ಮನೆಯಲ್ಲೇ ಇರುವಂತೆ ತುಳುವಿನಲ್ಲಿ ಕೋರಿದ ನಟಿ ಪೂಜಾ ಹೆಗ್ಡೆ; ವಿಡಿಯೋ ವೈರಲ್

ಪೂಜಾ ಹೆಗ್ಡೆ ತುಳುವಿನಲ್ಲಿ ಮಾತನಾಡಿರುವುದಕ್ಕೆ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ದಕ್ಷಿಣ ಕನ್ನಡ ಭಾಗದ ಗ್ರೂಪ್​ಗಳಲ್ಲಿ ಈ ವಿಡಿಯೋ ಸಾಕಷ್ಟು ಹರಿದಾಡುತ್ತಿದೆ.

ಕನ್ನಡತಿ ಪೂಜಾ ಹೆಗ್ಡೆ ಕಡೆಗೂ ಸ್ಯಾಂಡಲ್​ವುಡ್​ಗೆ ಕಾಲಿಡುವ ಸೂಚನೆ ಸಿಗುತ್ತಿದೆ.

ಕನ್ನಡತಿ ಪೂಜಾ ಹೆಗ್ಡೆ ಕಡೆಗೂ ಸ್ಯಾಂಡಲ್​ವುಡ್​ಗೆ ಕಾಲಿಡುವ ಸೂಚನೆ ಸಿಗುತ್ತಿದೆ.

 • Share this:
  ಬೆಂಗಳೂರು(ಮಾ.30): ಜನರ ಹಿತ ದೃಷ್ಟಿಯಿಂದ ಕೇಂದ್ರ ಸರ್ಕಾರ 21 ದಿನಗಳ ಲಾಕ್​ಡೌನ್​ ಆದೇಶ ಹೊರಡಿಸಿದೆ. ಸಾಕಷ್ಟು ಬಾಲಿವುಡ್​ ಮಂದಿ ತಾವು ಮನೆಯಲ್ಲಿ ಇರುವುದರ ಜೊತೆಗೆ ಅಭಿಮಾನಿಗಳ ಬಳಿಯೂ ಮನೆಯಲ್ಲೇ ಇರುವಂತೆ ಕೋರಿದ್ದಾರೆ. ನಟಿ ಪೂಜಾ ಹೆಗ್ಡೆ ಕೂಡ ಇದೇ ರೀತಿ ಮಾಡಿದ್ದಾರೆ. ವಿಶೇಷ ಎಂದರೆ ಅವರು ತುಳುವಿನಲ್ಲಿ ಈ ರೀತಿ ಮನವಿ ಮಾಡಿರುವುದು ವಿಶೇಷ.

  ಪೂಜಾ ಹೆಗ್ಡೆ ಮೂಲತಃ ಮಂಗಳೂರಿನವರು. ಆದರೆ ಅವರು ಬೆಳೆದಿದ್ದು ಮುಂಬೈನಲ್ಲಿ. ಆದಾಗ್ಯೂ ಅವರು ತುಳು ಭಾಷೆಯನ್ನು ಸುಲಲಿತವಾಗಿ ಮಾತನಾಡುತ್ತಾರೆ. ಹೀಗಾಗಿ ಅವರು ತುಳು ಭಾಷೆಯಲ್ಲೂ ಅಭಿಮಾನಿಗಳ ಬಳಿ ಮನೆಯಲ್ಲೇ ಇರುವಂತೆ ಮನವಿ ಮಾಡಿದ್ದಾರೆ.

  “ನಾನು ಪೂಜಾ ಹೆಗ್ಡೆ. ಭಾರತದಲ್ಲಿ ಕೊರೋನಾ ವೈರಸ್​ ಹಾವಳಿ ಹೆಚ್ಚುತ್ತಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯುವರು ಮನೆಯಲ್ಲೇ ಇರುವಂತೆ ಕೋರಿದ್ದಾರೆ. ಅವರು ನೀಡಿದ ಆದೇಶವನ್ನು ಪಾಲಿಸಿ. ನೀವು ಮನೆಯಲ್ಲಿರುವುದು ಅನೇಕ ಪ್ರಾಣ ಉಳಿಸಲಿದೆ,” ಎಂದು ವಿಡಿಯೋದಲ್ಲಿ ಕೋರಿದ್ದಾರೆ.  ಪೂಜಾ ಹೆಗ್ಡೆ ತುಳುವಿನಲ್ಲಿ ಮಾತನಾಡಿರುವುದಕ್ಕೆ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ದಕ್ಷಿಣ ಕನ್ನಡ ಭಾಗದ ಗ್ರೂಪ್​ಗಳಲ್ಲಿ ಈ ವಿಡಿಯೋ ಸಾಕಷ್ಟು ಹರಿದಾಡುತ್ತಿದೆ.

  ಇದನ್ನೂ ಓದಿ: ಏಪ್ರಿಲ್​ 14ರ ನಂತರವೂ ಲಾಕ್​ಡೌನ್​ ಮುಂದುವರಿಯಲಿದೆ ಅನ್ನೋದು ಸುಳ್ಳು; ಕೇಂದ್ರದ ಸ್ಪಷ್ಟನೆ
  First published: