ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ(Puneeth Rajkumar Birthday) ಅಂದರೆ, ಅಭಿಮಾನಿಗಳಿಗೆ ಮನೆ ಹಬ್ಬವಿದ್ದಂತೆ. ಆ ದಿನ ತಮ್ಮದೇ ಹುಟ್ಟುಹಬ್ಬವೇನೋ ಎಂಬುವಂತೆ ಆಚರಣೆ ಮಾಡಿಕೊಳ್ಳುತ್ತಿದ್ದರು. ಆ ದಿನ ತಮ್ಮ ನೆಚ್ಚಿನ ನಟನಿಗೆ ಅಭಿಮಾನಿಗಳಿಂದ ವಿಶೇಷ ಉಡುಗೊರೆ(Special Gift)ಗಳು ಸಿಗುತ್ತಿದ್ದವು. ಭಿನ್ನ-ವಿಭಿನ್ನವಾದ ಕೇಕ್ಗಳನ್ನು ತರುತ್ತಿದ್ದರು. ಹೂವಿನಹಾರ ಈ ಎಲ್ಲಾ ಸಂಭ್ರಮ ಪ್ರತಿ ವರ್ಷ ಪುನೀತ್ ರಾಜ್ಕುಮಾರ್ ಮನೆಯ ಮುಂದೆ ಕಾಣಿಸುತ್ತಿತ್ತು. ಆದರೆ, ಈ ವರ್ಷ ಬೇರೆಯದ್ದೇ ರೀತಿಯ ವಾತಾವರಣ ಇಡೀ ಕರುನಾಡಿನಲ್ಲಿ ಸೃಷ್ಟಿಯಾಗಿದೆ. ಅಪ್ಪು(Appu) ನಮ್ಮೊಂದಿಗೆ ಇಲ್ಲದಿದ್ದರೂ ಅವರು ಹುಟ್ಟಿದ ಹಬ್ಬವನ್ನು ನೋವಿನಿಂದಲೇ ಅವರ ಅಭಿಮಾನಿಗಳು ಆಚರಿಸುತ್ತಿದ್ದಾರೆ. ಹಿಂದೆಂದೂ ಯಾವ ನಟಿರಗೂ ಮಾಡಿರದ ಹಾಗೇ ಅಪ್ಪು ಅಭಿಮಾನಿಗಳು ‘ಜೇಮ್ಸ್’(James) ಜಾತ್ರೆ ಶುರು ಮಾಡಿದ್ದಾರೆ. ಎಲ್ಲಿ ನೋಡಿದರೂ ಅಲ್ಲಿ ಅಪ್ಪು ಬ್ಯಾನರ್ (Banner), ಕಟೌಟ್ಗಳು ರಾರಾಜಿಸುತ್ತಿವೆ. ಇದರ ನಡುವೆ ಮತ್ತೊಂದು ಇಂಟ್ರೆಸ್ಟಿಂಗ್ ವಿಡಿಯೋ(Interesting Video)ವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಲೈಫ್ ಬಾಯ್ ಸೋಪಿನಲ್ಲಿ ಅರಳಿದ ‘ಜೇಮ್ಸ್’
ಮಂಗಳೂರಿ(Mangalore)ನಲ್ಲೊಬ್ಬ ಅಪ್ಪಟ ಅಪ್ಪು ಅಭಿಮಾನಿಯೊಬ್ಬರು ಲೈಫ್ ಬಾಯ್ ಸೋಪ್ನಲ್ಲಿ ಪುನೀತ್ ರಾಜ್ಕುಮಾರ್ ಅವರ ಚಿತ್ರ ರಚಿಸಿ ತಮ್ಮ ಅಭಿಮಾನವನ್ನು ವಿಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಂಗಳೂರಿನ ಗಣೇಶಪುರ ನಿವಾಸಿಯಾದ ಕಲಾವಿದ ದೇವಿಕಿರಣ್ ಸೋಪ್ನಲ್ಲಿ ಅಪ್ಪು ಚಿತ್ರ ಬಿಡಿಸಿದ್ದಾರೆ. ಕೇವಲ ಎರಡು ಗಂಟೆಗಳಲ್ಲಿ ಸೋಪ್ ಅನ್ನು ಗುಂಡು ಪಿನ್ ಮೂಲಕ ಕೊರೆದು ಪುನೀತ್ ರಾಜ್ಕುಮಾರ್ ಅವರ ಚಿತ್ರ ಅರಳಿಸಿದ್ದಾರೆ.
ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ವಿಡಿಯೋ!
ಮೊದಲನೇ ಬಾರಿ ಸರಿಯಾಗಿ ಬಂದಿರಲಿಲ್ಲ. ಎರಡನೇ ಬಾರಿ ಚೆನ್ನಾಗಿ ಬಂದಿದ್ದು, ಆ ಚಿತ್ರ ರಚನೆಯ ವಿಡಿಯೋವನ್ನು ದೇವಿಕಿರಣ್ ಅವರು ಫೇಸ್ಬುಕ್ನಲ್ಲಿ ಮಂಗಳವಾರ ಅಪ್ಲೋಡ್ ಮಾಡಿದ್ದರು. ಇದೀಗ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದು, ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಈ ವಿಡಿಯೋಗಳನ್ನು ನೋಡಿ ಕಣ್ಣೀರು ಹಾಕುತ್ತಿದ್ದಾರೆ ಅಪ್ಪು ಅಭಿಮಾನಿಗಳು. ಒಂದೇ ಒಂದು ಸಾರಿ ಬನ್ನಿ ಪ್ಲೀಸ್ ಎಂದು ಆಕಾಶ ನೋಡಿ ಕೂಗುತ್ತಿದ್ದಾರೆ. ಅಪ್ಪು ಇಲ್ಲ ಎಂದು ನೆನೆಸಿಕೊಂಡು ಕಣ್ಣೀರಿಡುತ್ತಿದ್ದಾರೆ.
ಇದನ್ನೂ ಓದಿ: ಅಪ್ಪು ಬ್ಯಾನರ್ ಹಿಡಿದು ಬಾನಂಗಳದಲ್ಲಿ ಹಾರಾಡುತ್ತಿದೆ ಪುಷ್ಪಕ ವಿಮಾನ!
ಬಾನಂಗಳದಲ್ಲಿ ಹಾರಾಡುತ್ತಿದೆ ಪುಷ್ಪಕ ವಿಮಾನ
ರಾಜ್ಯದ ಉದ್ದಗಲಕ್ಕೂ ಅಭಿಮಾನಿಗಳು ತಮ್ಮದೇ ರೀತಿ ಪುನೀತ್ ಹಬ್ಬ ಆಚರಿಸುತ್ತಿದ್ದಾರೆ. ಬೆಂಗಳೂರಿನ ಬಾನಂಗಳಲ್ಲಿ ಪುಟ್ಟ ವಿಮಾನವೊಂದು ಪುನೀತ್ ಹುಟ್ಟು ಹಬ್ಬದ ಬಾವುಟ ಹಿಡಿದು ಹಾರಾಡುತ್ತಿದೆ. ಬಾನಿಗೊಂದು ಎಲ್ಲೆ ಎಲ್ಲಿದೆ ಅಂತ ಅಪ್ಪು ಹುಟ್ಟುಹಬ್ಬದ ಬ್ಯಾನರ್ ಹಿಡಿದು ಅಭಿಮಾನಿಗಳಿಗೆ ಶುಭಾಶಯಗಳನ್ನು ಕೋರುತ್ತಿದೆ.
ಇದನ್ನೂ ಓದಿ : `ಜೇಮ್ಸ್’ ರಿಲೀಸ್ ದಿನವೇ ಗಂಧದ ಗುಡಿಯ ದರ್ಶನ! ಅಪ್ಪು ಲುಕ್ ಹೇಗಿದೆ ನೋಡಿ.
ಸಂಜೆ 4ರಿಂದ ಮತ್ತೆ ಹಾರಾಡಲಿದೆ ವಿಮಾನ!
ಸಂಜೆ 4 ಗಂಟೆ ಹೊತ್ತಿಗೆ ಮತ್ತೆ ಹಾರಾಟ ನಡೆಸಲಿದೆ. ಈ ಬಾರಿ ಕೆ ಆರ್ ಮಾರುಕಟ್ಟೆ, ವಿವಿ ಪುರಂ, ಬನಶಂಕರಿ, ಮೈಸೂರು ರಸ್ತೆ, ಗೋಪಾಲನ್ ಮಾಲ್, ಜೆಪಿ ನಗರ, ಸಿಲ್ಕ್ ಬೋರ್ಡ್, ಬೆಲ್ಲಂದೂರು, ದೊಮ್ಮಲೂರು, ಕೆಆರ್ ಪುರಂ, ಬನಶಂಕರಿ, ಬಾಣಸವಾಡಿ, ಮಾನ್ಯತಾ ಟೆಕ್ ಪಾರ್ಕ್ ಬಳಿಕ ಜಕ್ಕೂರು ವಿಮಾನ ನಿಲ್ದಾಣ ಸೇರಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ