• Home
  • »
  • News
  • »
  • entertainment
  • »
  • Ponniyin Selvan Movie Review: ಕಾದಂಬರಿ ಸಿನಿಮಾ ಆದಾಗ ಅದ್ಭುತ! ಪೊನ್ನಿಯಿನ್ ಸೆಲ್ವನ್​ಗೆ ವ್ಯಾಪಕ ಮೆಚ್ಚುಗೆ

Ponniyin Selvan Movie Review: ಕಾದಂಬರಿ ಸಿನಿಮಾ ಆದಾಗ ಅದ್ಭುತ! ಪೊನ್ನಿಯಿನ್ ಸೆಲ್ವನ್​ಗೆ ವ್ಯಾಪಕ ಮೆಚ್ಚುಗೆ

ಪೊನ್ನಿಯನ್​ ಸೆಲ್ವನ್​

ಪೊನ್ನಿಯನ್​ ಸೆಲ್ವನ್​

Ponniyin Selvan Part 1: ಕಾದಂಬರಿಯನ್ನು ಇಷ್ಟು ಸೊಗಸಾಗಿ ಸಿನಿಮಾ ಮಾಡಬಹುದು ಎನ್ನುವುದನ್ನು ಪೊನ್ನಿಯಿನ್ ಸೆಲ್ವನ್ ಸಾಬೀತುಪಡಿಸಿದೆ ಎನ್ನುತ್ತಿದ್ದಾಎ ಸಿನಿಪ್ರೇಮಿಗಳು. ನಿರ್ದೇಶಕ ಮಣಿರತ್ನಂ ಅವರಿಗೆ ಜನ ಮತ್ತೊಮ್ಮೆ ಜೈ ಎಂದಿದ್ದಾರೆ.

  • Share this:

ಸೌತ್​​ನ ಬಹುನಿರೀಕ್ಷಿತ ಸಿನಿಮಾ ಪೊನ್ನಿಯಿನ್ ಸೆಲ್ವನ್ (Ponniyin Selvan) ಭಾಗ 1 ರಿಲೀಸ್ ಆಗಿದೆ. ದಕ್ಷಿಣ ಸಿನಿಮಾ ಇಂಡಸ್ಟ್ರಿಯಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ ಮಣಿರತ್ನಂ (Maniratnam) ಸಿನಿಮಾದಲ್ಲಿ ಸೂಪರ್​ ಸ್ಟಾರ್​ಗಳು ನಟಿಸಿದ್ದಾರೆ. ಈ ಸಿನಿಮಾ ಇಂದು ತೆರೆ ಕಂಡಿದ್ದು ಇದರ ಬಗ್ಗೆ ಸಿನಿಮಾ ಪ್ರೇಮಿಗಳು ಏನು ಹೇಳುತ್ತಿದ್ದಾರೆ? ಹೇಗಿದೆ ಸಿನಿಮಾ? ಇಲ್ಲಿದೆ ವಿಮರ್ಶೆ (Review). ಚೋಳ ಸಾಮ್ರಾಜ್ಯವು ಆಂತರಿಕ ಮತ್ತು ಬಾಹ್ಯ ಶಕ್ತಿಗಳಿಂದ ಅಪಾಯದಲ್ಲಿರುತ್ತದೆ. ರಾಜಕುಮಾರ ಆದಿತ ಕರಿಕಾಳನ್, ಅವನ ಕಿರಿಯ ಸಹೋದರ ಅರುಣ್ಮೋಳಿ ವರ್ಮನ್ ಮತ್ತು ಚಕ್ರವರ್ತಿ ಸುಂದರ ಚೋಳರನ್ನು ಸನ್ನಿವೇಶಗಳಿಂದ ಬೇರ್ಪಡಿಸಲಾಗುತ್ತದೆ. ಇಡೀ ಚೋಳ ಸಾಮ್ರಾಜ್ಯವನ್ನು (Chola Dynasty) ಉರುಳಿಸಲು ಸಂಚು ಹೂಡುತ್ತಿರುವ ಕರಿಕಾಲನ್‌ನ ಮಾಜಿ ಗೆಳತಿ ನಂದಿನಿಯೊಂದಿಗೆ ಅವನು ತನ್ನ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗುತ್ತಾನೆಯೇ ಎಂಬುದು ಪೊನ್ನಿಯಿನ್ ಸೆಲ್ವನ್ ಭಾಗ 1 ಕಥೆ.


ಕಲ್ಕಿ ಅವರ ಪೊನ್ನಿಯಿನ್ ಸೆಲ್ವನ್ ಒಂದು ವಿಸ್ತಾರವಾದ ಮಹಾಕಾವ್ಯವಾಗಿದ್ದು, ಮಣಿರತ್ನಂ ಕೊನೆಗೂ ಇದನ್ನು ಅದ್ಭುತವಾಗಿ ಸಿನಿಮಾಗೆ ರೂಪಾಂತರ ಮಾಡಿದ್ದಾರೆ. ಮಹಾಕಾವ್ಯದ ಸಿನಿಮಾ ಕನಸನ್ನು ಜೀವಂತಗೊಳಿಸಿದ್ದಾರೆ. ಒಳಸಂಚು, ರೋಚಕತೆ ಯನ್ನು ಅದ್ಭುತವಾಗಿ ಈ ಸಿನಿಮಾ ಸೆರೆಹಿಡಿಯುತ್ತದೆ. ಎರಡು ಭಾಗಗಳ ಫ್ರಾಂಚೈಸ್‌ನಲ್ಲಿ ಮೊದಲನೆ ಭಾಗವಾಗಿರುವ ಈ ಸಿನಿಮಾದಲ್ಲಿ ಕಾದಂಬರಿಯನ್ನು ಸಂಕುಚಿತಗೊಳಿಸಿದ ರೀತಿ ಪ್ರಶಂಸನೀಯವಾಗಿದೆ.
ಕುಂದವೈ ರಹಸ್ಯ ಚರ್ಚೆಗೆ ನುಗ್ಗುವಂತೆ, ಪೊನ್ನಿಯಿನ್ ಸೆಲ್ವನ್ ಅವರ ನಿಗೂಢ ಸಂರಕ್ಷಕನ ಪರಿಚಯ - ಕಥೆ ಸಾಗುವ ವೇಗವನ್ನು ಹೆಚ್ಚಿಸುತ್ತದೆ. ಶಾಸ್ತ್ರೀಯ ಮತ್ತು ಆಡುಮಾತಿನ ಎರಡೂ ಭಾಷೆಯನ್ನು ಎಲ್ಲಿಯೂ ಕಿರಿಕಿರಿಯಾಗದ ರೀತಿಯಲ್ಲಿ ಬಳಸಿರುವ ಜಯಮೋಹನ್ ಅವರ ಸಂಭಾಷಣೆಗಳು ವಿಶೇಷವಾಗಿ ಗಮನ ಸೆಳೆಯುತ್ತವೆ.


ಇದನ್ನೂ ಓದಿ: Vikram Vedha Movie Review: ಒರಿಜಿನಲ್ ಸಿನಿಮಾವನ್ನೇ ಮರೆಸುತ್ತಂತೆ ಹಿಂದಿ ವಿಕ್ರಂ ವೇದಾ! ಹೇಗಿದೆ ಸಿನಿಮಾ?


ಮಣಿರತ್ನಂ ಅವರನ್ನು ನಂಬಿದವರಿಗೆ ಮೋಸವಿಲ್ಲ


ಮಣಿರತ್ನಂ ಸಿನಿಮಾ ಅದ್ಭುತ ಎಂದು ನಂಬಿಕೆ ಇಟ್ಟು ಚಿತ್ರಮಂದಿರಕ್ಕೆ ಹೋದ ಪ್ರೇಕ್ಷಕ ನಿರಾಸೆಯಾಗುವ ಛಾನ್ಸೇ ಇಲ್ಲ. ಮಹಾಕಾವ್ಯವನ್ನು ಸರಳವಾಗಿ ಸಿನಿಮಾಗೆ ಬದಲಾಯಿಸುವಲ್ಲಿ ಮಣಿ ರತ್ನಂ ಟ್ಯಾಲೆಂಟ್ ನೀವು ಮೆಚ್ಚಲೇ ಬೇಕು. ವಿಕ್ರಂ, ಜಯಂ ರವಿ, ಕಾರ್ತಿ, ಜಯರಾಮ್ ಅವರಂತಹ ಮೇರು ನಟರು ತಮ್ಮ ಪಾತ್ರಗಳಿಗೆ ಅಮೋಘವಾಗಿ ಜೀವ ತುಂಬಿದ್ದಾರೆ.


ʼಪೊನ್ನಿಯನ್ ಸೆಲ್ವನ್ʼ ಕಾದಂಬರಿ


ಪೊನ್ನಿಯನ್ ಸೆಲ್ವನ್ ಎಂದರೆ ಪೊನ್ನಿಯ ಮಗ (ಕಾವೇರಿ ನದಿ). ಈ 20ನೇ ಶತಮಾನದ 2400 ಪುಟದ ತಮಿಳು ಐತಿಹಾಸಿಕ ಕಾದಂಬರಿಯನ್ನು ಲೇಖಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಕಲ್ಕಿ ಕೃಷ್ಣಮೂರ್ತಿ ಬರೆದಿದ್ದಾರೆ.


ಇದನ್ನೂ ಓದಿ: Kantara Movie Ramya Reaction: ಕಾಂತಾರ ಸಿನಿಮಾ ಬಗ್ಗೆ ರಮ್ಯಾ ಮಾತು! ಆ ದೈವ ರೂಪ ಕಂಡು ನಟಿ ರಮ್ಯಾ ಹೇಳಿದ್ದೇನು?


ಈ ಕಾದಂಬರಿ 1950-54 ರಿಂದ ತಮಿಳು ನಿಯತಕಾಲಿಕೆ ‘ಕಲ್ಕಿ’ಯಲ್ಲಿ ವಾರಕ್ಕೊಮ್ಮೆ ಧಾರಾವಾಹಿಯಾಗಿ ಪ್ರಕಟವಾಗುತಿತ್ತು. ಇದನ್ನು ನಂತರ 1955 ರಲ್ಲಿ ಪುಸ್ತಕದ ರೂಪದಲ್ಲಿ ಪ್ರಕಟಿಸಲಾಯಿತು. ಕಾದಂಬರಿಯ ನಿರಂತರ ಜನಪ್ರಿಯತೆಯು ಚೋಳ ಆಳ್ವಿಕೆಯ ಸುತ್ತ ಹೆಣೆಯಲಾದ ನಿರೂಪಣೆಯ ಮೂಲಕ ತಮಿಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯೊಂದಿಗಿ ಸಂಬಂಧಿಸಿದೆ.


ಸಿನಿಮಾಟೋಗ್ರಫಿ ಹೇಗಿದೆ?


ಛಾಯಾಗ್ರಾಹಕ ರವಿವರ್ಮನ್ ಅವರು ನೈಜ ಸ್ಥಳಗಳಲ್ಲಿ ಹೆಚ್ಚಾಗಿ ಚಿತ್ರೀಕರಣ ಮಾಡಿದ್ದು, ಭವ್ಯವಾದ ಕೋಟೆ ಗೋಡೆಗಳು, ಕಂಬಗಳು ಮತ್ತು ಎತ್ತರದ ಛಾವಣಿಗಳನ್ನು ಹೊಂದಿರುವ ವಿಶಾಲವಾದ ಸಭಾಂಗಣಗಳು, ಸಾಗರದ ವಿಶಾಲವಾದ ವಿಸ್ತಾರದಲ್ಲಿ ಒಂಟಿಯಾಗಿರುವ ದೋಣಿ ಮತ್ತು ಸಮುದ್ರತೀರದಲ್ಲಿ ಸಾಲುಗಟ್ಟಿ ನಿಂತಿರುವ ಅಸಂಖ್ಯಾತ ದೇಹಗಳ ದೃಶ್ಯಗಳು ಪ್ರೇಕ್ಷಕನನ್ನು ಸುಲಭವಾಗಿ ಮುಟ್ಟುತ್ತದೆ. ಎಆರ್ ರೆಹಮಾನ್ ಅವರ ಹಾಡುಗಳನ್ನು ಮುಖ್ಯವಾಗಿ ನಿರೂಪಣೆಯನ್ನು ಮುಂದುವರಿಸಲು ಬಳಸಲಾಗಿದ್ದರೂ, ಸೆಕೆಂಡ್ ಹಾಫ್​ನಲ್ಲಿ ರೋಮಾಂಚನಕಾರಿ ಸಿನಿಮಾದ ಕ್ವಾಲಿಟಿ ಹೈಪ್ ಮಾಡುತ್ತದೆ.

Published by:Divya D
First published: