Pooja Hegde: ಕಾಪು ಮಾರಿಗುಡಿಗೆ ಪೂಜಾ ಹೆಗ್ಡೆ ಭೇಟಿ! ದೇವರ ಬಳಿ ಇದೊಂದು ಆಸೆ ಪೂರೈಸುವಂತೆ ಕೇಳಿಕೊಂಡ ನಟಿ

ಖ್ಯಾತ ಚಲನಚಿತ್ರ ನಟಿ ಪೂಜಾ ಹೆಗ್ಡೆ (Pooja Hegde)ಉಡುಪಿ (Udupi) ಜಿಲ್ಲೆಯ ಕಾಪು ಮಾರಿ ಗುಡಿಗೆ ಭೇಟಿ ನೀಡಿ ದರ್ಶನ ಪಡೆದರು.  ಮಹಾರಾಷ್ಟ್ರದ ಮುಂಬೈನಲ್ಲಿ ಹುಟ್ಟಿ ಬೆಳೆದರೂ, ಪೂಜಾ ಹೆಗ್ಡೆಯ ಮೂಲ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು

ಪೂಜಾ ಹೆಗ್ಡೆ

ಪೂಜಾ ಹೆಗ್ಡೆ

  • Share this:
ಪೂಜಾ ಹೆಗ್ಡೆ(Pooja Hegde) ಬಗ್ಗೆ ಹೇಳಬೇಕು ಎಂದರೆ ಕನ್ನಡ ಬಗ್ಗೆ ಹೇಳಬೇಕು. ಯಾಕೆಂದರೆ ಈ ಮುದ್ದು ಮುಖದ ಚೆಲುವೆ ನಮ್ಮ ಕನ್ನಡದ ಹುಡುಗಿ. ಕಡಿಮೆ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವರು. ಬಾಲಿವುಡ್(Bollywood), ಟಾಲಿವುಡ್(Tollywood)​ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಭಾರತ ಚಿತ್ರರಂಗದ ಟಾಪ್​ ನಟಿಯರ ಲಿಸ್ಟ್​ನಲ್ಲಿ ಪೂಜಾ ಹೆಗ್ಡೆಯೂ ಇದ್ದಾರೆ. ಗ್ಲಾಮರ್ ಲುಕ್‌ (Glamour Look) ಹಾಗೂ ಒಳ್ಳೇ ನಟನೆಯಿಂದ ಟಾಲಿವುಡ್ (Tollywood) ಹಾಗೂ ಬಾಲಿವುಡ್‌ನಲ್ಲಿ (Bollywood) ಹೆಸರು ಮಾಡ್ತಿರೋ ದಕ್ಷಿಣ ಭಾರತದ ಬಹಳ ಹೆಸರು ಮಾಡ್ತಿರೋ ನಟಿಯರ ಸಾಲಿನಲ್ಲಿ ಪೂಜಾ ಹೆಗ್ಡೆ (Pooja Hegde) ಇದ್ದಾರೆ.  ಇತ್ತೀಚೆಗೆ ಪ್ರಭಾಸ್​ ಹಾಗೂ ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್​ ಸಿನಿಮಾ ಫ್ಲಾಪ್​ ಲಿಸ್ಟ್​ಗೆ ಸೇರಿಕೊಂಡಿದೆ. ಇದಾದ ಬಳಿಕ ಬಿಡುಗಡೆಯಾಗಿದ್ದ ಬೀಸ್ಟ್​ ಕೂಡ ಕೆಜಿಎಫ್​ 2 ಮುಂದೇ ಊಸ್ಟ್​ ಆಗಿದೆ.

ಕಾಪು ಮಾರಿಯಮ್ಮನ ದರ್ಶನ ಪಡೆದ ಪೂಜಾ ಹೆಗ್ಡೆ!


ಖ್ಯಾತ ಚಲನಚಿತ್ರ ನಟಿ ಪೂಜಾ ಹೆಗ್ಡೆ (Pooja Hegde)ಉಡುಪಿ (Udupi) ಜಿಲ್ಲೆಯ ಕಾಪು ಮಾರಿ ಗುಡಿಗೆ ಭೇಟಿ ನೀಡಿ ದರ್ಶನ ಪಡೆದರು.  ಮಹಾರಾಷ್ಟ್ರದ ಮುಂಬೈನಲ್ಲಿ ಹುಟ್ಟಿ ಬೆಳೆದರೂ, ಪೂಜಾ ಹೆಗ್ಡೆಯ ಮೂಲ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು. ಖ್ಯಾತ ಮಾಡೆಲ್ ಮತ್ತು ನಟಿಯಾಗಿ ಬೆಳೆದ ನಂತರವೂ ತವರಿನ ಸಂಪರ್ಕವನ್ನು ಈಕೆ ಬಿಟ್ಟಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಕಾಪುವಿಗೆ ಆಗಮಿಸಿ ಹೊಸ ಮಾರಿಗುಡಿಗೆ ಭೇಟಿಕೊಟ್ಟು ದೇವಿಯ ದರ್ಶನ ಮಾಡುತ್ತಾ ಬಂದಿದ್ದಾರೆ.

ಉತ್ತಮ ಭವಿಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿ ನಟಿ ಪೂಜಾ!

ಪ್ರತಿ ಮಂಗಳವಾರ ಈ ದೇಗುಲದಲ್ಲಿ ವಿಶೇಷ ಪೂಜೆ ಮಾಡಲಾಗುತ್ತೆ. ಭಕ್ತರು ಇಲ್ಲಿ ಬಂದು ದೇವಿಯ  ಮುಂದೆ ನಿಂತು ಕೈ ಮುಗಿದು ತಮ್ಮ ಬೇಡಿಕೆಗಳನ್ನು ಇಡೆರಿಸುವಂತೆ ಪ್ರಾರ್ಥಿಸುತ್ತಾರೆ. ಪೂಜಾ ಹೆಗ್ಡೆ ಕೂಡ ದರ್ಶನದ ಸಂದರ್ಭದಲ್ಲೇ ದೇವಾಲಯಕ್ಕೆ ಭೇಟಿ ಕೊಟ್ಟಿದ್ದರು. ದರ್ಶನ ಪಾತ್ರಿಯ ಮುಂದೆ ತನ್ನ ಉತ್ತಮ ಭವಿಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಅಭಯ ಕೊಟ್ಟ ದೇವಿಯ ದರ್ಶನ ಪಾತ್ರಿಯು, ತನ್ನ ಕ್ಷೇತ್ರಕ್ಕೆ ಬಂದು ಪ್ರಾರ್ಥಿಸಿದ ಭಕ್ತೆಗೆ ಉಜ್ವಲ ಭವಿಷ್ಯದ ದಾರಿ ತೋರಿಸಿಕೊಡುತ್ತೇನೆ, ನನ್ನ ಪ್ರಸಾದವನ್ನು ಹಿಡಿದು ಮುಂದಕ್ಕೆ ಹೋಗಲಿ, ಬರುವ ಎಲ್ಲಾ ಸಂಕಷ್ಟಗಳನ್ನು ನನ್ನ ಕಾಲಬುಡಕ್ಕೆ ಹಾಕಿಕೊಂಡು ಆಶೀರ್ವಾದ ಕೊಡುತ್ತೇನೆ.. ಎಂದು ಅಭಯ ನೀಡಿದರು.

ಕಾಪು ಮಾರಿಗುಡಿಯಲ್ಲಿ ಪೂಜಾ ಹೆಗ್ಡೆ


ಇದನ್ನೂ ಓದಿ: Dhanush ಟೈಮ್​ ಸರಿನೇ ಇಲ್ಲ-ಡಿವೋರ್ಸ್ ಆಯ್ತು, ಈಗ ಮತ್ತೊಂದು ಟೆನ್ಶನ್​! ತಮಿಳು ಸ್ಟಾರ್​ ನಟನಿಗೆ ಸಮನ್ಸ್​

ದೇವಾಲಯದ ಜೀರ್ಣೋದ್ಧಾರ ವೀಕ್ಷಿಸಿದ ಪೂಜಾ ಹೆಗ್ಡೆ

ಕಾಪುವಿನ ಹೊಸ ಮಾರಿಗುಡಿ ಯ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, 30 ಕೋಟಿಗೂ ಅಧಿಕ ವೆಚ್ಚದಲ್ಲಿ ನೂತನ ದೇವಾಲಯ ನಿರ್ಮಿಸಲಾಗುತ್ತಿದೆ. ನಿರ್ಮಾಣ ಹಂತದಲ್ಲಿರುವ ದೇವಾಲಯದ ಕಟ್ಟಡವನ್ನು ಪೂಜಾ ಹೆಗ್ಡೆ ಕುಟುಂಬ ಸಮೇತ ವೀಕ್ಷಿಸಿದರು. ತನ್ನ ಇಷ್ಟ ದೇವರ ಗುಡಿಯ ಜೀರ್ಣೋದ್ದಾರಗೊಳ್ಳುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ: Koffee With Karan ಶೋ ಇನ್ನು ಮುಂದೆ ಬರಲ್ಲ! ಕರಣ್​ ಜೋಹರ್​ ಕೊಟ್ಟ ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ

ಕುಟುಂಬ ಸಹಿತರಾಗಿ ಬಂದು ಬಹಳ ಹೊತ್ತು ಮಾರಿಗುಡಿಯಲ್ಲಿ ಕಳೆದು ತನ್ನ ಭಕ್ತಿಯನ್ನು ನಿವೇದಿಸಿದ್ದಾರೆ. ತನ್ನ ದೇವಾಲಯದ ಪ್ರವಾಸದುದ್ದಕ್ಕೂ ಅಪ್ಪಟ ತುಳುವಿನಲ್ಲೇ ಪೂಜಾ ಹೆಗ್ಡೆ ಸಂಭಾಷಣೆ ನಡೆಸುತ್ತಿದ್ದರು. ಎಷ್ಟೇ ಎತ್ತರಕ್ಕೆ ಬೆಳೆದರು, ತನ್ನ ಸಂಪ್ರದಾಯವನ್ನು ಪೂಜಾ ಹೆಗ್ಡೆ ಮರೆತಿಲ್ಲ.
Published by:Vasudeva M
First published: