ಬಿಂದಾಸ್​', 'ರಾಜಕುಮಾರ', 'ದೊಡ್ಮನೆ ಹುಡ್ಗ', 'ಹುಡುಗರು', 'ಜಾಕಿ', 'ನಿನ್ನಿಂದಲೇ', 'ನಟಸಾರ್ವಭೌಮ' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಪುನೀತ್​ ಅಭಿನಯಿಸಿದ್ದಾರೆ. ಇತ್ತೀಚೆಗಷ್ಟೆ ಅವರ ಅಭಿನಯದ ಯುವರತ್ನ ತೆರೆ ಕಂಡಿತ್ತು.

ಕವಲುದಾರಿ, ಮಾಯಾ ಬಜಾರ್​ ಸಿನಿಮಾಗಳನ್ನು ತಮ್ಮ ಹೋಂ ಬ್ಯಾನರ್​ ಪಿಆರ್​ಕೆ ಪ್ರೊಡಕ್ಷನ್ಸ್​ ಅಡಿ ನಿರ್ಮಿಸಿದ್ದಾರೆ. ಇನ್ನು ಕಿರುತೆರೆಯಲ್ಲಿ ಕೋಟ್ಯಧಿಪತಿ ಕಾರ್ಯಕ್ರಮದ ನಿರೂಪಕರಾಗಿಯೂ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಪವರ್​ ಸ್ಟಾರ್​ Puneeth Rajkumarಗೆ ಲಘು ಹೃದಯಾಘಾತ: ಆಸ್ಪತ್ರೆಗೆ ಭೇಟಿ ಕೊಟ್ಟ ಮುಖ್ಯಮಂತ್ರಿ-ನಟ ಯಶ್​

ಪುನೀತ್​ ಅವರ ಕೈಯಲ್ಲಿ ಸದ್ಯ ಎರಡು ಸಿನಿಮಾಗಳಿದ್ದವು. ಒಂದು ಜೇಮ್ಸ್ ಹಾಗೂ ಮತ್ತೊಂದು ದ್ವಿತ್ವ. ಜೇಮ್ಸ್​ ಇನ್ನೂ ಚಿತ್ರೀಕರಣದ ಹಂತದಲ್ಲಿದ್ದು, ದ್ವಿತ್ವ ಸಿನಿಮಾವನ್ನು ಹೊಂಬಾಳೆ ಫಿಲಂಸ್​ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾಗೆ ಲೂಸಿಯಾ ಪವನ್​ ಕುಮಾರ್ ಅವರು ಆ್ಯಕ್ಷನ್ ಕಟ್​ ಹೇಳಲಿದ್ದಾರೆ. ಕೆಲ ಸಮಯದ ಹಿಂದೆಯಷ್ಟೆ ಈ ಸಿನಿಮಾದ ಪೋಸ್ಟರ್ ರಿಲೀಸ್​ ಆಗಿತ್ತು.
Published by:Anitha E
First published: