Puneeth Rajkumar: ಅಪ್ಪು ಜನ್ಮ ದಿನಕ್ಕೆ ದೊಡ್ಮನೆಯ ಯುವರಾಜನ ಅಬ್ಬರ ಶುರು!

ಅಪ್ಪು ಜನ್ಮ ದಿನಕ್ಕೆ ಯುವರಾಜನ ಬಿಗ್ ಅನೌನ್ಸ್​ಮೆಂಟ್

ಅಪ್ಪು ಜನ್ಮ ದಿನಕ್ಕೆ ಯುವರಾಜನ ಬಿಗ್ ಅನೌನ್ಸ್​ಮೆಂಟ್

ದೊಡ್ಮನೆ ಯುವರಾಜ್ ಕುಮಾರ್ ಮೊದಲ ಸಿನಿಮಾದ ಬಿಗ್ ಅಪ್​ಡೇಟ್ಸ್ ಇದೇ ದಿನ ಸಿಗುತ್ತಿದೆ. ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ತಮ್ಮ ಚಿತ್ರದ ಒಂದು ಟೀಸರ್ ರೆಡಿ ಮಾಡುತ್ತಿದ್ದಾರೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಕನ್ನಡ ಚಿತ್ರರಂಗಕ್ಕೆ ಮಾರ್ಚ್​​-17 ವಿಶೇಷ (Puneeth Rajkumar Birthday) ದಿನ ಆಗಿದೆ. ಪವರ್ ಸ್ಟಾರ್ ಪುನೀತ್ ಜನ್ಮ ದಿನವನ್ನ ವಿಶೇಷ ದಿನವಾಗಿಯೇ ಸೆಲೆಬ್ರೇಟ್ (Power Star Puneeth) ಮಾಡಲಾಗುತ್ತಿದೆ. ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಮನೆ ಮಾಡಿರೋ ಪುನೀತ್ ಜನ್ಮ ದಿನಕ್ಕೆ ಈಗಲೇ ಭಾರೀ (Appu Birthday Special Celebration) ಪ್ಲಾನ್ ಕೂಡ ಆಗಿದೆ. ಅನೇಕ ಚಿತ್ರಗಳು ಈಗಾಗಲೇ ಪುನೀತ್ ರಾಜ್​ಕುಮಾರ್​ ಅವರಿಗೆ ತಮ್ಮದೇ (Puneeth Movies) ರೀತಿಯಲ್ಲಿ ಗೌರವ ಸಲ್ಲಿಸುತ್ತಿದ್ದಾರೆ. ಚಿತ್ರದ ಟ್ರೈಲರ್ ಇರಬಹುದು, ಇಲ್ಲವೇ ಸಿನಿಮಾದ ಆರಂಭವೇ ಆಗಿರಬಹುದು ಅಲ್ಲಿ ಪುನೀತ್ ಭಾವ ಚಿತ್ರ ಇರುತ್ತದೆ.  ಸದಾ ಅಮರವಾಗಿರೋ ಅಪ್ಪು ಹೀಗೆ ಎಲ್ಲರ ಮನದಲ್ಲಿ ಈಗ ಹಾಗೆ ಇದ್ದಾರೆ.


ಅಪ್ಪು ಎಂದೆಂದೂ ಅಮರ-ಎಲ್ಲರ ಮನದಲ್ಲಿ ಇನ್ನೂ ಜೀವಂತ


ಅಪ್ಪು ಅಮರ ಅನ್ನೋದು ಅಷ್ಟೇ ಸತ್ಯ. ಅಭಿಮಾನಿಗಳ ಮನದಲ್ಲಿ ಇನ್ನೂ ಜೀವಂತ. ಹೌದು, ಅಪ್ಪು ಎಲ್ಲರ ಹೃದಯದಲ್ಲಿ ಹಾಗೆ ಇದ್ದಾರೆ. ಸಿನಿ ಪ್ರೇಮಿಗಳಿಗೆ ಚಿತ್ರಗಳ ಮೂಲಕ ದರ್ಶನ ಕೊಡ್ತಾನೇ ಇದ್ದಾರೆ.


Power Star Puneeth Rajkumar Birthday Celebrate as a Big Festival
ಅಪ್ಪು ಜನ್ಮ ದಿನಕ್ಕೆ ಯುವರಾಜನ ಬಿಗ್ ಅನೌನ್ಸ್​ಮೆಂಟ್


ಅಪ್ಪು ಯಾರನ್ನೂ ದ್ವೇಷಿಸಲಿಲ್ಲ. ಪ್ರೀಸಿಸುತ್ತಲೇ ಬಂದವ್ರು. ನಗು ಮೊಗದ ಸ್ವಾಗತದಿಂದಲೇ ಎಂತವರ ಹೃದಯವನ್ನ ಗೆದ್ದು ಬಿಟ್ಟವರು. ಅಪ್ಪು ಎಂದೂ ಮರೆತು ಹೋಗೋದಿಲ್ಲ. ಅಪ್ಪು ಎಲ್ಲರಲ್ಲೂ ಬೆರೆತು ಹೋಗಿದ್ದಾರೆ.




ಎಲ್ಲರ ಮನದಲ್ಲಿ ಅಪ್ಪು ಸದಾ ಅಮರ
ಅಭಿಮಾನಿಗಳ ಎದೆಯಲ್ಲಿ ಅಮರವಾಗಿಯೇ ಉಳಿದು ಬಿಟ್ಟಿದ್ದಾರೆ. ಮಕ್ಕಳ ಮನದಲ್ಲಿ ಅಪ್ಪು ಮಾಮಾ ಆಗಿ ಹೊಳೆಯುತ್ತಲೇ ಇದ್ದಾರೆ. ಅಪ್ಪು ಪವರ್ ಎಂದೂ ಮುಗಿಯೋದೇ ಇಲ್ಲ ಬಿಡಿ.


ಅಪ್ಪು ಅಮರ ಅನ್ನೋದು ಎಲ್ಲರಿಗೂ ಗೊತ್ತಿದೆ. ಈ ಅಪ್ಪು ಅಮರ ಜನ್ಮದಿನಕ್ಕೆ ಹತ್ತು ಹಲವು ವಿಶೇಷತೆಗಳು ಪ್ಲಾನ್ ಆಗಿವೆ. ಮಾರ್ಚ್​-17 ರಂದು ಇಡೀ ಕನ್ನಡ ಇಂಡಸ್ಟ್ರಿ ಪುನೀತ್ ಜನ್ಮ ದಿನವನ್ನ ತನ್ನದೆ ರೀತಿಯಲ್ಲಿ ಆಚರಿಸೋಕೆ ಪ್ಲಾನ್ ಮಾಡಿದೆ.


ಅಪ್ಪು ಜನ್ಮ ದಿನಕ್ಕೆ ಯುವರಾಜನ ಬಿಗ್ ಅನೌನ್ಸ್​ಮೆಂಟ್
ದೊಡ್ಮನೆ ಯುವರಾಜ್ ಕುಮಾರ್ ಮೊದಲ ಸಿನಿಮಾದ ಬಿಗ್ ಅಪ್​ಡೇಟ್ಸ್ ಇದೆ ದಿನ ಸಿಗುತ್ತಿದೆ. ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ತಮ್ಮ ಚಿತ್ರದ ಒಂದು ಟೀಸರ್ ರೆಡಿ ಮಾಡುತ್ತಿದ್ದಾರೆ.


ಈ ಟೀಸರ್ ಶೂಟಿಂಗ್ ಕೂಡ ಈಗಾಗಲೇ ಶುರು ಆಗಿದೆ. ಈ ಟೀಸರ್​​ನಲ್ಲಿ ಏನೆಲ್ಲ ಇರುತ್ತದೆ ಅನ್ನುವ ಕುತೂಹಲ ಕೂಡ ಈಗ ಮೂಡಿದೆ. ಹೊಂಬಾಳೆ ಪ್ರೋಡಕ್ಷನ್ ಈ ಚಿತ್ರದ ಮೂಲಕವೇ ಯುವರಾಜ್​ ಕುಮಾರ್​ ಕನ್ನಡ ಇಂಡಸ್ಟ್ರೀಗೆ ಕಾಲಿಡುತ್ತಿದ್ದಾರೆ.


ಪುನೀತ್ ಜನ್ಮ ದಿನಕ್ಕೆ ಪ್ಯಾನ್ ಇಂಡಿಯಾ ಚಿತ್ರ ಅರ್ಪಣೆ


ಕನ್ನಡ ಚಿತ್ರರಂಗದ ನಿರ್ದೇಶಕ ಆರ್. ಚಂದ್ರು ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದಾರೆ. ಕೋಟಿ ಬಜೆಟ್​​ನ ತಮ್ಮ ಕಬ್ಜ ಚಿತ್ರವನ್ನ ಪುನೀತ್ ರಾಜ್​ಕುಮಾರ್ ಅವರಿಗೆ ಅರ್ಪಿಸುತ್ತಿದ್ದಾರೆ.


Power Star Puneeth Rajkumar Birthday Celebrate as a Big Festival
ಪುನೀತ್ ಜನ್ಮ ದಿನಕ್ಕೆ ಪ್ಯಾನ್ ಇಂಡಿಯಾ ಚಿತ್ರ ಅರ್ಪಣೆ


ಪುನೀತ್ ಜನ್ಮ ದಿನದಂದು ಈ ಚಿತ್ರವನ್ನ ರಿಲೀಸ್ ಮಾಡುತ್ತಿದ್ದು, ಮಾರ್ಚ್-17 ರಂದು ಈ ಚಿತ್ರ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಸಿನಿಮಾ ಪ್ರೇಮಿಗಳು ಈ ಚಿತ್ರವನ್ನ ಏಕಕಾಲದಲ್ಲಿಯೇ ಎಲ್ಲೆಡೆ ನೋಡಬಹುದಾಗಿದೆ.


ಅಪ್ಪು ಜನ್ಮ ದಿನಕ್ಕೆ ರಿಯಲ್ ಅಬ್ಬರ ಬಲು ಜೋರು
ಪುನೀತ್ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಜನ್ಮ ದಿನದಂದು ಚಿತ್ರ ರಿಲೀಸ್ ಆಗುತ್ತಿದೆ ಅಂತಲೇ ತುಂಬಾನೆ ಖುಷಿಪಟ್ಟಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಫ್ಯಾನ್ಸ್ ಕೂಡ ಹಬ್ಬ ಮಾಡುತ್ತಾರೆ.


ಇದನ್ನೂ ಓದಿ: Rishabh Shetty: 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ'ಯನ್ನು ಪುನೀತ್, ಭಗವಾನ್​ಗೆ ಅರ್ಪಿಸಿದ ರಿಷಬ್ ಶೆಟ್ಟಿ, ಪಂಚೆಯಲ್ಲಿ ಮಿಂಚಿದ ನಟ!


ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಫ್ಯಾನ್ಸ್ ಸಹ ಈ ಚಿತ್ರದ ಮೂಲಕ ತಮ್ಮ ನಾಯಕನ ಪೊಲೀಸ್ ಖದರ್ ನೋಡಬಹುದಾಗಿದೆ. ಒಟ್ನಲ್ಲಿ, ಪುನೀತ್ ಜನ್ಮ ದಿನ ವಿಶೇಷ ದಿನ ಅಂತಲೇ ಎಲ್ಲರೂ ಸೆಲೆಬ್ರೇಟ್ ಮಾಡುತ್ತಿದ್ದಾರೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು