• Home
  • »
  • News
  • »
  • entertainment
  • »
  • Pooja Banerjee: ಕ್ಯಾಮೆರಾ ಮುಂದೆ ನಟಿಯ ಹಾಟ್ ಲುಕ್! ವೀಡಿಯೋ ನೋಡಿ ನೆಟ್ಟಿಗರೇನಂದ್ರು?

Pooja Banerjee: ಕ್ಯಾಮೆರಾ ಮುಂದೆ ನಟಿಯ ಹಾಟ್ ಲುಕ್! ವೀಡಿಯೋ ನೋಡಿ ನೆಟ್ಟಿಗರೇನಂದ್ರು?

ದೇವೋ ಕೆ ದೇವ್ ಮಹಾದೇವ್ ಸಿರಿಯಲ್​ನ ಪಾರ್ವತಿ ಪಾತ್ರಧಾರಿ ಖ್ಯಾತಿಯ ಪೂಜಾ ಅವರು ಸೀರೆ ಧರಿಸಿ ಪೋಸ್ ನೀಡುತ್ತ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ದೇವೋ ಕೆ ದೇವ್ ಮಹಾದೇವ್ ಸಿರಿಯಲ್​ನ ಪಾರ್ವತಿ ಪಾತ್ರಧಾರಿ ಖ್ಯಾತಿಯ ಪೂಜಾ ಅವರು ಸೀರೆ ಧರಿಸಿ ಪೋಸ್ ನೀಡುತ್ತ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ದೇವೋ ಕೆ ದೇವ್ ಮಹಾದೇವ್ ಸಿರಿಯಲ್​ನ ಪಾರ್ವತಿ ಪಾತ್ರಧಾರಿ ಖ್ಯಾತಿಯ ಪೂಜಾ ಅವರು ಸೀರೆ ಧರಿಸಿ ಪೋಸ್ ನೀಡುತ್ತ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

  • Trending Desk
  • Last Updated :
  • Bangalore, India
  • Share this:

ಈಗಂತೂ ಈ ಸಾಮಾಜಿಕ ಮಾಧ್ಯಮಗಳು (Social Media) ಹುಟ್ಟಿಕೊಂಡಾಗಿನಿಂದಲೂ ಜನರಿಗೆ ತಮ್ಮಲ್ಲಿರುವ ಪ್ರತಿಭೆಗಳ (Talent) ಅಥವಾ ತಾವು ಮಾಡುವ ಕೆಲಸದ ವೀಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದು ಎಂದರೆ ತುಂಬಾನೇ ಇಷ್ಟದ ಕೆಲಸವಾಗಿಬಿಟ್ಟಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈಗಾಗಲೇ ನಾವು ಅನೇಕ ಕ್ರಿಕೆಟ್ (Cricket) ಆಟಗಾರರು, ಸಿನೆಮಾ ತಾರೆಯರು ಮತ್ತು ದೊಡ್ಡ ದೊಡ್ಡ ಪ್ರಭಾವಿ ವ್ಯಕ್ತಿಗಳು ದಿನನಿತ್ಯ ಅನೇಕ ರೀತಿಯ ವೀಡಿಯೋಗಳನ್ನು (Videos) ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ ಅಂತ ಹೇಳಬಹುದು.


ಅದು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ವೀಡಿಯೋ ಆಗಿರಲಿ, ಯಾವುದಾದರೂ ಹಾಡಿಗೆ ಡ್ಯಾನ್ಸ್ ಮಾಡಿರುವುದಾಗಲಿ, ಚಿತ್ರದ ಡೈಲಾಗ್ ಒಂದಕ್ಕೆ ಲಿಪ್ ಸಿಂಕ್ ಮಾಡಿರುವುದಾಗಲಿ ಹೀಗೆ ಒಂದೇ, ಎರಡೇ ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೆ ಸಿದ್ದವಾಗುತ್ತದೆ ಅಂತ ಹೇಳಬಹುದು. ಒಟ್ಟಿನಲ್ಲಿ ಹೇಳುವುದಾದರೆ ಪ್ರತಿದಿನ ಸೆಲೆಬ್ರಿಟಿಗಳು ಅನೇಕ ರೀತಿಯ ವೀಡಿಯೋಗಳನ್ನು ತಮ್ಮ ಅಭಿಮಾನಿಗಳಿಗಾಗಿ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ.


ಕ್ಯಾಮೆರಾ ಮುಂದೆ ಸೀರೆ ಧರಿಸಿದ ನಟಿ


ಈಗೆಲ್ಲಾ ಈ ನಟಿಯರು ವಿವಿಧ ರೀತಿಯ ಬಟ್ಟೆಗಳನ್ನು ಧರಿಸಿ ಆ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದನ್ನು ನಾವೆಲ್ಲಾ ನೋಡಿಯೇ ಇರುತ್ತೇವೆ. ಇದೀಗ ದೇವೋ ಕೆ ದೇವ್ ಮಹಾದೇವ್ ಸಿರಿಯಲ್​ನ ಪಾರ್ವತಿ ಪಾತ್ರಧಾರಿ ಖ್ಯಾತಿಯ ಪೂಜಾ ಅವರು ಸೀರೆ ಧರಿಸಿ ಪೋಸ್ ನೀಡುತ್ತ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಯಾರಪ್ಪಾ ಆ ನಟಿ ಅಂತ ತಿಳಿದುಕೊಳ್ಳಲು ನಿಮಗೆ ಕುತೂಹಲವಾಗಿರಬೇಕಲ್ಲವೇ? ಆ ನಟಿ ಟಿವಿಯಲ್ಲಿ ಪ್ರಸಾರವಾಗುವ ಪ್ರಸಿದ್ಧ ಧಾರ್ಮಿಕ ಧಾರಾವಾಹಿ 'ದೇವೋ ಕೆ ದೇವ್ ಮಹಾದೇವ್' ನಲ್ಲಿ ನಟಿಸುತ್ತಿರುವ ಪೂಜಾ ಬ್ಯಾನರ್ಜಿ.


ಇದನ್ನೂ ಓದಿ: Kantara-Rishab Shetty: ಕಾಂತಾರ ಸೀಕ್ವೆಲ್ ಬರುತ್ತಾ? ಅಲ್ಲು ಅರವಿಂದ್ ಜೊತೆ ರಿಷಬ್ ಮೂವಿ?


ಈ ಧಾರವಾಹಿಯೂ ಮನೆ ಮನೆಗಳಲ್ಲಿ ತುಂಬಾನೇ ಜನಪ್ರಿಯವಾಗಿದ್ದು, ಇದರಲ್ಲಿ ನಟ ಮೋಹಿತ್ ರೈನಾ, ನಟಿ ಮೌನಿ ರಾಯ್ ಸಹ ಪೂಜಾ ಜೊತೆಗೆ ನಟಿಸಿದ್ದಾರೆ. ಈ ಧಾರವಾಹಿಯಲ್ಲಿ ಪಾರ್ವತಿ ಪಾತ್ರದ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ಪೂಜಾ ಬ್ಯಾನರ್ಜಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿದ್ದು, ಆಗಾಗ್ಗೆ ತಮ್ಮ ಫೋಟೋಗಳನ್ನು ಹಾಕಿಕೊಳ್ಳುತ್ತಾರೆ. ಧಾರವಾಹಿಯಲ್ಲಿ ತುಂಬಾನೇ ಸುಸಂಸ್ಕೃತ ಪಾತ್ರದಲ್ಲಿ ಕಾಣಿಸಿಕೊಂಡ ಈ ನಟಿ ನಿಜ ಜೀವನದಲ್ಲಿ ಸಾಕಷ್ಟು ಬೋಲ್ಡ್ ಆಗಿದ್ದಾರೆ.
ತಮ್ಮ ಹಾಟ್ ಫೋಟೋ ಮತ್ತು ವೀಡಿಯೋಗಳನ್ನ ಪೋಸ್ಟ್ ಮಾಡ್ತಾರೆ ಪೂಜಾ..


ಇಷ್ಟೇ ಅಲ್ಲದೆ ಈ ನಟಿ ಆಗಾಗ್ಗೆ ತನ್ನ ಹಾಟ್ ಮತ್ತು ಬೋಲ್ಡ್ ಫೋಟೋಗಳನ್ನು ಮತ್ತು ವೀಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತಾಳೆ ಅಂತಾನೆ ಹೇಳಬಹುದು. ಏತನ್ಮಧ್ಯೆ, ಪೂಜಾ ಮತ್ತೊಮ್ಮೆ ಸೀರೆಯಲ್ಲಿ ತನ್ನ ಹಾಟ್ ಫೋಟೋಗಳು ಮತ್ತು ವೀಡಿಯೋದೊಂದಿಗೆ ಅಂತರ್ಜಾಲದಲ್ಲಿ ಕೋಲಾಹಲವನ್ನು ಸೃಷ್ಟಿಸಿದ್ದಾರೆ.
ಇದನ್ನೂ ಓದಿ: Lakshana: ಕತ್ತಲೆ ಕೋಣೆಯಲ್ಲಿದೆ ದುರದೃಷ್ಟದ ಗುಟ್ಟು!


ಸಣ್ಣ ಪರದೆಯ 'ಪಾರ್ವತಿ' ಪೂಜಾ ಬ್ಯಾನರ್ಜಿಯ ಬೋಲ್ಡ್ ಲುಕ್ ಅಭಿಮಾನಿಗಳಿಗೆ ಆಶ್ಚರ್ಯವನ್ನುಂಟು ಮಾಡಿದ್ದಂತೂ ನಿಜ. ಈ ವೀಡಿಯೋದಲ್ಲಿ ಪೂಜಾ ಕ್ಯಾಮೆರಾ ಮುಂದೆ ಪಾರದರ್ಶಕವಾದ ಸೀರೆಯನ್ನು ಧರಿಸಿರುವುದನ್ನು ನೀವು ನೋಡಬಹುದು. ಸೀರೆಯ ಪ್ಲೀಟ್ ಗಳನ್ನು ಸರಿಮಾಡಿಕೊಳ್ಳುತ್ತಾರೆ ಮತ್ತು ಪಲ್ಲುವನ್ನು ಹೊಂದಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಪೂಜಾ ತುಂಬಾನೇ ಹಾಟ್ ಆಗಿ ಕಾಣುತ್ತಾಳೆ. ಈ ವೀಡಿಯೋದ ಶೀರ್ಷಿಕೆಯಲ್ಲಿ, ಪೂಜಾ 'ಕಳೆದ ರಾತ್ರಿಯ ಬಗ್ಗೆ' ಎಂದು ಚಿಕ್ಕದಾಗಿ ಶೀರ್ಷಿಕೆಯೊಂದನ್ನು ಬರೆದುಕೊಂಡಿದ್ದಾರೆ.


ವೀಡಿಯೋ ಇಷ್ಟಪಟ್ಟ ಅಭಿಮಾನಿಗಳು


ಇನ್ನೂ ಈ ನಟಿಯ ನೋಟದ ಬಗ್ಗೆ ಮಾತನಾಡಿದರೆ, ಅವಳು ತನ್ನ ಕೂದಲನ್ನು ಹಾಗೆಯೇ ಬಿಟ್ಟುಕೊಳ್ಳುವುದರ ಜೊತೆಗೆ ಸೂಕ್ಷ್ಮವಾಗಿ ಮೇಕಪ್ ಸಹ ಮಾಡಿಕೊಂಡಿದ್ದಾಳೆ. ಎಂದಿನಂತೆ ಅಭಿಮಾನಿಗಳು ಪೂಜಾ ಅವರ ಈ ವೀಡಿಯೋವನ್ನು ತುಂಬಾ ಇಷ್ಟಪಟ್ಟಿದ್ದು, ಸುಮಾರು ಒಂದು ಲಕ್ಷಕ್ಕಿಂತಲೂ ಹೆಚ್ಚು ಲೈಕ್ ಗಳು ಇದಕ್ಕೆ ಲಭಿಸಿವೆ ಎಂದು ಹೇಳಲಾಗುತ್ತಿದೆ. ಆದರೆ ಈ ಸೀರೆ ಹಳೆಯದು ಎಂದು ಅವರಿಗೆ ಒಬ್ಬ ಅಭಿಮಾನಿ ನೆನಪಿಸಿದ್ದಾರಂತೆ ಅಂತ ಹೇಳಲಾಗುತ್ತಿದೆ.

Published by:Divya D
First published: