ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ಅಭಿನಯದ ನಟಸಾರ್ವಭೌಮ (Natasaarvabhowma) ಚಿತ್ರ ರಿಲೀಸ್ ಆಗಿ ನಾಲ್ಕು ವರ್ಷ ಕಳೆದಿದೆ. ಅಪ್ಪು ಸಿನಿಮಾ ಡೈರೆಕ್ಟ್ ಮಾಡಿರೋ ಡೈರೆಕ್ಟರ್ ಪವನ್ ಒಡೆಯರ್ ಆ ಒಂದು ವಿಷಯವನ್ನ ಮತ್ತೆ ನೆನಪಿಸಿಕೊಂಡಿದ್ದಾರೆ. ಅಪ್ಪು ಇಲ್ಲದ ಈ ದಿನಗಳಲ್ಲಿ (Power Star Puneeth Rajkumar) ಈ ವಿಷಯ ತಿಳಿದ ಪವರ್ ಫ್ಯಾನ್ಸ್, ಡೈರೆಕ್ಟರ್ ಪವನ್ ಒಡೆಯರ್ ಅವರಿಗೆ ಒಂದಷ್ಟು ಸಲಹೆಗಳನ್ನ ಕೊಟ್ಟಿದ್ದಾರೆ. ಆ ಸಲಹೆ ಏನು? ನಟಸಾರ್ವಭೌಮ ಚಿತ್ರದ ಕುರಿತು ಅಪ್ಪು ಫ್ಯಾನ್ಸ್ (Puneeth Fans) ಇನ್ನು ಏನ್ ಹೇಳ್ತಾರೆ? ಡೈರೆಕ್ಟರ್ ಪವನ್ ಒಡೆಯರ್ ತಮ್ಮ ಈ ಚಿತ್ರದ ಬಗ್ಗೆ ಈಗ ಏನ್ ಹೇಳ್ತಾರೆ? ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಪವನ್ ಹೇಳಿಕೊಂಡದ್ದೇನು? ಈ ಎಲ್ಲ ಮಾಹಿತಿ ಇಲ್ಲಿದೆ.
ಅಪ್ಪು ಚಿತ್ರದ ಬದುಕಿನ ಚಿತ್ರಕ್ಕೆ ನಾಲ್ಕು ವರ್ಷ ಪೂರ್ಣ
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರ ತುಂಬಾ ವಿಶೇಷವಾಗಿತ್ತು. ಪವರ್ ಸ್ಟಾರ್ ಪುನೀತ್ ಈ ಚಿತ್ರದ ಮೂಲಕ ಹೊಸ ರೀತಿಯ ಕಥೆಯಲ್ಲಿ ಅಭಿನಯಿಸಿದ್ದರು.
ಭೂತ-ಪ್ರೇತದಂತಹ ಕಥೆಗಳನ್ನ ಅಪ್ಪು ಅಲ್ಲಿವರೆಗೂ ಮಾಡಿರಲೇ ಇಲ್ಲ. ಆದರೆ ನಟಸಾರ್ವಭೌಮ ಚಿತ್ರದಲ್ಲಿ ಮೈ ಮೇಲೆ ದೆವ್ವ ಬರುವ ರೀತಿ ಅಭಿನಯಿಸಿದ್ದರು. ಇದನ್ನ ನೋಡಿ ಜನ ತುಂಬಾ ಇಷ್ಟಪಟ್ಟಿದ್ದರು.
ಪುನೀತ್ ಪಾತ್ರಕ್ಕಿತ್ತು ಸಖತ್ ಲಾಜಿಕಲ್ ಎಂಡ್!
ಪುನೀತ್ ರಾಜ್ಕುಮಾರ್ ತಮ್ಮ ಚಿತ್ರಗಳಲ್ಲಿ ಅದ್ಭುತ ಪಾತ್ರಗಳನ್ನ ಮಾಡಿದ್ದರು. ತಮ್ಮ ಚಿತ್ರಗಳ ಮೂಲಕ ಕ್ಲಾಸ್ ಮತ್ತು ಮಾಸ್ ಪ್ರೇಕ್ಷಕರಿಗೂ ಇಷ್ಟ ಆಗುತ್ತಿದ್ದರು. ನಟಸಾರ್ವಭೌಮ ಚಿತ್ರದಲ್ಲಿ ಅಪ್ಪು ವಿಶೇಷ ಪಾತ್ರವನ್ನ ನಿರ್ವಹಿಸಿದ್ದರು.
ನಿಜ ಜೀವನದಲ್ಲಿ ಭೂತ-ಪ್ರೇತ ಇಲ್ಲ ಅನ್ನೋದನ್ನ ಈ ಮೂಲಕ ಪ್ರೇಕ್ಷಕರಲ್ಲೂ ಜಾಗೃತಿ ಮೂಡಿಸಿದ್ದರು. ಈ ಚಿತ್ರ ನೋಡಿದ್ದ ಪ್ರತಿ ಪ್ರೇಕ್ಷಕನಿಗೂ ಈ ಬಗ್ಗೆ ಒಂದು ಕ್ಲಾರಿಟಿ ಸಿಕ್ಕಿತ್ತು.
ನಟಸಾರ್ವಭೌಮನಿಗೆ ಅನುಪಮಾ ಪರಮೇಶ್ವರನ್ ಸಾಥ್
ಮಲೆಯಾಳಂ ಭಾಷೆಯ ನಟಿ ಅನುಪಮಾ ಪರಮೇಶ್ವರನ್ ಈ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ಗೆ ಜೋಡಿ ಆಗಿದ್ದರು. ಈ ಮೂಲಕ ಕನ್ನಡಕ್ಕೂ ಅನುಪಮಾ ಪರಮೇಶ್ವರನ್ ಕಾಲಿಟ್ಟಿದ್ದರು.
ಅಪ್ಪು ಜೊತೆಗೆ ಅದ್ಭುತ ಪಾತ್ರವನ್ನ ಮಾಡಿದ್ದರು. ಕೊಲ್ಕತ್ತಾದಲ್ಲಿಯೇ ಹೆಚ್ಚು ಈ ಜೋಡಿಯ ಭಾಗವನ್ನ ಚಿತ್ರೀಕರಿಸಿದ್ದರು. ಚಿತ್ರದಲ್ಲಿ ನಟಿ ರಚಿತಾ ರಾಮ್ ಕೂಡ ಅಭಿನಯಿಸಿದ್ದರು.
ಇವರ ಪಾತ್ರಕ್ಕೆ ಇಲ್ಲಿದ್ದ ಗತ್ತು ಬೇರೆ ಇತ್ತು. ಆದರೆ ಇಲ್ಲಿ ರಚಿತಾ ಆಗಲಿ, ಅನುಪಮಾ ಪರಮೇಶ್ವರನ್ ಆಗಲಿ, ಯಾರೂ ದೆವ್ವದ ರೂಪದಲ್ಲಿ ಕಾಣಿಸಿಕೊಳ್ಳಲೇ ಇಲ್ಲ ಬಿಡಿ.
ರಾಕ್ ಲೈನ್ ವೆಂಕಟೇಶ್ ನಿರ್ಮಿಸಿದ್ದ ನಟಸಾರ್ವಭೌಮ
ನಟಸಾರ್ವಭೌಮ ಚಿತ್ರವನ್ನ ರಾಕ್ ಲೈನ್ ವೆಂಕಟೇಶ್ ನಿರ್ಮಿಸಿದ್ದರು. ಡೈರೆಕ್ಟರ್ ಪವನ್ ಒಡೆಯರ್ ಈ ಚಿತ್ರವನ್ನ ಅದ್ಭುತವಾಗಿಯೇ ನಿರ್ದೇಶನ ಮಾಡಿದ್ದರು. ಚಿತ್ರ ಪ್ರೇಮಿಗಳು ಇದನ್ನ ಬಹುವಾಗಿಯೇ ಮೆಚ್ಚಿಕೊಂಡಿದ್ದರು.
ಫೆಬ್ರವರಿ-07 2019 ರಂದು ರಾಜ್ಯದೆಲ್ಲೆಡೆ ಸಿನಿಮಾ ರಿಲೀಸ್ ಆಗಿತ್ತು. ಎಂದಿನಂತೆ ಚಿತ್ರಕ್ಕೆ ಒಳ್ಳೆ ಓಪನಿಂಗ್ ಕೂಡ ಪಡೆದುಕೊಂಡಿತ್ತು. ಅಪ್ಪು ಫ್ಯಾನ್ಸ್ ಅಂದು ದೊಡ್ಡ ಹಬ್ಬವನ್ನೆ ಮಾಡಿದ್ದರು.
ಓಪನ್ ದಿ ಬಾಟಲ್ ಹಾಡು ಸೂಪರ್ ಹಿಟ್
ಡಿ. ಇಮಾಮ್ ಸಂಗೀತದಲ್ಲಿ ಒಳ್ಳೆ ಹಾಡುಗಳು ಮೂಡಿ ಬಂದಿದ್ದವು. ಚಿತ್ರದಲ್ಲಿ ಅಪ್ಪು ನೃತ್ಯದಲ್ಲಿ ಓಪನ್ ದಿ ಬಾಟಲ್ ಹಾಡು ಹೆಚ್ಚು ವೈರಲ್ ಆಗಿತ್ತು. ಸಿನಿ ಪ್ರೇಮಿಗಳು, ಅಪ್ಪು ಅಭಿಮಾನಿಗಳು ಈ ಹಾಡನ್ನ ಬಹುವಾಗಿಯೇ ಮೆಚ್ಚಿಕೊಂಡಿದ್ದರು.
ಡೈರೆಕ್ಟರ್ ಪವನ್ ಒಡೆಯರ್ ಚಿತ್ರದ ಬಗ್ಗೆ ಈಗೇನಂತಾರೆ?
ನಟಸಾರ್ವಭೌಮ ರಿಲೀಸ್ ಆಗಿ ಈಗ ನಾಲ್ಕು ವರ್ಷ ಕಳೆದಿವೆ. ಈ ಚಿತ್ರವನ್ನ ನಿರ್ದೇಶಿಸಿದ ಖುಷಿ ತುಂಬಾನೇ ಇದೆ. ಇದೊಂದು ನನಗೆ ಅದ್ಭುತ ಅವಕಾಶ ಅಂತಲೇ ಪವನ್ ಒಡೆಯರ್, ನ್ಯೂಸ್-18 ಕನ್ನಡ ಡಿಜಿಟಲ್ಗೆ ತಿಳಿಸಿದ್ದಾರೆ.
ಪವನ್ ಒಡೆಯರ್ ತಮ್ಮ ಈ ಚಿತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೂ ತಿಳಿಸಿದ್ದಾರೆ. ಶೂಟಿಂಗ್ ವೇಳೆ ಪುನೀತ್ ಅವರೊಂದಿಗೆ ಇರೋ ತಮ್ಮ ಒಂದು ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.
ಪವರ್ ಸ್ಟಾರ್ ಪುನೀತ್ ಫ್ಯಾನ್ಸ್ ಏನಂತಾರೆ ಗೊತ್ತೇ?
ನಟಸಾರ್ವಭೌಮ ಒಂದು ಅದ್ಭುತ ಸಿನಿಮಾ. ಇದು ನನಗೆ ತುಂಬಾ ಇಷ್ಟ ಅಂತಲೇ ಕೆಲವು ಅಭಿಮಾನಿಗಳೂ ತಮ್ಮದೇ ರೀತಿ ಹೇಳಿಕೊಂಡಿದ್ದಾರೆ. ಇನ್ನು ಕೆಲವರು ಹಾರ್ಟ್ ರೂಪದ ಇಮೋಜಿ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಒಬ್ಬ ಅಭಿಮಾನಿಯಂತೂ ಡೈರೆಕ್ಟರ್ ಪವನ್ ಒಡೆಯರ್ ಗೆ ಒಂದು ಸಲಹೆಯನ್ನ ಕೂಡ ಕೊಟ್ಟಿದ್ದಾರೆ. ಪುನೀತ್ ಅವರ ಜನ್ಮ ದಿನಕ್ಕೆ ನೀವು ಒಂದು ಹಾಡನ್ನ ಬರೆದು ಡೆಡಿಕೇಟ್ ಮಾಡಿ ಅಂತಲೂ ಹೇಳಿದ್ದಾರೆ.
ಇದನ್ನೂ ಓದಿ: Wolf Movie: ಪ್ರಭುದೇವ ಚಿತ್ರದಲ್ಲಿ ವಸಿಷ್ಠ ಸಿಂಹ ಜರ್ನಲಿಸ್ಟ್!
ಹೀಗೆ ಅಪ್ಪು ಅಭಿಮಾನಿಗಳು ನಟಸಾರ್ವಭೌಮನನ್ನ ಮತ್ತೆ ಮತ್ತೆ ನೆನಪಿಸಿಕೊಂಡಿದ್ದಾರೆ. ಎಂದೂ ಮಾಸದ ಅಪ್ಪು ಯಾವಾಗಲೂ ಅಮರ ಅನ್ನೋದನ್ನ ತಮ್ಮ ಅಭಿಮಾನದ ಮೂಲಕ ತೋರಿಸುತ್ತಲೇ ಇದ್ದಾರೆ ಅಂತಲೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ