Pooja Hegde: ಕ್ಯಾನ್​ ಉತ್ಸವದಲ್ಲಿ ಪೂಜಾ ಹೆಗ್ಡೆ ಬ್ಯಾಗೇ ಕಳೆದೋಯ್ತಂತೆ! ರೆಡ್​ ಕಾರ್ಪೆಟ್​ ಸರ್ಕಸ್​ ಬಗ್ಗೆ ‘ರಾಧೆ‘ ಹೇಳಿದ್ದೇನು?

Cannes Film Festival 2022: ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ನೇತೃತ್ವದ ನಿಯೋಗದಲ್ಲಿ ಎಆರ್ ರೆಹಮಾನ್, ರಿಕಿ ಕೇಜ್, ನಯನತಾರಾ, ಪೂಜಾ ಹೆಗ್ಡೆ, ಆರ್. ಮಾಧವನ್ ಮತ್ತು ನವಾಜುದ್ದೀನ್ ಸಿದ್ದಿಕಿ ಕೂಡ ಇದ್ದರು.

ನಟಿ ಪೂಜಾ ಹೆಗ್ಡೆ

ನಟಿ ಪೂಜಾ ಹೆಗ್ಡೆ

  • Share this:
ಬುಧವಾರ ನಡೆದ ಕೇನ್ಸ್ ಚಲನಚಿತ್ರೋತ್ಸವದಲ್ಲಿ (Cannes Film festival 2022) ನಮ್ಮ ಭಾರತೀಯ ತಾರೆಯರು (Indian Stars) ರೆಡ್ ಕಾರ್ಪೆಟ್ ಮೇಲೆ ಮಿಂಚುತ್ತಿದ್ದಾರೆ. ನಮ್ಮ ದಕ್ಷಿಣದ ಸುಂದರಿ ಪೂಜಾ ಹೆಗ್ಡೆ (Pooja Hegde) ಸಹ ಯಾವುದಕ್ಕೂ ಕಮ್ಮಿ ಇಲ್ಲ ಎನ್ನುವಂತೆ ಮೆರೆಯುತ್ತಿದ್ದಾರೆ. ಈ ಬಾರಿ ಪಕ್ಷಿಗಳ ಗರಿಗಳನ್ನು ಹೊಂದಿರುವ ಸ್ಟ್ರಾಪ್‌ಲೆಸ್ ಪಿಂಕ್ ಗೌನ್‌ನಲ್ಲಿ ಪೂಜಾ ಹೆಗ್ಡೆ ರೆಡ್ ಕಾರ್ಪೆಟ್‌ನಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದರು. ಆದರೆ, ಅವರು ಕಾರ್ಯಕ್ರಮಕ್ಕೆ ಆಗಮಿಸುವ ಮೊದಲು ಅವರು ಅನುಭವಿಸಿದ ಸಮಸ್ಯೆಗಳ ಕುರಿತು ಹಂಚಿಕೊಂಡಿದ್ದಾರೆ.

ಹೌದು, ಕಾರ್ಯಕ್ರಮಕ್ಕೆ ಬರುವ ಮೊದಲು ಪೂಜಾ ಹೆಗ್ಡೆ ಬಟ್ಟಗಳ ಬ್ಯಾಗ್ ಹಾಗೂ ತನ್ನ ಮೇಕಪ್ ವಸ್ತುಗಳನ್ನು ಕಳೆದುಕೊಂಡಿದ್ದರು ಎಂಬುದನ್ನ ಬಹಿರಂಗ ಪಡಿಸಿದ್ದಾರೆ.

ಭಾರತದಲ್ಲಿ ತನ್ನ ಕಾರಿನಲ್ಲಿ ತನ್ನ ಒಂದು ಸಾಮಾನು ಉಳಿದಿದ್ದರೆ, ಇನ್ನೊಂದು ಬ್ಯಾಗ್ ಪ್ಯಾರೀಸ್ನಲ್ಲಿ ಕಳೆದು ಹೋಯಿತು ಎಂದು ಹೇಳಿದ್ದಾರೆ. ಆದೆ ತನ್ನ ಟೀಮ್ ನಿದ್ದೆ, ಊಟವಿಲ್ಲದೇ ನನಗಾಗಿ ಕೆಲಸ ಮಾಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ತಾವು ಕಾರ್ಯಕ್ರಮದಲ್ಲಿ ಸುಂದರವಾಗಿ ಕಾಣಬೇಕು ಎಂದು ತಂಡ ಕಷ್ಟಪಟ್ಟಿದ್ದು, ನಾನು ಸಿದ್ದಳಾಗಿದ್ದೇನೆ ಎಂದು ಅನುಭವವನ್ನು ಹಂಚಿಕೊಂಡಿದ್ದಾರೆ.

ಪೂಜಾ ಫಿಲ್ಮ್ ಕಂಪ್ಯಾನಿಯನ್‌ ಜೊತೆ ಮಾತನಾಡಿ, "ನಾನು ನಮ್ಮ ಕೂದಲಿನ ಉತ್ಪನ್ನಗಳು, ಮೇಕ್ಅಪ್, ಬಟ್ಟೆಗಳನ್ನು ಕಳೆದುಕೊಂಡಿದ್ದೇನೆ. ಅದೃಷ್ಟವಶಾತ್ ನಾನು ಭಾರತದಿಂದ ಒಂದೆರಡು ಆಭರಣಗಳನ್ನು ತಂದಿದ್ದೇನೆ, ಅದನ್ನು ನಾನು ಕೈಯಲ್ಲಿ ಇಟ್ಟುಕೊಂಡಿದ್ದೆ, ಅದು ನನಗೆ ಸಹಾಯ ಮಾಡಿತು ಎಂದಿದ್ದಾರೆ. ಇನ್ನು ನಾವು ವಿಮಾನದಿಂದ ಇಳಿದಾಗ ನಮ್ಮ ಬ್ಯಾಗ್ ಕಾಣೆಯಾಗಿರುವುದು ತಿಳಿಯಿತು, ನಾವು ಅದನ್ನು ಹುಡುಕುತ್ತಾ ಅಥವಾ ಅದನ್ನೇ ನೆನಸಿಕೊಂಡು ಕೊರಗುತ್ತಾ ಕೂರಲಿಲ್ಲ. ನಮಗೆ ಹೆಚ್ಚಿನ ಸಮಯವಿರಲಿಲ್ಲ. ಹೇಳಬೇಕೆಂದರೆ ನನಗಿಂತ ಹೆಚ್ಚು ನನ್ನ ಮ್ಯಾನೇಜರ್ ಪ್ಯಾನಿಕ್ ಆಗಿದ್ದರು ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಸಿರಿ ಕನ್ನಡ ವಾಹಿನಿಯಲ್ಲಿ 3 ಹೊಸ ಸೀರಿಯಲ್​ - ಮೇ 23ರಿಂದ ನಾನ್​ಸ್ಟಾಪ್​ ಮನರಂಜನೆ

ಅಲ್ಲದೇ ನಾನೇ ಅವರಿಗೆ ಇಲ್ಲಿಯೇ ಏನಾದರೂ ವ್ಯವಸ್ಥೇ ಮಾಡೋಣ, ಎಂದು ಹೇಳಿದ್ದೆ. ನನ್ನ ಟೀಮ್ ಸ್ವಲ್ಪವೂ ತಡ ಮಾಡದೇ ನನಗಾಗಿ ಮೇಕಪ್ ಕಿಟ್ ಹಾಗೂ ಹೇರ್ ಕೇರ್ ಉತ್ಪನ್ನಗಳನ್ನು ಖರೀದಿ ತಂದಿದ್ದಾರೆ. ಅಲ್ಲದೇ ನನ್ನ ಔಟ್​ಫಿಟ್​ ಸಹ ಕೊನೆಯ ಘಳಿಗೆಯಲ್ಲಿ ಆಗಿದ್ದು ಎಂದು, ಆ ಗಡಿಬಿಡಿಯ ಸಮಯದ ಬಗ್ಗೆ ಹೇಳಿಕೊಂಡಿದ್ದಾರೆ ಪೂಜಾ ಹೆಗ್ಡೆ.

ಇದೊಂದು ಅಲ್ಲದೇ, ನನ್ನ ಹೇರ್ ಸ್ಟೈಲಿಸ್ಟ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ನಾನು ರೆಡ್ ಕಾರ್ಪೆಟ್ ಮೇಲೆ ಮಿಂಚಲು ನನ್ನ ತಂಡವೇ ಕಾರಣ, ಅವರು ಊಟ, ನಿದ್ರೆ ಬಿಟ್ಟು ನನಗಾಗಿ ಕೆಲಸ ಮಾಡಿದ್ದಾರೆ ಎಂದಿದ್ದಾರೆ.

ಇನ್ನು ತನ್ನ ಮೇಕಪ್ ಆರ್ಟಿಸ್ಟ್ ನಿಮ್ಮ ಒಂದು ಬ್ಯಾಗ್ ಚೆಕ್ ಮಾಡಿದೆ ಅದರಲ್ಲಿ ಮೇಕಪ್ ವಸ್ತುಗಳು ಇಲ್ಲ ಎಂದಾಗ ನನಗೆ ಶಾಕ್ ಆಗಿದ್ದು ಸತ್ಯ. ನಾನು ಒಂದಲ್ಲ 2 ಬ್ಯಾಗ್ ಇತ್ತು ಎಂದಿದ್ದೆ. ಆ ಒಂದು ಬ್ಯಾಗ್ ಭಾರತದಲ್ಲಿ ನನ್ನ ಕಾರಿನಲ್ಲಿಯೇ ಉಳಿದು ಹೋಗಿದೆ ಎಂದು ತಿಳಿಯಿತು. ನನಗೆ ನಿಜಕ್ಕೂ ಬೇಸರವಾಗಿದ್ದು ಸತ್ಯ. ಆದರೆ ನಾನು ಮತ್ತು ನನ್ನ ತಂಡ ಡಿಸಾಸ್ಟರ್ ಮ್ಯಾನೇಜ್ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಒಟ್ಟಾರೆಯಾಗಿ ನಾನು ರೆಡ್ ಕಾರ್ಪೆಟ್ ಮೇಲೆ ಸುಂದರವಾಗಿ ಕಾಣಲು ಸಾಧ್ಯವಾಯಿತು ಎಂದಿದ್ದಾರೆ.

ಇದನ್ನೂ ಓದಿ: ಮಲಯಾಳಂ ಸೂಪರ್‌ ಸ್ಟಾರ್‌ ಮೋಹನ್‌ ಲಾಲ್‌ಗೆ 62ರ ವಸಂತ! 'ಲಾಲೆಟ್ಟ' ಸಿನಿ ಬದುಕಿನ ಹೆಜ್ಜೆ ಗುರುತು ಇಲ್ಲಿವೆ

ಭಾರತದಿಂದ 11 ಸದಸ್ಯರ ನಿಯೋಗದ ಭಾಗವಾಗಿ ಪೂಜಾ ಕೇನ್ಸ್ 2022 ರಲ್ಲಿ ಭಾಗವಹಿಸಿದ್ದರು, ಈ ಬಾರಿ ನಡೆಯುತ್ತಿರುವ ಚಲನಚಿತ್ರೋತ್ಸವದಲ್ಲಿ ರಾಷ್ಟ್ರವನ್ನು ಗೌರವ ರಾಷ್ಟ್ರವಾಗಿ ಆಯ್ಕೆ ಮಾಡಲಾಗಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ನೇತೃತ್ವದ ನಿಯೋಗದಲ್ಲಿ ಎಆರ್ ರೆಹಮಾನ್, ರಿಕಿ ಕೇಜ್, ನಯನತಾರಾ, ಪೂಜಾ ಹೆಗ್ಡೆ, ಆರ್ ಮಾಧವನ್ ಮತ್ತು ನವಾಜುದ್ದೀನ್ ಸಿದ್ದಿಕಿ ಕೂಡ ಇದ್ದರು.
Published by:Sandhya M
First published: