James: ಅಪ್ಪು ವಾಯ್ಸ್​ನಲ್ಲೇ ರೀ ರಿಲೀಸ್ ಆಯ್ತು ಜೇಮ್ಸ್​! 'ರಾಜರತ್ನ'ನ ಧ್ವನಿ ಕೇಳಿ ಫ್ಯಾನ್ಸ್​ ಭಾವುಕ

'ಜೇಮ್ಸ್’ ಚಿತ್ರ ಕನ್ನಡ ಚಿತ್ರರಂಗದ ಪಾಲಿಗೂ ಕೂಡ ವಿಶೇಷ ಚಿತ್ರ. ಹಾಗಾಗಿ ಈ ಚಿತ್ರವನ್ನು ತೆರೆಗೆ ತರಲು 'ಜೇಮ್ಸ್' ಚಿತ್ರ ತಂಡ ಚಿಕ್ಕಾ ಪಟ್ಟೆ ಕಷ್ಟ ಪಟ್ಟಿದೆ.ಇದೀಗ ಇಂದು ಮತ್ತೆ ಚಿತ್ರ ರೀ ರಿಲೀಸ್ ಆಗಿದೆ.

ಪುನೀತ್​ ರಾಜ್​ಕುಮಾರ್​

ಪುನೀತ್​ ರಾಜ್​ಕುಮಾರ್​

  • Share this:
ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ (Power Star Puneeth Rajkumar)​... ಈ ಹೆಸರು ಕೇಳಿದರೆ ಸಾಕು ಮೈಯಲ್ಲಿ ಒಂದು ಶಕ್ತಿ (Power) ಹುಟ್ಟುತ್ತೆ. ಈಗ ಪುನೀತ್​ ರಾಜ್​ಕುಮಾರ್​ಗೆ ದೇವರ ಸ್ಥಾನ ನೀಡಲಾಗಿದೆ.ಸ್ಯಾಂಡಲ್​ವುಡ್​(Sandalwood)ನ ಸರಳತೆಯ ಸಾಮ್ರಾಟ್​, ಅಭಿಮಾನಿಗಳ ಆರಾಧ್ಯದೈವ, ಕನ್ನಡ ಚಿತ್ರರಂಗದ ಬೆಟ್ಟದ ಹೂ, ಯುವಕರ ಪಾಲಿನ ಯುವರತ್ನ, ಅಪ್ಪು ಅಗಲಿಕೆಯ ನೋವನ್ನು ಇಂದಿಗೂ ಯಾರೂ ಮರೆತಿಲ್ಲ.ಕರುನಾಡಿನ ಪ್ರತಿ ಮನೆಯಲ್ಲೂ ಇನ್ನೂ ಮೌನ ಆವರಿಸಿದೆ. ಈ ಮಧ್ಯೆ ಮಾರ್ಚ್ 17ರಂದು ಪವರ್​ ಸ್ಟಾರ್​ ಹುಟ್ಟುಹಬ್ಬ(Puneeth Rajkumar Birthday)ದಂದು ಅವರ ಕೊನೆಯ ಸಿನಿಮಾ ‘ಜೇಮ್ಸ್’(James) ರಿಲೀಸ್​ ಆಗಿ ಸೂಪರ್ ಹಿಟ್​ ಆಗಿತ್ತು. ಅಪ್ಪು ಅವರಿಗೆ ಸೆಂಚುರಿ ಸ್ಟಾರ್​ ಶಿವಣ್ಣ (Shivanna) ಧ್ವನಿ ನೀಡಿದ್ದರೂ, ಅಪ್ಪು (Appu) ಅವರ ಧ್ವನಿಯನ್ನು ಅವರ ಅಭಿಮಾನಿಗಳು ಮಿಸ್​ ಮಾಡಿಕೊಂಡಿದ್ದರು. ಆದರೆ, ಇಂದು ಅಪ್ಪು ಧ್ವನಿಯಲ್ಲೇ 'ಜೇಮ್ಸ್​' ರೀ ರಿಲೀಸ್ (James Re Release)  ಆಗಿದೆ.

ಅಪ್ಪು  ಧ್ವನಿಯಲ್ಲೇ ರೀ ರಿಲೀಸ್​ ಆಯ್ತು ಜೇಮ್ಸ್​!

ಜೇಮ್ಸ್​​ ಚಿತ್ರದಲ್ಲಿ ನಟ ಪುನೀತ್ ರಾಜ್‌ಕುಮಾರ್ ಧ್ವನಿ ಇಲ್ಲ. ಅಪ್ಪು ಅಕಾಲಿಕ ನಿಧನದಿಂದ ಈ ಚಿತ್ರಕ್ಕೆ ಅವರು ಡಬ್ ಮಾಡಲು ಸಾಧ್ಯವಾಗಲಿಲ್ಲ. ಶಿವರಾಜ್​ ಕುಮಾರ್​, ಪುನೀತ್​ ರಾಜ್​ಕುಮಾರ್​ ಅವರಿಗೆ ಧ್ವನಿ ನೀಡಿದ್ದರು. 'ಜೇಮ್ಸ್’ ಚಿತ್ರ ಕನ್ನಡ ಚಿತ್ರರಂಗದ ಪಾಲಿಗೂ ಕೂಡ ವಿಶೇಷ ಚಿತ್ರ. ಹಾಗಾಗಿ ಈ ಚಿತ್ರವನ್ನು ತೆರೆಗೆ ತರಲು 'ಜೇಮ್ಸ್' ಚಿತ್ರ ತಂಡ ಚಿಕ್ಕಾ ಪಟ್ಟೆ ಕಷ್ಟ ಪಟ್ಟಿದೆ.ಇದೀಗ ಇಂದು ಮತ್ತೆ ಚಿತ್ರ ರೀ ರಿಲೀಸ್ ಆಗಿದೆ. ಅದು ಪುನೀತ್​ ರಾಜ್​ಕುಮಾರ್​ ಅವರ ಧ್ವನಿ ಜೊತೆಗೆ ರಿಲೀಸ್​ ಆಗಿದೆ. ಅಭಿಮಾನಿಗಳು ಇಂದು ಕೂಡ ಜೇಮ್ಸ್​ ಸಿನಿಮಾಗೆ ಭರ್ಜರಿ ವೆಲ್​ಕಮ್​ ನೀಡಿದ್ದಾರೆ.

ರಾಜರತ್ನ ಧ್ವನಿ ಕೇಳಿ ಅಭಿಮಾನಿಗಳು ಭಾವುಕ

ಮಾರ್ಚ್ 17ರಂದು ರಿಲೀಸ್​ ಆಗಿದ್ದ ಜೇಮ್ಸ್​ ಸಿನಿಮಾವನ್ನು ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸಿದ್ದರು. ಅಪ್ಪು ಧ್ವನಿಯಲ್ಲಿ ಮತ್ತೆ ರೀ ರಿಲೀಸ್​ ಆಗುತ್ತಿರುವ ವಿಚಾರ ಕೇಳಿ ಮತ್ತಷ್ಟು ಖುಷಿ ಪಟ್ಟಿದ್ದರು. ಇಂದೂ ಕೂಡ ಹಬ್ಬದಂತೆ ಜೇಮ್ಸ್​ ಸಿನಿಮಾವನ್ನು ಬರಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ. ರಾಜರತ್ನ ಧ್ವನಿ ಕೇಳಿ ಅಪ್ಪು ಅಭಿಮಾನಿಗಳು ಭಾವುಕರಾದರು. ಕೆಲ ಅಭಿಮಾನಿಗಳು ಅಪ್ಪು ಧ್ವನಿ ಕೇಳುತ್ತಿದ್ದಂತೆ ಚಿತ್ರಮಂದಿರದಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

ಇದನ್ನೂ ಓದಿ: ಆ ಮಗು ಛತ್ರಿ ತಂದಿದ್ದು ಏಕೆ? ಭಾವನಾತ್ಮಕ ಕಥೆ ಹೇಳಿ ಧನ್ಯವಾದ ಅರ್ಪಿಸಿದ ಯಶ್

ಚೇತನ್‌ ಕುಮಾರ್‌ ನಿರ್ದೇಶನದ ಪುನೀತ್‌ ನಟನೆಯ ಕಡೆಯ ಚಿತ್ರವನ್ನು ಜೇಮ್ಸ್ ಜಾತ್ರೆಯಾಗಿ ಮಾಡಿದ್ರು. ಈ ಮೂಲಕ ಅಪ್ಪು ಮೇಲಿನ ಅಭಿಮಾನವನ್ನ ತೋರಿಸಿದ್ರು ಅಭಿಮಾನಿ ದೇವರುಗಳು. ಜೇಮ್ಸ್ ಚಿತ್ರ ನೋಡಿ ಇಷ್ಟಪಟ್ಟಿದ್ದ ಫ್ಯಾನ್ಸ್​​ಗೆ ಅಪ್ಪು ಧ್ವನಿ ಇರಬೇಕಿತ್ತು ಎಂಬ ಕೊರಗಿತ್ತು. ಇದೀಗ ಅಪ್ಪು ಧ್ವನಿಯಲ್ಲಿ `ಜೇಮ್ಸ್’ ರೀ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ: KGF, Salaar ಬಳಿಕ ಮತ್ತೊಂದು ದೊಡ್ಡ ಸಿನಿಮಾಗೆ ಕೈ ಹಾಕಿದ ಹೊಂಬಾಳೆ! ಆ ನಿರ್ದೇಶಕಿಯನ್ನೇ ಸೆಲೆಕ್ಟ್ ಮಾಡಿದ್ದು ಯಾಕೆ?

ಸೋನಿ ಲೈವ್​ನಲ್ಲಿ ಜೇಮ್ಸ್​ ಸಿನಿಮಾ!

ಜೇಮ್ಸ್ ಕನ್ನಡದ ದಿವಂಗತ ಸೂಪರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ. ಅಪ್ಪು ಹುಟ್ಟಿದ ದಿನವಾದ ಮಾರ್ಚ್ 17ರಂದು ಅದ್ಧೂರಿಯಾಗಿ ತೆರೆ ಕಂಡಿತ್ತು. ಕನ್ನಡ ಪ್ರೇಕ್ಷಕರು ತಮ್ಮ ನೆಚ್ಚಿನ ಸೂಪರ್‌ಸ್ಟಾರ್‌ಗೆ ಗೌರವ ಸಲ್ಲಿಸುವ ಮೂಲಕ ಚಿತ್ರವನ್ನು ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲಿಸಿದ್ದಾರೆ. ಚಿತ್ರದಲ್ಲಿ ಪ್ರಿಯಾ ಆನಂದ್, ಪುನೀತ್ ರಾಜ್ ಕುಮಾರ್‌ಗೆ ನಾಯಕಿಯಾಗಿ ನಟಿಸಿದ್ದಾರೆ. ಸೇನೆ, ಸ್ನೇಹಿತರನ್ನು ಒಳಗೊಂಡ ಫ್ಯಾಮಿಲಿ ಕುಳಿತು ನೋಡಬಹುದಾದ ಆ್ಯಕ್ಷನ್ ಥ್ರಿಲ್ಲರ್ ಜೇಮ್ಸ್ ಸಿನಿಮಾ ಏಪ್ರಿಲ್ 15 ರಿಂದ ಸೋನಿ ಲೈವ್‌ನಲ್ಲಿ ಸ್ಟ್ರೀಮ್​ ಆಗುತ್ತಿದೆ.
Published by:Vasudeva M
First published: