• Home
  • »
  • News
  • »
  • entertainment
  • »
  • Ponniyin Selvan 1: ಪೊನ್ನಿಯಿನ್ ಸೆಲ್ವನ್ ಚಿತ್ರದ ಟೀಸರ್​ ಬಿಡುಗಡೆ, ಮತ್ತೊಂದು ಅದ್ಧುತ ದೃಶ್ಯಕಾವ್ಯಕ್ಕೆ ಸಾಕ್ಷಿಯಾಗಲಿದೆ ಭಾರತೀಯ ಚಿತ್ರರಂಗ

Ponniyin Selvan 1: ಪೊನ್ನಿಯಿನ್ ಸೆಲ್ವನ್ ಚಿತ್ರದ ಟೀಸರ್​ ಬಿಡುಗಡೆ, ಮತ್ತೊಂದು ಅದ್ಧುತ ದೃಶ್ಯಕಾವ್ಯಕ್ಕೆ ಸಾಕ್ಷಿಯಾಗಲಿದೆ ಭಾರತೀಯ ಚಿತ್ರರಂಗ

ಪೊನ್ನಿಯಿನ್ ಸೆಲ್ವನ್ 1

ಪೊನ್ನಿಯಿನ್ ಸೆಲ್ವನ್ 1

ಮಣಿರತ್ನಂ ಅವರ ಬಹು ನಿರೀಕ್ಷಿತ ಚಿತ್ರ 'ಪೊನ್ನಿಯಿನ್ ಸೆಲ್ವನ್ 1' ಟೀಸರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಚಿತ್ರದ ಟೀಸರ್ ಹೊರಬಿದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • Share this:

ಮಣಿರತ್ನಂ ಅವರ ಬಹು ನಿರೀಕ್ಷಿತ ಚಿತ್ರ 'ಪೊನ್ನಿಯಿನ್ ಸೆಲ್ವನ್ 1' ಟೀಸರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಚಿತ್ರದ ಟೀಸರ್ ಹೊರಬಿದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜನರು ಈ ಟೀಸರ್ ಅನ್ನು ತುಂಬಾ ಇಷ್ಟಪಡುತ್ತಿದ್ದಾರೆ. 1 ನಿಮಿಷ 20 ಸೆಕೆಂಡ್‌ನ ಟೀಸರ್ ಮತ್ತೊಮ್ಮೆ ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಲಿರುವ ಚಿತ್ರ ಬರಲಿದೆ ಎಂಬುದನ್ನು ಸಾಬೀತು ಮಾಡಿದೆ. ಬಹುದಿನಗಳ ನಂತರ ಬಾಲಿವುಡ್‌ನ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಐಶ್ವರ್ಯ ರೈ, ಸೌತ್ ಸೂಪರ್ ಸ್ಟಾರ್ ವಿಕ್ರಮ್, ಜಯಂ ರವಿ, ಕಾರ್ತಿ, ತ್ರಿಶಾ, ಐಶ್ವರ್ಯ ಲಕ್ಷ್ಮಿ ಸೇರಿದಂತೆ ಬಹುದೊಡ್ಡ ತಾರಾಬಳಗವೇ ಚಿತ್ರದಲ್ಲಿದ್ದು, ಟೀಸರ್​ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.


ಪೊನ್ನಿಯಿನ್ ಸೆಲ್ವನ್ 1 ಟೀಸರ್​ ರಿಲೀಸ್:


ಇನ್ನು, ನಟ ವಿಕ್ರಮ್ ಅವರ ಬಹುನಿರೀಕ್ಷಿತ ಚಿತ್ರ ಪೊನ್ನಿಯಿನ್ ಸೆಲ್ವನ್ 1 ಚಿತ್ರದ ಟೀಸರ್​ ಬಿಡುಗಡೆ ಆಗಿದೆ. ಅದ್ಧೂರಿ ಆದ ಮೇಕಿಂಗ್​ ಮತ್ತು ವಿಶ್ಯೂವಲ್​ ಅದ್ಭುತವಾಗಿ ಮೂಡಿಬಂದಿದೆ. ಚಿತ್ರದ ಟೀಸರ್​ ಉದ್ದಕ್ಕೂ 11ನೇ ಶತಮಾನದ ವೈಭವು ಕಣ್ಣಿಗೆ ಕಟ್ಟುವಂತೆ ಬಿಂಬಿಸಲಾಗಿದೆ. ಪ್ರತಿಯೊಂದು ಪಾತ್ರಗಳೂ ಸಹ ಅಳೆದು ತೂಗಿದಂತೆ ಭಾಸವಾಗಿದೆ. ಒಟ್ಟಿನಲ್ಲಿ ಭಾರತೀಯ ಚಿತ್ರರಂಗದಲ್ಲಿ ನಿರ್ದೇಶಕ ಮಣಿರತ್ಂ ಅವರ ಇ ಚಿತ್ರ ಹೊಸ ಮೈಲುಗಲ್ಲಾಗಲಿದೆ ಎಂಬ ಅಭಿಪ್ರಾಯ ಮೂಡಿದೆ. ಚಿತ್ರವು ತಮಿಳು, ತೆಲುಗು, ಮಲೆಯಾಳಂ, ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ. ಚಿತ್ರದ ಟೀಸರ್ ನಲ್ಲಿ ಐಶ್ವರ್ಯಾ ಲುಕ್ ನೋಡಿ ಐಶ್ವರ್ಯಾ ಅಭಿಮಾನಿಗಳು ಸಂತಸಪಟ್ಟಿದ್ದಾರೆ. ಚಿತ್ರದ ಮೊದಲ ಭಾಗವು 30 ಸೆಪ್ಟೆಂಬರ್ 2022 ರಂದು ಬಿಡುಗಡೆಯಾಗಲಿದೆ.
500 ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಾಣ:


ಕೆಲ ವರದಿಗಳ ಪ್ರಕಾರ ನಿರ್ದೇಶಕ ಮಣಿರತ್ನಂ ಅವರ ಈ ಚಿತ್ರವನ್ನು ಸುಮಾರು 500 ಕೋಟಿ ಬಜೆಟ್‌ನಲ್ಲಿ ನಿರ್ಮಿಸಿದ್ದಾರೆ ಎನ್ನಲಾಗಿದೆ. ತಮಿಳು ಮಾತ್ರವಲ್ಲದೆ ಹಿಂದಿ, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಈ ಚಿತ್ರ ಬಿಡುಗಡೆಯಾಗಲಿದೆ. ಅಲ್ಲದೇ ಐಶ್ವರ್ಯ ರೈ, ಸೌತ್ ಸೂಪರ್ ಸ್ಟಾರ್ ವಿಕ್ರಮ್, ಜಯಂ ರವಿ, ಕಾರ್ತಿ, ತ್ರಿಶಾ, ಐಶ್ವರ್ಯ ಲಕ್ಷ್ಮಿ ಸೇರಿದಂತೆ ಬಹುದೊಡ್ಡ ತಾರಾಬಳಗವೇ ಚಿತ್ರದಲ್ಲಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.


ಇದನ್ನೂ ಓದಿ: Vikram Health Bulletin: ವಿಕ್ರಮ್ ಹೆಲ್ತ್ ಬುಲೆಟಿನ್ ಬಿಡುಗಡೆ, ಈಗ ಹೇಗಿದ್ದಾರೆ ಕಾಲಿವುಡ್​ ನಟ


ಕನ್ನಡದ ಟೀಸರ್​ ಬಿಡುಗಡೆ ಮಾಡಿದ ರಕ್ಷಿತ್ ಶೆಟ್ಟಿ:


ಇನ್ನು, ಚಿತ್ರದ ಟೀಸರ್​ 5 ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಅದರಂತೆ ಕನ್ನಡದಲ್ಲಿ ಡಿಜಿಟಲ್ ರಿಲೀಸ್​ ಅನ್ನು ಸ್ಯಾಂಡಲ್​ವುಡ್​ನ ಸಿಂಪಲ್​ ಸ್ಟಾರ್​ ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು, ಯಾವಾಗಲೂ ಮಣಿರತ್ನಂ ಸರ್ ಅವರಿಂದ ಸ್ಫೂರ್ತಿ ಪಡೆದಿದ್ದೇನೆ. ಪ್ರತಿಭಾವಂತ ಚಲನಚಿತ್ರ ನಿರ್ಮಾಪಕರ ಮುಂದಿನ ಕೊಡುಗೆಯ ಟೀಸರ್ ಅನ್ನು ಬಿಡುಗಡೆ ಮಾಡುವ ಅವಕಾಶಕ್ಕಾಗಿ ಕೃತಜ್ಞರಾಗಿರುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ.ಚಿತ್ರದ ಕಥೆ ಹೇಗಿದೆ?:


ಚಿತ್ರದ ಕಥೆ 10ನೇ ಶತಮಾನದ ಆಸುಪಾಸಿನಲ್ಲಿದೆ. ಈ ಚಿತ್ರವು ಚೋಳ ಸಾಮ್ರಾಜ್ಯದ ಅಧಿಕಾರದ ಹೋರಾಟವನ್ನು ಆಧರಿಸಿದೆ. ಇದು ಕಾವೇರಿ ನದಿಯ ಮಗ ಪೊನ್ನಿಯಿನ್ ಸೆಲ್ವನ್ ಅವರ ತಿಹಾಸವಾಗಿದೆ. ಭಾರತೀಯ ಇತಿಹಾಸದ ಶ್ರೇಷ್ಠ ಆಡಳಿತಗಾರ ರಾಜರಾಜ ಚೋಳನ ಕಥೆಯನ್ನು ನಿರ್ದೇಶಕ ಮಣಿರತ್ನಂ ತೆರೆಯ ಮೇಳೆ ಅದ್ಧೂರಿಯಾಗಿ ತಂದಿದ್ದಾರೆ. 500 ಕೋಟಿ ಬಜೆಟ್​ ನಲ್ಲಿ ಸಿನಿಮಾ ಸಿದ್ಧವಾಗುತ್ತಿದ್ದು, ಚಿತ್ರವು 2 ಭಾಗಗಳಲ್ಲಿ ತೆರೆಕಾಣಲಿದೆ. ಸಪ್ಟೆಂಬರ್​ ನಲ್ಲಿ ಮೊದಲ ಭಾಗ ಬಿಡುಗಡೆ ಆಗಲಿದೆ. ಅನೇಕ ವರ್ಷಗಳ ನಂತರ ಮಣಿರತ್ಂ ಅವರು ಬಾಲಿವುಡ್​ನ ಕ್ವೀನ್​ ಐಶ್ವರ್ಯಾ ರೈ ಬಚ್ಚನ್ ಅವರನ್ನು ಮತ್ತೆ ಚಿತ್ರರಂಗಕ್ಕೆ ಕರೆತಂದಿದ್ದಾರೆ.

Published by:shrikrishna bhat
First published: