Ponniyin Selvan trailer: ಪೊನ್ನಿಯಿನ್ ಸೆಲ್ವನ್ ಟ್ರೈಲರ್ ರಿಲೀಸ್! ಸೌತ್​ನಿಂದ ಮತ್ತೊಂದು ಬ್ಲಾಕ್​ಬಸ್ಟರ್ ಫಿಕ್ಸ್

Ponniyin Selvan trailer: ಸೌತ್ ಸಿನಿ ಇಂಡಸ್ಟ್ರಿಯ ಬಹು ನಿರೀಕ್ಷಿತ ಸಿನಿಮಾ ಪೊನ್ನಿಯಿನ್ ಸೆಲ್ವನ್ ಇದೇ ತಿಂಗಳು ರಿಲೀಸ್ ಆಗಲಿದೆ. ಅದ್ಧೂರಿ ಇವೆಂಟ್​ನಲ್ಲಿ ಸಿನಿಮಾದ ಟ್ರೈಲರ್ ಲಾಂಚ್ ಮಾಡಲಾಗಿದೆ.

ಪೊನ್ನಿಯಿನ್ ಸೆಲ್ವನ್

ಪೊನ್ನಿಯಿನ್ ಸೆಲ್ವನ್

  • Share this:
ಸೌತ್ ಸಿನಿಮಾದ ಬಹುನಿರೀಕ್ಷಿತ ಸಿನಿಮಾ ಪೊನ್ನಿಯಿನ್ ಸೆಲ್ವನ್ (Ponniyin Selvan) ಬಿಡುಗಡೆಗೆ ಸಜ್ಜಾಗುತ್ತಿದೆ. ಸೆಪ್ಟೆಂಬರ್ 30ಕ್ಕೆ ತೆರೆ ಕಾಣಲಿರುವ ಸಿನಿಮಾದ ಟ್ರೈಲರ್ (Ponniyin Selvan Trailer) ರಿಲೀಸ್ ಆಗಿದೆ. ಇದು ಅಭಿಮಾನಿಗಳಲ್ಲಿ ಹೊಸ ಕ್ರೇಜ್ ಸೃಷ್ಟಿಸಿದೆ. ಸೆಪ್ಟೆಂಬರ್ 6 ರಂದು ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಅದ್ಧೂರಿ ಕಾರ್ಯಕ್ರಮದಲ್ಲಿ ಟ್ರೈಲರ್ ಲಾಂಚ್ ಮಾಡಲಾಗಿದೆ. ಪೊನ್ನಿಯಿನ್ ಸೆಲ್ವನ್ ಮಣಿರತ್ನಂ (Maniratnam) ನಿರ್ದೇಶನದ ಸಿನಿಮಾ ಆಗಿದ್ದು ಇದನ್ನು ಮದ್ರಾಸ್ ಟಾಕೀಸ್ (Madras Talkies) ಮತ್ತು ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ಇರುವರ್ ಚಲನಚಿತ್ರ ನಿರ್ಮಾಪಕ ಮತ್ತು ಅಲ್ಲಿರಾಜ ಸುಭಾಸ್ಕರನ್ ನಿರ್ಮಿಸಿದ್ದಾರೆ. 

ಪೊನ್ನಿಯಿನ್ ಸೆಲ್ವನ್ ಟ್ರೈಲರ್ ಔಟ್

ತಮ್ಮ ಕೊನೆಯ ನಿರ್ದೇಶನದ 'ಚೆಕ್ಕ ಚಿವಂತ ವಾನಂ' ಚಿತ್ರಕ್ಕಾಗಿ ಮೆಚ್ಚುಗೆಯನ್ನು ಪಡೆದಿರುವ ಖ್ಯಾತ ಚಲನಚಿತ್ರ ನಿರ್ಮಾಪಕ ಮಣಿರತ್ನಂ ಅವರು ಪೊನ್ನಿಯಿನ್ ಸೆಲ್ವನ್ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಅದರ ಟ್ರೈಲರ್ ಈಗ ಹೊರಬಿದ್ದಿದೆ. ಲೈಕಾ ಪ್ರೊಡಕ್ಷನ್ಸ್ ಇದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ. ಟ್ರೈಲರ್ ಸಾಕಷ್ಟು ಕುತೂಹಲ ಸೃಷ್ಟಿಸಿದ್ದು ಸೌತ್ ಸಿನಿಮಾದಿಂದ ಈ ವರ್ಷ ಬ್ಲಾಕ್​ಬಸ್ಟರ್ ಸಿನಿಮಾ ಪ್ರೇಕ್ಷಕರಿಗೆ ಸಿಗುವುದರಲ್ಲಿ ಸಂದೇಹವೇ ಇಲ್ಲ.

ಅದ್ಧೂರಿ ಕಾರ್ಯಕ್ರಮ

ಪೊನ್ನಿಯಿನ್ ಸೆಲ್ವನ್ ಆಡಿಯೋ ಮತ್ತು ಟ್ರೇಲರ್ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನಡೆದು ಸ್ಟಾರ್ ನಟ, ನಟಿಯರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ರಜನಿಕಾಂತ್ ಮತ್ತು ಕಮಲ್ ಹಾಸನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈವೆಂಟ್‌ನಲ್ಲಿ ಅದಿತಿ ರಾವ್ ಹೈದರಿ, ರವಿವರ್ಮಮ್ ಮತ್ತು ಸಿದ್ಧಾರ್ಥ್ ಕೂಡ ಭಾಗಿಯಾಗಿದ್ದರು. ಟ್ರೈಲರ್ ಲಾಂಚ್ ಪ್ರಾರಂಭವಾಗುವ ಮೊದಲು ಎಆರ್ ರೆಹಮಾನ್ ಅವರು ಲೈವ್ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.

ಇದನ್ನೂ ಓದಿ: Ponniyin Selvan: ರಜನಿಕಾಂತ್ ಕಾಲುಮುಟ್ಟಿ ಆಶೀರ್ವಾದ ಪಡೆದ ಐಶ್ವರ್ಯಾ ರೈ!

ಚಿತ್ರದ ಕಥೆ 10ನೇ ಶತಮಾನದ ಆಸುಪಾಸಿನಲ್ಲಿದೆ. ಈ ಚಿತ್ರವು ಚೋಳ ಸಾಮ್ರಾಜ್ಯದ ಅಧಿಕಾರದ ಹೋರಾಟವನ್ನು ಆಧರಿಸಿದೆ. ಇದು ಕಾವೇರಿ ನದಿಯ ಮಗ ಪೊನ್ನಿಯಿನ್ ಸೆಲ್ವನ್ ಅವರ ತಿಹಾಸವಾಗಿದೆ. ಭಾರತೀಯ ಇತಿಹಾಸದ ಶ್ರೇಷ್ಠ ಆಡಳಿತಗಾರ ರಾಜರಾಜ ಚೋಳನ ಕಥೆಯನ್ನು ನಿರ್ದೇಶಕ ಮಣಿರತ್ನಂ ತೆರೆಯ ಮೇಳೆ ಅದ್ಧೂರಿಯಾಗಿ ತಂದಿದ್ದಾರೆ. 500 ಕೋಟಿ ಬಜೆಟ್​ ನಲ್ಲಿ ಸಿನಿಮಾ ಸಿದ್ಧವಾಗುತ್ತಿದ್ದು, ಚಿತ್ರವು 2 ಭಾಗಗಳಲ್ಲಿ ತೆರೆಕಾಣಲಿದೆ. ಸಪ್ಟೆಂಬರ್​ ನಲ್ಲಿ ಮೊದಲ ಭಾಗ ಬಿಡುಗಡೆ ಆಗಲಿದೆ. ಅನೇಕ ವರ್ಷಗಳ ನಂತರ ಮಣಿರತ್ಂ ಅವರು ಬಾಲಿವುಡ್​ನ ಕ್ವೀನ್​ ಐಶ್ವರ್ಯಾ ರೈ ಬಚ್ಚನ್ ಅವರನ್ನು ಮತ್ತೆ ಚಿತ್ರರಂಗಕ್ಕೆ ಕರೆತಂದಿದ್ದಾರೆ.





ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಸೆಪ್ಟೆಂಬರ್ 30 ರಂದು ಬಹು ಭಾಷೆಗಳಲ್ಲಿ ಚಿತ್ರಮಂದಿರಗಳಿಗೆ ಬರಲಿದೆ. ಎರಡನೇ ಭಾಗವು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಪೊನ್ನಿಯಿನ್ ಸೆಲ್ವನ್ ಅವರ ಆಡಿಯೋ ಮತ್ತು ಟ್ರೇಲರ್ ಬಿಡುಗಡೆ ಸೆಪ್ಟೆಂಬರ್ 6 ರಂದು ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.

ತಮಿಳಿನಲ್ಲಿ ಮಾತನಾಡಿದ ನಟಿ

ಪೊನ್ನಿಯಿನ್ ಸೆಲ್ವನ್ ಕಾರ್ಯಕ್ರಮದಲ್ಲಿ ಐಶ್ವರ್ಯ ಅವರು ನಿರರ್ಗಳವಾಗಿ ತಮಿಳಿನಲ್ಲಿ ಮಾತನಾಡಿದ್ದಾರೆ. ನಟಿ 'ವನಕ್ಕಂ' ಎಂದು ಹೇಳುವ ಮೂಲಕ ತನ್ನ ಭಾಷಣ ಪ್ರಾರಂಭಿಸಿದರು. ತಮಿಳು ಇಂಡಸ್ಟ್ರಿಯಲ್ಲಿ ಇರುವುದಕ್ಕೆ ಸಂತೋಷವಾಗಿದೆ. ಮಣಿ ನನ್ನ ಗುರು. ಯಾವಾಗಲೂ ಅವರು ನನ್ನ ಗುರುಗಳು. ಮತ್ತೊಮ್ಮೆ ಈ ಅವಕಾಶಕ್ಕಾಗಿ ತುಂಬಾ ಧನ್ಯವಾದಗಳು, ನಿಮ್ಮ ಪ್ರಾಜೆಕ್ಟ್​ನಲ್ಲಿ ನನ್ನನ್ನು ನಿಮ್ಮ ವಿದ್ಯಾರ್ಥಿಯಾಗಿ ಸ್ವೀಕರಿಸಿದ ಗೌರವಕ್ಕಾಗಿ ಧನ್ಯವಾದಗಳು ಮಣಿ ಸರ್ ಎಂದಿದ್ದಾರೆ.

ಇದನ್ನೂ ಓದಿ: Aishwarya Rai Ponniyin Selvan: ಪೊನ್ನಿಯಿನ್ ಸೆಲ್ವನ್ ಇವೆಂಟ್​ನಲ್ಲಿ ನಿರರ್ಗರಳವಾಗಿ ತಮಿಳು ಮಾತನಾಡಿದ ಐಶ್!

ರಜನಿಕಾಂತ್ ಮತ್ತು ಕಮಲ್ ಹಾಸನ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ಎಆರ್ ರೆಹಮಾನ್ ತಮ್ಮ ಆರ್ಕೆಸ್ಟ್ರಾದೊಂದಿಗೆ ಹಾಡುಗಳನ್ನು ಲೈವ್ ಆಗಿ ಪ್ರದರ್ಶಿಸಿದರು. ಇದರ ನಂತರ ಸೆಲೆಬ್ರಿಟಿಗಳು, ಪಾತ್ರವರ್ಗ ಮತ್ತು ತಂಡದವರು ಮಾತನಾಡಿದ್ದರು.
Published by:Divya D
First published: