ಖ್ಯಾತ ಪಾಪ್​​ ಗಾಯಕಿ ಲಿಸಾ ಮೇರಿ ಮಗ ಆತ್ಮಹತ್ಯೆ!

ಬೆಂಜಮಿನ್​ ಕೀಪ್​ಗೆ 27 ವರ್ಷ ವಯಸ್ಸಾಗಿದ್ದು, ಮಗನ ​ ಸಾವಿನ ಸುದ್ದಿ ತಿಳಿದು ತಾಯಿ ಲಿಸಾ ಮೇರಿ ಮನನೊಂದಿದ್ದಾರೆ. ಸಾವಿನ ಸತ್ಯಾಂಶ ತಿಳಿಯಲು ಪೊಲೀಸರ ಮೊರೆ ಹೋಗಿದ್ದಾರೆ.

ಲಿಸಾ ಮೇರಿ- ಮಗ ಬೆಂಜಮಿನ್​ ಕೀಫ್

ಲಿಸಾ ಮೇರಿ- ಮಗ ಬೆಂಜಮಿನ್​ ಕೀಫ್

 • Share this:
  ಅಮೆರಿಕದ ಖ್ಯಾತ ಪಾಪ್​ ಗಾಯಕಿ ಲಿಸಾ ಮೇರಿ ಅವರ ಮಗ ಬೆಂಜಮಿನ್​ ಕೀಫ್​ ಆತ್ಮಹತ್ಯೆ ಮಾಡಿಕೊಳ್ಳುವ ಮೂಲದ ಬದುಕು ಮುಗಿಸಿದ್ದಾರೆ. ಕೆಲವು ಮೂಲಗಳ ಪ್ರಕಾರ ಬೆಂಜಮಿನ್​​​​ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಮಾಡಿದೆ. ಇನ್ನು ಕೆಲವು ವೆಬ್​ಸೈಟ್​ಗಳು ಕ್ಯಾಲಿಫೋರ್ನಿಯದಲ್ಲಿರುವ ಮನೆಯ ಫ್ಯಾನಿಗೆ ನೇಣು ಹಾಕಿಕೊಂಡು ಮರಣ ಹೊಂದಿದ್ದಾರೆ ಎಂದು ಹೇಳಲಾಗಿದೆ.

  ಬೆಂಜಮಿನ್​ ಕೀಫ್​​​​ಗೆ 27 ವರ್ಷ ವಯಸ್ಸಾಗಿದ್ದು, ಮಗನ ​ ಸಾವಿನ ಸುದ್ದಿ ತಿಳಿದು ತಾಯಿ ಲಿಸಾ ಮೇರಿ ಮನನೊಂದಿದ್ದಾರೆ. ಸಾವಿನ ಸತ್ಯಾಂಶ ತಿಳಿಯಲು ಪೊಲೀಸರ ಮೊರೆ ಹೋಗಿದ್ದಾರೆ.

  ಈ ಬಗ್ಗೆ ಆಕೆಯ ಕುಟುಂಬಸ್ಥರೊಬ್ಬರು ಮಾತನಾಡಿದ್ದು, ‘ಮಗನ ಸಾವಿನಿಂದ ಲಿಸಾ ಬೇಸರಗೊಂಡಿದ್ದಾಳೆ. ತನ್ನ 11 ವರ್ಷದ ಪುಟ್ಟ ಅವಳಿ ಮಕ್ಕಳು ಮತ್ತು ಹಿರಿಯ ಪುತ್ರಿಗೋಸ್ಕರ ಧೈರ್ಯವಾಗಿದ್ದಾಳೆ. ಪ್ರೀತಿಯ ಒಬ್ಬನೇ ಮಗನಿದ್ದ ಕಾರಣ ಲೀಸಾ ಆತನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು’ ಎಂದು ಹೇಳಿದ್ದಾರೆ.

  ಖ್ಯಾತ ಗಾಯಕಿ ನ್ಯಾನ್ಸಿ ಸಿನಾತ್ರಾ ಟ್ವೀಟ್​ ಮಾಡಿದ್ದು, ಲೀಸಾಗೆ ಧೈರ್ಯ ತುಂಬಿದ್ದಾರೆ. ಟ್ವೀಟ್​ನಲ್ಲಿ ‘ಲೀಸಾ ನೀನು ತಾಯಿಯ ಹೊಟ್ಟೆಯಲ್ಲಿದ್ದಾಗಿನಿಂದಲೂ ನಾನು ನಿನ್ನನ್ನು ನೋಡಿರುವೆ. ನೀನು ಧೈರ್ಯವಂತೆ ಎಂದು ನನಗೆ ಗೊತ್ತು. ಆದರೆ ಇಂತಹ ಘಟನೆಯೊಂದು ನಿನ್ನ ಜೀವನದಲ್ಲಿ ಎದುರಾಗುತ್ತದೆ ಎಂದು ನಾನು ಕಲ್ಪಿಸಿರಲಿಲ್ಲ’ ಎಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

  ಬೆಂಜಮಿನ್​ ಕೀಫ್​​ ಹಾಲಿವುಡ್​ನ ಖ್ಯಾತ ನಟ ಎಲ್ವಿನ್​​​ ಪ್ರಿಸ್ಲಿ ಮತ್ತು ಪ್ರಿಸ್ಸಿಲ್ಲಾ ಪ್ರೀಸ್ಲಿ ಅವರ ಮೊಮ್ಮಗ.  ಇದ್ದಕ್ಕಿದ್ದಂತೆ ಬೆಂಜಮಿನ್​ ಸಾವಿಗೆ ಶರಣಾಗಿರುವ  ವಿಚಾರ ಕುಟುಂಬಸ್ಥರಿಗೆ ದೊಡ್ಡ ಶಾಕ್ ನೀಡಿದೆ.  ಸ್ಯಾಂಡಲ್​ವುಡ್​ ಖ್ಯಾತ ನಟನ ತಾಯಿಗೆ ಕೊರೋನಾ ಪಾಸಿಟಿವ್​!

  John Cena: ಅಮಿತಾಭ್​, ಅಭಿಷೇಕ್​ ಬಚ್ಚನ್​ ಫೋಟೋ ಹಂಚಿಕೊಂಡ WWE ಚಾಂಪಿಯನ್ ಜಾನ್ ಸೀನಾ​

  D Boss Darshan: ದರ್ಶನ್​ ಮೇಕಪ್​ ಮ್ಯಾನ್​ ಸಾವು; ಟ್ವೀಟ್​ ಮೂಲಕ ಸ್ಮರಿಸಿಕೊಂಡ ಡಿ ಬಾಸ್​
  Published by:Harshith AS
  First published: