ಪೂಜಾ ಹೆಗ್ಡೆ(Pooja Hegde) ಬಗ್ಗೆ ಹೇಳಬೇಕು ಎಂದರೆ ಕನ್ನಡ ಬಗ್ಗೆ ಹೇಳಬೇಕು. ಯಾಕೆಂದರೆ ಈ ಮುದ್ದು ಮುಖದ ಚೆಲುವೆ ನಮ್ಮ ಕನ್ನಡದ ಹುಡುಗಿ. ಕಡಿಮೆ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವರು. ಬಾಲಿವುಡ್(Bollywood), ಟಾಲಿವುಡ್(Tollywood) ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಭಾರತ ಚಿತ್ರರಂಗದ ಟಾಪ್ ನಟಿಯರ ಲಿಸ್ಟ್ನಲ್ಲಿ ಪೂಜಾ ಹೆಗ್ಡೆಯೂ ಇದ್ದಾರೆ. ಗ್ಲಾಮರ್ ಲುಕ್ (Glamour Look) ಹಾಗೂ ಒಳ್ಳೇ ನಟನೆಯಿಂದ ಟಾಲಿವುಡ್ (Tollywood) ಹಾಗೂ ಬಾಲಿವುಡ್ನಲ್ಲಿ (Bollywood) ಹೆಸರು ಮಾಡ್ತಿರೋ ದಕ್ಷಿಣ ಭಾರತದ ಬಹಳ ಹೆಸರು ಮಾಡ್ತಿರೋ ನಟಿಯರ ಸಾಲಿನಲ್ಲಿ ಪೂಜಾ ಹೆಗ್ಡೆ (Pooja Hegde) ಇದ್ದಾರೆ. ಅದರಲ್ಲೂ ಸೌತ್ ಸಿನಿಮಾರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಅಂದರೆ ಅದು ಪೂಜಾ ಹೆಗ್ಡೆ.
ಸಲ್ಮಾನ್ ಚೈನ್ ಪೂಜಾ ಹೆಗ್ಡೆ ಚೈನ್!
ಸಲ್ಮಾನ್ ಖಾನ್ರ ಬಹುತೇಕ ಸಿನಿಮಾಗಳಲ್ಲಿ ಅವರ ಕೈಯಲ್ಲೂ ಚೈನ್ ಇರುವುದುನ್ನು ಎಲ್ಲರೂ ನೋಡಿರುತ್ತೀರಾ. ಸಲ್ಮಾನ್ ಖಾನ್ರ ಈ ಚೈನು ಅವರ ಲಕ್ಕಿ ಚೈನ್ ಅಂತೆ. ಈ ಚೈನ್ ಇಲ್ಲದೆ ಸಾರ್ವಜನಿಕವಾಗಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳುವುದೇ ಇಲ್ಲ. ಸಾಗರ ನೀಲಿ ಬಣ್ಣದ ಹವಳುಳ್ಳ ಈ ಚೈನು ಸಲ್ಮಾನ್ ಖಾನ್ರ ಗುರುತಾಗಿಬಿಟ್ಟಿದೆ. ಹಲವು ಸಿನಿಮಾಗಳಲ್ಲಿ ಈ ಚೈನ್ ಹಾಕಿಕೊಂಡಿದ್ದಾರೆ ಸಲ್ಮಾನ್ ಖಾನ್. ಇದೀಗ ಈ ಚೈನ್ ಪೂಜಾ ಹೆಗ್ಡೆ ಕೈ ಸೇರಿದೆ. ಇದನ್ನು ಕಂಡ ಸಲ್ಲು ಅಭಿಮಾನಿಗಳು ಇದೆನಪ್ಪಾ ಹೊಸ ವಿಷಯ ಥರ ಕಾಣಿಸುತ್ತಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಸಲ್ಮಾನ್ ಖಾನ್ ಸಿನಿಮಾದಲ್ಲಿ ಪೂಜಾ ಹೆಗ್ಡೆ!
ಸಲ್ಮಾನ್ ಖಾನ್ರ ಲಕ್ಕಿ ಚೈನ್ ಅನ್ನು ಪೂಜಾ ಹೆಗ್ಡೆ ಹಿಡಿದಿರುವುದು ಸಂದೇಶವೊಂದನ್ನು ನೀಡಲು. ಪೂಜಾ ಹೆಗ್ಡೆ, ತಾನು ಸಲ್ಮಾನ್ ಖಾನ್ರ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದು ಹೇಳಲು ಹೀಗೆ ಸಲ್ಮಾನ್ ಖಾನ್ರ ಲಕ್ಕಿ ಚೈನ್ ಕೈಗೆ ತೊಟ್ಟುಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಸಲ್ಮಾನ್ ಖಾನ್ರ ಮುಂದಿನ ಸಿನಿಮಾ 'ಕಭಿ ಈದ್ ಕಭಿ ದಿವಾಲಿ' ಸಿನಿಮಾದಲ್ಲಿ ನಟಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಈಗಷ್ಟೆ ಪ್ರಾರಂಭವಾಗಿದೆ. ಹೀಗಾಗಿ ಈ ಚೈನ್ ಹಾಕಿಕೊಂಡು ಪೂಜಾ ಹೆಗ್ಡೆ ಪೋಸ್ ನೀಡಿದ್ದಾರೆ.
ಇದನ್ನೂ ಓದಿ: ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಆತಿಯಾ ಶೆಟ್ಟಿ-ರಾಹುಲ್! ಮದ್ವೆ ಡೇಟ್ ಕೂಡ ಫಿಕ್ಸ್ ಆಗಿದ್ಯಂತೆ
ಸಂಭಾವನೆ ಹೆಚ್ಚಿಸಿಕೊಂಡು ತಪ್ಪು ಮಾಡಿದ್ರಾ ಪೂಜಾ?
ನಟಿ ಪೂಜಾ ಹೆಗ್ಡೆ ಹೆಚ್ಚಿನ ಸಂಭಾವನೆ ಪಡೆಯುವ ಮೂಲಕ ಸೌತ್ ನಟಿಯರ ಪೈಕಿ ಮೊದಲ ಸ್ಥಾನದಲ್ಲಿ ಇದ್ದಾರೆ. ಪೂಜಾ ಹೆಗ್ಡೆ ಒಂದು ಸಿನಿಮಾಗೆ ಅಂದಾಜು 3 ಕೋಟಿ ಪಡೆಯುತ್ತಾರೆ ಎಂಬ ಸುದ್ದಿ ಇದೆ. ಹೀಗಾಗಿ ಪೂಜಾ ಹೆಗ್ಡೆ ಜೊತೆ ಸಿನಿಮಾ ಮಾಡಲು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರಂತೆ. ಯಾವುದೇ ಸಿನಿಮಾಗಳು ಸಿಗದೇ ಪೂಜಾ ಹೆಗ್ಡೆ ಬೇಸರ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ಮುಂದುವರೆದರೆ ಮುಂದೆ ಹೇಗೆ ಎನ್ನುವ ಪ್ರಶ್ನೆ ಪೂಜಾ ಹೆಗ್ಡೆ ಅವರನ್ನು ಕಾಡುತ್ತಿದೆಯಂತೆ. ಈ ಬಗ್ಗೆ ಕುಟುಂಬದವರ ಜೊತೆಯೂ ಚರ್ಚೆ ನಡೆಸಿದ್ದಾರಂತೆ ನಟಿ.
ಇದನ್ನೂ ಓದಿ: ಹಾಲಿವುಡ್ ರೇಂಜ್ನಲ್ಲಿ ಇರುತ್ತಂತೆ KGF 3, ವಿಜಯ್ ಕಿರಗಂದೂರು ಹೇಳೋದನ್ನ ಕೇಳಿದ್ರೆ ಶಾಕ್ ಆಗ್ತಿರಾ ನೀವು!
ಈಗ ಸಂಭಾವನೆ ಇಳಿಸಿಕೊಳ್ತಾರಾ ನಟಿ?
ಪೂಜಾ ಹೆಗ್ಡೆ ಸಂಭಾವನೆ ವಿಚಾರದಲ್ಲಿ ತುಂಬಾನೆ ಕಟ್ಟು ನಿಟ್ಟು. ಹೀಗಾಗಿ ನಿರ್ಮಾಪಕರು ಈಕಯ ಜೊತೆ ಸಿನಿಮಾ ಮಾಡಲು ನೂರು ಬಾರಿ ಯೋಚಿಸುತ್ತಾರೆ. ಪೂಜಾ ಹೆಗ್ಡೆಗೆ ಇಷ್ಟೊಂದು ದುಡ್ಡು ಕೊಡುವ ಬದಲಿಗೆ, ಹೊಸ ನಾಯಕಿಯರಿಗೆ ಅವಕಾಶ ಕೊಡುವುದೇ ಉತ್ತಮ ಎಂದು ತುಂಬಾ ನಿರ್ಮಾಪಕರು ಇವರ ಹೆಸರನ್ನು ಕೈಬಿಟ್ಟಿದ್ದಾರಂತೆ. ತಮಿಳಿನ 'ಮುಗಮುಡಿ' ಚಿತ್ರದಿಂದ ಬಣ್ಣದ ಲೋಕಕ್ಕೆ ಪೂಜಾ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಪೂಜಾ ಹೆಗ್ಡೆ ಅಭಿನಯದ 'ರಾಧೆ ಶ್ಯಾಮ್' ಮತ್ತು 'ಆಚಾರ್ಯ' ಸಿನಿಮಾಗಳು ರಿಲೀಸ್ಗೆ ರೆಡಿ ಇವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ