• Home
  • »
  • News
  • »
  • entertainment
  • »
  • Ponniyin Selvan Song: ಕಾವೇರಿಯ ಇತಿಹಾಸ ಸಾರುವ ಪೊನ್ನಿ ನದಿ ಗೀತೆ, ಪೊನ್ನಿಯಿನ್ ಸೆಲ್ವನ್ ಮೊದಲ ಹಾಡು ರಿಲೀಸ್​

Ponniyin Selvan Song: ಕಾವೇರಿಯ ಇತಿಹಾಸ ಸಾರುವ ಪೊನ್ನಿ ನದಿ ಗೀತೆ, ಪೊನ್ನಿಯಿನ್ ಸೆಲ್ವನ್ ಮೊದಲ ಹಾಡು ರಿಲೀಸ್​

ಹಾಡು ರಿಲೀಸ್​

ಹಾಡು ರಿಲೀಸ್​

Ponniyin Selvan: ಈ ಸಿನಿಮಾ ತಮಿಳು, ಹಿಂದಿ, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವಾದ್ಯಂತ ಚಿತ್ರ ಬಿಡುಗಡೆಯಾಗಲಿದೆ.

  • Share this:

ಮಣಿರತ್ನಂ ನಿರ್ದೇಶನದಲ್ಲಿ (Mani Ratnam) ಪೊನ್ನಿಯಿನ್ ಸೆಲ್ವನ್ (Ponniyin Selvan) ಚಿತ್ರದ ಬಗ್ಗೆ ಈಗಾಗಲೇ ಹೈಪ್​ ಕ್ರಿಯೇಟ್​ ಆಗಿದೆ. ಸಿನಿಮಾದ ಫಸ್ಟ್​ಲುಕ್, ಟ್ರೈಲರ್ ಎಲ್ಲವೂ ಅಭಿಮಾನಿಗಳ ನಿರೀಕ್ಷೆ ಹೆಚ್ಚು ಮಾಡಿದೆ. ಅಲ್ಲದೇ ಈ ಸಿನಿಮಾದಲ್ಲಿ ಐಶ್ವರ್ಯಾ (Aishwarya Rai) ಸಹ ನಟಿಸುತ್ತಿದ್ದು, ಇದು ಸಿನಿಮಾ ಬಗ್ಗೆ ನಿರೀಕ್ಷೆ ಮೂಡಲು ಹೆಚ್ಚು ಕಾರಣ ಎನ್ನಬಹುದು. ಇದೀಗ ಪೊನ್ನಿಯಿನ್ ಸೆಲ್ವನ್ ಸಿನಿಮಾದ ಮೊದಲ ಹಾಡು ಪೊನ್ನಿ ನಾಧಿ ಬಿಡುಗಡೆಯಾಗಿದೆ.   


ಬಿಡುಗಡೆಯಾದ ಮೊದಲ ಸಿನಿಮಾ


ಈ ಸಿನಿಮಾದ ಮೊದಲ ಹಾಡಿಗಾಗಿ ಸಿನಿರಸಿಕರು ಬಹಳ ಕಾತುರದಿಂದ ಕಾಯುತ್ತಿದ್ದರು. ಪೊನ್ನಿ ನದಿ ಗೀತೆಯು ಕಾವೇರಿ ನದಿಯ ಇತಿಹಾಸ ಮತ್ತು ಮಹತ್ವವನ್ನು ಸಾರುತ್ತದೆ. ಈ ನದಿ ಚೋಳ ಸಾಮ್ರಾಜ್ಯದ ಸಮೃದ್ಧಿಯ ಹಿಂದಿನ ಪ್ರಮುಖ ಕಾರಣವಾಗಿದೆ. ಇನ್ನು ಈ ಹಾಡು ವಲ್ಲವರಾಯನ್ ವಂಧಿಯತೇವ (ಕಾರ್ತಿ ನ) ಅವರು ಆದಿತ್ಯ ಕರಿಕಾಳನ್ (ವಿಕ್ರಮ್) ನಿಂದ ಸಂದೇಶವನ್ನು ರಹಸ್ಯವಾಗಿ ರವಾನಿಸಲು ಚೋಳ ದೇಶದ ಮೂಲಕ ಪ್ರಯಾಣಿಸುವ ಮೂಲಕ ಆರಂಭವಾಗುತ್ತದೆ.ಚೋಳರ ನಾಡನ್ನು ಹೊಗಳುವ ಅದ್ಭುತವಾದ ಸಾಲಿನಿಂದ ಹಾಡು ಆರಂಭವಾಗುತ್ತದೆ: “ನೀರ್ ಸತಂ ಕೆಟ್ಟದುಮೆ ನೆಲ್ ಪೂತು ನಿಕ್ಕುಂ, ಉಳಿ ಸತಂ ಕೆಟ್ಟದುಮೆ ಕಲ್ ಪೂತು ನಿಕ್ಕುಂ, ಪಗೈ ಸತಂ ಕೆತ್ತತುಂ ವಿಲ್ ಪುತ್ತು ನಿಕ್ಕುಂ, ಚೋಳತಿನ್ ಪೆರುಮೈ ಕೂರ ಸೋಲ್ ಪೂತು.ಈ (ನೀರಿನ ಶಬ್ದಕ್ಕೆ ಭತ್ತವು ಅರಳುತ್ತದೆ. ಉಳಿಯ ಶಬ್ದಕ್ಕೆ ಕಲ್ಲುಗಳು ಅರಳುತ್ತವೆ. ಶತ್ರುಗಳ ಶಬ್ದದಲ್ಲಿ, ಬಾಣಗಳ ಆರ್ಭಣ ಹೆಚ್ಚಾಗುತ್ತದೆ. ಚೋಳರ ದೇಶವನ್ನು ಹೊಗಳಲು, ಪದಗಳು ಸ್ವತಃ ಅರಳುತ್ತವೆ. ಇನ್ನು ಎಆರ್ ರೆಹಮಾನ್ ಸಂಗೀತ ನಿರ್ದೇಶನ ಮಾಡುವ ಈ ಹಾಡು ಅದ್ಭುತ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.ಸೆಪ್ಟೆಂಬರ್​ನಲ್ಲಿ ಸಿನಿಮಾ ತೆರೆಗೆ


ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಜಂಟಿಯಾಗಿ ನಿರ್ಮಿಸಿರುವ ಈ ಸಿನಿಮಾವನ್ನು ಮಣಿರತ್ನಂ ನಿರ್ದೇಶಿಸುತ್ತಿದ್ದು, ಈಗಾಗಲೇ ಇರುವ ಮಾಹಿತಿಯಂತೆ ಇದು ಎರಡು ಭಾಗಗಳಲ್ಲಿ ಬರಲಿದೆ. ನಿರ್ದೇಶಕ ಮಣಿರತ್ನಂ ಅವರು 'ಪೊನ್ನಿಯಿನ್ ಸೆಲ್ವನ್-1' ಎಂಬ ಮಹಾಕಾವ್ಯ ಕಾದಂಬರಿಯ ರೂಪಾಂತರದ ಮೊದಲ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಚಿತ್ರತಂಡದ ಮಾಹಿತಿ ಪ್ರಕಾರ ಸೆಪ್ಟೆಂಬರ್ 30, 2022 ರಂದು ಥಿಯೇಟರ್‌ಗಳಿಗೆ ಬರಲಿದೆ.


ಇದನ್ನೂ ಓದಿ: ರಾಕೆಟ್ರಿ ಸಿನಿಮಾ ಇಷ್ಟಪಟ್ಟ ರಜನಿ; ಹೀರೋ ಮಾಧವನ್, ರಿಯಲ್ ಹೀರೋ ನಂಬಿ ನಾರಾಯಣನ್​ಗೆ ತಲೈವಾ ಸನ್ಮಾನಈ ಸಿನಿಮಾ ತಮಿಳು, ಹಿಂದಿ, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವಾದ್ಯಂತ ಚಿತ್ರ ಬಿಡುಗಡೆಯಾಗಲಿದೆ. ವಿಕ್ರಮ್, ಜಯಂ ರವಿ, ಕಾರ್ತಿ, ಐಶ್ವರ್ಯ ರೈ ಬಚ್ಚನ್, ತ್ರಿಷಾ, ಐಶ್ವರ್ಯ ಲಕ್ಷ್ಮಿ, ಶರತ್ ಕುಮಾರ್, ವಿಕ್ರಮ್ ಪ್ರಭು, ಸೋಭಿತಾ ಧೂಳಿಪಾಲ, ಜಯರಾಂ, ಪ್ರಭು, ಪಾರ್ತಿಬನ್ ಮತ್ತು ಪ್ರಕಾಶ್ ರಾಜ್ ಅವರ ತಾರಾಬಳಗವನ್ನು ಹೊಂದಿರುವ ಬೃಹತ್ ಸಿನಿಮಾ ಬಹಳ ನಿರೀಕ್ಷೆ ಮೂಡಿಸಿದ್ದು, 1950 ರ ದಶಕದಲ್ಲಿ ಈ ಕಥೆ ಧಾರಾವಾಹಿಯಾಗಿ ಪ್ರಸಾರವಾಗಿತ್ತು.


ಇದನ್ನೂ ಓದಿ: ಸಲ್ಮಾನ್​ ಖಾನ್​ಗೆ ಬಂದೂಕು ಪರವಾನಗಿ ನೀಡಿದ ಮುಂಬೈ ಪೊಲೀಸರು, ಸೆಕ್ಯುರಿಟಿ ಬಗ್ಗೆ ಹೆಚ್ಚು ಗಮನ ಕೊಡ್ತಿದ್ದಾರೆ ಭಾಯ್​ಜಾನ್​


ಈ ಕಥೆಯು 10 ನೇ ಶತಮಾನದಲ್ಲಿ ಚೋಳ ಸಾಮ್ರಾಜ್ಯದ ಸಮಯದಲ್ಲಿ ಆಳುವ ಕುಟುಂಬದ ವಿವಿಧ ಶಾಖೆಗಳ ನಡುವಿನ ಅಧಿಕಾರದ ಹೋರಾಟವು ಹೇಗೆ ಉತ್ತರಾಧಿಕಾರಿಗಳ ನಡುವೆ ಹಿಂಸಾತ್ಮಕ ಬಿರುಕುಗಳನ್ನು ಉಂಟುಮಾಡಿತು. ರಾಜರಾಜ ಚೋಳ ಭಾರತೀಯ ಇತಿಹಾಸದಲ್ಲಿ ಸುವರ್ಣಯುಗವನ್ನು ಪ್ರಾರಂಭಿಸಿ, ಹೇಗೆ ಮಹಾನ್ ನಾಯಕನಾಗುತ್ತಾನೆ ಎಂಬುದರ ಆಧಾರಿತವಾಗಿದೆ.

Published by:Sandhya M
First published: