Divyanka Tripathi: ಚಾನ್ಸ್​ ಬೇಕು ಅಂದ್ರೆ ಮಂಚಕ್ಕೆ ಬಾ ಅಂದ್ರಂತೆ ಆ ನಿರ್ದೇಶಕ.. ಕಾಸ್ಟಿಂಗ್​ ಕೌಚ್​ ಬಗ್ಗೆ ಮೌನ ಮುರಿದ ನಟಿ ದಿವ್ಯಾಂಕ!

ಹಿರಿತೆರೆ ಮತ್ತು ಕಿರುತೆರೆಯಲ್ಲಿ ಬಹಳಷ್ಟು ನಟಿಯರು ಎದುರಿಸುವ ಸವಾಲೆಂದರೆ ಕಾಸ್ಟಿಂಗ್ ಕೌಚ್ ! ನಟಿ ದಿವ್ಯಾಂಕ ತ್ರಿಪಾಟಿ ಕೂಡ ಇದಕ್ಕೆ ಹೊರತಾಗಿಲ್ಲ. ಅವರು ಸಂದರ್ಶನ ಒಂದರಲ್ಲಿ, ತಾವು ಕಾಸ್ಟಿಂಗ್ ಕೌಚ್ ಎಂಬ ಅಸಹ್ಯಕರ ಸಂದರ್ಭವನ್ನು ಎದುರಿಸಬೇಕಾಗಿ ಬಂದದ್ದರ ಅನುಭವವನ್ನು ನೆನಪಿಸಿಕೊಂಡಿದ್ದಾರೆ.

ನಟಿ ದಿವ್ಯಾಂಕ

ನಟಿ ದಿವ್ಯಾಂಕ

  • Share this:

ಮುಗ್ಧ ನಗುವಿನ ಒಡತಿ ದಿವ್ಯಾಂಕ ತ್ರಿಪಾಟಿ(Divyanka Tripathi) ಒಂದು ದಶಕಕ್ಕಿಂತಲೂ ಹೆಚ್ಚು ಕಾಲದಿಂದ ಹಿಂದಿ ಕಿರುತೆರೆ(Hindi Television)ಯಲ್ಲಿ ಮಿಂಚುತ್ತಿದ್ದಾರೆ. ತಾನು ನಿರ್ವಹಿಸುವ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬುವ ಈ ನಟಿ ಹಿಂದಿ ಧಾರಾವಾಹಿ(Serial)ಗಳನ್ನು ವೀಕ್ಷಿಸುವವರಿಗೆ ಬಹಳ ಅಚ್ಚುಮೆಚ್ಚು. ತೆರೆಯ ಮೇಲೆ ತಮ್ಮ ಸುಂದರ ನಗು ಮತ್ತು ಅತ್ಯದ್ಭುತ ನಟನೆಯ ಮೂಲಕ ನೋಡುಗರ ಗಮನ ಸೆಳೆಯುವ ದಿವ್ಯಾಂಕ, ಹಲವಾರು ನಟಿಯರಂತೆ ವೃತ್ತಿ ಜೀವನದ ಆರಂಭದಲ್ಲಿ ಏಳು ಬೀಳುಗಳನ್ನು ಮತ್ತು ಸವಾಲುಗಳನ್ನು ಎದುರಿಸಿದ್ದಾರೆ. ಹಿರಿತೆರೆ ಮತ್ತು ಕಿರುತೆರೆಯಲ್ಲಿ ಬಹಳಷ್ಟು ನಟಿಯರು ಎದುರಿಸುವ ಸವಾಲೆಂದರೆ ಕಾಸ್ಟಿಂಗ್ ಕೌಚ್(Casting Couch) ! ನಟಿ ದಿವ್ಯಾಂಕ ತ್ರಿಪಾಟಿ ಕೂಡ ಇದಕ್ಕೆ ಹೊರತಾಗಿಲ್ಲ. ಅವರು ಸಂದರ್ಶನ(Interview) ಒಂದರಲ್ಲಿ, ತಾವು ಕಾಸ್ಟಿಂಗ್ ಕೌಚ್ ಎಂಬ ಅಸಹ್ಯಕರ ಸಂದರ್ಭವನ್ನು ಎದುರಿಸಬೇಕಾಗಿ ಬಂದದ್ದರ ಅನುಭವವನ್ನು ನೆನಪಿಸಿಕೊಂಡಿದ್ದಾರೆ.


ಎಲ್ಲವನ್ನೂ ಎದುರಿಸುವ ಶಕ್ತಿಇರಬೇಕು ಎಂದ ನಟಿ!

ತಾನು ಇಂಡಸ್ಟ್ರಿಯನ್ನು ಪ್ರವೇಶಿಸಿದಾಗ ತುಂಬಾ ಮುಗ್ಧಳಾಗಿದ್ದೆ, ಮತ್ತು ಅಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ತಾನು ಕೇವಲ ತನಗಿರುವ ಸರಿ ಮತ್ತು ತಪ್ಪುಗಳ ತಿಳುವಳಿಕೆಯ ಮೇಲೆ ಅವಲಂಬಿತವಾಗಿರಬೇಕಿತ್ತು ಎಂದು ಆಕೆ ಹೇಳಿಕೊಂಡಿದ್ದಾರೆ. ತನ್ನಲ್ಲಿ ಸರಿ ತಪ್ಪುಗಳನ್ನು ಅರಿತುಕೊಳ್ಳುವ ಗುಣವನ್ನು ಬೆಳೆಸಿದ ಶ್ರೇಯಸ್ಸು ತನ್ನ ತಂದೆ ತಾಯಿ ಹಾಗೂ ಸಹೋದರಿಗೆ ಸಲ್ಲುತ್ತದೆ ಎಂದಿದ್ದಾರೆ ದಿವ್ಯಾಂಕ.


ಮಂಚಕ್ಕೆ ಕರೆದಿದ್ದರಂತೆ ಖ್ಯಾತ ನಿರ್ದೇಶಕ!

ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಸಂಘರ್ಷದ ದಿನಗಳ ಕುರಿತು ಮಾತನಾಡುತ್ತಾ, ತಮಗೆ ನಿರ್ದೇಶಕರೊಬ್ಬರ ಜೊತೆ ಮಲಗುವ ‘ಆಫರ್’ ಬಂದ ಕುರಿತು ದಿವ್ಯಾಂಕ ಹೇಳಿಕೊಂಡಿದ್ದಾರೆ. “ಒಂದು ಶೋ ಮುಗಿದ ಬಳಿಕ ಮತ್ತೆ ನಿಮ್ಮ ಸಂಘರ್ಷ ಆರಂಭವಾಗುತ್ತದೆ” ಎಂದಿರುವ ಅವರು, “ಖರ್ಚಿಗೆ ಹಣವಿಲ್ಲದ ಒಂದು ಕಾಲವಿತ್ತು. ನಾನು ಬಿಲ್‍ಗಳನ್ನು, ಇಎಂಐಗಳನ್ನು ಕಟ್ಟಬೇಕಿತ್ತು, ಬಹಳಷ್ಟು ಒತ್ತಡವಿತ್ತು. ಆಗ ಒಂದು ಆಫರ್ ಬಂತು ‘ನೀನು ಈ ನಿರ್ದೇಶಕರ ಜೊತೆ ಇರಬೇಕು ಮತ್ತು ನಿನಗೆ ಒಂದು ದೊಡ್ಡ ಬ್ರೇಕ್ ಸಿಗುತ್ತದೆ’ ಮತ್ತು ನನ್ನ ಜೀವನವನ್ನು ರೂಪಿಸಿಕೊಳ್ಳಲು ಅದೊಂದೆ ಮಾರ್ಗವಿರುವುದು ಎಂಬ ರೀತಿಯಲ್ಲಿ ಅವರು ನನ್ನನ್ನು ಒಪ್ಪಿಸಲು ಪ್ರಯುತ್ನಿಸಿದ್ದರು” ಎಂದು ತಮ್ಮ ಹಿಂದಿನ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ.


ಇದನ್ನು ಓದಿ: ಮಲಯಾಳಂ ಚಿತ್ರನಟ ಕರ್ನಾಟಕದಲ್ಲಿ ಪೋಸ್ಟ್ ಮ್ಯಾನ್, ಸರ್ಕಾರಿ ಕೆಲಸ ಕೊನೆಗೂ ಸಿಕ್ತು ಎಂದ ಬೋಬನ್!

ವೃತ್ತಿ ಜೀವನ ನಾಶ ಮಾಡುವುದಾಗಿ ಬೆದರಿಕೆ ಹಾಕಿದ್ದರಂತೆ!

ಬಣ್ಣದ ಲೋಕದಲ್ಲಿ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂಬ ಮಹತ್ವಾಕಾಂಕ್ಷೆಯುಳ್ಳ ನಟಿಯರನ್ನು ಉದ್ದೇಶಿಸಿ, “ ಇಂತಹ ಆಫರ್‌ಗಳನ್ನು ನೀಡುವ ಮಂದಿ, ಪ್ರತಿಯೊಬ್ಬರೂ ಇದನ್ನೇ ಮಾಡುತ್ತಿದ್ದಾರೆ ಎಂದು ನಿಮಗೆ ಆಮಿಷ ಒಡ್ಡಲು ಪ್ರಯತ್ನಿಸುತ್ತಾರೆ. ಇವೆಲ್ಲವೂ #ಮೀ ಟೂ ಅಭಿಯಾನದ ಮೊದಲಿನ ಮಾತು. ಕೆಲವೊಮ್ಮೆ ಅವರು ಹೇಳಿದ ಹಾಗೆ ಕೇಳದಿದ್ದರೆ, ನಿಮ್ಮ ವೃತ್ತಿ ಜೀವನವನ್ನು ನಾಶ ಮಾಡಿ ಬಿಡುವ ಬೆದರಿಕೆಯನ್ನು ಕೂಡ ನಿಮಗೆ ಒಡ್ಡಲಾಗುತ್ತದೆ” ಎಂದು ದಿವ್ಯಾಂಕ ತ್ರಿಪಾಟಿ ಹೇಳಿದ್ದಾರೆ. ತನಗೆ ಕೇವಲ ತನ್ನ ವೃತ್ತಿಜೀವನದ ಬಲದ ಮೇಲೆ ಯಶಸ್ಸನ್ನು ಪಡೆಯಬೇಕೆಂಬುದು ಮನವರಿಕೆ ಆಗಿತ್ತು ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ: ಗಂಡಸರ ಟಾಯ್ಲೆಟ್​​ ಯೂಸ್​ ಮಾಡಿದ್ರಂತೆ ಈ ಸ್ಟಾರ್​ ನಟಿಯರು, ಕಾಲ ಕೆಟ್ಟೋಯ್ತು!

ಸೇಡು ತೀರಿಸಕೊಳ್ಳಲು ಸುಳ್ಳು ಸುದ್ದಿ ಹಬ್ಬಿಸಿದ್ದರಂತೆ

ಪ್ರೊಡಕ್ಷನ್ ಅಸಿಸ್ಟೆಂಟ್ ಒಬ್ಬ, ತಾನು ಅವರ ಮುಂಗಡಗಳನ್ನು ತಿರಸ್ಕರಿಸಿದೆ ಎಂಬ ಕಾರಣಕ್ಕಾಗಿ, ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ತನ್ನ ಕುರಿತು ಸುಳ್ಳು ಸುದ್ದಿಗಳನ್ನು ಹಬ್ಬಿಸಿದ ಸಂಗತಿಯನ್ನು ಅವರು ಹಂಚಿಕೊಂಡಿದ್ದಾರೆ. ಅದರಿಂದಾಗಿ ತನಗೆ ವೃತ್ತಿಪರತೆ ಇಲ್ಲದವಳು ಮತ್ತು ಜೊತೆಗೆ ಕೆಲಸ ಮಾಡುವುದು ತುಂಬಾ ಕಷ್ಟಕರ ಎಂಬ ಹಣೆಪಟ್ಟಿ ಸಿಕ್ಕಿ, ಇಂಡಸ್ಟ್ರಿಯಲ್ಲಿನ ತನ್ನ ಸ್ಥಾನಮಾನದ ಮೇಲೆ ಪರಿಣಾಮ ಉಂಟಾಯಿತು ಎಂದು ಅವರು ಹೇಳಿದ್ದಾರೆ.
Published by:Vasudeva M
First published: