Popcorn Monkey Tiger: ಮಂಕಿ ಜೊತೆ ಮಾದೇವ; ಭಿನ್ನ ಕಂಪು ನೀಡಿದ ಸೂರಿ ಸಿನಿಮಾ ಹಾಡು

‘ಪಾಪ್ ಕಾರ್ನ್ ಮಂಕಿ ಟೈಗರ್’ ಟೈಟಲ್​ ಭಿನ್ನವಾಗಿತ್ತು. ಫಸ್ಟ್​ ಪೋಸ್ಟ್​, ಟೀಸರ್​ ಕೂಡ ಭಿನ್ನವಾಗಿತ್ತು. ಈಗ ರಿಲೀಸ್​ ಆಗಿರುವ ‘ಮಾದೇವ…’ ಸಾಂಗ್ ಕಂಗ್ಲಿಷ್ ಲಿರಿಕ್ಸ್​ನಿಂದ ಕೂಡಿದ್ದ​ದು ತುಂಬಾನೇ ಭಿನ್ನವಾಗಿದೆ.

ಧನಂಜಯ್​

ಧನಂಜಯ್​

 • Share this:
  ನಿರ್ದೇಶಕ ದುನಿಯಾ ಸೂರಿ ಏನೆ ಮಾಡಿದರೂ ಹೊಸದಾಗಿ ಮಾಡಿರುತ್ತಾರೆ. ಈಗ ಅವರು ‘ಪಾಪ್ ಕಾರ್ನ್ ಮಂಕಿ ಟೈಗರ್’ ಹೆಸರಿನ ಭಿನ್ನ ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಟೀಸರ್ ರಿಲೀಸ್ ಮಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಸೂರಿ, ಈಗ ಹೊಸ ಸಾಂಗ್​ ಬಿಟ್ಟಿದ್ದಾರೆ.

  ‘ಪಾಪ್ ಕಾರ್ನ್ ಮಂಕಿ ಟೈಗರ್’ ಟೈಟಲ್​ ಭಿನ್ನವಾಗಿತ್ತು. ಫಸ್ಟ್​ ಪೋಸ್ಟ್​, ಟೀಸರ್​ ಕೂಡ ಭಿನ್ನವಾಗಿತ್ತು. ಈಗ ರಿಲೀಸ್​ ಆಗಿರುವ ‘ಮಾದೇವ…’ ಸಾಂಗ್ ಕಂಗ್ಲಿಷ್ ಲಿರಿಕ್ಸ್​ನಿಂದ ಕೂಡಿದ್ದ​ದು ತುಂಬಾನೇ ಭಿನ್ನವಾಗಿದೆ.

  ‘ಟಗರು’ ಸಿನಿಮಾದಲ್ಲಿನ ಹಾಡುಗಳು ತುಂಬಾನೇ ವೈರಲ್​ ಆಗಿದ್ದವು. “ಈ ಚಿತ್ರದಲ್ಲಿ ಹಾಡುಗಳು ಇರಲಿವೆ. ಆದರೆ, ನೃತ್ಯ ಇರುವುದಿಲ್ಲ,” ಎಂದಿದ್ದರು ಡಾಲಿ ಧನಂಜಯ್​. ಈಗ ಈ ಹಾಡಿನ ಮೂಲಕ ಸಿನಿಮಾದಲ್ಲಿರುವ ಹಾಡಿನ ಸ್ಯಾಂಪಲ್​ ತೋರಿಸಿದ್ದಾರೆ ನಿರ್ದೇಶಕರು.  ಮಾದೇವ ಹಾಡನ್ನ ಚರಣ್ ರಾಜ್ ಕಂಪೋಸ್ ಮಾಡಿದ್ದು, ರಿತ್ವಿಕ್ ಕಾಯ್ಕಿಣಿ ಮತ್ತು ಹನುಮಾನ್ ಕೈಂಡ್  ಸಾಹಿತ್ಯ ಬರೆದಿದ್ದಾರೆ. ಸಂಚಿಂತ್ ಹೆಗಡೆ, ಹನುಮಾನ್ಕೈಂಡ್ ಮತ್ತು ಚರಣ್ ರಾಜ್ ಹಾಡಿದ್ದಾರೆ.  ಇದನ್ನೂ ಓದಿ: ಶೂಟಿಂಗ್ ವೇಳೆ ನಿರ್ದೇಶಕ ಸೂರಿ ಈ ನಟನ ಮೇಲೆ ಎರಡು ಬಕೆಟ್ ರಕ್ತ ಸುರಿದಿದ್ದರಂತೆ!

  ದುನಿಯಾ ಸೂರಿ  ನಿರ್ದೇಶನದ ಈ ಚಿತ್ರವನ್ನು ಸುಧೀರ್ ಕೆ.ಎಂ ನಿರ್ಮಿಸುತ್ತಿದ್ದಾರೆ. ಶೇಖರ್ ಎಸ್ ಛಾಯಾಗ್ರಹಣ, ಚರಣ್ ರಾಜ್ ಸಂಗೀತ ಸಂಯೋಜನೆ ಹಾಗೂ ದೀಪು ಎಸ್. ಕುಮಾರ್​ ಸಂಕಲನ ಚಿತ್ರಕ್ಕಿದೆ. ಡಾಲಿ ಧನಂಜಯ, ನಿವೇದಿತಾ, ಕಾಕ್ರೋಚ್, ನವೀನ್, ಅಮೃತಾ ಅಯ್ಯಂಗಾರ್, ಸಪ್ತಮಿ, ಮೋನಿಶಾ ನಾಡಿಗೇರ್ ಹಾಗೂ ಗೌತಮ್ ಚಿತ್ರದಲ್ಲಿ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
  First published: