Poonam Pandey: ಗೋವಾದಲ್ಲಿ ಹನಿಮೂನ್ ವೇಳೆ ಹಲ್ಲೆ ಆರೋಪ; ಪೂನಂ ಪಾಂಡೆ ಗಂಡನ ಬಂಧನ

ಪೂನಂ ಪಾಂಡೆ, ಸ್ಯಾಮ್​ ಬಾಂಬೆ ಅವರನ್ನು ಮದುವೆಯಾದ ನಂತರ ಹನಿಮೂನ್​ಗೆಂದು ಗೋವಾಗೆ ಹೋಗಿದ್ದರು. ಅಲ್ಲಿ ಪತಿಯೊಂದಿಗೆ ಬೆಸ್ಟ್​ ಹನಿಮೂನ್​ ಅಂತ ತಮ್ಮ ವಿಡಿಯೋವನ್ನೂ ಹಂಚಿಕೊಂಡಿದ್ದರು. ಈಗ ಇದೇ ನಟಿ ಗಂಡನ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಹನಿಮೂನ್​ನಲ್ಲಿ ಸ್ಯಾಮ್​ ತಮ್ಮ ಮೇಲೆ ಹಲ್ಲೆ ಮಾಡಿದ್ದು, ಹಿಂಸೆ ನೀಡಿದ್ದಾರೆ ಎಂದು ಗೋವಾದ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೂನಂ ಪಾಂಡೆ ಹಾಗೂ ಪತಿ ಸ್ಯಾಮ್​ ಬಾಂಬೆ

ಪೂನಂ ಪಾಂಡೆ ಹಾಗೂ ಪತಿ ಸ್ಯಾಮ್​ ಬಾಂಬೆ

  • Share this:
ಬಾಲಿವುಡ್​ನಲ್ಲಿ ಸಿನಿಮಾಗಿಂತ ಹೆಚ್ಚಾಗಿ ವಿವಾದಗಳಿಂದಲೇ ಸದ್ದು ಮಾಡುವ ನಟಿ ಪೂನಂ ಪಾಂಡೆ. ಶಿಲ್ಪಾ ಶೆಟ್ಟಿ ಅವರ ಪತಿ ರಾಜ್​ ಕುಂದ್ರಾ ಅವರ ವಿರುದ್ಧ ಹಣಕಾಸಿನ ವಿಷಯದಲ್ಲಿ ವಂಚನೆ ಮಾಡಿದ ಬಗ್ಗೆ ಆರೋಪಿಸಿದ್ದರು ಪೂನಂ. ತಮ್ಮ ಹಾಟ್​ ಹಾಗೂ ಬೋಲ್ಡ್ ಫೋಟೋಶೂಟ್​ಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುವ ಪೂನಂ ಪಾಂಡೆ ಈಗ ತಮ್ಮ ವೈಯಕ್ತಿಕ ವಿಷಯದಿಂದಾಗಿ ಮತ್ತೆ ಸದ್ದು ಮಾಡುತ್ತಿದ್ದಾರೆ.

ಪೂನಂ ಪಾಂಡೆ ಇತ್ತೀಚೆಗಷ್ಟೆ ತಮ್ಮ ವಿವಾಹವಾಗಿದ್ದು, ಹನಿಮೂನ್​ಗೆ ಗೋವಾಗೆ ಹೋಗುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದರು. ನಂತರ ಗೋವಾಗೆ ಹೋಗಿ ಅಲ್ಲಿ ತಾವು ಉಳಿದುಕೊಂಡಿರುವ ರೆಸಾರ್ಟ್​ನಿಂದ ಗಂಡ ಸ್ಯಾಮ್​ ಬಾಂಬೆ ಜೊತೆ ಒಂದು ವಿಡಿಯೋ ಮಾಡಿ ಹಂಚಿಕೊಂಡಿದ್ದರು. ಆದರೆ ವಿವಾಹವಾಗಿ 21 ದಿನಕ್ಕೆ ಪೂನಂ ಪಾಂಡೆ ಪತಿ ಜೈಲು ಸೇರಿದ್ದಾರೆ. ಅದೂ ಸಹ ಹಲ್ಲೆ ಹಾಗೂ ಹಿಂಸೆ ನೀಡಿರುವ ಪ್ರಕರಣದಲ್ಲಿ. ಹೌದು, ಪೂನಂ ಪಾಂಡೆ ಗಂಡ ಸ್ಯಾಮ್​ ಅವರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. 

ಪೂನಂ ಪಾಂಡೆ, ಸ್ಯಾಮ್​ ಬಾಂಬೆ ಅವರನ್ನು ಮದುವೆಯಾದ ನಂತರ ಹನಿಮೂನ್​ಗೆಂದು ಗೋವಾಗೆ ಹೋಗಿದ್ದರು. ಅಲ್ಲಿ ಪತಿಯೊಂದಿಗೆ ಬೆಸ್ಟ್​ ಹನಿಮೂನ್​ ಅಂತ ತಮ್ಮ ವಿಡಿಯೋವನ್ನೂ ಹಂಚಿಕೊಂಡಿದ್ದರು. ಈಗ ಇದೇ ನಟಿ ಗಂಡನ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಹನಿಮೂನ್​ನಲ್ಲಿ ಸ್ಯಾಮ್​ ತಮ್ಮ ಮೇಲೆ ಹಲ್ಲೆ ಮಾಡಿದ್ದು, ಹಿಂಸೆ ನೀಡಿದ್ದಾರೆ ಹಾಗೂ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಗೋವಾದ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
View this post on Instagram

Having the best honeymoon :)


A post shared by Poonam Pandey Bombay (@ipoonampandey) on


ಪೂನಂ ಪಾಂಡೆ ನೀಡಿರುವ ದೂರಿನ ಮೇರೆಗೆ ಸ್ಯಾಮ್​ ಅವರನ್ನು ಪೊಲೀಸರು ಬಂಧಿಸಿದ್ದಾರಂತೆ. ಮೂರು ವರ್ಷ ಜೊತೆಗಿದ್ದ ಈ ಜೋಡಿ, ಕಳೆದ ಜುಲೈ 27ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು.
View this post on Instagram

❤️


A post shared by Poonam Pandey Bombay (@ipoonampandey) on


ನಂತರ ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಬಂಗಲೆಯಲ್ಲಿ ಸೆಪ್ಟೆಂಬರ್​ 1ಕ್ಕೆ ಸ್ಯಾಮ್​ ಜತೆ ವಿವಾಹವಾಗಿ ನವ ದಾಂಪತ್ಯಕ್ಕೆ ಕಾಲಿಟ್ಟಿದ್ದರು ಪೂನಂ ಪಾಂಡೆ. ನಂತರ ಸೆ.10ರಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮದುವೆ ವಿಷಯವನ್ನು ಬಹಿರಂಗಪಡಿಸಿದರು. ಸ್ಯಾಮ್​ ಬಾಂಬೆ ವೃತ್ತಿಯಲ್ಲಿ ಸಿನಿಮಾ ನಿರ್ದೇಶಕರಾಗಿದ್ದು, ಪೂನಂ 2013ರಲ್ಲಿ ನಶಾ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.
Published by:Anitha E
First published: