Raj Kundra: ಬಂಧನದಿಂದ ತಪ್ಪಿಸಿಕೊಳ್ಳಲು ಪೊಲೀಸ್​ ಅಧಿಕಾರಿಗಳಿಗೆ 25 ಲಕ್ಷ ಲಂಚ ನೀಡಿದ್ದರಂತೆ ರಾಜ್​ ಕುಂದ್ರಾ

(Pornographic Content Creation Case) ಬಂಧನವಾಗಬಾರದು ಎಂಬ ಕಾರಣಕ್ಕೆ ರಾಜ್ ಕುಂದ್ರಾ 25 ಲಕ್ಷ ಹಣವನ್ನು ಲಂಚವಾಗಿ ಅಧಿಕಾರಿಗಳಿಗೆ ನೀಡಿದ್ದಾರೆ ಎಂಬ ಆರೋಪವೂ ಈಗ ರಾಜ್​ ಕುಂದ್ರಾ ಮೇಲೆ ಬಂದಿದೆ. ಈ ಆರೋಪ ಮಾಡಿರುವುದು ಅರವಿಂದ್​ ಶ್ರೀವಾಸ್ತವ್​.

ರಾಜ್ ಕುಂದ್ರಾ

ರಾಜ್ ಕುಂದ್ರಾ

  • Share this:
ರಾಜ್​ ಕುಂದ್ರಾ ಅವರು ಅಶ್ಲೀಲ ಚಿತ್ರಗಳ ನಿರ್ಮಾಣ ಹಾಗೂ ಮೊಬೈಲ್ ಅಪ್ಲಿಕೇಷನ್​ಗಳಲ್ಲಿ ಪ್ರಸಾರ ಮಾಡುವ ಆರೋಪದ ಮೇಲೆ ರಾಜ್​ ಕುಂದ್ರಾ ಅವರನ್ನು ಬಂಧಿಸಲಾಗಿದ್ದು, ಜು.23ರವರೆಗೆ ಪೊಲೀಸ್​ ಕಸ್ಟಡಿಯಲ್ಲಿ ಇಡಲಾಗಿದೆ. ದಿನ ಕಳೆಂದಂತೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಹೊಸ ವಿಚಾರಗಳು ಹೊರ ಬರುತ್ತಿವೆ. ಈಗಲೂ ಸಹ ಈ ಪ್ರಕರಣದಲ್ಲಿ ರಾಜ್ ಕುಂದ್ರಾ ಮಾಡಿದ್ದಾರೆ ಎನ್ನಲಾಗುತ್ತಿರುವ ಮತ್ತೊಂದು ಕೆಲಸದ ಬಗ್ಗೆ ಮಾಹಿತಿಯೊಂದು ಹೊರ ಬಿದ್ದಿದೆ. ಹೌದು, ರಾಜ್ ಕುಂದ್ರಾ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗದಂತೆ ಇರಲು ಕ್ರೈಂ ಬ್ಯಾಂಚ್ ಪೊಲೀಸ್​ ಅಧಿಕಾರಿಗಳಿಗೆ ಲಂಚ ನೀಡಿದ್ದರಂತೆ. ಅದೂ ಕೂಡ 25 ಲಕ್ಷ ಲಂಚ ನೀಡಿದ್ದರು ಎಂದು ಇಂಗ್ಲಿಷ್​ ಪತ್ರಿಕೆಯೊಂದು ವರದಿ ಮಾಡಿದೆ.

ಹೌದು, ಬಂಧನವಾಗಬಾರದು ಎಂಬ ಕಾರಣಕ್ಕೆ ರಾಜ್ ಕುಂದ್ರಾ ಇಷ್ಟು ದೊಡ್ಡ ಮೊತ್ತವನ್ನು ಲಂಚವಾಗಿ ಅಧಿಕಾರಿಗಳಿಗೆ ನೀಡಿದ್ದಾರೆ ಎಂಬ ಆರೋಪವೂ ಈಗ ರಾಜ್​ ಕುಂದ್ರಾ ಮೇಲೆ ಬಂದಿದೆ. ಈ ಆರೋಪ ಮಾಡಿರುವುದು ಅರವಿಂದ್​ ಶ್ರೀವಾಸ್ತವ್​.

Raj Kundra believed that live streaming of sexual acts was the future ae, Raj Kundra Arrest, Raj Kundra, Blue Film, nude audition, Sagarika Shona, Pornography video by Raj Kundra, Bhojpuri Actress, Neelam giri, Dance video, Neelam giri video, Neelam giri New Song, Neelam giri New Video, Neelam giri Dance video, Neelam giri ka gana, Samar Singh, Samar Singh Songs, Samar Singh New Songs, Samar Singh video, Kamariya Turele Raja Ji, Bhojpuri Video, Bhojpuri New Songs, Bhojpuri Songs, Bhojpuri Songs 2021, Bhojpuri Actor,
ರಾಜ್​ ಕುಂದ್ರಾ


ಅರವಿಂದ್ ಶ್ರೀವಾಸ್ತವ ಅಲಿಯಾಸ್ ಯಶ್​ ಠಾಕೂರ್​ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದಾರೆ. ಈ ದಂಧೆಯ ಕಿಂಗ್​ಪಿನ್ ಎಂದೇ ಕರೆಯಲ್ಪಡುವ ಅರವಿಂದ್ ಶ್ರೀವಾಸ್ತವ ಇಮೇಲ್​ ಮೂಲಕ ಭ್ರಷ್ಟಾಚಾರ ತಡೆ ವಿಭಾಗ (ಎಸಿಬಿ)ಕ್ಕೆ ದೂರು ನೀಡಿದ್ದಾರೆ. ಈ ದೂರಿನಲ್ಲಿ ರಾಜ್​​ ಕುಂದ್ರಾ ಪೊಲೀಸರಿಗೆ ಲಂಚ ನೀಡಿರುವ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ಇಂಗ್ಲಿಷ್​ ಪತ್ರಿಕೆ ವರದಿ ಮಾಡಿದೆ.

ಇದನ್ನೂ ಓದಿ: Bigg Boss Kannada Season 8: ಮಂಜು ಪಾವಗಡ ಯಾವಾಗ್ಲೂ ಹುಡುಗಿಯರ ಜೊತೆಯಲ್ಲೇ ಇರ್ತಾರೆ ಏಕೆ ಗೊತ್ತಾ..?

ಕಳೆದ ಮಾರ್ಚ್​ನಲ್ಲೇ ಅರವಿಣದ್ ಅವರ ಒಡೆತನದ ಫ್ಲಿಜ್​ ಮೂವೀಸ್​ ಸಂಸ್ಥೆಗೆ ಸೇರಿದ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಅದರಲ್ಲಿ 4.50 ಕೋಟಿಗೂ ಹೆಚ್ಚು ಹಣ ವರ್ಗಾವಣೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತು.

ರಾಜ್​ ಕುಂದ್ರಾ ಅವರು ಅಶ್ಲೀಲ ವಿಡಿಯೋ ಲೈವ್ ಸ್ಟ್ರೀಮಿಂಗ್​ಗೆ ಭವಿಷ್ಯದಲ್ಲಿ ಬೇಡಿಕೆ ಬರಲಿದೆ ಅನ್ನೋದು ರಾಜ್​ ಕುಂದ್ರಾ ಲೆಕ್ಕಾಚಾರವಾಗಿತ್ತಂತೆ. ಬಾಲಿವುಡ್​ನಷ್ಟೇ ದೊಡ್ಡದಾಗಿ ಈ ಅಶ್ಲೀಲ ಸಿನಿಮಾಗಳ ಉದ್ಯಮವನ್ನು ಬೆಳೆಸಬೇಕು ಅನ್ನೋದು ರಾಜ್ ಕುಂದ್ರಾ ಪ್ಲಾನ್​ ಆಗಿತ್ತು ಎಂದು ಪೊಲೀಸ್​ ಮೂಲಗಳಿಂದ ತಿಳಿದು ಬಂದಿದೆ ಎಂದು ಇಂಗ್ಲಿಷ್ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.

ಈ ಪ್ರಕರಣದಲ್ಲಿ ರಾಜ್​ ಕುಂದ್ರಾ ಅವರೇ ಪ್ರಮುಖ ಸಂಚುಕೋರ ಎಂದು ಪರಿಗಣಿಸಿರುವ ಪೊಲೀಸರು, ‘ಹಾಟ್‌ಶಾಟ್ಸ್’ ಆ್ಯಪ್ ಮೂಲಕ ಅಶ್ಲೀಲ ವಿಡಿಯೋಗಳ ಪ್ರಸಾರದಲ್ಲಿ ಕುಂದ್ರಾ ಭಾಗಿಯಾಗಿದ್ದರು ಎಂದು ತಿಳಿಸಿದ್ದಾರೆ. ‘ಹಾಟ್‌ಶಾಟ್‌’ ಆ್ಯಪ್​ ಪ್ರಸ್ತುತ ಎಲ್ಲಿಯೂ ಸಿಗುವುದಿಲ್ಲ, ಇದನ್ನು ಗೂಗಲ್​ ಪ್ಲೇಸ್ಟೋರ್​ ಮತ್ತು ಆ್ಯಪಲ್​ ಸ್ಟೋರ್​ಗಳು ತೆಗೆದು ಹಾಕಿವೆ. ಕುಂದ್ರಾ ಹಾಟ್​ಶಾಟ್​ ಆ್ಯಪ್​ಗೆ ಬೇಕಾದ ಕಟೆಂಟ್​ಗಳನ್ನು ಕೊಡುತ್ತಿದ್ದರು ಹಾಗೂ ಯುಕೆಯಲ್ಲಿ ಇರುವ ತನ್ನ ವಿಹಾನ್​ ಇಂಡಸ್ಟ್ರೀಸ್ ಕಚೇರಿಯಿಂದ ನಿಯಂತ್ರಿಸಲಾಗುತ್ತಿತ್ತು ಎಂದು ಹೇಳಲಾಗಿದೆ.

2019 ರಲ್ಲಿ ‘ಹಾಟ್‌ಶಾಟ್‌’ ಆ್ಯಪ್​ಅನ್ನು $25,000 ಡಾಲರ್​ಗೆ ಮಾರಾಟ ಮಾಡಿದ್ದೇನೆ ಎಂದು ಕುಂದ್ರಾ ಹೇಳಿದ್ದರು.ಕುಂದ್ರಾ ತನ್ನ ಆ್ಯಪ್ ‘ಹಾಟ್‌ಶಾಟ್ಸ್’ ಅನ್ನು ಯುಕೆ ಮೂಲದ ಕೆನ್ರಿನ್ ಪ್ರೈವೇಟ್ ಲಿಮಿಟೆಡ್‌ಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ. ಆದರೆ ಇದು ಅವವ ಸಂಬಂಧಿ ಪ್ರದೀಪ್ ಬಕ್ಷಿ ಒಡೆತನದಲ್ಲಿ ಇದೆ ಎಂದು ಹೇಳಿದ್ದರು. ಅದರ ಎಲ್ಲಾ ಚಟುವಟಿಕೆಗಳು ಮುಂಬೈಯಿಂದ ನಿಯಂತ್ರಿಸಲ್ಪಡುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಕುಂದ್ರಾ ಮತ್ತು ಆತನ ಸಹಚರ ರಿಯಾನ್ ಥಾರ್ಪ್ ಅವರನ್ನು ಜುಲೈ 23 ರವರೆಗೆ ಬಂಧನದಲ್ಲಿ ಇಡಲಾಗಿದೆ.

ಇದನ್ನೂ ಓದಿ: Happy Birthday Ashmitha Srivatsav: ಮಗಳ 4ನೇ ವರ್ಷದ ಹುಟ್ಟುಹಬ್ಬ ಆಚರಿಸಿದ ಸಿಂಪಲ್​ ನಟಿ ಶ್ವೇತಾ ಶ್ರೀವಾತ್ಸವ

ಅಶ್ಲೀಲ ಚಿತ್ರಗಳ ನಿರ್ಮಾಣದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಮುಂಬೈ ಪೊಲೀಸರು ಬುಧವಾರ ಹೇಳಿದ್ದಾರೆ. ಈ ಅಶ್ಲೀಲ ದಂಧೆಯಲ್ಲಿ ಶಿಲ್ಪಾ ಶೆಟ್ಟಿ ಅವರು ಭಾಗಿಯಾಗಿಲ್ಲ ಎನ್ನುವದು ಇನ್ನಷ್ಟೇ ತಿಳಿಯಬೇಕಿದೆ. ಪ್ರಾಥಮಿಕ ತನಿಖೆಯಲ್ಲಿ ನಮಗೆ ಯಾವುದೇ ಸುಳಿವು ಸಿಕ್ಕಿಲ್ಲ . ಆದರೆ ನಾವು ಇನ್ನೂ ವಿಶೇಷ ತಂಡ ರಚಿಸಿ ಇದರ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತೇವೆ ಎಂದು ಮುಂಬೈ ಅಪರಾಧ ವಿಭಾಗದ ಅಧಿಕಾರಿಯೊಬ್ಬರು ಸಿಎನ್‌ಎನ್-ನ್ಯೂಸ್ 18 ಗೆ ತಿಳಿಸಿದ್ದಾರೆ.ಸದ್ಯಕ್ಕೆ ಶಿಲ್ಪಾ ಶೆಟ್ಟಿಗೆ ಸಮನ್ಸ್ ಇಲ್ಲ

ಶೆಟ್ಟಿ ಮತ್ತು ಕುಂದ್ರಾ ಜಂಟಿಯಾಗಿ ಹೊಂದಿರುವ ಅವರ ಬ್ಯಾಂಕ್ ಖಾತೆಗಳ ವ್ಯವಹಾರಗಳನ್ನು ಪರಿಶೀಲಿಸುತ್ತಿದ್ದೇವೆ. ಹಾಗೂ ಆದಾಯದ ಮೂಲಗಳನ್ನು ಸಹ ಸಂಗ್ರಹಿಸಲಾಗುತ್ತಿದೆ ಹಾಗೂ ಇದನ್ನು ಕೂಲಂಕುಷವಾಗಿ ಪರಿಶೀಲಿಸಲಾಗುತ್ತಿದೆ. ಪ್ರಸ್ತುತ, ಕುಂದ್ರಾ ಅವರು ಮುಖ್ಯ ಆರೋಪಿಯಾಗಿರುವುದರಿಂದ ಅವರೇ ಪ್ರಸ್ತುತ ತನಿಖೆಯ ಕೇಂದ್ರಬಿಂದುವಾಗಿದ್ದಾರೆ ಎಂದು ಒತ್ತಿಹೇಳಿದ ಅಧಿಕಾರಿ, ಶಿಲ್ಪಾ ಶೆಟ್ಟಿ ಕುಂದ್ರಾ ಅವರಿಗೆ ಈಗ ಯಾವುದೇ ಸಮನ್ಸ್ ನೀಡುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
Published by:Anitha E
First published: