ನಿರ್ಮಾಪಕ ಮಣಿರತ್ನಂ (Mani Ratnam) ಅವರ ಚಲನಚಿತ್ರ ಎಂದರೆ ಅದು ಬೇರೆ ಎಲ್ಲಾ ಚಿತ್ರಗಳಿಗಿಂತಲೂ (MoviePonniyin Selvan) ಸ್ವಲ್ಪ ವಿಭಿನ್ನವಾಗಿಯೇ ಇರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈಗಾಗಲೇ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ‘ಪೊನ್ನಿಯಿನ್ ಸೆಲ್ವನ್’ (Ponniyin Selvan) ಚಿತ್ರವು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು, ಗಲ್ಲಾ ಪೆಟ್ಟಿಗೆಯಲ್ಲಿಯೂ ಸಹ ತುಂಬಾನೇ ಚೆನ್ನಾಗಿ ದುಡ್ಡು ಮಾಡಿತ್ತು ಅಂತ ಹೇಳಬಹುದು. ಆ ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆ ನೋಡಿ ಈಗ ಈ ಚಿತ್ರದ ಎರಡನೇ ಭಾಗ ರೆಡಿ ಕೂಡ ಸಿದ್ಧವಾಗ್ತಿದೆ.
ಸದ್ಯ ಆ ಚಿತ್ರದ ಅಭಿಮಾನಿಗಳು, ನಿರ್ಮಾಪಕ ಮಣಿರತ್ನಂ ಅವರ ತಮಿಳು ಚಲನಚಿತ್ರ ಫ್ರ್ಯಾಂಚೈಸ್ ಪೊನ್ನಿಯಿನ್ ಸೆಲ್ವನ್ ಚಿತ್ರದ 2ನೇ ಭಾಗ ಯಾವಾಗ ಸಿನಿಮಾ ಮಂದಿರಗಳಲ್ಲಿ ಬಿಡುಗಡೆ ಆಗುತ್ತದೆ ಎಂದು ಕಾತುರದಿಂದ ಕಾದು ಕುಳಿತ್ತಿದ್ದಾರೆ .
ಹೀಗೆ ಕಾಯುತ್ತಾ ಕುಳಿತಿರುವ ಸಿನಿ ರಸಿಕರಿಗೆ ಇಲ್ಲಿದೆ ನೋಡಿ ಒಂದು ಒಳ್ಳೆಯ ಸುದ್ದಿ. ಅದೇನೆಂದರೆ ಏಪ್ರಿಲ್ 28, 2023 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಪೊನ್ನಿಯಿನ್ ಸೆಲ್ವನ್ 2 ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.
‘ಪೊನ್ನಿಯಿನ್ ಸೆಲ್ವನ್ 2’ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿದ ಚಿತ್ರ ತಂಡ
ಬುಧವಾರ ಲೈಕಾ ಪ್ರೊಡಕ್ಷನ್ಸ್ ಈ ಪೊನ್ನಿಯಿನ್ ಸೆಲ್ವನ್ 2 ಚಿತ್ರದ ಟೀಸರ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಇದರಲ್ಲಿ ನಟ ವಿಕ್ರಮ್, ನಟಿ ಐಶ್ವರ್ಯ ರೈ, ಕಾರ್ತಿ ಮತ್ತು ಜಯಂ ರವಿ ನಟಿಸಿದ್ದಾರೆ.
ಆ ಟ್ವೀಟ್ ನಲ್ಲಿ "ನಾವು 2023 ರ ಏಪ್ರಿಲ್ 28 ರಂದು ಆ ಖಡ್ಗಗಳನ್ನು ಗಾಳಿಯಲ್ಲಿ ತರೋಣ" ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಇದರಲ್ಲಿ 'ಚೋಳರು ಮತ್ತೆ ಬಂದಿದ್ದಾರೆ', 'ಪಿಎಸ್ 1', 'ಪಿಎಸ್ 2' ಮತ್ತು 'ಪೊನ್ನಿಯಿನ್ ಸೆಲ್ವನ್' ಎಂಬ ಹ್ಯಾಶ್ಟ್ಯಾಗ್ ಗಳು ಸಹ ಸೇರಿವೆ.
ಮಣಿ ಅವರು ಎಳಂಗೋ ಕುಮಾರವೇಲ್ ಅವರೊಂದಿಗೆ ಚಿತ್ರಕಥೆ ಬರೆದಿದ್ದಾರೆ. ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ನೀಡಿದ್ದಾರೆ.ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ನಟಿ ತ್ರಿಶಾ ಕೃಷ್ಣನ್, ಪ್ರಕಾಶ್ ರಾಜ್, ಜಯರಾಮ್, ಶೋಭಿತಾ ಧುಲಿಪಾಲ ಮತ್ತು ಐಶ್ವರ್ಯ ಲಕ್ಷ್ಮಿ ಮುಂತಾದವರು ನಟಿಸಿದ್ದಾರೆ.
ಈ ಚಿತ್ರದಲ್ಲಿ ನಟಿ ಐಶ್ವರ್ಯಾ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸೇಡು ತೀರಿಸಿಕೊಳ್ಳುವ ಕಾರ್ಯಾಚರಣೆಯಲ್ಲಿರುವ ಪಜುವೂರಿನ ರಾಜಕುಮಾರಿ ನಂದಿನಿ ರಾಣಿ ಮತ್ತು ಮಂದಾಕಿನಿ ದೇವಿ ಎಂಬ ಎರಡು ಪಾತ್ರಗಳನ್ನು ನಿಭಾಯಿಸಿದ್ದಾರೆ.
ನಟ ಕಾರ್ತಿ ಅವರು ಧೀರ ಮತ್ತು ಸಾಹಸಿ ಯೋಧ ವಂತಿಯಥೇವನ್ ಪಾತ್ರದಲ್ಲಿ ನಟಿಸಿದ್ದಾರೆ, ವಿಕ್ರಮ್ ಅವರೊಂದಿಗೆ ಆದಿತಾ ಕರಿಕಾಲನ್, ಅರುಣ್ ಮೋಳಿ ವರ್ಮನ್ ಪಾತ್ರದಲ್ಲಿ ಜಯಂ ರವಿ ಮತ್ತು ಕುಂದವೈ ಆಗಿ ತ್ರಿಶಾ ಕೃಷ್ಣನ್ ನಟಿಸಿದ್ದಾರೆ.
ಪೊನ್ನಿಯಿನ್ ಸೆಲ್ವನ್-1 ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಿತ್ತು..
ಪೊನ್ನಿಯಿನ್ ಸೆಲ್ವನ್-1 ಹಿಂದಿ, ಕನ್ನಡ, ತೆಲುಗು ಮತ್ತು ಮಲಯಾಳಂನಲ್ಲಿ ಡಬ್ ಆದ ಆವೃತ್ತಿಗಳೊಂದಿಗೆ ತಮಿಳಿನಲ್ಲಿ ಸೆಪ್ಟೆಂಬರ್ ನಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ಈ ಚಿತ್ರವು ಪ್ರಸ್ತುತ ಪ್ರೈಮ್ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಬಹು ನಿರೀಕ್ಷಿತ ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಈ ಚಿತ್ರವು ಎಲ್ಲಾ ಭಾಷೆಗಳಲ್ಲಿ ಸೇರಿ ವಿಶ್ವದಾದ್ಯಂತ 300 ಕೋಟಿಗೂ ಹೆಚ್ಚು ಹಣವನ್ನು ಗಳಿಸಿತು.ಮಣಿರತ್ನಂ ಅವರ ಪ್ರೊಡಕ್ಷನ್ ಹೌಸ್ ಮದ್ರಾಸ್ ಟಾಕೀಸ್ ಮತ್ತು ಅಲಿರಾಜ ಸುಭಾಸ್ಕರನ್ ಅವರ ಬ್ಯಾನರ್ ಲೈಕಾ ಪ್ರೊಡಕ್ಷನ್ಸ್ ಇದಕ್ಕೆ ಹಣ ಸುರಿದಿವೆ.
ಇದನ್ನೂ ಓದಿ: Pathaan Movie: ಶಾರುಖ್ ಫೋಟೋ ಅಂಟಿಸಿದ್ದ ಮಡಿಕೆ ಒಡೆದು ಅಂತಿಮ ವಿಧಿವಿಧಾನ ಮಾಡಿದ ಅಯೋಧ್ಯೆ ಸ್ವಾಮೀಜಿ!
ಈ ಚಿತ್ರದ ಕಥೆಯು ಕಲ್ಕಿ ಕೃಷ್ಣಮೂರ್ತಿಯವರ 1955 ರಲ್ಲಿ ಹೊರಬಂದ ಅದೇ ಹೆಸರಿನ ತಮಿಳು ಕಾದಂಬರಿಯನ್ನು ಆಧರಿಸಿದೆ. ಇದು ದಕ್ಷಿಣದ ಅತ್ಯಂತ ಶಕ್ತಿಶಾಲಿ ರಾಜರಲ್ಲಿ ಒಬ್ಬನಾದ ಅರುಣ್ ಮೋಳಿ ವರ್ಮನ್ನಿನ ಆರಂಭಿಕ ದಿನಗಳ ಕಥೆಯನ್ನು ವಿವರಿಸುತ್ತದೆ.
ಅವರೊಬ್ಬ ಮಹಾನ್ ಚೋಳ ಚಕ್ರವರ್ತಿ ಒಂದನೇ ರಾಜರಾಜ ಚೋಳನಾದನು. ಅವರು 10ನೇ ಶತಮಾನದಲ್ಲಿ ಚೋಳ ಸಾಮ್ರಾಜ್ಯವನ್ನು ಆಳಿದ್ದು, ಜನರ ಹೃದಯಗಳಿಗೆ ತುಂಬಾನೇ ಹತ್ತಿರವಾಗಿದ್ದರು ಎಂದು ಹೇಳಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ