ಶಿಲ್ಪಾ ಶೆಟ್ಟಿ ಗಂಡ ರಾಜ್​ ಕುಂದ್ರಾ ವಿರುದ್ಧ ದೂರು ದಾಖಲಿಸಿದ ಪೂನಂ ಪಾಂಡೆ..!

ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿರುವ ನಟಿ ಹಾಗೂ ರೂಪದರ್ಶಿ ಪೂನಂ ಪಾಂಡೆ ಈಗ ಶಿಲ್ಪಾಶೆಟ್ಟಿ ಪತಿ ರಾಜ್​ ಕುಂದ್ರಾ ಹಾಗೂ ಅವರ ಟೀಂ ವಿರುದ್ಧ ಪೊಲೀಸ್​ ಠಾಣೆಗೆ ದೂರು ನೀಡಲು ಹೋಗಿದ್ದರಂತೆ.

ಪೂನಂ ಪಾಂಡೆ ಹಾಗೂ ರಾಜ್ ಕುಂದ್ರಾ

ಪೂನಂ ಪಾಂಡೆ ಹಾಗೂ ರಾಜ್ ಕುಂದ್ರಾ

  • Share this:
ವಿವಾದಿತ ನಟಿ ಪೂನಂ ಪಾಂಡೆ ತಮ್ಮ ಸಿನಿಮಾಗಳಲ್ಲಿನ ಹಸಿಬಿಸಿ ಪಾತ್ರಗಳು, ಬೋಲ್ಡ್ ಪೋಟೋಶೂಟ್​ಗಳು ಹಾಗೂ ವಿವಾದಿತ ಹೇಳಿಕೆಗಳಿಂದ ಸದ್ದು ಮಾಡುವ ನಟಿ. ಇಂತಹ ನಟಿ ಈಗ ಶಿಲ್ಪಾಶೆಟ್ಟಿ ಅವರ ಗಂಡ ರಾಜ್​ ಕುಂದ್ರಾ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿರುವ ನಟಿ ಹಾಗೂ ರೂಪದರ್ಶಿ ಪೂನಂ ಪಾಂಡೆ ಈಗ ಶಿಲ್ಪಾಶೆಟ್ಟಿ ಪತಿ ರಾಜ್​ ಕುಂದ್ರಾ ಹಾಗೂ ಅವರ ಟೀಂ ವಿರುದ್ಧ ಪೊಲೀಸ್​ ಠಾಣೆಗೆ ದೂರು ನೀಡಲು ಹೋಗಿದ್ದರಂತೆ.

Poonam Pandey shares her hot and bold photos in her Instagram
ಫೂನಂ ಪಾಂಡೆ


ಆದರೆ ಪೊಲೀಸರು ರಾಜ್​ ಕುಂದ್ರಾ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಒಪ್ಪದ ಕಾರಣಕ್ಕೆ ಈಗ ಪೂನಂ, ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ರಾಜ್​ ಕುಂದ್ರಾ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರಂತೆ.

ಇದನ್ನೂ ಓದಿ: Anupama Parameshwaran: ಅವಕಾಶಗಳಿಗಾಗಿ ಹೀಗೆಲ್ಲ ಮಾಡುತ್ತಿದ್ದಾರಾ ಪವರ್​ ಸ್ಟಾರ್​ ನಾಯಕಿ ಅನುಪಮಾ..!

ಹೌದು, ಇದು 2019ರಲ್ಲಿ ನಡೆದಿದ್ದ ಒಂದು ವ್ಯವಹಾರ ಒಪ್ಪಂದಕ್ಕೆ  ಸಂಬಂಧಿಸಿದ ವಿವಾದ. ಆಗ ಪೂನಂ ಪಾಂಡೆ ಆರ್ಮ್ಸ್​​ಪ್ರೈಮ್ ಮೀಡಿಯಾ ಎಂಬ ಕಂಪನಿಯೊಂದಿಗೆ ಪೂನಂ ಹೆಸರಲ್ಲಿ ಆ್ಯಪ್​ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅದರಲ್ಲಿ ಬರುವ ಲಾಭದಲ್ಲಿ ಒಂದಿಷ್ಟು ಭಾಗ ಪೂನಂಗೆ ಕೊಡುವುದಾಗಿ ಮಾತುಕತೆಯಾಗಿತ್ತಂತೆ.

Shilpa Shetty clad in Mangalorean style Saree mesmerises with her beauty
ಕುಟುಂಬದೊಂದಿಗೆ ನಟಿ ಶಿಲ್ಪಾ ಶೆಟ್ಟಿ


ಆದರೆ ರಾಜ್​ ಕುಂದ್ರಾ ಒಡೆತನದ ಆ ಕಂಪನಿ ಲಾಭವನ್ನು ಹಂಚುವ ವಿಚಾರದಲ್ಲಿ ಮೋಸ ಮಾಡಿದೆ ಎಂದು ಪೂನಂ ಆ ಒಪ್ಪಂದಿಂದ ಹೊರ ಬಂದರಂತೆ. ಆದರೆ, ಇದಾದ ನಂತರ ಪೂನಂ ಅವರ ಮೊಬೈಲ್​ಗೆ ಅನಾಮಿಕರ ಕರೆಗಳು ಅಶ್ಲೀಲ ಫೋಟೋಗಳು ಬರಲಾರಂಭಿಸಿದವಂತೆ. ಇದರಿಂದ 3 ತಿಂಗಳು ದೇಶ ಬಿಟ್ಟು ಹೋಗಿದ್ದ ಪೂನಂ ಮತ್ತೆ ಭಾರತಕ್ಕೆ ಬಂದಿದ್ದಾರೆ. ಆದರೂ ಕೂಡ ಈ ಅನಾಮಿಕ ಕರೆಗಳ ಕಾಟ ನಿಂತಿಲ್ಲ. ಇದೇ ಕಾಣರಕ್ಕೆ ಪೂನಂ ತಮ್ಮ ಪೋನ್​ ನಂಬರ್​ ಬದಲಾಯಿಸಿದ್ದಾರೆ.

ಇದನ್ನೂ ಓದಿ: L.K. Advani Video: ಶಿಕಾರಾ ಸಿನಿಮಾ ನೋಡಿ ಎಲ್.ಕೆ. ಅಡ್ವಾಣಿ ಕಣ್ಣೀರಿಟ್ಟ ವಿಡಿಯೋ ಇಲ್ಲಿದೆ..!

ಈ ಹೊಸ ನಂಬರ್​ನಿಂದ ಕುಂದ್ರಾ ಅವರ ಆಪ್ತರಿಗೆ ಕರೆ ಮಾತನಾಡಿದ್ದಾರೆ. ಇದಾದ ನಂತರ ಮತ್ತೆ ಅದೇ ಕರೆಗಳು ಹಾಗೂ ಅಶ್ಲೀಲ ಸಂದೇಶಗಳು ಬರಲಾರಂಭಿಸಿವೆಯಂತೆ. ಇದೇ ಕಾರಣಕ್ಕೆ ಪೂನಂ ಪೊಲೀಸರ ಸಹಾಯ ಕೋರಿದ್ದಾರೆ. ಆದರೆ ಪೊಲೀಸರು ದೂರು ತೆಗೆದುಕೊಳ್ಳಲು ಒಪ್ಪದ ಕಾರಣಕ್ಕೆ ಅವರು ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

Saina Nehwal: ಬಾಲಿವುಡ್​ಗೆ ಎಂಟ್ರಿ ಕೊಡಲಿದ್ದಾರಾ ಸೈನಾ ನೆಹ್ವಾಲ್: ವೈರಲ್​ ಆಗುತ್ತಿವೆ ಚಿತ್ರಗಳು​..!

First published: