Raj Kundra Arrest: ರಾಜ್​ ಕುಂದ್ರಾ ಪೊಲೀಸ್​ ಕಸ್ಟಡಿ ಅವಧಿ ವಿಸ್ತರಣೆ: ಮೌನ ಮುರಿದ ನಟಿ ಶಿಲ್ಪಾ ಶೆಟ್ಟಿ..!

ರಾಜ್​ ಕುಂದ್ರಾ ಅವರನ್ನು ಒಂದು ಮುಂಬೈನ ಮ್ಯಾಜಿಸ್ಟ್ರೇಟ್​ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಪೊಲೀಸರು, ಆರೋಪಿಯನ್ನು ಮತ್ತೆ 7 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಕೊಡುವಂತೆ ಮನವಿ ಮಾಡಿದ್ದರಂತೆ. ಆದರೆ ನ್ಯಾಯಾಲಯ ಕೇವಲ 5 ದಿನಗಳ ಕಾಲ ಕಸ್ಟಡಿಗೆ ನೀಡಿ ಆದೇಶಿಸಿದೆ.

ರಾಜ್​ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ

ರಾಜ್​ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ

  • Share this:
ಅಶ್ಲೀಲ ಸಿನಿಮಾಗಳ ನಿರ್ಮಾಣ ಆರೋಪದಿಂದಾಗಿ ಬಂಧಿಯಾಗಿರುವ ರಾಜ್ ಕುಂದ್ರಾ ಅವರನ್ನು ಜು. 23 ಅಂದರೆ ಇವತ್ತಿನ ವರೆಗೆ ಪೊಲೀಸ್ ವಶದಲ್ಲಿ ಇಡಲಾಗಿತ್ತು. ಇಂದು ಮುಂಬೈನಲ್ಲಿ ಆರೋಪಿ ರಾಜ್​ ಕುಂದ್ರಾ ಅವರನ್ನು ನ್ಯಾಯಾಲಯದ ಮುಂದೆ ಜಾಹರು ಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಮತ್ತೆ ಜು.25ರವರೆಗೆ ರಾಜ್ ಕುಂದ್ರಾ ಅವರನ್ನು ಪೊಲೀಸ್​ ವಶಕ್ಕೆ ನೀಡಿ ಆದೇಶಿಸಿದೆ. ಇನ್ನು ಈ ಪ್ರಕರಣ 2021ರ ಫೆಬ್ರವರಿಯಲ್ಲಿ ಬೆಳಕಿಗೆ ಬಂದಿತ್ತು. ಆಗಿನಿಂದ ಮುಂಬೈ ಕ್ರೈಂ ಬ್ರ್ಯಾಂಚ್​ ಪೊಲೀಸರು ತನಿಖೆ ನಡೆಸುತ್ತಿದ್ದರು. ಕಳೆದ ಸೋಮವಾರ ರಾತ್ರಿ ರಾಜ್​ ಕುಂದ್ರಾ ಅವರನ್ನು ಬಂಧಿಸಿದರು. ಇನ್ನು ಈ ಬಂಧನದಿಂದ ತಪ್ಪಿಸಿಕೊಳ್ಳು ರಾಜ್​ ಕುಂದ್ರಾ ಪೊಲೀಸ್​ ಅಧಿಕಾರಿಗಳಿಗೆ 25 ಲಕ್ಷ ಲಂಚ ನೀಡಿದ್ದರಂತೆ. ಈ ಆರೋಪ ಸಹ ರಾಜ್​ ಕುಂದ್ರಾ ಅವರ ಮೇಲಿದೆ.

ಇನ್ನು ರಾಜ್​ ಕುಂದ್ರಾ ಅವರನ್ನು ಒಂದು ಮುಂಬೈನ ಮ್ಯಾಜಿಸ್ಟ್ರೇಟ್​ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಪೊಲೀಸರು, ಆರೋಪಿಯನ್ನು ಮತ್ತೆ 7 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಕೊಡುವಂತೆ ಮನವಿ ಮಾಡಿದ್ದರಂತೆ. ಆದರೆ ನ್ಯಾಯಾಲಯ ಕೇವಲ 5 ದಿನಗಳ ಕಾಲ ಕಸ್ಟಡಿಗೆ ನೀಡಿ ಆದೇಶಿಸಿದೆ.

Raj Kundra porn case: HotShots app wanted bold, 'topless' artists for project 'Khwaab', explosive email surfaces.
ರಾಜ್ ಕುಂದ್ರಾ


ಪೊಲೀಸರ ವಶದಲ್ಲಿದ್ದ ರಾಜ್ ಕುಂದ್ರಾ ತನಿಖೆಗೆ ಸರಿಯಾಗಿ ಸಹಕರಿಸುತ್ತಿಲ್ಲ ಎಂದು ಪೊಲೀಸರು ನ್ಯಾಯಾಲಕ್ಕೆ ತಿಳಿಸಿದ್ದಾರೆ. ಜೊತೆಗೆ ಇನ್ನು ತನಿಖೆ ಪ್ರಗತಿಯಲ್ಲಿದ್ದು, ರಾಜ್​ ಕುಂದ್ರಾ ಅವರನ್ನು ವಿಚಾರಣೆ ನಡೆಸುವ ಅಗತ್ಯವಿದೆ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ ಕಾರಣದಿಂದ ಈಗ ಮತ್ತೆ ಆರೋಪಿಯನ್ನು ಕಸ್ಟಡಿಗೆ ನೀಡಲಾಗಿದೆಯಂತೆ.

ಇದನ್ನೂ ಓದಿ: Bigg Boss Season 8 Kannada: ಚಕ್ರವರ್ತಿ ಮೀಸೆಗೆ ಕತ್ತರಿ ಹಾಕಿದ ಪ್ರಶಾಂತ್​ ಸಂಬರಗಿ..!

ಶಿಲ್ಪಾ ಶೆಟ್ಟಿ ಕುಂದ್ರಾ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಈಗ ಜೀವಂತವಾಗಿರುವುದಕ್ಕೆ ನಾನು ಅದೃಷ್ಟ ಮಾಡಿದ್ದೇನೆ ಎಂದು ಭಾವಿಸಿ ದೀರ್ಘವಾಗಿ ಉಸಿರು ತೆಗೆದುಕೊಳ್ಳುತ್ತೇನೆ. ಈ ಹಿಂದೆಯೂ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇನೆ. ಇನ್ನು ಮುಂದೆಯೂ ಎದುರಾಗುವ ಸವಾಲುಗಳನ್ನು ಎದುರಿಸುತ್ತೇನೆ. ಈ ಯಾವುದೂ ಇಂದಿನ ಬದುಕಿನ ಬಗ್ಗೆ ಇರುವ ನನ್ನ ಗಮನವನ್ನು ಬೇರೆಡೆ ಸೆಳೆಯಲಾರವು ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಮ್ಮ ಇನ್​ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಶಿಲ್ಪಾ ಹೀಗೆ ಬರೆದುಕೊಂಡಿದ್ದಾರೆ.

Raj Kundra Police Custody, Raj Kundra Arrest, Raj Kundra, Blue Film, nude audition, Sagarika Shona, Pornography video by Raj Kundra, Bhojpuri Actress, Neelam giri, Dance video, Neelam giri video, Neelam giri New Song, Neelam giri New Video, Neelam giri Dance video, Neelam giri ka gana, Samar Singh, Samar Singh Songs, Samar Singh New Songs, Samar Singh video, Kamariya Turele Raja Ji, Bhojpuri Video, Bhojpuri New Songs, Bhojpuri Songs, Bhojpuri Songs 2021, Bhojpuri Actor, viral video, video, Instagram, Social media
ಶಿಲ್ಪಾ ಶೆಟ್ಟಿ ಇನ್​ಸ್ಟಾಗ್ರಾಂ ಸ್ಟೋರಿ


ರಾಜ್‌ ಕುಂದ್ರಾ ಮುಂಬಯಿಯಲ್ಲಿ ಮಾಡೆಲ್‌ಗಳ ಅಶ್ಲೀಲ ವೀಡಿಯೋ ತಯಾರಿಸಿ ಅದನ್ನು ಇಂಗ್ಲೆಂಡ್‌ಗೆ ಕಳುಹಿಸಿ ಆ್ಯಪ್‌ಗೆ ಅಪ್‌ಲೋಡ್‌ ಮಾಡಿಸುತ್ತಿದ್ದರು. ಇಂಗ್ಲೆಂಡ್‌ನಲ್ಲಿ ಈತನ ಸಂಬಂಧಿ ಪ್ರದೀಪ್‌ ಭಕ್ಷಿ ಎಂಬಾತನ ಕೆನ್ರಿನ್‌ ಲಿಮಿಟೆಡ್‌ ಕಂಪನಿ ಇದನ್ನು ಈ ವೀಡಿಯೋವನ್ನು ಆ್ಯಪ್ ಮುಖಾಂತರ ಬಿಡುಗಡೆ ಮಾಡುತ್ತಿತ್ತು.

ಇದನ್ನೂ ಓದಿ: Jacqueline Fernandez: ಬ್ಯಾಕ್​ಲೆಸ್​ ಫೋಟೋ ಶೇರ್ ಮಾಡಿದ ವಿಕ್ರಾಂತ್ ರೋಣ ನಟಿ: ವೈರಲ್​ ಆಗುತ್ತಿದೆ ಜಾಕ್ವೆಲಿನ್ ಕೊಟ್ಟ ಶೀರ್ಷಿಕೆ..!

ತಾನೇ ಮುಂಬೈಯಲ್ಲಿ ತಯಾರಿಸಿ ಎಡಿಟ್‌ ಮಾಡುತ್ತಿದ್ದ ಈ ವೀಡಿಯೋವನ್ನು ಭಾರತದಲ್ಲಿ ಅಪ್ ಲೋಡ್ ಮಾಡಲು ಅವಕಾಶವಿಲ್ಲದ ಕಾರಣ ಇದನ್ನು ಇಂಗ್ಲೆಂಡ್‌ಗೆ ಕಳುಹಿಸಲಾಗುತ್ತಿತ್ತು. ಹದಿನೆಂಟು ತಿಂಗಳ ಹಿಂದೆ ಶುರು ಮಾಡಿದ ಈ ದಂಧೆಯಲ್ಲಿ ದಿನಕ್ಕೆ ಲಕ್ಷ ಲಕ್ಷ ಎಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಶರ್ಲಿನ್ ಚೋಪ್ರಾ ಸ್ಪಷ್ಟನೆ

ನಟಿ ಶರ್ಲಿನ್ ಚೋಪ್ರಾ ಅವರೇ ರಾಜ್ ಕುಂದ್ರಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆಯನ್ನು ನೀಡಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಶರ್ಲಿನ್ ಅವರು ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ರಾಜ್ ಕುಂದ್ರಾ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸೈಬರ್ ಸೆಲ್​ ಎದುರು ಮೊದಲು ಹೇಳಿಕೆ ಕೊಟ್ಟಿದ್ದು ನಾನೇ ಎಂದಿದ್ದಾರೆ. ಕಳೆದ ಕೆಲವು ದಿನಗಳಿಂದ ಮಾಧ್ಯಮದವರು ನನಗೆ ಕರೆ, ಇಮೇಲ್​ ಹಾಗೂ ಮೆಸೇಜ್​ಗಳ ಮೂಲಕ ಈ ಪ್ರಕರಣದ ಬಗ್ಗೆ ನನ್ನ ಅಭಿಪ್ರಾಯ ಕೇಳುತ್ತಿದ್ದಾರೆ. ಅದಕ್ಕೆ ಈ ವಿಡಿಯೋ ಮೂಲಕ ಉತ್ತರಿಸಲು ಬಯಸುತ್ತಿದ್ದೇನೆ ಎಂದು ಶರ್ಲಿನ್ ಮಾತು ಆರಂಭಿಸಿದ್ದಾರೆ. ಈ ಪ್ರಕರಣದಲ್ಲಿ ಮೊದಲು ಸೈಬರ್ ಸೆಲ್​ನವರ ಎದುರು ಮೊದಲು ಹೇಳಿಕೆ ಕೊಟ್ಟಿದ್ದು ನಾನೇ , ಜೊತೆಗೆ ಅರ್ಮ್ಸ್​ಪ್ರೈಮ್​ ಕುರಿತಾಗಿಯೂ ಮಾಹಿತಿ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
Published by:Anitha E
First published: