Poonam Pandey: ಸದ್ದಿಲ್ಲದೆ ವಿವಾಹವಾದ ಪೂನಂ ಪಾಂಡೆ; ಗೆಳೆಯ ಸ್ಯಾಮ್ ಜೊತೆಗಿರುವ ಮದುವೆ ಫೋಟೋ ವೈರಲ್!

Poonam Pandey Marriage: ಕಳೆದ ಗುರುವಾರದಂದು ಪೂನಂ ಪಾಂಡೆ ಪ್ರಿಯಕರ ಸ್ಯಾಮ್​ ಬಾಂಬೆ ಜೊತೆಗಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ‘ನಿಮ್ಮೊಂದಿಗೆ ಏಳು ಜೀವಿತಾವಧಿ ಎದುರು ನೋಡುತ್ತಿದ್ದೇನೆ’ ಎಂದು ಬರೆದುಕೊಂಡಿದ್ದರು. ಅದರಂತೆ ಸ್ಯಾಮ್​ ಶುಕ್ರವಾರದಂದು ಇನ್​​ಸ್ಟಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಪೂನಂ ಪಾಂಡೆ ಗೆಳೆಯ ಸ್ಯಾಮ್​ ಬಾಂಬೆ

ಪೂನಂ ಪಾಂಡೆ ಗೆಳೆಯ ಸ್ಯಾಮ್​ ಬಾಂಬೆ

 • Share this:
  ಯುವಕರ ನಿದ್ದೆ ಕೆಡಿಸುತ್ತಿದ್ದ ಮಾದಕ ನಟಿ, ಮಾಡೆಲ್​​ ಪೂನಂ ಪಾಂಡೆ ಗೆಳೆಯ ಸ್ಯಾಮ್​ ಬಾಂಬೆ ಜೊತೆ ಸದ್ದಿಲ್ಲದೆ ವಿವಾಹವಾಗಿದ್ದಾರೆ. ಈ ವಿಚಾರವನ್ನು ತಿಳಿಸುವ ಸಲುವಾಗಿ ಸಾಮಾಜಿಕ ಜಾಲತಾಣದಲ್ಲಿ  ಫೋಟೋ ಹಂಚಿಕೊಂಡಿದ್ದಾರೆ. ಪೂನಂ ಪಾಂಡೆ ಇನ್​ಸ್ಟಾಗ್ರಾಂನಲ್ಲಿ ಸದಾ ಆ್ಯಕ್ಟೀವ್​ ಆಗಿರುವ ನಟಿ. ಪ್ರತಿ ದಿನ ಏನಾದರೊಂದು ವಿಡಿಯೋ, ಫೋಟೋ ಹಂಚಿಕೊಳ್ಳುತ್ತಿರುತ್ತಾರೆ. ಮಾತ್ರವಲ್ಲದೆ, ಯುವಕರನ್ನು ಆಕರ್ಷಿಸುವ ಸಲುವಾಗಿ  ಮಾದಕ ಲುಕ್​, ಬಿಕಿನಿ ಬಟ್ಟೆಯಲ್ಲಿ ತೆಗೆದಿರುವ ಫೋಟೋವನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೀಗ ಪೂನಂ ಪಾಂಡೆ ಕಪ್ಪು ಮತ್ತು ಗುಲಾಬಿ ಬಣ್ಣದ ಲೆಹೆಂಗಾ ಧರಿಸಿಕೊಂಡು ಗೆಳೆಯ ಸ್ಯಾಮ್​ ಬಾಂಬೆ ಜೊತೆ ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ತಾನು ವಿವಾಹ ಬಂದಿಯಾಗಿದ್ದೇನೆಂದು ಹೇಳಿಕೊಂಡಿದ್ದಾರೆ. ಈ ವಿಚಾರ ಅನೇಕರಿ ಅಚ್ಚರಿಗೆ ಕಾರಣವಾಗಿದೆ. ಕೆಲವರು ಆಕೆಗೆ ಶುಭಾಶಯ ಕೋರಿದರೆ ಇನ್ನು ಕೆಲವರು ಕಾಲೆಳೆಯುವ ಕಾಮೆಂಟ್​ ಬರೆದಿದ್ದಾರೆ.

  ಕಳೆದ ಗುರುವಾರದಂದು ಪೂನಂ ಪಾಂಡೆ ಪ್ರಿಯಕರ ಸ್ಯಾಮ್​ ಬಾಂಬೆ ಜೊತೆಗಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ‘ನಿಮ್ಮೊಂದಿಗೆ ಏಳು ಜೀವಿತಾವಧಿ ಎದುರು ನೋಡುತ್ತಿದ್ದೇನೆ’ ಎಂದು ಬರೆದುಕೊಂಡಿದ್ದರು. ಅದರಂತೆ ಸ್ಯಾಮ್​ ಶುಕ್ರವಾರದಂದು ಇನ್​​ಸ್ಟಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

  ಸೆಸ್ಟೆಂಬರ್​ 09ರಂದು ಕೈಯಲ್ಲಿ ಗೋರಂಟಿ ಹಾಕಿಕೊಂಡಿರುವ ಮತ್ತೊಂದು ಫೋಟೋ ಹಂಚಿಕೊಂಡ ಪೂನಂ ಪಾಂಡೆ  ‘ಮಿಸ್ಟರ್​​ ಆ್ಯಂಡ್​ ಮಿಸಸ್​ ಬಾಂಬೆ‘ ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಇನ್ನು ಪೂನಂ ಪಾಂಡೆ ಅಪ್ಲೋಡ್​ ಮಾಡಿರುವ ಫೋಟೋಗೆ 1 ಲಕ್ಷಕ್ಕೂ ಅಧಿಕ ಲೈಕ್ಸ್​ ಸಿಕ್ಕಿದೆ.
  View this post on Instagram

  ❤️


  A post shared by Poonam Pandey (@ipoonampandey) on

  View this post on Instagram

  The beginning of forever.


  A post shared by Sam Bombay (@sambombay) on  View this post on Instagram

  Mr & Mrs Bombay


  A post shared by Sam Bombay (@sambombay) on


  ಕಳೆದ ಜುಲೈ ತಿಂಗಳಿನಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ವಿವಾಹವಾಗುವ ಮೂಲಕ ಸಂಸಾರಿಯಾಗಲು ಹೊಟಿದ್ದಾರೆ ಸ್ಯಾಮ್​ ಬಾಂಬೆ ಮತ್ತು ಪೂನಂ ಪಾಂಡೆ ದಂಪತಿ.
  Published by:Harshith AS
  First published: