James: ಬ್ಲಾಕ್​ ಕಮಾಂಡೋ ಅವತಾರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್..!

ಭಾರತದ ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯವನ್ನು ಜೇಮ್ಸ್​ ಸಿನಿ ಬಳಗ ಪವರ್​ಫುಲ್​​ ಆಗಿ ಹೇಳಿದೆ.

ಜೇಮ್ಸ್

ಜೇಮ್ಸ್

  • Share this:
    ಇಂದು ಆಗಸ್ಟ್​ 15 ಸ್ವಾತಂತ್ರ್ಯ ದಿನಾಚರಣೆ. ಪವರ್ ಸ್ಟಾರ್​ ಪುನೀತ್ ರಾಜ್​ ಕುಮಾರ್​ ಅವರ ಹೊಸ ಸಿನಿಮಾ ಜೇಮ್ಸ್​ ಸಿನಿಮಾದ ಸ್ಲೋಗನ್ ಇಂದು ಭಾರೀ ಸದ್ದು ಮಾಡುತ್ತಿದೆ. ‘ಸಲಾಂ ಸೋಲ್ಜರ್​, ದೇಶಕ್ಕೆ ನೀನೇ ಪವರ್‘ ಇದು ಪುನೀತ್​ ರಾಜ್​​ಕುಮಾರ್​ ಅವರ ಜೇಮ್ಸ್​​ ಬಳಗದ ಹೊಸ ಸ್ಲೋಗನ್. ಭಾರತದ ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯವನ್ನು ಜೇಮ್ಸ್​ ಸಿನಿ ಬಳಗ ಪವರ್​ಫುಲ್​​ ಆಗಿ ಹೇಳಿದೆ.

    ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ ನಮ್ಮ ಭಾರತ. ಸದಾ ಎಲ್ಲರಲ್ಲೂ ಸಾಗುತ್ತಿರಲಿ ದೇಶಾಭಿಮಾನದ ರಥ. ಸೈನಿಕನಾಗಿ ದೇಶ ಸೇವೆ ಮಾಡೋದು ಪವರ್ ಸ್ಟಾರ್ ಸಿನಿ ಪಥ. ಅಮೃತ ಮಹೋತ್ಸವದ ಸಂಭ್ರದಮಲ್ಲಿರುವ ದೇಶ ಪ್ರೇಮಿಗಳಿಗೆ ಜೇಮ್ಸ್​​ ಬಳಗ ಹೊಸ ಪೋಸ್ಟರ್​ ಮೂಲಕ ಶುಭಾಶಯಗಳನ್ನು ತಿಳಿಸಿದೆ.

    ಇದನ್ನೂ ಓದಿ:Flight Ticket: ವಿಮಾನ ಟಿಕೆಟ್ ಮತ್ತಷ್ಟು ದುಬಾರಿ; ಯಾವ ಊರಿಂದ ಯಾವ ಊರಿಗೆ ಎಷ್ಟಿದೆ ಟಿಕೆಟ್ ದರ?

    ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್​ ಜೇಮ್ಸ್​ ಸಿನಿಮಾ ಶೂಟಿಂಗ್​​ಗಾಗಿ ಕಾಶ್ಮೀರದಲ್ಲಿ ಕೆಲವು ದಿನ ತಮ್ಮ ತಂಡದೊಂದಿಗೆ ಬೀಡು ಬಿಟ್ಟಿದ್ದರು. ಆ ಸಮಯದಲ್ಲಿ ಸಿನಿಮಾ ಸ್ಟೈಲ್​ ಲೀಕ್​ ಆಗಿತ್ತು. ವೀರ ಯೋಧನ ಗೆಟಪ್​​ನಲ್ಲಿ ಅಪ್ಪು ಕಾಣಿಸಿಕೊಂಡಿದ್ದರು. ಅದನ್ನು ನೋಡಿ ಪವರ್​ ಸ್ಟಾರ್​ ಅಭಿಮಾನಿಗಳು ಫಿದಾ ಆಗಿದ್ದರು. ಆದರೆ ಫೋಟೋವನ್ನು ಚಿತ್ರತಂಡ ಸೋಶಿಯಲ್ ಮೀಡಿಯಾದಿಂದ ತೆರವುಗೊಳಿಸಿತ್ತು. ಈಗ ಅಸಲಿ ಸತ್ಯ ಹೊರಬಂದಿದ್ದು, ಪವರ್​ ಸ್ಟಾರ್​​ ಪುನೀತ್​ ರಾಜ್​ ಕುಮಾರ್​ ಬ್ಲಾಕ್​ ಕಮಾಂಡೋ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.



    ಬಹದ್ದೂರ್, ಭರ್ಜರಿ ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್​ ಜೇಮ್ಸ್ ಚಿತ್ರವನ್ನು ನಿರ್ದೇಶಿಸಿದ್ದಾರೆ.

    ಇದನ್ನೂ ಓದಿ:ಮುಳ್ಳಯ್ಯನಗಿರಿಯಲ್ಲಿ ದಿನಕ್ಕೆ 1200 ಪ್ರವಾಸಿಗರಿಗೆ ಮಾತ್ರ ಅವಕಾಶ; ಇಂದಿನಿಂದಲೇ ಆದೇಶ ಜಾರಿ

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
    Published by:Latha CG
    First published: